ALSO FEATURED IN

licenses to gun: ಬಂದೂಕು ತರಬೇತಿ ಪಡೆದ ಬೆಳೆಗಾರರಿಗೆ ಪರವಾನಗಿ ನೀಡಲು ಮನವಿ

Spread the love

ಚಿಕ್ಕಮಗಳೂರು:  ಜಿಲ್ಲೆಯ ಮಲೆನಾಡಿನ ತಾಲ್ಲೂಕುಗಳಲ್ಲಿ ಕಾಫಿ ಕೃಷಿ ಮಾಡುತ್ತಿರುವ ಬೆಳೆಗಾರರು ಒಂಟಿ ಮನೆಗಳಲ್ಲಿ ವಾಸ ಮಾಡುತ್ತಿದ್ದು, ತಮ್ಮ ಪ್ರಾಣ ಹಾಗೂ ಆಸ್ತಿ ರಕ್ಷಣೆಗಲ್ಲದೆ ಧಾರ್ಮಿಕ ಸಂಪ್ರದಾಯದ ಆಚರಣೆಗಳಿಗೆ ಬಂದೂಕುಗಳನ್ನು ಹೊಂದಿದ್ದು, ಈ ಹಿನ್ನೆಯಲ್ಲಿ ನಾಗರೀಕ ಬಂದೂಕು ತರಬೇತಿ ಪಡೆದವರಿಗೆ ಬಂದೂಕು ಪರವಾನಗಿ ನೀಡುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮೂಡಿಗೆರೆ ತಾಲ್ಲೂಕು ಬೆಳೆಗಾರ ಸಂಘ ಮನವಿ ಸಲ್ಲಿಸಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಬಿ.ಆರ್ ಬಾಲಕೃಷ್ಣ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯಿಂದ ಬಂದೂಕು ಪರವಾನಗಿ ಪಡೆಯಲು ನಾಗರೀಕ ಬಂದೂಕು ತರಬೇತಿ ಹೊಂದುವುದು ಖಡ್ಡಾಯವಾಗಿರುತ್ತದೆ ಎಂಬ ಆದೇಶ ಅನ್ವಯ ಬೆಳೆಗಾರರಿಗೆ ಬಂದೂಕು ಪರವಾನಗಿ ನೀಡುವಂತೆ ಒತ್ತಾಯಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಮಹಿಳಾ ಬೆಳೆಗಾರರು ಸೇರಿದಂತೆ ಬೆಳೆಗಾರರು ತರಬೇತಿ ಹೊಂದಿದ್ದು, ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದವರಿಗೆ ತಮ್ಮ ಇಲಾಖೆಯಿಂದ ಪ್ರಮಾಣ ಪತ್ರವನ್ನು ನೀಡಲಾಗಿದ್ದು, ಆದ್ದರಿಂದ ಬಂದೂಕು ಪರವಾನಗಿ ನೀಡಲು ತಮ್ಮ ಇಲಾಖೆಯಿಂದ ಬಹುತೇಕ ಬೆಳೆಗಾರರಿಗೆ ನಿರಾಕರಿಸಿದ್ದಾರೆ ಎಂದು ದೂರಿದ್ದಾರೆ.

ಸ್ಥಳೀಯ ಠಾಣಾಧಿಕಾರಿಗಳು ಹಾಗೂ ಮೇಲಾಧಿಕಾರಿಗಳಿಂದ ನಿರಪೇಕ್ಷಣಾ ಪತ್ರ ಇದ್ದರೂ ಕೂಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಛೇರಿಯಿಂದ ಬಂದೂಕು ಪರವಾನಗಿಯನ್ನು ನೀಡುವಂತೆ ಬೆಳೆಗಾರರು ನೀಡಿದ ಮನವಿಯನ್ನು ತಿರಸ್ಕರಿಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಗಮನ ಹರಿಸಿ ತರಬೇತಿ ಪಡೆದ ಅರ್ಹ ಕಾಫಿ ಬೆಳೆಗಾರರಿಗೆ ಬಂದೂಕು ಹೊಂದಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿರುವ ಅವರು ಬಂದೂಕು ಹೊಂದಲು ಆಸಕ್ತಿ ಇರುವ ಬೆಳೆಗಾರರು ಸಾವಿರಾರು ರೂಪಾಯಿ ಖರ್ಚು ಮಾಡಿ, ವಾರಗಟ್ಟಲೇ ತರಬೇತಿ ಪಡೆದು ಪ್ರಮಾಣ ಪತ್ರವನ್ನು ಪಡೆದವರಿಗೆ ಪರವಾನಗಿ ನಿರಾಕರಿಸಿದರೆ ತರಬೇತಿ ನಿಷ್ಪ್ರಯೋಜಕವಾಗುತ್ತದೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಾಫಿ ತೋಟಗಳಿಗೆ ವಲಸೆ ಕಾರ್ಮಿಕರು ಬರುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಬೆಳೆಗಾರರು ಗೋದಾಮಿನಲ್ಲಿ ಕಾಫಿ, ಕಾಳುಮೆಣಸು, ಅಡಿಕೆ, ಮುಂತಾದವುಗಳನ್ನು ಸ್ವೀಕರಿಸಿದ್ದಾರೆ. ಮಲೆನಾಡಿನ ಬೆಳೆಗಾರರು ಕಾನೂನುಗಳನ್ನು ಗೌರವಿಸುತ್ತಿದ್ದು, ಪೊಲೀಸ್ ಇಲಾಖೆಯಿಂದ ವಿವಿಧ ಸಂದರ್ಭಗಳಲ್ಲಿ ವಿಧಿಸಲಾಗುವ ಬಂದೂಕು ಕುರಿತ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕಾಫಿ ತೋಟಗಳಲ್ಲಿ ಕಳವು ಪ್ರಕರಣಗಳು ಮತ್ತು ವನ್ಯಜೀವಿಗಳ ದಾಳಿ ಹೆಚ್ಚಾಗುತ್ತಿದ್ದು, ಬೆಳೆಗಾರರ ಪ್ರಾಣ ಬೆಳೆ ರಕ್ಷಣೆಗೆ ಬಂದೂಕು ಹೊಂದಲು ಆಸಕ್ತಿ ವಹಿಸಿದ್ದು, ಪರವಾನಗಿಯನ್ನು ನೀಡಿದರೆ ಬೆಳೆಗಾರರಿಗೆ ಆತ್ಮವಿಶ್ವಾಸ ಹಾಗೂ ಭದ್ರತೆಯನ್ನು ನೀಡಿದಾಂತಾಗುತ್ತದೆ ಎಂದು ಬಾಲಕೃಷ್ಣ ವಿನಂತಿಸಿದ್ದಾರೆ.

Petition to issue licenses to gun trained growers

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version