ALSO FEATURED IN

Historical Glory:ಐತಿಹಾಸಿಕ ವೈಭವ ೨೦೨೪-೨೫ ಸಮಾರೋಪ ಸಮಾರಂಭ

Spread the love

ಚಿಕ್ಕಮಗಳೂರು: ಐತಿಹಾಸಿಕ ರಾಜಮನೆತನಗಳ ವೈಭವವನ್ನು ತೆರೆಯ ಮೇಲೆ ಕಟ್ಟಿಕೊಟ್ಟ ಐತಿಹಾಸಿಕ ವೈಭವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಇತಿಹಾಸ ತಜ್ಞೆ ಪ್ರೊ. ಅನುರಾಧ ಹೇಳದರು.

ಅವರು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಐತಿಹಾಸಿಕ ವೈಭವ ೨೦೨೪-೨೫ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾವಿಜೇತರಿಗೆ ಬಹುಮಾನವಿತರಿಸಿ ಕಾರ್ಯಕ್ರಮಮಾತನಾಡಿದರು.ಐತಿಹಾಸಿಕ ವೈಭವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಲಾ ವಿದ್ಯಾರ್ಥಿಗಳು, ನಾಡಿನ ಪ್ರಮುಖ ರಾಜಮನೆತನಗಳ ಇತಿಹಾಸವನ್ನು ತೆಗೆದುಕೊಂಡು ಕೃತಕ ಶಬ್ದ, ಧ್ವನಿ ಬಳಸದೆ ಸ್ಥಜನಾತ್ಮಕವಾಗಿ ಅವರೇ ತಯಾರಿಸಿ ಅತ್ಯದ್ಬುತ ರೀತಿಯಲ್ಲಿ ಸಂಕಲನಗೊಳಿಸಿ ವೇದಿಕೆಯ ಮೇಲೆ ಪ್ರಸ್ತುತಪಡಿಸಿದ್ದಾರೆ.

ನಾಡಿನ ಸಂಸ್ಕೃತಿ ಮತ್ತು ನಾಡಿನ ಬಗ್ಗೆ ಇರುವ ಅಸ್ಮಿತೆ ಅನಾರಣಗೊಳಿಸಿದ್ದಾರೆ. ರಿಕ್ರಿಯೇಟಿಂಗ್ ಹಂಪಿ, ಕದಂಬ ಆರ್ಟ್, ಚಾಲುಕ್ಯ ಆರ್ಟ್, ಎಲಿಫೆಂಟಾ ಕೇವ್ ಮತ್ತಿತರೆ ಸೃಜನಾತ್ಮಕ ಕಲೆಗಳು ಜನಮನ ಸೂರೆಗೊಂಡಿವೆ.ಮಕ್ಕಳು ಬಹಳ ಮನೋಜ್ಞವಾಗಿ ಐತಿಹಾಸಿಕ ಮಾಹಿತಿಗೆ ಧಕ್ಕೆ ಬಾರದ ರೀತಿ ಐತಿಹಾಸಿಕ ಘಟನೆಗಳ ಕುರಿತಂತೆ ಪ್ರದರ್ಶಿಸಿ, ಇತಿಹಾಸದ ಪ್ರಾಮುಖ್ಯತೆ, ಶ್ರೇಷ್ಠತೆ ಏನು ಎಂಬುದನ್ನು ಮನೋಜ್ಞವಾಗಿ ಚಿತ್ರಿಸಿ ಕೊಟ್ಟಿದೆಈ ಐತಿಹಾಸಿಕ ವೈಭವ ಎಂದು ಹೇಳಿದರು.

ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ಜೆವಿಎಸ್, ಒಕ್ಕಲಿಗರ ಸಂಘ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಏಳು ಶಾಲೆಗಳ ವಿದ್ಯಾರ್ಥಿಗಳು ಭಾವಹಿಸಿದರು. ಐತಿಹಾಸಿಕ ವೈಭವದ ಬಗ್ಗೆ ಶಾಲಾ ಮಕ್ಕಳು ಪ್ರಸ್ತುತಪಡಿಸಿದ್ದಾರೆ. ಅಭಿನಯ ಮತ್ತು ಹಾಡಿನ ಮೂಲಕ ಕಟ್ಟಿಕೊಟ್ಟಿದ್ದಾರೆ. ಶಾಲಾ ಶಿಕ್ಷಕರು ಸೇರಿ ಒಗ್ಗಟ್ಟಿನಿಂದ ಕಾರ್ಯಕ್ರಮ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಸಹಕಾರ್ಯದರ್ಶಿ ಕೆ.ಕೆ ಮನುಕುಮಾರ್ ಶಾಲಾ ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳ ಮೂಲಕ ಅವರ ಮನೋಚೈತನ್ಯವನ್ನು ದ್ವಿಗುಣ ಗೊಳಿಸುವ ನಿಟ್ಟಿನಲ್ಲಿಅವರ ಮುಂದಿನ ಶಿಕ್ಷಣಕ್ಕೆ ಅನುಕೂಲ ಆಗಲಿ ಎಂದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜೆವಿಎಸ್ ಆಡಳಿತ ಮಂಡಳಿಯ ಎಲ್ಲರೂ ಕೂಡ ಕೈಜೋಡಿಸಿ ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ್ದಾರೆ ಎಂದರು.

ಸ್ಪರ್ಧಾವಿಜೇತರು: ಐತಿಹಾಸಿಕ ವೈಭವ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜಯನಗರ ಸಾಮ್ರಾಜ್ಯದ ಬಗ್ಗೆ ಪ್ರದರ್ಶನ ನೀಡಿದ ನರ್ಚರ್ ಇಂಟರ್‌ನ್ಯಾಶನಲ್ ಶಾಲೆಗೆ ಪ್ರಥಮ ಬಹುಮಾನವಾಗಿ ೨೫ ಸಾವಿರ ರೂ., ಕದಂಬ ರಾಜಮನೆತನದ ವೈಭವವನ್ನು ತೆರೆಯ ಮೇಲೆ ತಂದ ಸೇಂಟ್ ಝೇವಿಯರ್ ಶಾಲೆಗೆ ದ್ವಿತೀಯ ಬಹುಮಾನ ೨೦ ಸಾವಿರ ರೂ, ಬಾದಾಮಿ ಚಾಲುಕ್ಯರ ರಾಜಮನೆತನದ ವೈಭವವನ್ನು ಪ್ರಸ್ತುತಪಡಿಸಿದ ಬ್ರೈಟ್ ಫ್ಯೂಚರ್ ಶಾಲೆಗೆ ತೃತೀಯ ಬಹುಮಾನವಾಗಿ ೧೫ ಸಾವಿರ ರೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ತೀರ್ಪುಗಾರಾಗಿ ಇತಿಹಾಸ ತಜ್ಞೆ ಅನುರಾಧ, ಹಿರಿಯ ಪತ್ರಕರ್ತ ಬಿ.ತಿಪ್ಪೆರುದ್ರಪ್ಪ, ಧನಂಜಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಲಕ್ಷ್ಮಣ್ ಗೌಡ, ಒಕ್ಕಲಿಗರ ಪ್ರಾಂಶುಪಾಲೆ ತೇಜಸ್ವಿನಿ, ಮುಖ್ಯಶಿಕ್ಷಕ ವಿಜಿತ್, ಒಕಕಲಿಗರ ಸಂಘದ ಸಿಇಒ ಕುಳ್ಳೇಗೌಡ, ತೇಜಸ್‌ಮುರ್ತಿ ಮತ್ತಿತರರಿದ್ದರು.

Historical Glory 2024-25 Closing Ceremony

 

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version