ALSO FEATURED IN

Chikmagalur Press Club:ಚಿಕ್ಕಮಗಳೂರು ಪ್ರೆಸ್‌ಕ್ಲಬ್‌ನ ವಾರ್ಷಿಕ ಕ್ರೀಡಾಕೂಟ

Spread the love

ಚಿಕ್ಕಮಗಳೂರು: ಪ್ರೆಸ್‌ಕ್ಲಬ್‌ನ ವಾರ್ಷಿಕ ಕ್ರೀಡಾಕೂಟ ನಗರದ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ನಡೆಯಿತು.

ಜಿಲ್ಲಾಧಿಕಾರಿ ಸಿ.ಎನ್. ಮೀನಾನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳ ಹುಲ್ಲಳ್ಳಿ ಅವರು ಸ್ವತಃ ಕೇರಂ ಆಟ ಆಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಜತೆಗೆ ಅರ್ದ ಗಂಟೆಗೂ ಹೆಚ್ಚು ಕಾಲ ಕೇರಂ ಆಡಿದ ಗಣ್ಯರು ಹೊರಾಂಗಣದಲ್ಲಿ ಕೆಲ ನಿಮಿಷ ಷೆಟಲ್ ಬ್ಯಾಟ್ ಮಿಂಟನ್ ಆಡಿ ಪತ್ರಕರ್ತರೊಂದಿಗೆ ಸಂತಸ ಹಂಚಿಕೊಂಡರು. ಶಾಸಕ ಹೆಚ್.ಡಿ ತಮ್ಮಯ್ಯ ಪ್ರೆಸ್ ಕ್ಲಬ್ ಗೆ ಭೇಟಿನೀಡಿ ತಾವೂ ಕೆಲಕ್ಷಣ ಕೆರಂ ಆಟವಾಡಿ ಸಂತಸದಲ್ಲಿ ಭಾಗವಹಿಸಿದ್ದರು.

ಷೆಟಲ್ ಬ್ಯಾಟ್ ಮಿಂಟನ್, ಕೇರಂ, ಚೆಸ್, ಕ್ರಿಕೆಟ್ ಮತ್ತಿತರೆ ಅನೇಕ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪ್ರತಿನಿತ್ಯ ಒತ್ತಡದ ನಡುವೆಯೇ ಕಾರ್ಯನಿರ್ವಹಣೆ ಮಾಡುವ ಪತ್ರಕರ್ತರು ಮಂಗಳವಾರ ತಮ್ಮ ಒತ್ತಡ, ಜಂಜಾಟಗಳನ್ನೆಲ್ಲ ಬದಿಗಿಟ್ಟು ಸಂತಸದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದದು ವಿಶೇಷವಾಗಿತ್ತು.

ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಕೇರಂ, ಚೆಸ್ ಕ್ರೀಡೆಗಳು ನಡೆದರೆ ಹೊರಾಂಗಣದಲ್ಲಿ ಷೆಟಲ್ ಬ್ಯಾಟ್‌ಮಿಂಟನ್ ಕ್ರೀಡೆಗಳು ನಿರಂತರ ಮಧ್ಯಾಹ್ನದವರೆಗೂ ನಡೆದವು.

ಮಧ್ಯಾಹ್ನದ ನಂತರ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಚಿಕ್ಕಮಗಳೂರು ಪ್ರೆಸ್ ಕ್ಲಬ್ ಜಿಲ್ಲಾಧ್ಯಕ್ಷ ಪಿ.ರಾಜೇಶ್, ಕಾರ್ಯದರ್ಶಿ ತಾರಾನಾಥ್, ಖಜಾಂಚಿ ಗೋಪಿ, ಉಪಾಧ್ಯಕ್ಷ ಚಂದ್ರೇಗೌಡ ಮತ್ತುನಿರ್ದೇಶಕರು ಪಂದ್ಯಾವಳಿಯ ನೇತೃತ್ವ ವಹಿಸಿದ್ದರು

Chikmagalur Press Club’s annual sports meet

 

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version