ALSO FEATURED IN

Tipu Sultan:ಜನರ ಶಾಂತಿಗಾಗಿ ಗ್ಯಾರವಿ ಹಬ್ಬ ಆಚರಣೆ

Spread the love

ಚಿಕ್ಕಮಗಳೂರು:  ಗ್ಯಾರವಿ ಉರುಸ್ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಎಲ್ಲಾ ಧರ್ಮೀಯರ ಶಾಂತಿ, ನೆಮ್ಮದಿ, ನೆಲೆಸಲಿ ಎಂದು ಪ್ರಾರ್ಥನೆ ಸಲ್ಲಿಸುತ್ತೇವೆ. ಸೂಫಿ ಅಂಗಳಕ್ಕೆ ಬಂದ ಸರ್ವ ಜನಾಂಗೀಯ ಧರ್ಮದವರಿಗೂ ಆಶೀರ್ವಾದ ಪಡೆಯುವ ಪವಿತ್ರ ಸ್ಥಳವಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಹಜರತ್ ಟಿಪ್ಪು ಸುಲ್ತಾನ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಇಮ್ತಿಯಾಜ್ ಅಲಿ ಖಾನ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಸರ್ವ ಸಮುದಾಯದ ಜನರ ಶಾಂತಿಗಾಗಿ ಗ್ಯಾರವಿ ಹಬ್ಬ ಆಚರಣೆ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ. ಇದನ್ನು ವಿಶ್ವ ಹಿಂದೂ ಪರಿಷತ್ ಸಂಘ ಪರಿವಾರದ ಕಾರ್ಯಕರ್ತರು ಹೊಸ ಆಚರಣೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿದರು.

ಬಾಬುಬುಡನ್‌ಗಿರಿಯಲ್ಲಿ ಟ್ರಸ್ಟ್ ವತಿಯಿಂದ ಡಿ.೨೨ ರಂದು ಭಾನುವಾರ ಗ್ಯಾರವಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತಾಧಿಗಳು ಸುಮಾರು ೪ ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಸಂಖ್ಯೆಯು ಪ್ರತಿವ?ವೂ ಹೆಚ್ಚುತ್ತಲೇ ಇದೆ ಎಂದು ಹೇಳಿದರು.

ಆದರೆ ಈಗ ವಿಶ್ವ ಹಿಂದೂ ಪರಿ?ತ್ ಇತಿಹಾಸದ ಅರಿವು ಇಲ್ಲದೇ ಮಾತನಾಡುತ್ತಿರುವ ಇವರು ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅವರನ್ನು ಅಮಾನತ್ತು ಮಾಡಬೇಕೆಂದು ಹೇಳಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಪ್ರಪಂಚದ ಎಲ್ಲಾ ಸೂಫಿ ದರ್ಗಗಳಲ್ಲಿ ಈ ಹಬ್ಬ ಪುರಾತನ ಕಾಲದಿಂದಲೂ ಖಡ್ಡಾಯವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ, ಇದಕ್ಕೆ ಯಾರ ಆದೇಶವೂ ಬೇಕಾಗಿರುವುದಿಲ್ಲ, ಇದು ದಿನನಿತ್ಯ ಹಾಗೂ ಹರಕೆಯ ಮೂಲಕವೂ ಮಾಡಬಹುದಾಗಿದೆ ಎಂದು ಹೇಳಿದರು.

೧೯೭೫ರಲ್ಲಿ ಇದ್ದಂತಹ ಯಥಾಸ್ಥಿತಿ ಕಾಪಾಡಿಕೊಂಡು ಬರಬೇಕೆಂದು ಸರ್ವೋಚ್ಚ ನ್ಯಾಯಾಲಯವು ಆದೇಶವಿದ್ದರೂ ಆ ಆದೇಶವನ್ನು ಸಂಘ ಪರಿವಾರ ಉಲ್ಲಂಘಿಸಿ, ಕೆಲವೊಂದು ಆಚರಣೆಗಳನ್ನು ಅಂದರೆ ದತ್ತಜಯಂತಿ, ದತ್ತಮಾಲೆಯಂತಹ ಆಚರಣೆಗಳನ್ನು ಇತ್ತೀಚಿನ ದಿನಗಳಲ್ಲಿ ಮಾಡಿಕೊಂಡು ಬರುತ್ತಿದ್ದು, ಸದರಿ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಬಂದವರು ವಿ?ಪೂರಿತ, ದ್ವೇ?ಭರಿತ ಭಾ?ಣ ಮಾಡಿ, ಮುಗ್ಧ ಹಿಂದೂ ಯುವಕರ ಮನಸ್ಸಿನಲ್ಲಿ ದ್ವೇ?ದ ಬೀಜ ಬಿತ್ತುತ್ತಿದ್ದಾರೆ. ಇದು ಕೇವಲ ರಾಜಕೀಯ ಲಾಭದ ಆಚರಣೆಯಾಗಿದೆ ಎಂದು ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಆರೀಫ್, ಸಾಧಿಕ್, ಮಹಮ್ಮದ್ ಅತೀಕ್ ಉಪಸ್ಥಿತರಿದ್ದರು.

Karnataka State Hazrat Tipu Sultan Charitable Trust President Imtiaz Ali Khan Press Conference

Facebook
X
WhatsApp
Telegram
Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ…

Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

Spread the love

ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ…

[t4b-ticker]
Exit mobile version