ಚಿಕ್ಕಮಗಳೂರು: ದೇಶದ ಜನಸಾಮಾನ್ಯರ ಅನುಕೂಲತೆಗಾಗಿ ಕೇಂದ್ರ ಸರ್ಕಾರ ಜಾರಿ ಗೊಳಿಸಿರುವ ಸಬ್ಸಿಡಿ ಸಹಿತದ ಸೋಲಾರ್ ಸಿಸ್ಟಂ ಯೋಜನೆ ಪ್ರತಿ ಕುಟುಂಬದ ವಿದ್ಯುತ್ ಶುಲ್ಕ ಕಡಿಮೆಗೊ ಳಿಸಿ ಆರ್ಥಿಕ ಹೊರೆ ಸುಧಾರಿಸಲು ಮಹತ್ತರ ಹೆಜ್ಜೆಯಿಟ್ಟಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ. ಕೆ.ಪ್ರಾಣೇಶ್ ಹೇಳಿದರು.
ತಾಲ್ಲೂಕಿನ ಅಲ್ಲಂಪುರ ಸಮೀಪ ಖಾಸಗೀ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ಧ ರೂಫ್‌ಟಾಪ್ ಸೋ ಲಾರ್ ಮತ್ತು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯ ಕುರಿತಾದ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮೋದಿ ಸರ್ಕಾರದ ಯೋಜನೆ, ಯೋಚನೆಗಳು ಜನಸಾಮಾನ್ಯರ ಏಳಿಗೆಗೆ ಪೂರಕವಾಗಿದೆ. ಅತಿ ಹೆಚ್ಚು ತಾಪಮಾನ ಹೊಂದಿರುವ ದಕ್ಷಿಣ ಕನ್ನಡದಲ್ಲಿ ಅಳವಡಿಸಿ ಯಶಸ್ವಿಗೊಂಡಿರುವ ಪಿಎಂ ಸೂರ್ಯ ಮನೆಗೆ ವಿದ್ಯುತ್ ಯೋಜನೆ ಅತ್ಯಂತ ಹೆಚ್ಚು ಪ್ರಚಲಿತದಲ್ಲಿದ್ದು ಇದೀಗ ಮಲೆನಾಡು ಭಾಗಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.
ಜಿಲ್ಲೆಯ ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶದಲ್ಲಿ ಸೋಲಾರ್ ಸಿಸ್ಟಂ ಅಳವಡಿಸಿಕೊಂಡಲ್ಲಿ ವಿದ್ಯುತ್ ಶುಲ್ಕವನ್ನು ಕಡಿಮೆಗೊಳಿಸಿ, ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದು. ಆ ನಿಟ್ಟಿನಲ್ಲಿಜನತೆ ಯೋಜನೆಯಿಂದ ವಂಚಿತರಾಗಬಾರದೆಂಬ ದೃಷ್ಟಿಯಿಂದ ದೇಶಾದ್ಯಂತ ಜಾರಿಗೊಳಿಸಿ ದೊಡ್ಡ ಕ್ರಾಂತಿಕಾರಿ ಕೇಂದ್ರ ಸರ್ಕಾರ ಮೂಡಿಸುತ್ತಿದೆ ಎಂದರು.
ಎನರ್ಜಿ ಸೋಲಾರ್ ಸಂಸ್ಥೆ ನಿರ್ದೇಶಕ ಸೂರಜ್‌ಶೆಟ್ಟಿ ಮಾತನಾಡಿ ಕೇಂದ್ರದ ಯೋಜನೆಯಲ್ಲಿ ೧೦೦ ಯುನಿಟ್‌ಗೆ ೩೦ ಸಾವಿರ, ೨೦೦ ಯುನಿಟ್ ಬಳಕೆಗೆ ೬೦ ಸಾವಿರ ಹಾಗೂ ೩೦೦ ಯುನಿಟ್ ಬಳಕೆದಾರರಿಗೆ ೭೮ ಸಾವಿರ ಸಬ್ಸಿಡಿ ಹಣವು ಯಾವುದೇ ಏಜೆಂಟರಿಲ್ಲದ ನೇರವಾಗಿ ತಿಂಗಳಾಂತ್ಯದೊಳಗೆ ಗ್ರಾಹಕರ ಖಾತೆಗೆ ಜಮಾವಣೆಗೊಳ್ಳಲಿದೆ ಎಂದು ತಿಳಿಸಿದರು.
ಸೋಲಾರ್ ಸಿಸ್ಟಂನಲ್ಲಿ ಭಾರತ ಸರ್ಕಾರ ಅತ್ಯಂತ ದೊಡ್ಡ ಹೆಜ್ಜೆಯಿಟ್ಟು ಮೊದಲ ಸ್ಥಾನದಲ್ಲಿದೆ. ಅಭಿ ವೃದ್ದಿಗೊಂಡ ದೇಶದ ಬದಲಾಗಿ, ಬಡತನ ರೇಖೆಯಲ್ಲಿರುವ ದೇಶಗಳೊಂದಿಗೆ ಸೋಲಾರ್ ಎನರ್ಜಿ ಉ ತ್ಪಾದಿಸಲು ಜೊತೆಗೂಡಿ ಕಾರ್ಯನಿರ್ವಹಿಸುತ್ತಿದೆ. ೨೦೧೪ರಲ್ಲಿ ಪ್ರಾರಂಭಗೊಂಡ ಈ ಯೋಜನೆ ಪ್ರಸಕ್ತ ಸಾ ಲಿನಲ್ಲಿ ದೊಡ್ಡಮಟ್ಟಿನಲ್ಲಿ ಬೆಳವಣಿಗೆ ಹೊಂದುತ್ತಿದೆ ಎಂದರು.
ಕೆಲವರು ಕರಾವಳಿ ಪ್ರದೇಶ ಹೆಚ್ಚು ಉಷ್ಣಾಂಶ ಕೂಡಿರುವ ಕಾರಣ ಎನರ್ಜಿ ಸೋಲಾರ್ ಉಪಯು ಕ್ತ. ಆದರೆ ಮಲೆನಾಡಿನಲ್ಲಿ ಸಾಧ್ಯವಿಲ್ಲ ಎಂಬ ಅನುಮಾನವಿದೆ. ಈ ಸೋಲಾರ್‌ನ ವಿಶೆಷ್ಟವೆಂದರೆ ಕಡಿಮೆ ಬೆಳಕಿನಲ್ಲಿ ಹೆಚ್ಚು ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಕಾರಣ ಮಲೆನಾಡಿನ ಅನೇಕ ಭಾಗಗಳಲ್ಲಿ ಅಳವಡಿಸಿಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಕನ್ನಾಯಿಲಾಲ್ ಗೋಪಾಲಿ, ಸಿವಿಲ್ ಇಂಜಿನಿಯರ್ ಅಧ್ಯಕ್ಷ ಜಿ.ರಮೇಶ್, ರಾಜ್ಯ ಎಲೆಕ್ಟ್ರೀಕಲ್ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಹರೀಶ್, ಸಾಮಿಲ್ ಮಾಲೀಕರ ಸಂಘದ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಹೋಂಸ್ಟ್ರೇ ಅಸೋಸಿಯೇಷನ್ ಅಧ್ಯಕ್ಷ ಎನ್.ಆರ್.ತೇಜಸ್ವಿ, ಬಾರ್ & ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಜಯ ಂತ್‌ಪೈ, ಹೆಚ್‌ಇಎಫ್ ಅಧ್ಯಕ್ಷ ಹೆಚ್.ಪಿ.ಲಕ್ಷ್ಮೀಶ ಉಪಸ್ಥಿತರಿದ್ದರು. ಸೀತರಾಮಭರಣ್ಯ ನಿರೂಪಿಸಿದ ರು. ಸುಮಂತ್ ಸ್ವಾಗತಿಸಿದರು. ಪ್ರದೀಪ್ ವಂದಿಸಿದರು.
Rooftop Solar and Central Government Prime Minister Suryaghar Yojana Workshop