ALSO FEATURED IN

ಮುಷ್ಕರ ನಿರತರ ಪೌರಸೇವಾ ನೌಕರರ ಬಳಿಗೆ ಶಾಸಕ ತಮ್ಮಯ್ಯ ಭೇಟಿ

Spread the love

ಚಿಕ್ಕಮಗಳೂರು: ಮುಷ್ಕರ ನಿರತರ ಬಳಿಗೆ ತೆರಳಿದ ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಸ್ವಚ್ಚತೆ ಮೂಲಕ ನಗರವಾಸಿಗಳ ಆರೋಗ್ಯ ಕಾಪಾಡುವ ಪೌರಸೇವಾ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ನಡೆಸುತ್ತಿರುವ ಮುಷ್ಕರಕ್ಕೆ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ನಿಮ್ಮೆಲ್ಲರ ಪ್ರತಿನಿಧಿಯಾಗಿ ಶಿಫಾರಸ್ಸು ಪತ್ರವನ್ನು ಮೇ.೩೦ ರಂದು ಶುಕ್ರವಾರ ಪೌರಾಡಳಿತ ಸಚಿವ ರಹೀಂಖಾನ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಮಾಡಿ ಪತ್ರ ಸಲ್ಲಿಸಿ ಶೀಘ್ರ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುತ್ತೇನೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಂಖಾನ್ ದೂರವಾಣಿ ಮೂಲಕ ಮಾತನಾಡಿದರು ಐದು ದಿನ ಗಡುವು ನೀಡುವಂತೆ ಕೋರಿದ್ದು, ಹಂತಹಂತವಾಗಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆಂದು ಮುಷ್ಕರ ನಿರತ ಪೌರಕಾರ್ಮಿಕರಿಗೆ ತಿಳಿಸಿದರು.

ನಗರಸಭಾಧಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರು ಮಳೆ ಚಳಿ ಬಿಸಿಲು ಎನ್ನದೆ ವಾಟರ್ ಮ್ಯಾನ್‌ಗಳು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದರು.

ಲೋಡರ್‍ಸ್ ಮತ್ತು ಚಾಲಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಾರ್ವಜನಿಕರು ಹಾಕಿದ ಕಸವನ್ನು ಎತ್ತುವ ಮೂಲಕ ಸ್ವಚ್ಚತೆ ಕಾಪಾಡುತ್ತಿದ್ದಾರೆ. ಜೊತೆಗೆ ಗುತ್ತಿಗೆ ಆಧಾರದಲ್ಲಿ ನಗರಸಭೆಯಲ್ಲಿ ಕಂಪ್ಯೂಟರ್, ಮತ್ತಿತರೆ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಕೂಡಲೇ ಈ ಎಲ್ಲಾ ನೌಕರರನ್ನು ಸರ್ಕಾರ ಕಾಯಂ ಸರ್ಕಾರಿ ನೌಕರರೆಂದು ಪರಿಗಣಿಸಿ ಅವರ ಜೀವನ ನಿರ್ವಹಣೆಗೆ ಉತ್ತಮ ವೇತನ ನೀಡಬೇಕು, ಆರೋಗ್ಯ ಸುಧಾರಣೆ, ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ ಮತ್ತಿತರ ಸಮಸ್ಯೆಗಳನ್ನು ಪೌರಸೇವಾ ನೌಕರರು ಎದುರಿಸುತ್ತಿದ್ದಾರೆಂದು ವಿವರಿಸಿದರು.

ಕೇವಲ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ನೌಕರರನ್ನು ಕಾಯಂ ಮಾಡಿಕೊಂಡರೆ ಸಾಲದು. ಪಟ್ಟಣ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗಂಭೀರವಾಗಿ ಪರಿಗಣಿಸಿ ಕಾಯಂ ಸರ್ಕಾರಿ ನೌಕರರೆಂದು ಆದೇಶಿಸಬೇಕೆಂದು ಒತ್ತಾಯಿಸಿದರು.

ಬಿಜೆಪಿ ಮುಖಂಡ ಸೀತಾರಾಂಭರಣ್ಯ ಮಾತನಾಡಿ, ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಹಂತಹಂತವಾಗಿ ಕಾಯಂ ಸರ್ಕಾರಿ ನೌಕರರೆಂದು ಪರಿಗಣಿಸುವುದಾಗಿ ಹೇಳಿದ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸದೆ ವಿಫಲವಾಗಿದೆ ಎಂದು ಆರೋಪಿಸಿದರು.

ಜಗತ್ತಿಗೆ ಹೆಚ್ಚು ದೊಡ್ಡ ಸವಾಲಾಗಿರುವುದು ಈ ಸ್ವಚ್ಚತಾ ಕಾರ್ಯ. ಪಕ್ಷ ಯಾವುದೇ ಇರಲಿ ಆಳುವಂತ ಸರ್ಕಾರಗಳು ಯಾವುದಕ್ಕೆ, ಯಾರಿಗೆ ಮೊದಲ ಆದ್ಯತೆ ನೀಡಬೇಕಿತ್ತೋ ಅದಾಗದೇ ಇರುವುದರಿಂದ ಅನಿವಾರ್ಯವಾಗಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದು ದೂರಿದರು.

ಈ ವಿಚಾರದಲ್ಲಿ ಸರ್ಕಾರ ಮೀನಾಮೇಷ ಎಣಿಸದೆ ರಾಜ್ಯದ ೧೦ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳಿಗೆ ಎಷ್ಟು ಜನ ಪೌರಕಾರ್ಮಿಕರ ಅವಶ್ಯಕತೆ ಇದೆ ಎಂಬುವುದರ ಬಗ್ಗೆ ಸಮಗ್ರ ಸಮೀಕ್ಷೆಯನ್ನು ನಡೆಸಿ ಎಲ್ಲರನ್ನೂ ಕಾಯಂಗೊಳಿಸಬೇಕೆಂದು ಆಗ್ರಹಿಸಿದರು.

ನಗರಸಭೆಯ ವಿಪಕ್ಷ ನಾಯಕ ಮುನೀರ್ ಅಹಮದ್ ಮಾತನಾಡಿ, ವಿವಿಧ ೪೫ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಪೌರಸೇವಾ ನೌಕರರ ಮುಷ್ಕರಕ್ಕೆ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದು, ಶಾಸಕ ಹೆಚ್.ಡಿ. ತಮ್ಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಪೌರಾಡಳಿತ ಸಚಿವ ರಹೀಂಖಾನ್ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಇವರ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.

ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಡೆಂಗ್ಯೂ, ಕೊರೊನಾ ಹರಡುತ್ತಿರುವ ಈ ಸಂದರ್ಭದಲ್ಲಿ ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈಡೇರಿಸುವ ಮೂಲಕ ಪೌರಕಾರ್ಮಿಕರು ಸ್ವಚ್ಚತೆ ಕರ್ತವ್ಯಕ್ಕೆ ಮರಳುವಂತೆ ಮಾಡಬೇಕೆಂದು ವಿನಂತಿಸಿದರು.

ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್. ಅಣ್ಣಯ್ಯ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿರುವ ಪೌರ ಕಾರ್ಮಿಕರನ್ನು ಮಾತ್ರ ಕಾಯಂಗೊಳಿಸಲಾಗಿದೆ. ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಸೇವಾ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಜೊತೆಗೆ ಆರೋಗ್ಯ ವಿಮೆ, ಕೆಜಿಐಡಿ ಸೌಲಭ್ಯಗಳನ್ನು ಕಳೆದ ೩೦ ವರ್ಷಗಳಿಂದ ವಾಟರ್ ಮ್ಯಾನ್‌ಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ನೇರ ಪಾವತಿ ಅಡಿಗೆ ತರಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ ಬಸವರಾಜ್, ಉಪಾಧ್ಯಕ್ಷೆ ಅನುಮಧುಕರ್, ಸದಸ್ಯರುಗಳಾದ ಗುರುಮಲ್ಲಪ್ಪ, ಇಂದಿರಾ ಶಂಕರ್, ರೂಪಕುಮಾರ್, ರಾಜು, ದೀಪಾ ರವಿಕುಮಾರ್, ಪರಮೇಶ್, ಸೈಯದ್ ಜಾವಿದ್, ಖಲಂದರ್, ಶಾದಾಬ್ ಅಲಂಖಾನ್, ತಬಸ್ಸುಮ್ ಬಾನು, ವಿಫುಲ್‌ಕುಮಾರ್ ಜೈನ್, ಸಿ.ಎಂ.ಸಲ್ಮಾ, ಮಂಜುಳಾ, ಲಕ್ಷ್ಮಣ್, ಗೌಸಿಯಾ ಖಾನಂ, ಭವ್ಯಮಂಜುನಾಥ್, ಎ.ಸಿ.ಕುಮಾರೇಗೌಡ, ಗೋಪಿ, ದಂಟರಮಕ್ಕಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಪಾಪುರ ಮಂಜೇಗೌಡ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಆರ್.ಓ ಶಿವಾನಂದ್, ಸೂಪರ್‌ಡೆಂಟ್ ಲತಾಮಣಿ. ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಈಶ್ವರ್, ನಾಗಪ್ಪ, ರಂಗಪ್ಪ, ವಿವೇಕ್, ರಮೇಶ್, ಹೊರಗುತ್ತಿಗೆ ನೌಕರರಾದ ಕೃಷ್ಣ, ಮೂರ್ತಿ, ಪ್ರಸನ್ನ ಇತರರು ಉಪಸ್ಥಿತರಿದ್ದರು.

MLA Thammayya visits striking civil servants

Facebook
X
WhatsApp
Telegram
Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.…

Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.…

[t4b-ticker]
Exit mobile version