ಚಿಕ್ಕಮಗಳೂರು: ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಜುಲೈ ೫ ರಂದು ಚುನಾವಣೆ ನಡೆಯಲಿದ್ದು, ಜನತಾದಳದ ಬಿ.ಶೀಲಾ ದಿನೇಶ್ ರವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಅಧ್ಯಕ್ಷರಾಗಿದ್ದ ಬಿಜೆಪಿಯ ಸುಜಾತಶಿವಕುಮಾರ್‌ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸಂಧಾನ ನಡೆಸಿದ ಬಿಜೆಪಿ ಮತ್ತು ದಳದವರು ಸುಜಾತರವರ ರಾಜೀನಾಮೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಜು.೫ ರಂದು ಶನಿವಾರ ನಿಗದಿಪಡಿಸಲಾಗಿದೆ.
ಬಿಜೆಪಿ ಮತ್ತು ದಳದ ಮೈತ್ರಿಯಿಂದಾಗಿ ಕೇವಲ ಮೂರು ಸದಸ್ಯರನ್ನು ಹೊಂದಿರುವ ಜನತಾದಳದವರಿಗೆ ಇದರಿಂದಾಗಿ ಭರ್ಜರಿ ಲಾಟರಿ ಹೊಡೆದಂತಾಗಿದೆ. ಕಳೆದ ಇಪ್ಪತ್ತೈದು ವ?ಗಳ ಹಿಂದೆ ನಗರಸಭೆಯ ಅಧಿಕಾರ ಹಿಡಿದಿದ್ದ ಜನತಾದಳಕ್ಕೆ ಬಯಸದೇ ಬಂದ ಭಾಗ್ಯವಾದರೆ. ದಿನೇಶ್ ಕುಟುಂಬದವರು ೧೫ನೇ ವಾರ್ಡಿನಿಂದ ಸತತ ಇಪ್ಪತ್ತೈದು ವ?ಗಳಿಂದ ನಗರಸಭೆಗೆ ಆಯ್ಕೆ ಆಗುತ್ತಿದ್ದಾರೆ. ದಿನೇಶ್ ಮೂರು ಬಾರಿ ನಗರಸಭೆಗೆ ಆಯ್ಕೆಯಾಗುತ್ತಿದ್ದರು. ಇವರ ಸಹೋದರಿ ದ್ರಾಕ್ಷಾಯಿಣಿ ಮತ್ತು ಪ್ರಸ್ತುತ ಬಿ. ಶೀಲಾ ದಿನೇಶ್ ಆಯ್ಕೆಯಾಗಿರುವುದು ವಿಶೇಷ
ವಾರ್ಡ್‌ನ ಸದಸ್ಯರಾಗಿ ಸದಾ ಕಾಲವೂ ಸೇವೆ ಮಾಡುತ್ತಿರುವುದರಿಂದ ನಗರಸಭೆ ಚುಕ್ಕಾಣಿ ಹಿಡಿಯುವ ಅದೃ? ಒದಗಿಬಂದಿದೆ.
೩೦ ತಿಂಗಳ ಅವಧಿಗೆ ಮೊದಲ ೧೦ ತಿಂಗಳ ಅವಧಿಯನ್ನು ಬಿಜೆಪಿಯ ಸುಜಾತ ಶಿವಕುಮಾರ್‌ರವರಿಗೆ ಬಿಟ್ಟುಕೊಡಲಾಗಿದೆ. ಎರಡನೇ ೧೦ ತಿಂಗಳ ಅಧಿಕಾರವನ್ನು ಜೆಡಿಎಸ್‌ಗೆ, ಉಳಿದ ೧೦ ತಿಂಗಳ ಅವಧಿಯನ್ನು ಪುನಃ ಬಿಜೆಪಿಗೆ ಅಧಿಕಾರ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.
ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಮತ್ತು ಎಸ್.ಎಲ್. ಭೋಜೇಗೌಡ ಇವರುಗಳ ಸಮ್ಮುಖದಲ್ಲಿ ಮಾತುಕತೆ ನೆಡೆದಿದ್ದು, ಈಗ ಜೆಡಿಎಸ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇರುವ ಈ ಮೂರು ಅವಧಿಯಲ್ಲಿ ಶೀಲಾದಿನೇಶ್ ಒಬ್ಬರೇ ಮಹಿಳೆ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಕಚಿತವಾಗಿದೆ.
ಒಟ್ಟು ೩೫ ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿಯ ೧೮ ಸದಸ್ಯರಿದ್ದರು. ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದ್ದು, ಇದರಿಂದಾಗಿ ಬಿಜೆಪಿಯ ಸಂಖ್ಯೆ ೧೭ಕ್ಕೆ ಕುಸಿದಿದೆ. ಜೆಡಿಎಸ್‌ನ ಇಬ್ಬರು ಮತ್ತು ಜೆಡಿಎಸ್ ಬೆಂಬಲಿತ ಒಬ್ಬರು ಸೇರಿ ಒಟ್ಟು ೨೦ ಸದಸ್ಯ ಬಲವನ್ನು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಹೊಂದಿದೆ.
ಬಿಜೆಪಿ ೧೭ ಸದಸ್ಯ ಬಲ ಇದ್ದರೂ ಒಪ್ಪಂದದಂತೆ ಜೆಡಿಎಸ್‌ಗೆ ಅಧಿಕಾರ ಬಿಟ್ಟುಕೊಡುತ್ತಿದೆ. ಬಿಜೆಪಿ-ಜೆಡಿಎಸ್ ರಾಷ್ಟ್ರೀಯ ಮಟ್ಟದಲ್ಲಿ ಹೊಂದಾಣಿಕೆಯಾಗಿ ಒಗ್ಗಟ್ಟಾಗಿರುವುದರಿಂದ ಕಾಂಗ್ರೆಸ್ ಇದರ ಲಾಭ ಪಡೆಯಲು ಮುಂದಾಗಿಲ್ಲ, ಶಾಸಕ ಹೆಚ್.ಡಿ. ತಮ್ಮಯ್ಯ ಸೇರಿ ಕಾಂಗ್ರೆಸ್‌ನ ೧೨ ಸದಸ್ಯರು, ಎಸ್‌ಡಿಪಿಐನ ಒಬ್ಬರು, ಪಕ್ಷೇತರರು ಒಬ್ಬರು, ಬಿಜೆಪಿಯಿಂದ ಅಮಾನತುಗೊಂಡಿರುವ ಒಬ್ಬರು ಸೇರಿ ಒಟ್ಟು ೧೬ ಮತಗಳ ಬಲ ಇದೆ.
Sheila Dinesh’s election as Municipal Council President is almost certain