Subscribe to Updates
Get the latest creative news from FooBar about art, design and business.
- ಜಿಲ್ಲೆಯಲ್ಲಿ ನೂತನ ಜಿಲ್ಲಾ ಬೆಳೆಗಾರರ ಸಂಘ ಅಸ್ತಿತ್ವಕ್ಕೆ
- ಕವಿತೆಗಳು ಅನುಭವ ಶೋಧಕ್ಕೆ ದಾರಿ ತೆರೆಯುತ್ತವೆ
- e-paper (13-07-2025) Chikkamagalur Express
- ಸಂಸತ್ ಅಧಿವೇಶನದಲ್ಲಿ ಸರ್ಫೇಸಿ ಕಾಯ್ದೆ ಬಗ್ಗೆ ಚರ್ಚೆ
- ಕೇಂದ್ರ ಸರ್ಕಾರದ ಮೇಲೆ ಹೊಸ ನಂಬಿಕೆ-ವಿಶ್ವಾಸ ಬಂದಿದೆ
- e-paper (12-07-2025) Chikkamagalur Express
- ಲಕ್ಸಾಗರ ಕೆರೆಯನ್ನು ಪುನಶ್ಚೇತನಗೊಳಿಸುವಂತೆ ಮನವಿ
- ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಎರಡು ವರ್ಷದಲ್ಲಿ ಆರಂಭ
Author: chikkamagalur express
ಚಿಕ್ಕಮಗಳೂರು: ಸದೃಢ ಆರೋಗ್ಯಕ್ಕೆ ವ್ಯಾಯಾಮ ಮುಖ್ಯ. ಆರೋಗ್ಯವೇ ಭಾಗ್ಯ. ಈ ನಿಟ್ಟಿನಲ್ಲಿ ನಗರದಲ್ಲಿ ವ್ಯಾಯಾಮ ಶಾಲೆ ನಿರ್ಮಿಸಿದ್ದು ಯುವಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ನಗರದ ಆಜಾದ್ ಪಾರ್ಕಿನ ಬಳಿ ನಿರ್ಮಿಸಿರುವ ನೂತನ ಜೈಭೀಮ್ ವ್ಯಾಯಾಮ ಶಾಲೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಶೋಷಿತ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅಂಬೇಡ್ಕರ್ ಅವರು ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಹೋರಾಡಿದ್ದಾರೆ. ಜಗತ್ತೇ ಮೆಚ್ಚುವಂತಹ ಸಂವಿಧಾನ ರಚಿಸಿದ್ದಾರೆ. ಅವರ ಜನ್ಮದಿನದಂದೇ ಜೈಭೀಮ್ ವ್ಯಾಯಾಮ ಶಾಲೆ ಉದ್ಘಾಟಿಸುತ್ತಿರುವುದು ಸಂತಸದ ಕ್ಷಣವಾಗಿದೆ ಎಂದರು. ಶಾಸಕ ಸಿ.ಟಿ.ರವಿ ಮಾತನಾಡಿ, ೬೪ ಲಕ್ಷ ರೂ.ವೆಚ್ಚದಲ್ಲಿ ವ್ಯಾಯಾಮ ಶಾಲೆ ನಿರ್ಮಿಸಿ ಉದ್ಘಾಟನೆ ಆಗುತ್ತಿದೆ. ಯುವಕರು ಬಾಹುಬಲಕ್ಕೆ ವ್ಯಾಯಾಮಶಾಲೆ ಉಪಯೋಗಿಸಿಕೊಳ್ಳಿ, ಬುದ್ದಿ ಬಲಕ್ಕೆ ಗ್ರಂಥಾಲಯ ಬಳಸಿಕೊಳ್ಳಿ. ಬುದ್ದಿ ಮತ್ತು ಬಾಹುಬಲ ಸಮಾಜದ ಉನ್ನತಿ, ರಾಷ್ಟ್ರ ನಿರ್ಮಾಣಕ್ಕೆ ಉಪಯೋಗವಾಗುತ್ತದೆ. ಸಮಾಜಕ್ಕೆ ಉಪಯೋಗವಾಗದ ಬುದ್ದಿ ಮತ್ತು ಬಾಹುಬಲ ರಾಕ್ಷಸ ಬಲವಾಗಿ ಪರಿವರ್ತನೆಯಾಗವ ಅಪಾಯವಿದೆ ಎಂದರು. ಇಲ್ಲಿನ ವ್ಯಾಯಾಮ ಶಾಲೆಗೆ ಸುದೀರ್ಘ…
ಚಿಕ್ಕಮಗಳೂರು: ದೇಶದಲ್ಲಿನ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಗಲಿರುಳು ಶ್ರಮಿಸಿ ಸಮಸಮಾಜದ ಬಲವರ್ಧನೆಗೆ ದಿಟ್ಟತನದಿಂದ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಮಹಾನ್ ತಪಸ್ವಿಯಾಗಿದ್ದಾರೆ ಅವರೊಬ್ಬ ಬಹುಮುಖಿ ವ್ಯಕ್ತಿತ್ವದ ವಿಶ್ವಜ್ಞಾನಿ ಎಂದು ವಿಧಾನ ಸಭೆ ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‌ರವರ ೧೩೪ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಡಿದರು. ಅಂಬೇಡ್ಕರ್ ಅವರ ವೈಜ್ಞಾನಿಕ ಚಿಂತನೆಗಳು ಪ್ರಸ್ತುತ ಮನುಕುಲದ ಉಳಿವಿಗೆ ಹಾಗೂ ದೇಶದ ಪ್ರಗತಿಗೆ ಆಧಾರ ಸ್ಥಂಭಗಳಾಗಿದೆ. ಅವರು ವಿಶ್ವದ ಮಹಾನ್ ಸಂಶೋಧಕರು, ದೇಶದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಜ್ವಲಂತ ಸಮಸ್ಯೆಗಳಿಗೆ ವೈಜ್ಞಾನಿಕ ಸುಧಾರಣೆಗಳನ್ನು ಅವಿಷ್ಕರಿಸುವ ಮೂಲಕ ದೇಶದ ಭದ್ರತೆಗೆ ಸಂವಿಧಾನ ರಚಿಸಿದ್ದಾರೆ. ಅವರ ಮೌಲ್ಯಯುತ ಚಿಂತನೆ ಮತ್ತು ಸಾಧನೆಯನ್ನು ಯುವ ಜನಾಂಗ ಸ್ಮರಿಸಿಕೊಂಡು ಹೊಸತನದ…
ಬೀರೂರು.: ಸಾರ್ವಜನಿಕರು ಮತ್ತು ಶಿಕ್ಷಣಪ್ರೇಮಿಗಳಿಗೆ ಸಹಕಾರವೆಂದು ಖರೀದಿ ಕುಟುಂಬದವರು ನೀಡಿದ ಭೂಮಿಯನ್ನು ಕೆ.ಎಲ್.ಕೆ.ಕಾಲೇಜು ಮೈದಾನವೆಂದೆ ಇತಿಹಾವಿರುವ ಈ ಮೈದಾನಕ್ಕೆ ಬಹಳ ವರ್ಷಗಳಿಂದ ವಾಕಿಂಗ್ ಟ್ರಾಕ್ ಮಾಡಬೇಕೆಂದು ಒತ್ತಾಹಿಸಿದರ ಪರಿಣಾಮ ಇಂದು ೩೯ಲಕ್ಷರೂ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು. ಅವರು ಶನಿವಾರ ಕೆ.ಎಲ್.ಕೆ ಮೈದಾನದಲ್ಲಿ ನಗರೊತ್ಥಾನ ೪ರ ಯೋಜನೆಯಡಿ ವಾಕಿಂಗ್ ಟ್ರಾಕ್ ಮಾಡಲು ಇಂಟರ್ ಲಾಕ್ ಪಾತ್ ವೇ ಮತ್ತು ಪುರಸಭೆ ಹಿಂಭಾಗದಲ್ಲಿ ಪೌರಕಾರ್ಮಿರಿಗೆ ವಿಶ್ರಾಂತ ಗೃಹ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಮೈದಾನಕ್ಕೆ ತನ್ನದೇ ಆದ ಇತಿಹಾವಿದ್ದು, ಇಲ್ಲಿ ಅನೇಕ ರಾಜಕಾರಣ ದಿಗ್ಗಜರು ಭೇಟಿ ನೀಡಿ ಹೋಗಿದ್ದಾರೆ. ಜೊತೆಗೆ ಬೀರೂರು ಪಟ್ಟಣದ ಅನೇಕ ವೃದ್ದರು, ಶಾಲಾ ವಿದ್ಯಾರ್ಥಿಗಳು ಇಲ್ಲಿ ವಿಶ್ರಾಂತಿ ತೆಗೆದುಕೊಂಡು ನಡೆದಾಡುತ್ತಾರೆ. ವಿದ್ಯಾರ್ಥಿಗಳು ಯುವಕರು ಕ್ರೀಡೆಗಳನ್ನಾಡಲು ಈ ಮೈದಾನವನ್ನು ಬಳಸುತ್ತಿದ್ದಾರೆ. ಮಳೆಗಾಲದಲ್ಲಿ ಮೈದಾನ ಕಪ್ಪುಮಣ್ಣಿರುವ ಕಾರಣ ಕೆಸರಿನಿಂದ ಕಾಲಿಡಲು ಸಹ ಆಗುವುದಿಲ್ಲ. ಇದಕ್ಕೆ ವಾಕಿಂಗ್ ಟ್ರಾಕ್ ಮಾಡಿದರೆ ಈ ಸಮಸ್ಯೆ…
ಚಿಕ್ಕಮಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು ೮೧೮ ಮತದಾರರ ಪೈಕಿ ೩೨೬ ಮಂದಿ ಮತದಾರರು ಮತ ಚಲಾಯಿಸಿದ್ದು, ಒಟ್ಟು ಶೇ. ೩೯.೮೬ ರಷ್ಟು ಮತದಾನವಾಗಿದೆ. ಬೆಳಿಗ್ಗೆ ೮ ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಾಗ ನೀರಸವಾದ ಪ್ರತಿಕ್ರಿಯೆ ಕಂಡು ಬಂದಿತು. ೧೧.೩೦ರ ಬಳಿಕ ಮತದಾನ ಕೊಂಚ ವೇಗ ಪಡೆದುಕೊಂಡು ೧೨.೩೦ ರವರೆಗೆ ಸ್ವಲ್ಪಮಟ್ಟಿಗೆ ಬಿರುಸು ಕಂಡು ಬಂದಿತು. ಮಧ್ಯಾಹ್ನ ೧.೩೦ರ ಸುಮಾರಿಗೆ ಕೇವಲ ಶೇ.೩೦ ರಷ್ಟು ಮಾತ್ರ ಮತದಾನವಾಗಿತ್ತು. ಮಧ್ಯಾಹ್ನ ೨ ಗಂಟೆ ನಂತರ ಮತದಾನದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡರೂ ಅನಂತರ ಮಂದಗತಿಗೆ ಇಳಿಯಿತು. ಸಂಜೆ ೪ ಗಂಟೆಯ ವೇಳೆಗೆ ಮತದಾನ ಮುಕ್ತಾಯಗೊಂಡಾಗ ಒಟ್ಟು ೩೨೬ ಮಂದಿ ಮತ ಚಲಾಯಿಸಿದ್ದು, ಶೇ.೩೯.೮೬ ರಷ್ಟು ಮತದಾನವಾಗಿದೆ. ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣನ ಛತ್ರದಲ್ಲಿ ಏರ್ಪಡಿಸಿದ್ದ ಮತಗಟ್ಟೆಯು ಚಿಕ್ಕಮಗಳೂರು, ಕಳಸಾಪುರ, ಬೆಳವಾಡಿ, ಮೂಡಿಗೆರೆ, ಸಖರಾಯಪಟ್ಟಣ, ಕಡೂರು, ತರೀಕೆರೆ, ಬೀರೂರು ಹಾಗೂ ಅಜ್ಜಂಪುರ ವ್ಯಾಪ್ತಿಗೆ ಒಳಪಟ್ಟಿದೆ. ಅಖಿಲ…
ಚಿಕ್ಕಮಗಳೂರು: ‘ರಾಜ್ಯದ ಜನಸಂಖ್ಯೆಯಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿ ಇರುವ ಮುಸ್ಲಿಮರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ. ಜಾತಿ ಜನಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ, ರಾಜ್ಯ ಸರ್ಕಾರಕ್ಕೆ ಇಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ ‘ಮುಸ್ಲಿಂ ಸಮುದಾಯದಲ್ಲಿ 56 ಜಾತಿಗಳಿವೆ. ಅಲ್ಲಿಯೂ ಅಸ್ಪೃಶ್ಯರು ಇದ್ದಾರೆ. ಈ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ. ಪಸ್ಮಾಂಡ ಮುಸ್ಲಿಮರು ಇದ್ದಾರೆ. ಯಾರು ಪ್ರವಾದಿ ವಂಶಸ್ಥರು ಎಂದು ಭಾವಿಸಿದ್ದಾರೆಯೋ ಅವರು ಈ ಸಮುದಾಯವರಿಗೆ ಹೆಣ್ಣು ಕೊಡುವುದಿಲ್ಲ. ಮುಸ್ಲಿಮರನ್ನು ಇಡಿಯಾಗಿ ಇಡುವ ಹಾಗೂ ಹಿಂದೂಗಳನ್ನು ಒಡೆದಾಳುವ ನೀತಿಗೆ ನಾವು ಬೆಂಬಲ ನೀಡುವುದಿಲ್ಲ. ಸಾಮಾಜಿಕ ನ್ಯಾಯ ಬಿಜೆಪಿಯ ಬದ್ಧತೆ’ ಎಂದು ಕಾಂಗ್ರೆಸ್ ನೇತೃತ್ವದ ಸರ್ಕಾರ ನಡೆಸಿದ್ದ ಜಾತಿಗಣತಿ ವರದಿ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ ಅಲ್ಪಸಂಖ್ಯಾತರು ಯಾರು, ರಾಜ್ಯದ ಜನಸಂಖ್ಯೆಯಲ್ಲಿ ಎರಡನೇ ದೊಡ್ಡ ಸಂಖ್ಯೆಯಲ್ಲಿ ಇರುವ ಸಮುದಾಯ ಅಲ್ಪಸಂಖ್ಯಾತ ಎಂದರೆ ಹೇಗೆ. ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದಾಗ ಕೇಂದ್ರ…
ಚಿಕ್ಕಮಗಳೂರು: ನಲ್ಲೂರು ಮಠ ವರ್ಸಸ್ಸ್ ಬಡಮಕಾನ್ ತೆರವು ವಿವಾದ ಪ್ರಕರಣ ಕೈಗೊಳ್ಳುವ ಪೂರ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡದೆ, ಸೂಕ್ತ ಪೊಲೀಸ್ ಭದ್ರತೆ ಪಡೆಯದೆ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಂಡ ಆರೋಪದ ಹಿನ್ನೆಲೆಯಲ್ಲಿ ವಕ್ಫ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಚಿಕ್ಕಮಗಳೂರು ನಗರದ ಜಾಮೀಯಾ ಮಸೀದಿಗೆ ಸೇರಿದ ಬಡಾ ಮಕಾನ್ ವಕ್ಸ್ ಆಸ್ತಿಯಲ್ಲಿಎನ್. ಎಂ. ಕಮಲಮ್ಮ ಹಾಗೂ ಇತರರು ಮತ್ತು ವಕ್ಫ್ ಮಂಡಳಿ ಹಾಗೂ ಜಾಮೀಯಾ ಮಸೀದಿ ಆಡಳಿತ ಸಮಿತಿ ಮಧ್ಯೆ ನ್ಯಾಯಾಲಯದಲ್ಲಿ ವಿವಾದ ನಡೆಯುತ್ತಿದೆ. ಎನ್. ಎಂ. ಕಮಲಮ್ಮ ಹಾಗೂ ಇತರರನ್ನು ವಿವಾದಿತ ಸ್ಥಳದಿಂದ ತೆರವುಗೊಳಿಸದಂತೆ ತಡೆಯಾಜ್ಞೆ ನೀಡಿ ಪ್ರಧಾನ ಜಿಲ್ಲಾ ನ್ಯಾಯಾಲಯ, ಚಿಕ್ಕಮಗಳೂರು ದಿನಾಂಕ.30.10.2017 ರಂದು ಎಂ.ಎ. ಸಂಖ್ಯೆ. 18/2016 ರಲ್ಲಿ ತೀರ್ಪು ನೀಡಿದೆ. ಜಾಮೀಯಾ ಮಸೀದ್, ಚಿಕ್ಕಮಗಳೂರು ಆಡಳಿತ ಮಂಡಳಿ,ಚಿಕ್ಕಮಗಳೂರು ಘನ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ನಂ.55686/2017 (GM-PP) ರಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅನುಮತಿಸಿ ದಿನಾಂಕ.28.01.2025 ರಂದು ಆದೇಶ ಹೊರಡಿಸಿರುತ್ತದೆ. ವಕ್ಫ್ಅಧಿಕಾರಿ ಸೈಯದ್ ಸತ್ತಾರ ಹುಸೇನಿ,ಬಸವನಹಳ್ಳಿ, ಪೊಲೀಸ್…
ಚಿಕ್ಕಮಗಳೂರು: ಜನಪದ ಸೊಗಡಿನ ಕನ್ನಡ ಸಂಸ್ಕೃತಿ ಎತ್ತಿ ಹಿಡಿಯುವ ಉದ್ದೇಶದಿಂದ ತಾಯಿ-ಮಗನ ಭಾಂದವ್ಯದ ಕಥಾ ಹಂದರ ಹೊಂದಿರುವ ನಿಂಬಿಯಾ ಬನಾದ ಮ್ಯಾಗ ಕನ್ನಡ ಚಲನಚಿತ್ರ ಏಪ್ರಿಲ್ ೪ ರಂದು ರಾಜ್ಯಾದ್ಯಾಂತ ತೆರ ಕಾಣಲಿದೆ ಎಂದು ವರನಟ ಡಾ.ರಾಜ್‌ಕುಮಾರ್ ಅವರ ಮೊಮ್ಮಗ ಹಾಗೂ ನಟ ಷಣ್ಮುಖಗೋವಿಂದ್‌ರಾಜ್ ತಿಳಿಸಿದರು. ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಶೇ.೮೦ ರಷ್ಟು ಚಿತ್ರೀಕರಣ ಮಾಡಲಾಗಿದ್ದು, ಈ ಚಲನಚಿತ್ರ ಸುಮಾರು ೭೦ ಚಿತ್ರ ಮಂದಿರಗಳಲ್ಲಿ ಬಿತ್ತರಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯ ಮಲೆನಾಡಿನ ಬೆಂಗಾಡಿ ಗ್ರಾಮದ ಜಮೀನ್ದಾರ್ ಕುಟುಂಬದ ರಾಘವೇಂದ್ರ ಮತ್ತು ವರಲಕ್ಷ್ಮೀ ದಂಪತಿಗೆ ೧೦ ವರ್ಷಗಳ ನಂತರ ಒಂದು ಗಂಡು ಮಗು ಜನಿಸುತ್ತದೆ. ಮಗು ಜನಿಸಿದ ಸ್ವಲ್ಪ ದಿನಗಳಲ್ಲೇ ತಂದೆ ನಿಗೂಢವಾಗಿ ಮೃತಪಡುತ್ತಾರೆ. ಈ ಸಂದಂರ್ಭದಲ್ಲಿ ಮಗುವಿನ ಪ್ರಾಣಕ್ಕೆ ಆಪತ್ತು ಆಗಬಹುದೆಂದು ಎಂದು ಭಾವಿಸಿ ತಾಯಿ ದೂರದ ಪಟ್ಟಣದಲ್ಲಿರುವ ಪರಿಚಯಸ್ತರಿಗೆ ಮಗವನ್ನು ಒಪ್ಪಿಸಿ, ಮಗು ಪ್ರಾಣಾಪಾಯದಲ್ಲಿದೆ ಎಂಬ ವಿಷಯ ತಿಳಿಸಿ,…
ಚಿಕ್ಕಮಗಳೂರು: ಕಂದಾಯ ಭೂಮಿಯಲ್ಲಿ ನಿರ್ಮಿಸಿಕೊಂಡಿರುವ ಮನೆ, ಕಟ್ಟಡ, ನಿವೇಶನಗಳನ್ನು ಸಕ್ರಮಗೊಳಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಅದರಂತೆ ನಗರದಲ್ಲಿ ಇಂದು ಇ-ಖಾತಾ ಅಭಿಯಾನ ಆರಂಭಿಸಲಾಗಿದೆ ಎಂದು ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ತಿಳಿಸಿದರು. ಅವರು ಇಂದು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪೌರಾಡಳಿತ ನಿರ್ದೇಶನಾಲಯ ಮತ್ತು ನಗರಸಭೆ ಇವರುಗಳು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಇ-ಖಾತಾ ಅಭಿಯಾನಕ್ಕೆ ಚಾಲನೆ ನೀಡಿ, ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ನಗರಸಭೆ ವ್ಯಾಪ್ತಿಯಲ್ಲಿ ಬರುವ ನಾಗರೀಕರು ಆಸ್ತಿ ತೆರಿಗೆಯನ್ನು ಪಾವತಿಸದೇ ಇರುವವರು ಇ-ಖಾತಾ ಅಭಿಯಾನದಲ್ಲಿ ಪಾಲ್ಗೊಂಡು ತೆರಿಗೆ ಪಾವತಿಸಿ, ಸಕ್ರಮ ಮಾಡಿಕೊಳ್ಳಲು ಅಪೂರ್ವ ಅವಕಾಶ ಇದಾಗಿದ್ದು, ಇದರಿಂದ ಸ್ವತ್ತಿನ ಬಿ-ಖಾತೆ ಮಾಡಿಕೊಂಡು ಅನುಕೂಲ ಪಡೆಯಿರಿ ಎಂದು ಹೇಳಿದರು. ನಗರದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಈ ತೆರಿಗೆ ಸಂಗ್ರಹ ಬಹಳ ಮುಖ್ಯವಾಗಿದ್ದು, ಸರ್ಕಾರ ನೀಡಿರುವ ಈ ಮೂರು ತಿಂಗಳ ಕಾಲಾವಕಾಶವನ್ನು ಸದ್ಭಳಕೆ ಮಾಡಿಕೊಂಡು ಆಸ್ತಿಯ ಮೌಲ್ಯವರ್ಧಿತ ಗೊಳಿಸಿಕೊಳ್ಳುವಂತೆ ಎಂದು ಮನವಿ ಮಾಡಿದರು. ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜು ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ…
ಚಿಕ್ಕಮಗಳೂರು: ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪಂಚವಟಿ ಯಾತ್ರಿ ನಿವಾಸವನ್ನು ಶಾಸಕ ಎಚ್.ಡಿ.ತಮ್ಮಯ್ಯ ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು. ಶ್ರೀಕೋದಂಡರಾಮನ ಸನ್ನಿಧಾನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು ೨ ಕೋಟಿ ರೂ. ವೆಚ್ಚದಲ್ಲಿ ಪಂಚವಟಿ ಯಾತ್ರಿ ನಿವಾಸ ನಿರ್ಮಿಸಲಾಗಿದೆ. ಸುಮಾರು ೧೪೪ ವರ್ಷಗಳಿಗೊಮ್ಮೆ ಬರುವಂತಹ ಅಪರೂಪದ ನಕ್ಷತ್ರದಲ್ಲಿ ಬ್ರಹ್ಮರಥೋತ್ಸವ ಆಚರಿಸುತ್ತಿರುವ ಕಾರಣ ಯಾತ್ರಿ ನಿವಾಸವನ್ನು ಇದೇ ದಿನ ಲೋಕಾರ್ಪಣೆ ಮಾಡಲು ಅರ್ಚಕರಾದ ಕಣ್ಣನ್ ಅವರು ನಿಶ್ಚಯಿಸಿದ್ದರು. ಸಿ.ಟಿ.ರವಿ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ನಾನು ದೇವಾಲಯ ಸಮಿತಿಯಲ್ಲಿ ಅಧ್ಯಕ್ಷನಾಗಿ ಪಂಚವಟಿ ನಿವಾಸಕ್ಕೆ ಹಣ ನೀಡಬೇಕು ಎಂದು ಒತ್ತಾಯಿಸಿದ್ದೆವು. ಆಗ ಸಚಿವರಾಗಿದ್ದ ಸಿ.ಟಿ.ರವಿ ಅವರು ೨ ಕೋಟಿ ರೂ. ಮಂಜೂರು ಮಾಡಿದ್ದಾರೆ. ಆ ಯಾತ್ರಿ ನಿವಾಸವನ್ನು ನಾನು ಉದ್ಘಾಟನೆ ಮಾಡುತ್ತಿರುವುದು ನನ್ನ ಪುಣ್ಯ ಎಂದು ಹೇಳಿದರು. ಇದಲ್ಲದೆ ಯಾತ್ರಿ ನಿವಾಸ ಕಾಂಪೌಂಡ್ ನಿರ್ಮಿಸಲು ನಮ್ಮ ಸರಕಾರ ೫೦ ಲಕ್ಷ ರೂ.ಗೆ ಮಂಜೂರಾತಿ ನೀಡಿದ್ದು ಈಗಾಗಲೇ ೨೫ ಲಕ್ಷ ರೂ.ಬಿಡುಗಡೆ ಮಾಡಿದೆ.…