Subscribe to Updates
Get the latest creative news from FooBar about art, design and business.
- e-paper (11-07-2025) Chikkamagalur Express
- ಅಜ್ಞಾನ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿ ಬೆಳಗಿಸುವರೇ ಗುರು
- ಮಹಿಳಾ ಸಬಲೀಕರಣಕ್ಕೆ ಬ್ಯಾಂಕ್ಗಳ ಮೂಲಕ ಸಾಲಸೌಲಭ್ಯ
- e-paper (10-07-2025) Chikkamagalur Express
- ವ್ಯಾಪಾರಸ್ಥರು ನಗರಸಭೆ ನಿಬಂಧನೆಗಳ ಪಾಲಿಸಬೇಕು
- ಕಾಂಗ್ರೆಸ್ ಸರ್ಕಾರ ಬಡವರ ಜೀವನದ ಜೊತೆ ಚೆಲ್ಲಾಟ
- e-paper (09-07-2025) Chikkamagalur Express
- ಯುವಜನತೆ ರಾಷ್ಟ್ರಕವಿ ಕುವೆಂಪು ಆಶಯದಂತೆ ವಿಶ್ವಮಾನವರಾಗಬೇಕು
Author: chikkamagalur express
ಚಿಕ್ಕಮಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯೆ ಕಾಂಗ್ರೇಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ನಸುಕಿನಲ್ಲಿ 10 ಕಾರುಗಳಲ್ಲಿ ಆಗಮಿಸಿರುವ ಐಟಿ ಅಧಿಕಾರಿಗಳ ತಂಡ ಚಿಕ್ಕಮಗಳೂರು ನಗರದ ನಿವಾಸ, ಬೇಲೂರಿನ ಅವರ ಅಳಿಯ ಸಂತೋಷ್ ಅವರ ನಿವಾಸ ಸೇರಿದಂತೆ 13 ಕಡೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ. ಕಾರಿನ ಮುಂಭಾಗ ಮದುವೆಯ ಬೋರ್ಡ್ ಹಾಕಿಕೊಂಡು ಬಂದಿರುವ ಅಧಿಕಾರಿಗಳು. ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಅಭಿನವ್ ವೆಡ್ಸ್ ದೀಪಿಕಾ ಎಂದು ಬೋರ್ಡ್ ಹಾಕಿಕೊಂಡಿರುವ ಅಧಿಕಾರಿಗಳು. ಗಾಯತ್ರಿ ಈ ಹಿಂದೆ ಒಂದು ಅವಧಿಗೆ ವಿಧಾನ ಪರಿಷತ್ ಸದಸ್ಯೆಯಾಗಿದ್ದರು. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿ.ಜೆ.ಪಿ.ಯ ಎಂ.ಕೆ. ಪ್ರಾಣೇಶ್ ಅವರ ವಿರುದ್ಧ ಅಲ್ಪಮತಗಳಿಂದ ಪರಾಭವಗೊಂಡಿದ್ದರು. Income Tax raids Gayathri Shantgowda’s residence
ಚಿಕ್ಕಮಗಳೂರು: ನಾಡಿನ ಇತಿಹಾಸ ಹಾಗೂ ದಾರ್ಶನಿಕರ ಜೀವನಚರಿತ್ರೆ ಕುರಿತ ಜ್ಞಾನಭಂಡಾರಗಳನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗ್ರಂಥಾಲಯಗಳಲ್ಲಿ ನಿರಂತರವಾಗಿ ಅಭ್ಯಾಸಿದರೆ ಶಾರದಾಂಬೆ ದೇವಿಯ ಅನುಗ್ರಹವಾಗಲಿದೆ ಎಂದು ವಿಧಾನ ಪರಿಷತ್ ಶಾಸಕ ಎಸ್.ಎಲ್.ಬೋಜೇಗೌಡ ಹೇಳಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯ ಸಹಯೋಗ ದೊಂದಿಗೆ ನಗರ ಕೇಂದ್ರ ಗ್ರಂಥಾಲಯದಲ್ಲಿ ಸೋಮವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-೨೦೨೨ ಹಾಗೂ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದಿನಲ್ಲಿ ಆಸಕ್ತಿಯಿರುವವರಿಗೆ ನಿಜವಾದ ಆಸ್ತಿ ಎಂದರೆ ಜ್ಞಾನಭಂಡಾರ ಹಾಗೂ ಶಿಕ್ಷಣ. ಅವುಗಳನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಓದಿನ ಆಸಕ್ತಿ ಹೊಂದಿರುವವರು ತನ್ನೊಳಗೆಯೇ ಗ್ರಂಥಾಲಯವನ್ನು ಅಡಗಿಸಿಕೊಂಡಿರುತ್ತಾನೆ ಎಂದು ಹೇಳಿದರು. ನಾಡಿನ ಹೆಸರಾಂತ ಕವಿಗಳು, ಸಾಹಿತಿಗಳು ವಿಶಿಷ್ಟವಾಗಿ ಪುಸ್ತಕಗಳನ್ನು ರಚನೆ ಮಾಡಿದ್ದಾರೆ. ಅವು ಗಳ ಅಧ್ಯಯನವನ್ನು ಪ್ರತಿಯೊಬ್ಬರು ಕರಗತ ಮಾಡಿಕೊಳ್ಳಬೇಕು ಎಂದ ಅವರು ಓದಿನ ಹವ್ಯಾಸ ಬೆಳೆಸಿ ಕೊಂಡಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ನೂರಾರು ಜಾತಿಗಳನ್ನು ಹೊಂದಿರುವ ಭಾರತ ಭಾವೈಕ್ಯತಾ ದೇಶ. ಇಲ್ಲಿ…
ಚಿಕ್ಕಮಗಳೂರು: ಆಧುನಿಕ ಶಿಲ್ಪಿ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಹಾರಲಾಲ್ ನೆಹರುರವರ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಕೊಳ್ಳುವಂತೆ ಕೆಪಿಸಿಸಿ ಸದಸ್ಯ ಎ.ಎನ್.ಮಹೇಶ್ ಸಲಹೆ ನೀಡಿದರು. ಅವರು ಸೋಮವಾರ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಕಾಂಗ್ರೆಸ್ ಸೇವಾದಳ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಮಂತ್ರಿ ಪಂಡಿತ್ ಜವಹಾರಲಾಲ್ ನೆಹರು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೆಹರುರವರು ನವಭಾರತದ ಸಂಕಲ್ಪವನ್ನು ಹೊತ್ತು ಪ್ರಧಾನಮಂತ್ರಿಯಾಗಿ ಭಾರತವನ್ನು ಸದೃಢವಾಗಿ ಮುನ್ನಡೆಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ, ೯ ವರ್ಷಗಳ ಕಾಲ ಜೈಲು ವಾಸವನ್ನು ಅನುಭವಿಸಿ, ಭಾರತದ ವಿದೇಶಾಂಗ ನೀತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ ಎಂದು ಹೇಳಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಿದ್ಧಾಂತವೇ ಸಂವಿಧಾನವಾಗಿದೆ. ಜಾತ್ಯಾತೀತ ನೆಲೆಗಟ್ಟಿನಲ್ಲಿ ಸಂವಿಧಾನಕ್ಕೆ ಗೌರವವನ್ನು ಕೊಡಲಾಗುತ್ತಿದೆ. ದೇಶವು ಪ್ರಗತಿ ಕಾಣಲು ನೆಹರು ಕಾರಣವಾಗಿದ್ದಾರೆ. ದೇಶ ಮತ್ತು ಹೊರದೇಶಗಳ ಸಂಬಂಧಗಳನ್ನು ಸುಧಾರಿಸುವಲ್ಲಿ ಯಶಸ್ಸು ಕಂಡ ಧೀಮಂತ ನಾಯಕ ನೆಹರು ಎಂದು ಬಣ್ಣಿಸಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ…
ಚಿಕ್ಕಮಗಳೂರು: ಶ್ರೀರಾಮ ಸೇನೆ ಈ ಬಾರಿ ಹಮ್ಮಿಕೊಂಡಿದ್ದ ದತ್ತಮಾಲಾ ಅಭಿಯಾನಕ್ಕೆ ನಗರದಲ್ಲಿ ಬೃಹತ್ ಹಮ್ಮಿಕೊಂಡಿದ್ದ ಶೋಭಾಯಾತ್ರೆ ಶಾಂತಿಯುತವಾಗಿ ನಡೆಯಿತು. ನಗರದ ಬಸವನಹಳ್ಳಿ ಶ್ರೀ ಶಂಕರ ಮಠದಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಮುಖಂಡರು ಶ್ರೀ ಶಾರಾದಾಂಭೆಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಬಹಿರಂಗ ಸಭೆ ನಂತರ ಶೋಭಾಯಾತ್ರೆ ಆರಂಭವಾಯಿತು. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಕೇಸರಿ ಧ್ವಜ, ಹಿಡಿದು ನಮ್ಮದು ನಮ್ಮದು ದತ್ತಪೀಠ ನಮ್ಮದು, ವಿವಿಧ ಘೋಷಣೆಯೊಂದಿಗೆ ಪುಷ್ಪಾಲಂಕೃತ ವಾಹನದಲ್ಲಿ ದತ್ತವಿಗ್ರಹವನ್ನು ಪ್ರತಿಷ್ಠಾಪಿಸಿ ಸಾಗಿದರು. ಕಳೆದ ಮೂರು ವರ್ಷದ ಇದೇ ವಿಗ್ರಹವನ್ನು ಶೋಭಾಯಾತ್ರೆಯಲ್ಲಿ ತರಲು ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ಈ ಬಾರಿ ಅವಕಾಶ ನೀಡಲಾಗಿತ್ತು. ಕೆಲ ಯುವಕರು ಬಜರಂಗಿ ಚಿತ್ರವುಳ್ಳ ಬೃಹತ್ ಧ್ವಜ ಹಿಡಿದು ಅಲ್ಲಲ್ಲಿ ತಿರುಗಿಸುತ್ತಾ ಸಾಗಿದ್ದು ಭಕ್ತರ ಗಮನ ಸೆಳೆಯಿತು. ಡೊಳ್ಳುಕುಣಿತ ಸೇರಿದಂತೆ ವಿವಿಧ ತಮಟೆ ವಾದ್ಯಕ್ಕೆ ಭಕ್ತರು ಹರ್ಷೋದ್ಘಾರದೊಂದಿಗೆ ಹೆಜ್ಜೆ ಹಾಕಿದರು. ಕೇಸರಿ ಬಂಟಿಗ್ಸ್ ನಿಂದ ಹನುಮಂತಪ್ಪ ವೃತ್ತ,…
ಚಿಕ್ಕಮಗಳೂರು: ಕಳೆದೊಂದು ವಾರದಿಂದ ಕಾಫಿನಾಡು ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಡೆಯುತ್ತಿದ್ದ ದತ್ತಮಾಲಾ ಅಭಿಯಾನಕ್ಕೆ ಶಾಂತಿಯುತ ತೆರೆ ಬಿದ್ದಿದೆ. ಶ್ರೀರಾಮಸೇನಾ ವತಿಯಿಂದ ನಡೆಯುತ್ತಿದ್ದ ದತ್ತಮಾಲಾ ಅಭಿಯಾನ ಇಂದು ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ರಾಜ್ಯದ ಮೂಲೆ-ಮೂಲೆಗಳಿಂದ ಬಂದಿದ್ದ ಸಾವಿರಾರು ದತ್ತಭಕ್ತರು ದತ್ತಪಾದುಕೆ ದರ್ಶನ ಪಡೆದು ಪುನೀತರಾದ್ರು. ಶ್ರೀರಾಮ ಸೇನೆ ವತಿಯಿಂದ ವಿವಾದಿತ ದತ್ತಪೀಠದಲ್ಲಿ ಹಮ್ಮಿಗೊಂಡಿದ್ದ 18ನೇ ವರ್ಷದ ದತ್ತಮಾಲಾ ಅಭಿಮಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. 800ಕ್ಕೂ ಅಧಿಕ ಪೊಲೀಸರು ಹೆಜ್ಜೆಗೊಬ್ಬರಂತೆ ನಿಂತು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ರು. ದೇವಾಲಯದ ಹೊರಭಾಗದಲ್ಲಿ ಹೋಮ-ಹವನ ನಡೆಸಿ, ದತ್ತಪೀಠ ಹಿಂದೂಗಳದ್ದೆಂದು ಆಗ್ರಹಿಸಿದ್ರು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿ ಇದ್ರು ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಮಾಡಿಲ್ಲ ಎಂದು ಸರ್ಕಾರಗಳ ವಿರುದ್ಧ ಕೆಂಡಾಮಂಡಲರಾದ್ರು. ಬೆಳಗ್ಗೆ ದತ್ತ ಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸಿ ದತ್ತಪಾದುಕೆ ದರ್ಶನ ಪಡೆದ್ರು. ದತ್ತಪಾದುಕೆ ದರ್ಶನ ಪಡೆಯುಲು ಭಜನೆ ಮಾಡ್ತಾ ಸರದಿ ಸಾಲಲ್ಲಿ ಭಕ್ತರು ತೆರಳಿದರು. ದತ್ತಭಕ್ತರಿಗೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್,…
ಚಿಕ್ಕಮಗಳೂರು: : ದತ್ತಪೀಠದ ಮುಕ್ತಿಗಾಗಿ ಬಿಜೆಪಿ ತೋರುತ್ತಿರುವ ಮೃದುಧೋರಣೆ ವಿರುದ್ಧ ಮತ್ತು ದತ್ತಪೀಠದ ಹೋರಾಟದಿಂದ ರಾಜಕೀಯದಲ್ಲಿ ಬೆಳವಣಿಗೆ ಕಂಡಿರುವ ಸಚಿವ ವಿ. ಸುನೀಲ್‌ಕುಮಾರ್ ಹಾಗೂ ಶಾಸಕ ಸಿ.ಟಿ.ರವಿ ನಡೆಗೆ ಶ್ರೀರಾಮ ಸೇನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ದತ್ತಮಾಲಾ ಅಭಿಯಾನ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಭಾನುವಾರ ಶೋಭಾಯಾತ್ರೆಗೂ ಮುನ್ನ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ, ದತ್ತಪೀಠದ ಮುಕ್ತಿಗೆ ನಡೆದ ಹೋರಾಟದಿಂದ ಕೆಲವರು ರಾಜಕೀಯವಾಗಿ ಪ್ರಯೋಜನ ಪಡೆದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಈ ಕೆಲಸ ಆಗಿಲ್ಲ, ರಾಜ್ಯ ಸರ್ಕಾರದ ನಿರ್ಲಕ್ಷ ಧೋರಣೆ ನೋಡಿದರೆ ಸಿಟ್ಟು, ಆಕ್ರೋಶ ಬರುತ್ತಿದೆ ಎಂದರು. ನೀವು ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶ್ರಮ ಇದೆ ಎಂಬುದನ್ನು ಮರೆಯಬೇಡಿ. ಇವರ ಶಾಪ ನಿಮಗೆ ತಟ್ಟಿದರೆ ಎಲ್ಲಿ ಇರ್ತೀರಾ? ಸಿ.ಟಿ.ರವಿ ಶಾಸಕರಾಗಲು ದತ್ತಾತ್ರೇಯ ಕೃಪೆ ಇದೆ ಎಂದು ಹೇಳಿದರು. ದತ್ತಪೀಠಕ್ಕೆ ಪ್ರತಿದಿನ ನಂಬರ್ ಪ್ಲೇಟ್ ಇಲ್ಲದ…
ಬೆಂಗಳೂರು : ರಾಜ್ಯದಲ್ಲಿ ನಾಳೆಯಿಂದ ಹಾಲು ಖರೀದಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ. ಈಗಿರುವ ದರಕ್ಕಿಂತ ಪ್ರತಿ ಒಂದು ಲೀಟರ್ ಹಾಲಿನ ದರ 3 ರೂ. ಹೆಚ್ಚಳ ಮಾಡುವುದಾಗಿ ಕರ್ನಾಟಕ ಹಾಲು ಒಕ್ಕೂಟ (Karnataka Milk Federation) ಅಧಿಕೃತ ಮಾಹಿತಿಯನ್ನು ನೀಡಿದೆ. ಇದರೊಂದಿಗೆ ಮೊಸರಿನ ದರವನ್ನು ಹೆಚ್ಚಳ ಮಾಡಲಾಗುತ್ತಿದೆ. ದೇಶದ ಎಲ್ಲ ಹಾಲು ಉತ್ಪಾದನಾ ಒಕ್ಕೂಟ ಹೊಂದಿರುವ ರಾಜ್ಯಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರ 40 ರೂ.ಗಳಿಂದ 50 ರೂ.ವರೆಗೆ ಇದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಹಾಲಿನ ದರ ಪ್ರತಿ ಲೀ. 37 ರೂ. ಇತ್ತು. ಕಳೆದೊಂದು ವರ್ಷದಿಂದ ಹಾಲಿನ ದರದ ಏರಿಕೆ (Milk Price Hike) ಮಾಡುವ ಕುರಿತು ಚರ್ಚೆ ಮಾಡುತ್ತಾ ಬಂದಿದ್ದ ಒಕ್ಕೂಟವು ಈಗ ಬೆಲೆಯುನ್ನು ಹೆಚ್ಚಳ ಮಾಡಿದೆ. ಪ್ರಸ್ತುತ ಹಾಲಿನ ದರ ಪ್ರತಿ ಲೀ.ಗೆ 37 ರೂ. ಇದ್ದು, ಇದಕ್ಕೆ 3 ರೂ. ಹೆಚ್ಚಳದ ನಂತರ 40ರೂ.ಗೆ ಏರಿಕೆಯಾಗಲಿದೆ. ರಾಜ್ಯದಲ್ಲಿ ಈ ಹಿಂದೆ 2020ರ…
ಚಿಕ್ಕಮಗಳೂರುಎಕ್ಸ್‌ಪ್ರೆಸ್: ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವುದರ ಜತೆಗೆ, ಕಮರ್ಷಿಯಲ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರ ಆಸ್ತಿ ಜಪ್ತಿ ಮತ್ತು ಹರಾಜಿನ ನಿರ್ಣಯ ಕ್ರಮವನ್ನು ಮಾಡಬಾರದೆಂದು ಸರ್ಕಾರ ನಿರ್ಣಯ ಮಾಡಿ ಮುಖ್ಯ ಮಂತ್ರಿ ಬಸವರಾಜ್ ಬೋಮ್ಮಾಯಿ ರವರು ಘೋಷಣೆ ಮಾಡ್ಡಿದ್ದಾರೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ. ಅವರು ಬಾಣೂರು ನೂತನ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ೧೯೨೬ರಲ್ಲಿ ಸಹಕಾರ ಸಂಘವು ಸ್ಥಾಪನೆಗೊಂಡು ಅನೇಕ ಕಾರಣಗಳಿಂದ ಸಂಘದ ಚಟುವಟಿಕೆ ಸ್ಥಗಿತಗೊಂಡ ಸಂದರ್ಭದಲ್ಲಿ ೨೦೧೦-೧೧ ರಲ್ಲಿ ಮರು ಚಾಲನೆ ನೀಡಿ ಇಂದು ಶೂನ್ಯ ಬಡ್ಡಿ ದರದಲ್ಲಿ ೯ ಕೋಟಿ ರೂಗಳ ಕೆಸಿಸಿ ಸಾಲವನ್ನು ಕೊಟ್ಟಿದ್ದು, ಇಡೀ ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವುದರ ಜತೆಗೆ, ಕಮರ್ಷಿಯಲ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರ ಆಸ್ತಿ ಜಪ್ತಿ ಮತ್ತು ಹರಾಜಿನ ನಿರ್ಣಯ ಕ್ರಮವನ್ನು ಮಾಡಬಾರದೆಂದು ಸರ್ಕಾರ ನಿರ್ಣಯ ಮಾಡಿ ಮುಖ್ಯ ಮಂತ್ರಿ ಬಸವರಾಜ್ ಬೋಮ್ಮಾಯಿ ರವರು ಘೋಷಣೆ…
ಚಿಕ್ಕಮಗಳೂರು: ಪಕ್ಷವನ್ನು ಸದೃಡಗೊಳಿಸುವ ಜೊತೆಗೆ ರಾಜ್ಯದಲ್ಲಿ ಮತ್ತೊಮ್ಮೆ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಆಸಕ್ತಿಯನ್ನು ಮತದಾರರು ತೋರಲು ಮುಂದಾಗಬೇಕು ಎಂದು ಜೆಡಿಎಸ್ ತಾಲ್ಲೂಕು ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎಂ.ತಿಮ್ಮಶೆಟ್ಟಿ ಹೇಳಿದರು. ತಾಲ್ಲೂಕಿನ ಎಸ್.ಬಿದರೆ ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಾಲಯದ ಆವರಣದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಗ್ರಾಮಗಳಲ್ಲಿ ಜೆಡಿಎಸ್ ವತಿಯಿಂದ ಅನೇಕ ಜನಪರ ಯೋಜನೆಗಳನ್ನು ಆಯೋಜಿಸಲಾಗಿದೆ. ಆರೋಗ್ಯ ದೃಷ್ಟಿಯಿಂದ ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೈಯಕ್ತಿಕವಾಗಿ ಅನೇಕ ಬಾರಿ ಸುತ್ತಮುತ್ತಲ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡಲಾಗಿದೆ ಎಂದು ಹೇಳಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಮತ ನೀಡುವ ಮೂಲಕ ಅತ್ಯಧಿಕ ಮತಗಳ ಅಂತರದಿಂದ ಜಯಶೀಲರಾಗಿಸಿ ಹೆಚ್.ಡಿ.ಕುಮಾರಸ್ವಾಮಿ ಅವ ರನ್ನು ಮುಖ್ಯಮಂತ್ರಿ ಮಾಡಿದ್ದಲ್ಲಿ ಗ್ರಾಮೀಣ ಜನತೆಗೆ ಸ್ಪಂದಿಸುವ ಉತ್ತಮ ಯೋಜನೆಗಳನ್ನು ನೀಡಿ ಅಭಿವೃದ್ದಿಯತ್ತ ಕೊಂಡೊಯ್ಯಲಾಗುತ್ತದೆ ಎಂದು ಭರವಸೆ ನೀಡಿದರು. ಕುಮಾರಸ್ವಾಮಿಯವರು ಅಧಿಕರಾವಧಿಯಲ್ಲಿ…
ಚಿಕ್ಕಮಗಳೂರು: ದೈನಂದಿನ ಕ್ರೀಡಾ ಚಟುವಟಿಕೆಯಲ್ಲಿ ಗ್ರಾಮಸ್ಥರು ಹಾಗೂ ಮಕ್ಕಳು ತೊಡಗಿಸಿಕೊಂಡಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ಕ್ರೀಯಾಶೀಲರಾಗಿರಬಹುದು ಎಂದು ಹರಿಹರದಹಳ್ಳಿ ಗ್ರಾ.ಪಂ. ಅಧ್ಯಕ್ಷ ಜೆ.ಎನ್.ಮಂಜೇಗೌಡ ಹೇಳಿದರು. ತಾಲ್ಲೂಕಿನ ಹೊಸಕೋಟೆ ಗ್ರಾಮದ ಸರ್ಕಾರಿ ಹಿರಿಯರ ಪ್ರಾಥಮಿಕ ಪಾಠಶಾಲೆಯಲ್ಲಿ ಶನಿವಾರ ಹರಿಹರದಹಳ್ಳಿ, ಮರ್ಲೆ, ಅಂಬಳೆ, ಮುಗುಳುವಳ್ಳಿ, ಕೆ.ಆರ್.ಪೇಟೆ ಹಾಗೂ ಮಳಲೂರು ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ನಡೆದ ಅಂಬಳೆ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಗ್ರಾಮಸ್ಥರು ಒತ್ತಡದ ಬದುಕಿನಲ್ಲಲಿ ತಮ್ಮ ಸ್ವಲ್ಪ ಸಮಯವನ್ನು ವ್ಯಾಯಾಮ ಹಾಗೂ ಕ್ರೀಡೆಗಳಿಗೆ ಮೀಸಲಿಡಬೇಕು ಎಂದ ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಲು ಕ್ರೀಡಾಕೂಟ ಸಹಕಾರಿಯಾಗ ಲಿದೆ ಎಂದು ತಿಳಿಸಿದರು. ಇಂದಿನ ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಮೂಲೆ ಗುಂಪಾಗುತ್ತಿವೆ. ಇವುಗಳನ್ನು ಪುನರಾರಂಭಗೊಳಿಸಲು ಸರ್ಕಾರ ಗ್ರಾಮೀಣ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದು ಇದರ ಉಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು. ಹರಿಹರದಹಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ಶಾರದಾ ಮಾಸ್ತೇಗೌಡ ಮಾತನಾಡಿ ಮನುಷ್ಯನ ಜೀವನದಲ್ಲಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿದ್ದರೆ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಜೊತೆಗೆ ಅನಾರೋಗ್ಯದಿಂದ ಬಳಲುವ…