February 24, 2024

ಮುಗುಳುವಳ್ಳಿ ಸಮೀಪದ ಮೈದಾನದಲ್ಲಿ ಡರ್ಟ್‌ಪ್ರಿಕ್ಸ್ ರೌಂಡ್-5 ರ್‍ಯಾಲಿ

0
ಮುಗುಳುವಳ್ಳಿ ಸಮೀಪದ ಮೈದಾನದಲ್ಲಿ ಡರ್ಟ್‌ಪ್ರಿಕ್ಸ್ ರೌಂಡ್-5 ರ್‍ಯಾಲಿ

ಮುಗುಳುವಳ್ಳಿ ಸಮೀಪದ ಮೈದಾನದಲ್ಲಿ ಡರ್ಟ್‌ಪ್ರಿಕ್ಸ್ ರೌಂಡ್-5 ರ್‍ಯಾಲಿ

ಚಿಕ್ಕಮಗಳೂರು: ಸಮೀಪದ ಮುಗುಳುವಳ್ಳಿ ಸಮೀಪದ ಮೈದಾನದಲ್ಲಿ ಭಾನುವಾರ ಅಬ್ಲೇಜ್ ಮೋಟಾರ್ ಸ್ಪೋರ್ಟ್ಸ್ ಮತ್ತು ವಮ್ಸಿಮೆರ್ಲಾ ಮೋಟರ್‍ಸ್ ಸ್ಪೋರ್ಟ್ಸ್ ಫೌಂಡೇಶನ್ ಆಶ್ರಯದಲ್ಲಿ ಡರ್ಟ್‌ಪ್ರಿಕ್ಸ್ ರೌಂಡ್-೫ ರ್‍ಯಾಲಿ ನಡೆಯಿತು.

ರ್‍ಯಾಲಿಯಲ್ಲಿ ೪ ಚಕ್ರ ವಾಹನಗಳ ಆಟೋ ಕ್ರಾಸ್ ರ್‍ಯಾಲಿಯಲ್ಲಿ ಭಾಗವಹಸಿದ್ದ ಚಾಲಕರು ಕಾರುಗಳನ್ನು ಭರದಿಂದ ಮುನ್ನುಗ್ಗಿಸುತ್ತಿದ್ದರೆ ಆಳೆತ್ತರಕ್ಕೆ ಧೂಳು ಮೇಲೇಳುತ್ತಿತ್ತು. ಶರವೇಗದಲ್ಲಿ ನುಗ್ಗುತ್ತಿದ್ದ ಕಾರುಗಳ ಶಬ್ದಕ್ಕೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಚಾಲಕರನ್ನು ಹುರುದುಂಬಿಸಿದರು.

ದೇಶದ ೬-೭ ರಾಜ್ಯದಿಂದ ೧೮೦ ಕ್ಕೂ ಹೆಚ್ಚು ಚಾಲಕರು ಈವೆಂಟ್‌ನಲ್ಲಿ ಭಾಗವಹಿಸಿದ್ದರು. ವಿವಿಧ ರಾಜ್ಯದ ಚಾಂಪಿಯನ್ಸ್‌ಗಳಾದ ಚೇತನ್ ಶಿವರಾಂ, ದೃವಚಂದ್ರಶೇಖರ್, ಬಬಿತಾ, ಪಲ್ಲವಿಯಾದವ್, ಡೆನ್ ತಿಮ್ಮಯ್ಯ, ಹೇಮ ಮತ್ತಿತರರು ಆಗಮಿಸಿದ್ದರು. ಚಿಕ್ಕಮಗಳೂರಿಂದ ೭ ಮಂದಿ ಚಾಲಕರು ಕಾರು ಓಡಿಸಿದರು.

ತಮಿಳುನಾಡು, ಮಹಾರಾಷ್ಟ್ರ ಮತ್ತು ಆಂದ್ರದಿಂದ ಮೂವರು ಮಹಿಳಾ ಚಾಲಕರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಒಟ್ಟು ೧೭ ವಿಭಾಗದಿಂದ ರ್‍ಯಾಲಿ ನಡೆಯಿತು.ವಿಜೇತರಿಗೆ ನಗದು ಮತ್ತು ಪಾರಿತೋಷಕ ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಗೌತಮ್, ವ್ಯವಸ್ಥಾಪಕ ಶರಣ್, ಕುಶಾಲ್, ಯಧುಕುಮಾರ್ ಸೂಜಿಗಲ್ ಮತ್ತಿತರರು ಇದ್ದರು.

DirtPrix Round-5 Rally at a field near Muguluvalli

 

About Author

Leave a Reply

Your email address will not be published. Required fields are marked *