February 24, 2024

ಮಹಾಗಣಪತಿ ದೇವಾಲಯದ ಭೋಜನಾಶಾಲೆ – ಅಡುಗೆ ಮನೆ ಭೂಮಿ ಪೂಜೆ

0
ಮಹಾಗಣಪತಿ ದೇವಾಲಯದ ಭೋಜನಾಶಾಲೆ - ಅಡುಗೆ ಮನೆ ಭೂಮಿ ಪೂಜೆ

ಮಹಾಗಣಪತಿ ದೇವಾಲಯದ ಭೋಜನಾಶಾಲೆ - ಅಡುಗೆ ಮನೆ ಭೂಮಿ ಪೂಜೆ

ಚಿಕ್ಕಮಗಳೂರು-ಕಲ್ಯಾಣ ನಗರದ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಭೋಜನಾಶಾಲೆ ಅಡುಗೆ ಮನೆ ಮತ್ತು ಅರ್ಚಕರ ವಾಸದ ಮನೆಯ ಕಾಮಗಾರಿ ಎಲ್ಲರ ಸಹಕಾರದಿಂದ ಶೀಘ್ರ ಪೂರ್ಣಗೊಳ್ಳಲಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಆಶಿಸಿದರು.

ಕಲ್ಯಾಣ ನಗರದ ಶ್ರೀ ವಿನಾಯಕ ಕಲ್ಯಾಣನಗರ ವೆಲ್‌ಫೇರ್ ಟ್ರಸ್ಟ್ ಭಾನುವಾರ ಏರ್ಪಡಿಸಿದ್ದ ಶ್ರೀಮಹಾಗಣಪತಿ ದೇವಾಲಯದ ಭೋಜನಾಶಾಲೆ ಮತ್ತು ಅರ್ಚಕರ ನಿವಾಸದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲ್ಯಾಣನಗರದ ಶ್ರೀ ಮಹಾಗಣಪತಿ ದೇವಾಲಯದಲ್ಲಿ, ಭೋಜನಶಾಲೆ ಮತ್ತು ಅರ್ಚಕರ ನಿವಾಸ ನಿರ್ಮಿಸುವ ಸಣ್ಣ ಕೊರತೆ ಇತ್ತು . ಅದಕ್ಕೆ ಇಂದು ನಮ್ಮ ಶಾಸಕರಾದ ಎಸ್.ಎಲ್.ಬೋಜೇಗೌಡ ಅವರು ಸಂತೋಷದಿಂದ ಭೂಮಿ ಪೂಜೆ ನೆಡೆಸಿಕೊಟ್ಟಿದ್ದಾರೆ. ಶೀಘ್ರವಾಗಿ ಅಡುಗೆಮನೆ ಮತ್ತು ಭಟ್ಟರ ಮನೆ ನಿರ್ಮಾಣವಾಗಲಿ. ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಲಿ ಎಂದರು.

ಟ್ರಸ್ಟಿನ ಅಧ್ಯಕ್ಷ ಪ್ರಸನ್ನ ಮಾತನಾಡಿ, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್.ಬೋಜೇಗೌಡ ಅವರು ಆರ್ಥಿಕ ಸಹಾಯಧನ ನೀಡಿದ್ದಾರೆ. ಶಾಸಕರು ಕೂಡ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಕಲ್ಯಾಣ ನಗರದ ಜನತೆ ಸಹಕಾರ ನೀಡಿದಲ್ಲಿ ಈ ದೇವಾಲಯದ ಇತರೆ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಶ್ರೀ ವಿನಾಯಕ ಕಲ್ಯಾಣ ನಗರದ ವೆಲ್‌ಫೇರ್ ಟ್ರಸ್ಟ್‌ನ ಸದಸ್ಯರುಗಳಾದ ರವಿಕುಮಾರ್, ಕೃಷ್ಣಮೂರ್ತಿ, ಮಹೇಂದ್ರಕುಮಾರ್, ರಾಮನಾಯ್ಕ, ದೇವರಾಜ್, ಗಂಗಾಧರ್ ನಾಯ್ಕ, ರಮೇಶ್ ಪೈ, ದಿನೇಶ್, ಶಂಕರ್, ಪ್ರಸನ್ನಕುಮಾರ್, ಲಕ್ಷಮಣ್ ನಾಯಕ, ರಂಗೇಗೌಡ, ಓಂಕಾರಸ್ವಾಮಿ, ಶ್ರೀನಿವಾಸ್, ಸೋಮೇಶ್, ಸುರೇಶ್, ಪುಷ್ವವತಿಬಸವರಾಜ್, ಭೀಮವತಿರಾಮನಾಯ್ಕ್, ಮೀನಾಕ್ಷಿನಾರಾಯಣಪ್ಪ, ಗಿರಿಜಾನಾಗರಾಜನಾಯ್ಕ, ಪಾರ್ವತಮ್ಮರಾಜಪ್ಪ, ಭುವನಗಂಗಾಧರರ್, ನಾಗರತ್ನಲೋಕೇಶಪ್ಪ, ಗೀತಾಓಂಕಾರಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Mahaganapati Temple Canteen – Kitchen Bhoomi Puja

 

About Author

Leave a Reply

Your email address will not be published. Required fields are marked *