July 27, 2024

ಫೆ.25ಕ್ಕೆ ರಾಜ್ಯಮಟ್ಟದ ಮ್ಯಾರಥಾನ್ ರಸ್ತೆ ಓಟ ಸ್ಪರ್ಧೆ

0
ಜಿಲ್ಲಾ ಅಥ್ಲೆಟಿಕ್ ಅಸೋಷಿಯೇಷನ್ ತರಬೇತುದಾರ ಕೆ.ಬಿ ಅಶೋಕ್ ಪತ್ರಿಕಾಗೋಷ್ಠಿ

ಜಿಲ್ಲಾ ಅಥ್ಲೆಟಿಕ್ ಅಸೋಷಿಯೇಷನ್ ತರಬೇತುದಾರ ಕೆ.ಬಿ ಅಶೋಕ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ರಾಜ್ಯ ಮಟ್ಟದ ಮ್ಯಾರಥಾನ್ ರಸ್ತೆ ಓಟ ಸ್ಪರ್ಧೆಯನ್ನು ಫೆ.೨೫ ರಂದು ಭಾನುವಾರ ಬೆಳಗ್ಗೆ ೬ ಗಂಟೆಗೆ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಥ್ಲೆಟಿಕ್ ಅಸೋಷಿಯೇಷನ್ ತರಬೇತುದಾರ ಕೆ.ಬಿ ಅಶೋಕ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ವಿಸ್ತಾರ್ ಪ್ಲಸ್ ಲೈಫ್‌ಸ್ಟೈಲ್, ಜಿಲ್ಲಾ ಅಥ್ಲೆಟಿಕ್ ಅಸೋಷಿಯೇಷನ್ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಇವರುಗಳ ಸಹಯೋಗದೊಂದಿಗೆ ರಾಜ್ಯಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಭವ್ಯ ಪರಿಸರ ತಾಣಗಳನ್ನು ರಾಜ್ಯಾದ್ಯಂತ ಪರಿಚಯಿಸುವ ಉದ್ದೇಶದಿಂದ ರಾಜ್ಯಮಟ್ಟದ ಈ ಮ್ಯಾರಥಾನ್ ರಸ್ತೆ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಅಥ್ಲೆಟಿಕ್ ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಲು ಈ ಸ್ಪರ್ಧೆ ಪೂರಕವಾಗಲಿದೆ ಎಂದರು.

ನಾಲ್ಕು ವಿಭಾಗದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿದ್ದು, ೧೪ ವರ್ಷದ ಬಾಲಕ-ಬಾಲಕಿಯರಿಗೆ ೩ ಕಿ.ಮೀ, ೧೮ ವರ್ಷದಿಂದ ೩೫ ವರ್ಷದ ಮಹಿಳೆ ಮತ್ತು ಪುರಷರಿಗೆ ೧೦ ಕಿ.ಮೀ ಹಾಗೂ ೩೫ ರಿಂದ ೫೦ ವರ್ಷದ ವಯೋಮಾನದವರಿಗೆ ೧೦ ಕಿ.ಮೀ ಓಟದ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಈ ರಸ್ತೆ ಓಟ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ೨೫೦ ಕ್ಕೂ ಹೆಚ್ಚು ರಾಜ್ಯ, ಅಂತರಾಷ್ಟ್ರೀಯ ಮಟ್ಟದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಈ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದೆಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಥ್ಲೆಟಿಕ್ ಕ್ರೀಡೆಯ ತರಬೇತುದಾರರಾದ ಫ್ರಾನ್ಸಿಸ್, ಶ್ರೀಮತಿ ಯಶೋಧ ಚಂಗಪ್ಪ ಉಪಸ್ಥಿತರಿದ್ದರು.

State level marathon road race on February 25

About Author

Leave a Reply

Your email address will not be published. Required fields are marked *