ALSO FEATURED IN

History of Naxal Activity:ಪಶ್ಚಿಮಘಟದಲ್ಲಿ ನಕ್ಸಲ್ ಚಟುವಟಿಕೆಯ ಇತಿಹಾಸ

Spread the love

ಚಿಕ್ಕಮಗಳೂರು: ಕಳೆದ ಒಂದುವರೆ ದಶಕದ ಬಳಿಕ ಹಸಿರ ಕಾಡಿನ ಮಧ್ಯೆ ಕೆಂಪು ಉಗ್ರರ ಕೆಂಪು ರಕ್ತ ಚೆಲ್ಲಿದೆ. 2005 ಫೆಬ್ರವರಿ 5 ರಂದು ನಕ್ಸಲ್ ನಾಯಕ ಸಾಕೇತ್ ರಾಜನ್ ಕಾಡಿನಲ್ಲಿ ಎ.ಎನ್.ಎಫ್. ಗುಂಡಿಗೆ ಬಲಿಯಾಗಿದ್ದರು. ಇದಾದ ಬಳಿಕ 2024ರ ನವೆಂಬರ್ 19ರಂದು ಮಾತ್ತದೇ ಕಾಡಿನಲ್ಲಿ ಅದೇ ನಕ್ಸಲ್‌ ನಾಯಕನ ರಕ್ತ ಚೆಲ್ಲಿದೆ.

ಬರೋಬ್ಬರಿ 20 ವರ್ಷಗಳಿಂದ 30ಕ್ಕೂ ಹೆಚ್ಚು ಕೇಸ್ ಗಳಲ್ಲಿ 3 ರಾಜ್ಯಕ್ಕೆ ಬೇಕಾಗಿದ ಮೋಸ್ಟ್ ವಾಟೆಂಡ್ ಹಾರ್ಡ್ ನಕ್ಸಲ್ ವಿಕ್ರಂ ಗೌಡ ಎ.ಎನ್.ಎಫ್. ಜೊತೆಗಿನ ಗುಂಡಿನ ಕಾಳಗದಲ್ಲಿ ಹತನಾಗಿದ್ದಾನೆ.ರಾಜ್ಯದ ನಕ್ಸಲ್ ನಾಯಕನ ಹತ್ಯೆಯೊಂದಿಗೆ ನಕ್ಸಲ್ ಚಟುವಟಿಕೆಗೆ ಕೊನೆಯ ಮೊಳೆ ಎನ್ನುವ ಸ್ಥಿತಿ ಎದುರಾಗಿದ್ದು ಇನ್ನು ಉಳಿದ ನಕ್ಸಲರಾಗಿ ನಾಲ್ಕು ಜಿಲ್ಲೆಯಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮೈಸೂರು ಯುನಿವರ್ಸಿಟಿಯಲ್ಲಿ ಎಂ.ಎ. ಗೋಲ್ಡ್ ಮೇಡಲಿಸ್ಟ್ ಸಾಕೇತ್ ರಾಜನ್ ದಕ್ಷಿಣ ಭಾರತದ ಕೆಂಪು ಉಗ್ರರ ಪಿತಾಮಹ. ಆತ ಎನ್ ಕೌಂಟರ್ ಆದ ಮೇಲೆ ಆತನ ಸ್ಥಾನ ತುಂಬಿದ್ದು ಮಲೆನಾಡಿನ ಬಿ.ಜೆ. ಕೃಷ್ಣಮೂರ್ತಿ ಈತನ ಕೇರಳದಲ್ಲಿ ಸೆರೆ ಸಿಕ್ಕ ಬಳಿಕ ರಾಜ್ಯದ ನಕ್ಸಲ್ ನಾಯಕನಾಗಿದ್ದನು. ಇದಾದ ಬಳಿಕ ಉಡುಪಿಯ ವಿಕ್ರಂ ಗೌಡ ಕರ್ನಾಟಕದ ನಕ್ಸಲ್ ಪಡೆಯ ನಾಯಕನಾದನು. ಆರಂಭದಲ್ಲಿ ಕಾರ್ಮಿಕ ನಾಯಕನಾಗಿದ್ದ ವಿಕ್ರಂ ಗೌಡ ಸರ್ಕಾರದ ಜನವಿರೋಧಿ ನೀತಿಯಿಂದ ನಕ್ಸಲ್ ಹಾದಿ ತುಳಿದಿದ್ದನು.

ವಿಕ್ರಂ ಗೌಡನಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಸ್ತೂರಿ ರಂಗನ್ ವರದಿ, ಒತ್ತುವರಿ ತೆರವು ವಿಚಾರ ಆತನನ್ನ ನಕ್ಸಲ್ ಹಾದಿ ತುಳಿಸಿತ್ತು. 2005ರಲ್ಲಿ ಸಾಕೇತ್ ರಾಜನ್ ಎನ್ ಕೌಂಟರ್ ಆದ ಮೇಲೆ ಪೊಲೀಸ್ ಮಾಹಿತಿದಾರ ಅಂತ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ವೆಂಕಟೇಶ್ ಎಂಬುವನನ್ನ ಇದೇ ವಿಕ್ರಂ ಗೌಡ ಸಾಯಿಸಿದ್ದನು.

ಕೊಲೆ, ಕೊಲೆ ಬೆದರಿಕೆ, ಡಕಾಯಿತಿ ಸೇರಿ 13 ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದರೆ 15 ಕ್ಕೂ ಹೆಚ್ಚು ಕೇಸ್ ಉಡುಪಿಯಲ್ಲಿತ್ತು. 2005-2006 ರಿಂದ 2012-13ರವರೆಗೆ ಚಿಕ್ಕಮಗಳೂರು, ಉಡುಪಿ, ಮಂಗಳೂರಲ್ಲಿ ಉತ್ತುಂಗದಲ್ಲಿದ್ದ ನಕ್ಸಲಿಸಂ ಮಲೆನಾಡಿಗರ ಬೆಂಬಲ ಸಿಗದ ಕಾರಣ 2014-15ರ ಬಳಿಕ ಕೇರಳ ಸೇರಿದ್ದರು.

ಕಳೆದ 20 ವರ್ಷಗಳಿಂದ ಕಾಡಿನಲ್ಲಿದ್ದ ವಿಕ್ರಂ ಗೌಡ ತಮ್ಮ ಸಂಘಟನೆಯ ಶಕ್ತಿ-ಸಾಮರ್ಥ್ಯ ಕುಂದಿದ ಕಾರಣ ಮತ್ತೆ ತಮ್ಮ ಸಂಘಟನೆಯನ್ನ ಬಲಪಡಿಸಲು ಕೇರಳದಿಂದ ಕರ್ನಾಟಕದತ್ತ ಮುಖ ಮಾಡಿದ್ದನು ಎಂದು ಹೇಳಲಾಗಿದೆ. ಆದರೆ, ಕಾಡಿನಿಂದ ನಾಡಿಗೆ ಬಂದು ಆಹಾರ‌ ಸಾಮಗ್ರಿ ಕೊಂಡೊಯ್ಯಲು ಬಂದು ಕಾಡಿನಲ್ಲಿ ಉಡುಪಿಯ ಹೆಬ್ರಿ ತಾಲೂಕಿನ ಪೀತಬೈಲು ಅರಣ್ಯ ಪ್ರದೇಶದಲ್ಲಿ ಎ.ಎನ್.ಎಫ್. ಸಿಬ್ಬಂದಿಗಳ ಗುಂಡಿಗೆ ಉಸಿರು ಚೆಲ್ಲಿದ್ದಾನೆ.

ಕರ್ನಾಟಕದಲ್ಲಿ ಸಮರ್ಪಕ ರೀತಿಯಲ್ಲಿ ಜನಬೆಂಬಲ ಸಿಗದ ಕಾರಣ 2013-14ರ ಬಳಿಕ ಕರ್ನಾಟಕದ ನಕ್ಸಲರು ಕೇರಳ ಕಾಡು ಸೇರಿಕೊಂಡಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಕೇರಳದಲ್ಲಿ ಕೂಂಬಿಂಗ್ ಹೆಚ್ಚಾಗಿತ್ತು. ಕೆಲ ನಕ್ಸಲರು ಶರಣಾದರೆ ಮತ್ತೆ ಕೆಲವರು ಎನ್ ಕೌಂಟರ್ ಗೆ ಬಲಿಯಾಗಿದ್ದರು. ಕೇರಳದಲ್ಲಿ ಸರ್ವೈವ್ ಆಗಲು ಕಷ್ಟ ಅಂತ ಮುಂಡಗಾರು ಲತಾ, ವಿಕ್ರಂಗೌಡ, ಜಯಣ್ಣ, ವನಜಾಕ್ಷಿ ಸೇರಿ ಹಲವರು ಪಶ್ಚಿಮ ಘಟ್ಟಗಳ ತಪ್ಪಲಿನ ಒಡಲು ಸೇರಿದ್ದರು. ವಿಕ್ರಂ ಗೌಡ ತಂಡ ಉಡುಪಿಯಲ್ಲಿದ್ದರೆ, ಮುಂಡಗಾರು ಲತಾ ತಂಡ ಕಾಫಿನಾಡು ಸೇರಿತ್ತು.

ಮುಂಡಗಾರು ಲತಾ ತಂಡ ಕೂಡ ಕೊಪ್ಪ ತಾಲೂಕಿನ ಕೆಲ ಗ್ರಾಮಗಳಲ್ಲಿ ಮಲೆನಾಡ ಪ್ರಸ್ತುತ ಜೀವಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. 2005 ರಿಂದ 2012-13ರವರೆಗೆ ಮಲೆನಾಡಲ್ಲಿ ಕರಪತ್ರ ಹಂಚುತ್ತಿದ್ದ ನಕ್ಸಲರು ಈಗ ನೇರ ಚರ್ಚೆಗೆ ಇಳಿದಿದ್ದಾರೆ ಎಂದರೆ ಮಲೆನಾಡ ಸಮಸ್ಯೆಗಳ ಮೂಲಕ ಮಲೆನಾಡಿಗರನ್ನ ಮತ್ತೆ ಸಕ್ಸಲಿಸಂ ನತ್ತ ಸೆಳೆಯೋದಕ್ಕೆ ಎಂಬ ಅನುಮಾನ ಉಂಟಾಗಿದೆ. ಮಲೆನಾಡ ಕಸ್ತೂರಿ ರಂಗನ್ ವರದಿ ಹಾಗೂ ಅರಣ್ಯ ಹೊತ್ತು ವಿಚಾರವನ್ನು ನಕ್ಸಲರು ಮತ್ತೆ ಕರ್ನಾಟಕದಲ್ಲಿ ಬೇರೂರಲು ಬಳಸಿಕೊಳ್ಳುತ್ತಿದ್ದಾರೆ ಎಂಬ ಅನುಮಾನ ಬಲವಾಗಿದೆ.

ಮುಂಡಗಾರು ಲತಾ ತಂಡ ಕೂಡ ಕಾಡಂಚಿನ ಕುಗ್ರಾಮ ಕಡೇಗುಂದಿ ಗ್ರಾಮದ ಸುಬ್ಬೇಗೌಡ ಎಂಬುವರ ಮನೆಯಲ್ಲಿದ್ದಾಗಲೇ ಪೊಲೀಸರ ದಾಳಿ ಮಾಹಿತಿ ಸಿಕ್ಕಿ ಎಸ್ಕೇಪ್ ಆಗಿದ್ದಾರೆ. ಆದರೆ, ಶೃಂಗೇರಿ-ಕೊಪ್ಪಗೆ ನಕ್ಸಲರು ಭೇಟಿ ನೀಡಿದ್ದಾರೆಂದು ಎ.ಎನ್.ಎಫ್. ಸಿಬ್ಬಂದಿಗಳು ಹಗಲಿರುಳು ಕೂಂಬಿಂಗ್ ನಡೆಸಿದ ಹಿನ್ನೆಲೆ‌ ಉಡುಪಿಯ ಪೀತಬೈಲು ಅರಣ್ಯ ಪ್ರದೇಶದಲ್ಲಿ ಎ.ಎನ್.ಎಫ್. ಸಿಬ್ಬಂದಿಗಳ ಗುಂಡಿಗೆ ವಿಕ್ರಂಗೌಡ ಉಸಿರು ಚೆಲ್ಲಿದ್ದಾನೆ.

ಒಟ್ಟಾರೆ, ಪಶ್ಚಿಮ ಘಟ್ಟಗಳ ತಪ್ಪಲಿನ ಮಲೆನಾಡಲ್ಲಿ ನಕ್ಸಲ್ ಕರಾಳತೆ ಭೀಕರವಾಗಿತ್ತು. 2005 ರಿಂದ 2011-12ವರೆಗೆ ಮಲೆನಾಡಿಗರು ಒಂದೆಡೆ ನಕ್ಸಲರು, ಮತ್ತೊಂದಡೆ ಪೊಲೀಸರ ಭಯದಲ್ಲೇ ಮಲೆನಾಡಿಗರು ಬದುಕುವಂತಾಗಿತ್ತು. ಅದರಲ್ಲೂ 2005, 2007ರ ನಕ್ಸಲ್‌ ಎನ್ ಕೌಂಟರ್, ಮಾಹಿತಿದಾರ ಅಂತ ನಕ್ಸಲರ ಫೈರಿಂಗ್, ವಡೇರಮಠ ಘಟನೆ ಮಲೆನಾಡಿಗರ ಬೆಚ್ಚಿಬೀಳಿಸಿತ್ತು.‌ಆದ್ರೀಗ, ಮತ್ತೆ ನಕ್ಸಲರು ಮಲೆನಾಡಿಗೆ ಬಂದಿದ್ದು, ಎನ್ ಕೌಂಟರ್ ಕೂಡ ಆಗಿದೆ.ಎಸ್ಕೇಪ್ ಆಗಿರುವ ನಕ್ಸಲರಾಗಿ ನಾಲ್ಕು ಜಿಲ್ಲೆಗಳಾದ ಚಿಕ್ಕಮಗಳೂರು ,ಉಡುಪಿ, ಮಂಗಳೂರು ,ಶಿವಮೊಗ್ಗದಲ್ಲಿ ಎನ್ ಎನ್ ಎಫ್ ಸಿಬ್ಬಂದಿಗಳು ತೀವ್ರ ಕಾರ್ಯಚಾರಣೆ ನಡೆಸುತ್ತಿದ್ದಾರೆ.

History of Naxal Activity in Western Ghats

Facebook
X
WhatsApp
Telegram
Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

Spread the love

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ…

Spread the love

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು…

[t4b-ticker]
Exit mobile version