ಚಿಕ್ಕಮಗಳೂರು: ಭಕ್ತಿ, ಧಾರ್ಮಿಕತೆ, ವೈಚಾರಿಕತೆಯ ಮೌಲ್ಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಸಲುವಾಗಿ ಸೆ.೧ ರಂದು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ಆರಂಭಗೊಂಡಿರುವ ಬಸವ ಸಂಸ್ಕೃತಿ ಅಭಿಯಾನ ರಥೋತ್ಸವ ಸೆ.೨೦ ರಂದು ಶನಿವಾರ ಬೆಳಗ್ಗೆ ೧೧ ಗಂಟೆಗೆ ಮಂಗಳೂರಿನಿಂದ ಚಿಕ್ಕಮಗಳೂರು ನಗರಕ್ಕೆ ಆಗಮಿಸುತ್ತಿದೆ ಎಂದು ಅಭಿಯಾನದ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎನ್ ಚಿದಾನಂದ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಪರಸ್ಪರ ಭ್ರಾತೃತ್ವದ ಬೆಸುಗೆ ಹಾಕಿ ಸಾಮರಸ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿದ್ದು, ನಾಗರೀಕ ಸೌಲಭ್ಯಗಳು ಹೆಚ್ಚಾಗಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ವೈಚಾರಿಕತೆ ಮೂಲಕ ಜನಮಾನಸದಲ್ಲಿ ಶರಣರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಬಸವ ಸಂಸ್ಕೃತಿ ಅಭಿಯಾನ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಚರಿಸಿ ಅ.೫ ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ಇದರ ಅಂಗವಾಗಿ ಅ.೨೦ ರಂದು ಸಂಜೆ ೪ ಗಂಟೆಗೆ ಬಸವಣ್ಣನವರ ಭಾವಚಿತ್ರದ ರಥೋತ್ಸವವು ತಾಲ್ಲೂಕು ಕಚೇರಿಯಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಹೊರಟು ಎಂಜಿ ರಸ್ತೆ ಮೂಲಕ ಕುವೆಂಪು ಕಲಾಮಂದಿರ ತಲುಪಲಿದೆ ಎಂದರು.
ಅಂದು ಬೆಳಗ್ಗೆ ೧೧ ಗಂಟೆಗೆ ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ, ೬ ಗಂಟೆಗೆ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ, ಸಾರ್ವಜನಿಕ ಸಮಾರಂಭ, ವಚನಗಾಯನ,, ಉಪನ್ಯಾಸ ಮತ್ತು ಆಶೀರ್ವಚನ ಮತ್ತು ರಾತ್ರಿ ೮.೩೦ ಕ್ಕೆ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರಲ್ಲಿ ಆಧ್ಯಾತ್ಮದ ಬಗ್ಗೆ ಅರಿವು ಮೂಡಿಸುವುದು, ವ್ಯಸನಮುಕ್ತ ಸಮಾಜ ನಿರ್ಮಾಣ, ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವುದು, ಸಮ ಸಮಾಜ ನಿರ್ಮಾಣ, ಸದೃಢ ಸಮಾಜ ಕಟ್ಟುವುದು, ಮಹಿಳೆಯರ ಘನತೆ ಕಾಪಾಡುವುದು. ವ್ಯಕ್ತಿತ್ವ ವಿಕಸನ ಮುಂತಾದವು ಬಸವ ಸಂಸ್ಕೃತಿ ಅಭಿಯಾನದ ಆಶಯಗಳಾಗಿದೆ ಎಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ದ ಸ್ವಾಮೀಜಿಗಳು ವಹಿಸಲಿದ್ದು, ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿ, ಯಡಿಯೂರು ತೋಂಟದಾರಿಯ ಮಠ ಗದಗ, ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಸಾಣೇಹಳ್ಳಿ ಶಾಖಾ ಮಠದ ತರಳಬಾಳು ಜಗದ್ಗುರು, ಬಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟಾಧ್ಯಕ್ಷರು, ಯಳನಾಡು ಸ್ವಾಮಿಗಳು, ಸಿಂದಿಗೆರೆ ಕರಡಿಗವಿ ಮಠದ ಶ್ರೀಗಳು ಭಾಗವಹಿಸಲಿದ್ದಾರೆಂದು ಹೇಳಿದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಸ್ತ ಶರಣ ಬಂಧುಗಳು, ನಾಗರಿಕರು, ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಉಪಾಧ್ಯಕ್ಷ ಮಹಡಿ ಮನೆ ಸತೀಶ್, ಸದಸ್ಯರುಗಳಾದ ನಂಜೇಶ್ ಬೆಣ್ಣೂರು, ಬಿ. ತಿಪ್ಪೇರುದ್ರಪ್ಪ, ಬಿ.ಜಿ ಸೋಮಶೇಖರ್, ಸದಾಶಿವಪ್ಪ, ರಮೇಶ್, ಜಗದೀಶ್ ಬಾನು ಉಪಸ್ಥಿತರಿ
Basava Culture Abhiyan Chariot Festival to be held in the city on September 20