ALSO FEATURED IN

ಧಾರ್ಮಿಕವಾಗಿ ಸರ್ವರನ್ನೂ ಒಗ್ಗೂಡಿಸುವುದೇಗಣೇಶೋತ್ಸವದ ಉದ್ದೇಶ

Spread the love

ಚಿಕ್ಕಮಗಳೂರು: ಹಿಂದುತ್ವವನ್ನು ಗಟ್ಟಿಗೊಳಿಸಲು ಧಾರ್ಮಿಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿ ಆಚರಿಸುವುದೇ ಸಾರ್ವಜನಿಕ ಗಣೇಶೋತ್ಸವದ ಪ್ರಮುಖ ಉದ್ದೇಶ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಭಿಪ್ರಾಯಿಸಿದರು.

ಅವರು ಇಂದು ನಗರದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಅಜಾದ್ ಪಾರ್ಕ್ ಗಣೇಶೋತ್ಸವ ಸಮಿತಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೆರವಣಿಗೆಗೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ೮೯ ವರ್ಷಗಳಿಂದ ನಗರದಲ್ಲಿ ವಿಶೇಷವಾಗಿ ಗಣಪತಿಯನ್ನು ಅಜಾದ್ ಮೈದಾನದಲ್ಲಿ ಪ್ರತಿಷ್ಠಾಪಿಸಿ ೨೧ ದಿನಗಳ ಕಾಲ ವಿವಿಧ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗಣೇಶೋತ್ಸವ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಕಳೆದ ೧೦ ವರ್ಷಗಳಿಂದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಿ ವೈಭವದಿಂದ ಪೂಜೆ ಸಲ್ಲಿಸಿ ವಿವಿಧ ಸಾಂಸ್ಕೃತಿಕ ಜಾನಪದ ಕಲಾತಂಡಗಳ ಮೂಲಕ ಇಂದು ನಗರದ ಪ್ರಮುಖ ರಸ್ತೆಗಳಲ್ಲಿ ಗಣೇಶ ಮೆರವಣಿಗೆ ಸಾಗಲಿದೆ ಎಂದು ತಿಳಿಸಿದರು.

ಬಾಲಗಂಗಾಧರ ತಿಲಕರು ಜಾತ್ಯಾತೀತ ರಾಷ್ಟ್ರ ಭಾರತದಲ್ಲಿ ಎಲ್ಲರನ್ನೂ ಒಗ್ಗೂಡಿಸಲು ಭಾವೈಕ್ಯತಾ ಸಂಕೇತವಾದ ಗಣೇಶೋತ್ಸವದ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ವಿಜಯ ಸಾಧಿಸಿದ್ದರು ಎಂದು ಸ್ಮರಿಸಿದರು.

ನಗರದ ಎಲ್ಲಾ ನಾಗರೀಕರು ಶಾಂತಿ ಸಂಯಮದಿಂದ ವಿಘ್ನೇಶ್ವರ ಮೆರವಣಿಗೆಯಲ್ಲಿ ಪಾಲ್ಗೊಂಡು ಶ್ರೀಯವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದ ಅವರು, ನಂತರ ಗಣೇಶ ಮೂರ್ತಿಯನ್ನು ಬಸವನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಹೇಳಿದರು.

ಗಣೇಶೋತ್ಸವ ಎಲ್ಲರ ಆರೋಗ್ಯ ಕಾಪಾಡುವ ಜೊತೆಗೆ ರೈತರಿಗೆ ಮಳೆ, ಬೆಳೆ, ಬೆಲೆ ಬರುವಂತೆ ಕರುಣಿಸಲಿ ಎಂದು ಪ್ರಾರ್ಥಿಸಿದರಲ್ಲದೆ, ಮುಂದಿನ ವರ್ಷದ ಗಣೇಶೋತ್ಸವದ ವೇಳೆಗೆ ಪೆಂಡಾಲ್ ಮೇಲೆ ಮೇಲ್ಛಾವಣಿ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

ಮೆರವಣಿಗೆ ಶೀಯವರನ್ನು ಅಲಂಕೀತವಾದ ಪ್ರಭಾವಳಿಯಲ್ಲಿ ಕುಳ್ಳಿರಿಸಿ, ಮಂಗಳವಾದ್ಯ ರಂಗುರಂಗಿನ ಹೂಮಳೆಗರೆಯುವ ಬಾಣ ಬಿರುಸುಗಳ ನಯನ ಮನೋಹರವಾದ ಕೀಲು ಕುದುರೆ ನೃತ್ಯ, ಸ್ಯಾಕ್ಸೋಫೋನ್ ವಾದ್ಯ, ವೀರಗಾಸೆ ಕುಣೀತ, ಡೊಳ್ಳು ಕುಣಿತ, ಹಳ್ಳಿವಾದ್ಯ ಇನ್ನೂ ಮುಂತಾದ ಜನಪದ ಕಲಾತಂಡಗಳೊಂದಿಗೆ ವಿಜೃಂಭಣೆಯಿಂದ ಕೂಡಿದ ಮೆರವಣಿಗೆಯು, ಚಿಕ್ಕಮಗಳೂರು ನಗರದ ಪ್ರಮುಖ ರಾಜ ಬೀದಿಗಳಲ್ಲಿ ಹಾಗೂ ಎಂ.ಜಿ. ರಸ್ತೆಯಲ್ಲಿ ಹಾದು ಹೋಗಿ ರಾತ್ರಿ ಬಸವನಲ್ಲಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು.

ಈ ಸಂದರ್ಭದಲ್ಲಿ ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎನ್ ಕುಬೇರ, ಪ್ರಧಾನ ಕಾರ್ಯದರ್ಶಿ ಸಿ.ಆರ್ ಕೇಶವಮೂರ್ತಿ, ಖಜಾಂಚಿ ಹೆಚ್.ಕೆ ಮಂಜುನಾಥ್, ಕಾರ್ಯಾಧ್ಯಕ್ಷರಾದ ಈಶ್ವರಪ್ಪ ಎನ್.ಕೋಟೆ, ಗೌರವ ಅಧ್ಯಕ್ಷರಾದ ಬಿ. ವಿರೂಪಾಕ್ಷಪ್ಪ, ಎಂ. ದಿವಾಕರ್, ವರಸಿದ್ಧಿ ವೇಣುಗೋಪಾಲ್, ಎಲ್.ವಿ ಕೃಷ್ಣಮೂರ್ತಿ, ಸಿ.ಎಂ ವೇಣುಗೋಪಾಲ್, ಎಂ.ಎಸ್ ಉಮೇಶ್ ಕುಮಾರ್, ಹೆಚ್.ವೈ ಮೋಹನ್ ಕುಮಾರ್, ಸಿ.ಈ ಚೇತನ್ ಏಕಾಂತ್‌ರಾಮ್, ಶ್ರೀನಿವಾಸ್, ಸಿ.ಎಸ್ ಹೊನ್ನಪ್ಪ ಶೆಟ್ಟಿ, ಸಚಿನ್ ಎಂ.ಕೆ, ಗಂಗಾಧರ ಸಿ.ಎನ್, ಹೆಚ್.ಎನ್ ಉಮಾಶಂಕರ್, ಸಿ.ಬಿ ಪ್ರಸಾದ್, ಸದಸ್ಯರುಗಳಾದ ಬಿ.ಸಿ ಶಿವಶಂಕರ್, ಮಂಜುನಾಥ್ ಸಿ.ಎನ್, ಸಿ.ವಿ ಕಲ್ಲೇಶ್, ಸುಜಿತ್.ಸಿ, ಸಿ.ಎಂ ದಯಾನಂದ್, ಪಿ.ಕಿರಣ್, ಬಿ.ಆರ್ ಮಾಲತೇಶ್ ರಾವ್, ಸಿ.ಆರ್ ನಾಗೇಶ್, ಆಡಿಟರ್ ಹೆಚ್.ಆರ್ ಮೋಹನ್, ವಕೀಲ ಬಿ.ಆರ್ ಜಗದೀಶ್, ಸಿ.ಕೆ ಪ್ರವೀಣ್ ಕುಮಾರ್, ಶಿವಶಂಕರ್ ಕೋಟೆ, ಬಿ.ಎಸ್ ಉಮೇಶ್, ಶ್ರೀನಿವಾಸ, ಮಹೇಶ್ ಶೆಟ್ಟಿ, ಕೆ.ಎಸ್ ಬಸವರಾಜ್, ದಿನೇಶ್ ಕೋಟೆ, ಕೆ.ಸಿ ನಿಶಾಂತ್, ಸಿ.ಬಿ ರಂಜಿತ್, ಎಲ್.ಎಸ್ ಉಮಾಶಂಕರ್, ಸಿ.ಎಸ್ ಮಂಜುನಾಥ್ ಉಪಸ್ಥಿತರಿದ್ದರು.

The purpose of Ganesh Chaturthi is to unite everyone religiously.

Facebook
X
WhatsApp
Telegram
Spread the love

ಚಿಕ್ಕಮಗಳೂರು: ಭಕ್ತಿ, ಧಾರ್ಮಿಕತೆ, ವೈಚಾರಿಕತೆಯ ಮೌಲ್ಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಸಲುವಾಗಿ ಸೆ.೧ ರಂದು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ…

Spread the love

ಚಿಕ್ಕಮಗಳೂರು: ಹಿಂದುತ್ವವನ್ನು ಗಟ್ಟಿಗೊಳಿಸಲು ಧಾರ್ಮಿಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿ ಆಚರಿಸುವುದೇ ಸಾರ್ವಜನಿಕ ಗಣೇಶೋತ್ಸವದ ಪ್ರಮುಖ ಉದ್ದೇಶ ಎಂದು ಶಾಸಕ ಹೆಚ್.ಡಿ.…

Spread the love

ಚಿಕ್ಕಮಗಳೂರು: ಭಕ್ತಿ, ಧಾರ್ಮಿಕತೆ, ವೈಚಾರಿಕತೆಯ ಮೌಲ್ಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಸಲುವಾಗಿ ಸೆ.೧ ರಂದು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ…

Spread the love

ಚಿಕ್ಕಮಗಳೂರು: ಹಿಂದುತ್ವವನ್ನು ಗಟ್ಟಿಗೊಳಿಸಲು ಧಾರ್ಮಿಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿ ಆಚರಿಸುವುದೇ ಸಾರ್ವಜನಿಕ ಗಣೇಶೋತ್ಸವದ ಪ್ರಮುಖ ಉದ್ದೇಶ ಎಂದು ಶಾಸಕ ಹೆಚ್.ಡಿ.…

[t4b-ticker]
Exit mobile version