ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲು ಉದ್ದೇಶಿಸಿರುವ ಜಾತಿ ಗಣತಿಯಲ್ಲಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಕುರುಬ ಸಮುದಾಯದವರು ಜಾತಿ ಕಾಲಂನಲ್ಲಿ ಕುರುಬ ಎಂದು ಬರೆಸಿರಿ ಎಂದು ಜಿಲ್ಲಾ ಕುರುಬ ಸಂಘ ಅಧ್ಯಕ್ಷ ಕೆ.ಎಸ್.ಶಾಂತೇಗೌಡ ಜಿಲ್ಲೆಯ ಕುರುಬ ಸಮಾಜದಲ್ಲಿ ಮನವಿ ಮಾಡಿದ್ದಾರೆ.
ಕುರುಬ ಸಮಾಜದ ಪ್ರತಿಯೊಬ್ಬರಿಗೂ ಸರ್ಕಾರದ ಸಲವತ್ತುಗಳು ಸಮರ್ಪಕವಾಗಿ ದೊರೆಯಬೇಕಾದಲ್ಲಿ ಜಾತಿ ಗಣತಿ ಸಂದರ್ಭದಲ್ಲಿ ಕುರುಬ ಸಮಾಜದವರು ಎಷ್ಟೇ ಕೆಲಸ ಕಾರ್ಯಗಳಿದ್ದರೂ ಬದಿಗೊತ್ತಿ ಮಹತ್ವದ ಸಮೀಕ್ಷಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅವರು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಯೋಜನೆಗಳು ಜಾತಿಯ ಜನ ಸಂಖ್ಯೆಗೆ ಅನುಗುಣವಾಗಿ ರೂಪಗೊಂಡು ಅನುಷ್ಠಾನಗೊಳ್ಳುವುದರಿಂದ ಜಾತಿ ಸಮೀಕ್ಷೆ ಮಹತ್ವ ಪಡೆದುಕೊಂಡಿದೆ. ನಮ್ಮ ಸಮುದಾಯದವರು ಜಾತಿ ಕಾಲಂನಲ್ಲಿ ಕೇವಲ ಕುರುಬ ಎಂದಷ್ಟೇ ಬರೆಸಬೇಕು. ಯಾವುದೇ ಉಪ ಜಾತಿಗಳನ್ನು ಬರೆಸಬಾರದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ೫೦ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಸಮುದಾಯದವರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ, ನಿಖರವಾಗಿ ಸಮುದಾಯದ ಜನ ಸಂಖ್ಯೆಯನ್ನು ತಿಳಿಯಬೇಕೆಂದಲ್ಲಿ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿ ಕುರುಬ ಎಂದು ಸ್ಪಷ್ಟವಾಗಿ ನಮೂದಿಸಬೇಕು. ಅದರಿಂದ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹೆಚ್ಚಿನ ಸ್ಥಾನಮಾನಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ವಿವರಿಸಿದ್ದಾರೆ.
ಈ ಬಗ್ಗೆ ಯಾವುದೇ ಸಮಸ್ಯೆಗಳು, ತೊಡಕುಗಳು ಇದ್ದಲ್ಲಿ ಜಿಲ್ಲೆಯ ಕುರುಬ ಸಮುದಾಯದವರು ಜಿಲ್ಲಾ ಕುರುಬರ ಸಂಘದಿಂದ ಪರಿಹರಿಸಿಕೊಳ್ಳಬಹುದು. ಸಮೀಕ್ಷಾ ಕಾರ್ಯದ ಯಶಸ್ಸಿಗೆ ಜಿಲ್ಲೆಯಲ್ಲಿರುವ ಕುರುಬ ಸಮುದಾಯದವರು
Write “Kuruba” in the caste census application form.