Author: chikkamagalur express

ಚಿಕ್ಕಮಗಳೂರು: 2021ರಲ್ಲಿ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯ ಮರು ಮತ ಎಣಿಕೆ ಕಾರ್ಯವನ್ನು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಫೆ. 28ರಂದು ನಗರದ ಐಡಿಎಸ್ ಜಿ ಕಾಲೇಜಿನಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8 ಗಂಟೆಗೆ ಕಾಲೇಜಿನ ನೂತನ ಕಟ್ಟಡದಲ್ಲಿ ಪರಿಷತ್ ಚುನಾವಣೆಯ ಮರು ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ ಎಂದು ತಿಳಿಸಿದರು. ಚುನಾವಣಾ ಆಯೋಗದ ಮಾರ್ಗಸೂಚಿಯಂತೆಯೇ ಮರು ಮತ ಎಣಿಕೆ ನಡೆಯಲಿದೆ. 2021 ರಲ್ಲಿ ನಡೆದ ಚುನಾವಣೆಯ ಮತಯಂತ್ರಗಳನ್ನು ಬಾಕ್ಸ್ ನಲ್ಲಿ ಹಾಕಿ ಟ್ರೆಸರಿಯಲ್ಲಿ ಇರಿಸಲಾಗಿದೆ. ಫೆ. 28ರಂದು ಬೆಳಗ್ಗೆ 6:30ಕ್ಕೆ ಟ್ರಸರಿಯಿಂದ ಮತಯಂತ್ರಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅಥವಾ ಏಜೆಂಟ್ಗಳ ಸಮ್ಮುಖದಲ್ಲಿ ಮರುಮತ ಎಣಿಕೆ ಕೇಂದ್ರಕ್ಕೆ ಬಿಗಿಬಂದೋಬಸ್ ನಲ್ಲಿ ಕೊಂಡೊಯ್ಯಲಾಗುತ್ತದೆ ಎಂದು ಹೇಳಿದರು. ಮತ ಎಣಿಕೆಗೆ ಮೂರು ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಎರಡು ಟೇಬಲ್ ಗಳಲ್ಲಿ ಮತ ಎಣಿಕೆ…

Read More

ಚಿಕ್ಕಮಗಳೂರು: ಜಿಲ್ಲೆಯ ರೈತರೊಬ್ಬರಿಗೆ ಕಳೆದ ೧೩ ವರ್ಷಗಳ ಬಳಿಕ ಬರೋಬ್ಬರಿ ಮೂರು ಲಕ್ಷ ಇಪ್ಪತ್ತು ಸಾವಿರ ರೂ. ವಿದ್ಯುತ್ ಬಿಲ್ ಬಂದಿದ್ದು, ಇಲಾಖೆಯ ವಿರುದ್ಧ ರೈತ ಆಕ್ರೋಶ ಹೊರ ಹಾಕಿದ್ದಾನೆ. ಇಂಧನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ತಾಲೂಕಿನ ಆಲ್ದೂರು ಸಮೀಪದ ವಿಕ್ಕರಣೆ ಗ್ರಾಣದ ರೈತ ಉಮೇಶ್ ಎಂಬುವರಿಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಬಾರೀ ಮೊತ್ತದ ಬಿಲ್ ನೀಡಲಾಗಿದೆ. ರೈತ ಉಮೇಶ್ ಜಮೀನಿನಲ್ಲಿ ಅಡಿಕೆ, ಕಾಫಿ ಬೆಳೆಗಳನ್ನು ಬೆಳೆಯುತ್ತಿದ್ದು ನೀರು ಹಾಯಿಸಲು ೧೦ ಎಚ್.ಪಿ. ಪಂಪ್‌ಸೆಟ್ ಆಳ ವಡಿಸಿ ತೋಟಕ್ಕೆ ನೀರು ಹಾಯಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ| ಬಂಗಾರಪ್ಪ ಅವರ ಕಾಲದಿಂದಲೂ ೧೦ ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಈಗ ಏಕೆ ವಿದ್ಯುತ್ ಬಿಲ್ ಕಟ್ಟಿ ಎಂದು ನೋಟಿಸ್ ಕಳಿಸಿ ದ್ದೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೇ ಅಧಿಕಾರಿಗಳು ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಇಲ್ಲವೆಂದು ಉತ್ತರಿಸು ತ್ತಾರೆಂದು…

Read More

ಚಿಕ್ಕಮಗಳೂರು:  ಶಾಲಾ ಮಕ್ಕಳಿಗೆ ರಾಜ್ಯಸರ್ಕಾರ ಬಿಸಿಯೂಟ, ಪಠ್ಯಪುಸ್ತಕ, ಸಮ ವಸ್ತ್ರ, ವಿದ್ಯಾರ್ಥಿವೇತನ ಸೇರಿದಂತೆ ಮೂಲಭೂತ ಸೌಲಭ್ಯವನ್ನು ಒದಗಿಸಿ ಸಂಪೂರ್ಣ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುತ್ತಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು. ನಗರದ ಶಾಂತಿನಗರದಲ್ಲಿ ಪಿಎಂಶ್ರೀ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರ ಗತಿ ಮಕ್ಕಳ ಸ್ನೇಹ ಸಮ್ಮೇಳನ ಹಾಗೂ ಚಿಣ್ಣರ ವೈಭವ ಕಾರ್ಯಕ್ರಮವನ್ನು ಮಂಗಳವಾರ ಸಂಜೆ ಉದ್ಘಾ ಟಿಸಿ ಅವರು ಮಾತನಾಡಿದರು. ಖಾಸಗೀ ಶಾಲೆಗಳ ಅಬ್ಬರದ ನಡುವೆಯು ಶಾಂತಿನಗರದ ಶಾಲೆಗೆ ಸುಮಾರು ೧೬೦ಕ್ಕೂ ಹೆಚ್ಚು ಮಕ್ಕಳು ದಾಖಲಾಗಿರುವುದು ಹೆಮ್ಮೆಯ ಸಂಗತಿ ಎಂದ ಅವರು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳೆಂಬ ಕೀಳರಿಮೆ ಹೊಂದಿರದೇ, ಪಠ್ಯದ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಶಾಲೆಗೆ ಕೀರ್ತಿ ತರ ಬೇಕು ಎಂದರು. ವಿದ್ಯೆ ಬದುಕು ಅಥವಾ ನೌಕರಿಗಷ್ಟೇ ಸೀಮಿತವಾಗಬಾರದು. ಸಂಸ್ಕಾರಯುತ ಜೀವನ ಹಾಗೂ ಸಾ ಮಾಜಿಕ ಕಳಕಳಿಯಿಂದ ಕೂಡಿರಬೇಕು. ಮಕ್ಕಳಿಗೆ ಆಸ್ತಿ, ಅಂತಸ್ತು ಸಂಪಾದಿಸಿದರೆ, ಇನ್ನೊಬ್ಬರು ದೋಚ ಬಹುದು. ಆದರೆ ನೈತಿಕ ಶಿಕ್ಷಣ, ಗುರುಹಿರಿಯರನ್ನು ಗೌರವಿಸುವ…

Read More

ಚಿಕ್ಕಮಗಳೂರು: – ಸಾಹಿತ್ಯದ ಲೋಕದ ದಿಗ್ಗಜ ಕುವೆಂಪು ಜನಿಸಿದ ಜಿಲ್ಲೆಯಲ್ಲಿ ಕನ್ನಡ ದ ತೇರನ್ನು ಒಂದಾಗಿ ಎಳೆದು, ಮುಂದಿನ ಪೀಳಿಗೆಗೆ ಭಾಷಾ ಸೊಗಡನ್ನು ಕೊಂಡೊಯ್ಯುವ ಮಹತ್ತರ ಜ ವಾಬ್ದಾರಿ ಪ್ರತಿಯೊಬ್ಬರು ಹೊರಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು. ನಗರದ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೇವಾದೀಕ್ಷಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ದೇಶದಲ್ಲಿ ಹಲವಾರು ಭಾಷೆಗಳಿವೆ. ಅವುಗಳಲ್ಲಿ ಅತ್ಯಂತ ಸುಂದರವಾದ ಭಾಷೆ ಕನ್ನಡ. ಸುಲಭವಾಗಿ ಕಲಿತುಕೊಳ್ಳಲು, ಅರ್ಥಮಾಡಿಕೊಳ್ಳಲು ಪೂರಕ ಎಂದ ಅವರು ಬದುಕು ಅಥವಾ ವೃತ್ತಿಗನುಸಾರ ಅನ್ಯ ಭಾ ಷೆ ಕಲಿಯುವುದು ತಪ್ಪಲ್ಲ. ಆದರೆ ಮಾತೃಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಅತಿಮುಖ್ಯ ಎಂದರು. ಮಾತೃಭಾಷೆ ಕನ್ನಡಕ್ಕೆ ಧಕ್ಕೆಯುಂಟಾದಲ್ಲಿ ಹೊಂದಾಣಿಕೆ ಪ್ರಶ್ನೆ ಇರಬಾರದು. ನ್ಯಾಯಬದ್ಧ ಹೋರಾ ಟಕ್ಕೆ ಎಲ್ಲರೂ ಸಜ್ಜಾಗಬೇಕು. ಜೊತೆಗೆ ಕನ್ನಡಪರ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡು ಭಾ ಷೆಯ ಪರಿಮಳವನ್ನು ಎಲ್ಲೆಡೆ ಹಬ್ಬಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು. ಕಸಾಪದಲ್ಲಿ ಅಜ್ಜಂಪುರ ಸೂರಿ, ಚಂದ್ರಯ್ಯನಾಯ್ಡು ಕಾಲಘಟ್ಟದಲ್ಲಿ ಅನೇಕ ಕಾರ್ಯಕ್ರಮಗಳು ಹಮ್ಮಿ…

Read More

ಚಿಕ್ಕಮಗಳೂರು: ಬಸವತತ್ವದ ಪ್ರಚಾರವನ್ನೇ ಮುಖ್ಯ ಆಶಯದೊಂದಿಗೆ ನಗರದಲ್ಲಿ ಆರಂಭಗೊಂಡ ಶ್ರೀ ಬಸವತತ್ವ ಪೀಠ ಈಗ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದ್ದು, ಕಲ್ಯಾಣ ನಗರದ ಬಸವ ಮಂದಿರದಲ್ಲಿ ಸುಮಾರು ೩.೫೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ನೂತನ ಕಟ್ಟಡ ಉದ್ಘಾಟನೆ ಹಾಗೂ ಬಸವತತ್ವ ಸಮಾವೇಶ ಫೆ.೨೮ ಹಾಗೂ ಮಾ.೧ ರಂದು ನಡೆಯಲಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಬಸವತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು ಈ ವಿಷಯ ತಿಳಿಸಿ, ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಚಂದ್ರಶೇಖರ ಮಹಾ ಸ್ವಾಮಿಗಳ ೧೭೦ ನೇ ಜಯಂತಿ ಮತ್ತು ಜಯಚಂದ್ರಶೇಖರ ಮಹಾಸ್ವಾಮಿಗಳ ೨೯ನೇ ಸಂಸ್ಮರಣೆ ಕಾರ್ಯಕ್ರಮ ಜರುಗಲಿದೆ ಸುಮಾರು ೧೫ ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು. ಫೆ.೨೮ ರಂದು ಸಂಜೆ ೬ ಗಂಟೆಗೆ ಬಸವತತ್ವ ಸಮಾವೇಶ ಶಿವಾನುಭವಗೋಷ್ಠಿ-೪೩ ನಡೆಯಲಿದ್ದು, ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಜಗದ್ಗುರು ಡಾ. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಅವರನ್ನು ಅಭಿನಂದಿಸಲಾಗುವುದು…

Read More

ಚಿಕ್ಕಮಗಳೂರು: : ಅಜಾತಶತ್ರು, ಜನಪರ ಆಡಳಿತಗಾರ, ಸ್ನೇಹಜೀವಿ, ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪು ಸದಾ ಕಾಲ ಈ ರಾಷ್ಟ್ರಕ್ಕೆ ಇರುತ್ತದೆ, ಅವರೊಬ್ಬ ಮಾದರಿ ರಾಜಕಾರಣಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಿಸಿದರು. ಅವರು ಇಂದು ತಮ್ಮ ನಿವಾಸದಲ್ಲಿ ಜಿಲ್ಲಾ ಬಿಜೆಪಿ ಏರ್ಪಡಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತದಿನೋತ್ಸವ ಅಂಗವಾಗಿ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಚಿಕ್ಕಮಗಳೂರಿಗೂ ಹಳೇ ಸಂಬಂಧ ಇದೆ, ತುರ್ತು ಪರಿಸ್ಥಿತಿ ಬಳಿಕ ನಡೆದ ಉಪಚುನಾವಣೆ ಸಂದರ್ಭದಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉದ್ದಗಲಕ್ಕೆ ಸಂಚರಿಸಿ ಕಾರ್ಯಕರ್ತರನ್ನು ಹುರಿದುಂಬಿಸಿ ಬಿಜೆಪಿ ಅಭ್ಯರ್ಥಿಯಾಗಿದ್ದ ವೀರೇಂದ್ರ ಪಾಟೀಲ್ ಪರವಾಗಿ ಪ್ರಚಾರ ಮಾಡಿದ್ದರು ಎಂದು ಹೇಳಿದರು. ಚಿಕ್ಕಮಗಳೂರು ನಗರಕ್ಕಾಗಮಿಸಿದ್ದಾಗ ವಿಠಲ್ ರಾವ್ ಜೊತೆ ಹೋಗಿ ಭೇಟಿಮಾಡಿರುವುದಾಗಿ ಹೇಳಿದ ಅವರು, ಆಲ್ದೂರಿಗೂ ಬಂದು ೧೯೯೦-೯೧ ರ ಲೋಕಸಭಾ ಚುನಾವಣೆ ನಡೆಯುವ ಮುನ್ನವೇ ಅಟಲ್ ಜೀ ಅವರನ್ನು ಆಹ್ವಾನಿಸಿ ಎ.ಸಿ. ಚಂದ್ರಶೇಖರ್ ಅವರ…

Read More

ಚಿಕ್ಕಮಗಳೂರು: ಬೆಳಗಾವಿಯ ಬಸ್ ನಿರ್ವಾಹಕನ ಮೇಲೆ ಮರಾಠಿಗರು ದೌರ್ಜನ್ಯ ಎಸಗಿರುವುದನ್ನು ಖಂಡಿಸಿ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಸೋಮವಾರ ಜಿಲ್ಲಾ ಕನ್ನಡಸೇನೆ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಕನ್ನಡಸೇನೆ ಅಧ್ಯಕ್ಷ ಪಿ.ಸಿ.ರಾಜೇಗೌಡ ವಿಶಾಲ ಹೃದಯ ಹೊಂದಿರುವ ಕನ್ನಡಿ ಗರು ಅನ್ಯ ಭಾಷಿಗರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆದರೆ ಗಡಿ ಭಾಗದಲ್ಲಿ ಕೆಲವು ಕಿಡಿ ಗೇಡಿಗಳು ರಾಜ್ಯದ ಕಂಡೆಕ್ಟರ್ ಮೇಲೆ ಹಲ್ಲೆಗೆ ನಡೆಸಿರುವುದು ಖಂಡನೀಯ. ಕೂಡಲೇ ಅವರ ವಿರುದ್ಧ ಕಠಿ ಣ ಕ್ರಮ ಕೈಗೊಳ್ಳಬೇಕು ಎಂದರು. ಕರ್ನಾಟಕದಲ್ಲಿ ಕನ್ನಡಿಗರು ಸಾರ್ವಭೌಮ, ನಾಡಿನಲ್ಲಿ ನೆಲೆಸಿರುವ ಪ್ರತಿಯೊಬ್ಬರು ಕನ್ನಡದಲ್ಲೇ ವ್ಯವ ಹರಿಸಬೇಕು. ಕನ್ನಡಿಗರಿಗೆ ಉದ್ಯೋಗವೆಂಬ ಆದೇಶ ಮಾಡಿದರೂ ಇದನ್ನೆ ಲೆಕ್ಕಸದೇ ಕೆಲವರು ಕನ್ನಡಿಗರ ಮೇಲೆ ಹೆಚ್ಚು ದೌರ್ಜನ್ಯಕ್ಕೆ ಮುಂದಾಗುತ್ತಿರುವುದು ನ್ಯಾಯಸಮಂಜಸವಲ್ಲ ಎಂದು ಹೇಳಿದರು. ನಾಡಿನ ಮತದಾರರ ಮೂಲಕ ಅಧಿಕಾರ ಹಿಡಿದು, ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಳಕರ್ ಅವರು ಕ ನ್ನಡಿಗರ ಪರವಾಗಿ ಕೈಜೋಡಿಸಿ, ಕಷ್ಟ-ಸುಖಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳದೇ,…

Read More

ಚಿಕ್ಕಮಗಳೂರು:  ಮಲೆನಾಡು ಗಿಡ್ಡ ಹಸುಗಳು ಸಂರಕ್ಷಣೆಗೆ ಶಾಶ್ವತ ಗೋಮಾಳ ಮೀಸಲಿಡಲು ಪಶುಸಂಗೋಪನಾ ಇಲಾಖೆ ಮುಂದಾಗಿರುವುದನ್ನು ಕೊಪ್ಪ ತಾಲ್ಲೂಕು ಹೇರೂರು ಕೆಮ್ಮಣ್ಣು ಶ್ರೀ ಕಾಮಧೇನು ಗೋ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಂಗೀರಸ ಸ್ವಾಗತಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಕಳಸಾ ತಾಲ್ಲೂಕಿನ ಮಾವಿನಕೆರೆ ಗ್ರಾಮದ ಖ್ಯಾತನಮಕ್ಕಿ ಹುಲ್ಲುಗಾವಲು ಪ್ರದೇಶವನ್ನು ಮಲೆನಾಡು ಗಿಡ್ಡು ಹಸುಗಳ ಸಂರಕ್ಷಣೆಗೆ ಶಾಶ್ವತ ಗೋಮಾಳವನ್ನಾಗಿ ಮೀಸಲಿಡುವ ಜೊತೆಗೆ ಕ್ಷೀಣಿಸುವ ಹಂತದಲ್ಲಿರುವ ಗಿಡ್ಡ ಗೋತಳಿಯ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಬೇಕೆಂದು ಒತ್ತಾಯಿಸಿದರು. ಈ ಕಾರ್ಯಕ್ಕೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾಡಳಿತದ ವಿಶೇಷ ಪ್ರಯತ್ನದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ದೇಶದ ವಿಶಿಷ್ಟ ಗೋ ಸಂತತಿ ಮಲೆನಾಡು ಗಿಡ್ಡಗಳು ಕೇವಲ ಪಶ್ಚಿಮ ಘಟ್ಟ ಪ್ರದೇಶಗಳ ಹವಾಮಾನಕ್ಕೆ ಗಾಳಿ, ಚಳಿ, ಬಿಸಿಲಿಗೆ ಹೊಂದಿಕೊಂಡು ಬದುಕುವಂತಹವುಗಳಾಗಿದ್ದು, ಪ್ರಸ್ತುತ ಈ ತಳಿ ಮಾನ್ಯತೆಯೊಂದಿಗೆ ವಿಶಿಷ್ಟ ತಳಿಯ ಸಾಲಿನಲ್ಲಿದ್ದು, ಪಶ್ಚಿಮ ಘಟ್ಟಗಳ ಅತೀ ಹೆಚ್ಚು ಮಳೆ ಬೀಳುವ ಶಿವಮೊಗ್ಗ, ಚಿಕ್ಕಮಗಳೂರು,…

Read More