Subscribe to Updates
Get the latest creative news from FooBar about art, design and business.
- e-paper (11-07-2025) Chikkamagalur Express
- ಅಜ್ಞಾನ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿ ಬೆಳಗಿಸುವರೇ ಗುರು
- ಮಹಿಳಾ ಸಬಲೀಕರಣಕ್ಕೆ ಬ್ಯಾಂಕ್ಗಳ ಮೂಲಕ ಸಾಲಸೌಲಭ್ಯ
- e-paper (10-07-2025) Chikkamagalur Express
- ವ್ಯಾಪಾರಸ್ಥರು ನಗರಸಭೆ ನಿಬಂಧನೆಗಳ ಪಾಲಿಸಬೇಕು
- ಕಾಂಗ್ರೆಸ್ ಸರ್ಕಾರ ಬಡವರ ಜೀವನದ ಜೊತೆ ಚೆಲ್ಲಾಟ
- e-paper (09-07-2025) Chikkamagalur Express
- ಯುವಜನತೆ ರಾಷ್ಟ್ರಕವಿ ಕುವೆಂಪು ಆಶಯದಂತೆ ವಿಶ್ವಮಾನವರಾಗಬೇಕು
Author: chikkamagalur express
ಚಿಕ್ಕಮಗಳೂರು: ಅನೇಕ ಹಂತಗಳಲ್ಲಿ ನಮ್ಮಅಗತ್ಯವಾದ ಬೇಡಿಕೆಗಳನ್ನು ಈಡೇರಿಸುವುದು ನಿಸರ್ಗವೇಆಗಿರುವುದರಿಂದಅದನ್ನು ಬಿಟ್ಟು ಮನುಷ್ಯ ಬದುಕಲು ಸಾಧ್ಯವೇಇಲ್ಲಎಂದುಜಿಲ್ಲಾಧಿಕಾರಿಕೆ.ಎನ್.ರಮೇಶ್ ವಿಶ್ಲೇಷಿಸಿದರು. ಅರಣ್ಯ ಇಲಾಖೆ, ಭದ್ರಾ ವನ್ಯಜೀವಿ ವಿಭಾಗ, ವೈಲ್ಡ್‌ಕ್ಯಾಟ್‌ಸಿ., ವನ್ಯಜೀವಿ ಸಂರಕ್ಷಣಾಕ್ರಿಯಾತಂಡದಆಶ್ರಯದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಶನಿವಾರ ನಗರದಜಿಲ್ಲಾ ಸ್ಕೌಟ್ಸ್ ಮತ್ತುಗೈಡ್ಸ್ ಭವನದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್‌ಜಾಥಾದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ನಮಗೆ ನೀರು, ಗಾಳಿ, ಸೂರು, ಬಟ್ಟೆ, ಸಂಪತ್ತು, ಸಂತೋಷಇವೆಲ್ಲವನ್ನು ನೀಡುವುದು ಪ್ರಕೃತಿಯೆ. ಹೀಗಾಗಿ ಮನುಷ್ಯನಿಗೆ ಪ್ರಕೃತಿಯಿಂದದೂರವಿರಲು ಸಾಧ್ಯವಿಲ್ಲ. ವಿದ್ಯಾರ್ಥಿಜೀವನದಲ್ಲಿ ಪ್ರಕೃತಿಯಿಂದಕಲಿಯಲು ಸಾಕಷ್ಟು ವಿಚಾರಗಳಿವೆ ಎಂದರು. ಡಿ.ವಿ.ಜಿ.ಯವರ ಮಾತಿನಂತೆ ನಿಸರ್ಗಎನ್ನುವುದುಒಂದು ಪಾಠಶಾಲೆ. ಪ್ರಕೃತಿಯಲ್ಲಿ ದಿನನಿತ್ಯ ಅನೇಕ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಅವುಗಳನ್ನು ನೋಡುವ ಕಣ್ಣುಗಳು ಬೇಕು. ಕಲಿಯುವ ಮನಸ್ಸುಗಳು ಬೇಕು. ಆಲ್ಬರ್ಟ್‌ಐನ್‌ಸ್ಟೈನ್ ಹೇಳಿರುವಂತೆ, ಜೀವನದ ಸಂಪೂರ್ಣ ವಿಚಾರಗಳು ಅರ್ಥವಾಗಬೇಕಾದರೆ ಪ್ರಕೃತಿಯ ಪ್ರತಿಯೊಂದು ವಿಚಾರಗಳನ್ನು ಗಮನಿಸಬೇಕು. ಪ್ರಕೃತಿಯಿಂದ ಬಹಳ ದೂರ ಉಳಿದ ವಿದ್ಯಾರ್ಥಿಗಳ ಬಗ್ಗೆ ತುಂಬಾ ರಾಷ್ಟ್ರಗಳು ಅದರಲ್ಲೂಅಮೆರಿಕಾ ನಡೆಸಿದ ಬಹಳಷ್ಟು ಅಧ್ಯಯನದ ಪ್ರಕಾರ ಮಕ್ಕಳು ಪ್ರಕೃತಿಯ ಸಂಪರ್ಕಕಡಿದುಕೊಂಡಿದ್ದಾರೆ. ಖಿನ್ನತೆ, ಬೊಜ್ಜು, ಡಯಾಬಿಟಿಸ್, ಬೌದ್ಧಿಕ ಅಸಮರ್ಥತೆ, ಏಕಾಗ್ರತೆಯಕೊರತೆ…
ಚಿಕ್ಕಮಗಳೂರು: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆಶಯದಂತೆ ಸಮಸಮಾಜ ನಿರ್ಮಾಣವಾಗ ಬೇಕಾದರೆ ಕೆಳ ವರ್ಗದಜನ ವಿವೇಚನೆಯಿಂದಮತ ಚಲಾಯಿಸಬೇಕು ಎಂದುಬಿಎಸ್‌ಪಿ ಜಿಲ್ಲಾಧ್ಯಕ್ಷಕೆ.ಟಿ.ರಾಧಾಕೃಷ್ಣ ಹೇಳಿದರು. ಜಿಲ್ಲಾ ಸಹೋದರತ್ವ ಸಮಿತಿ ನಗರದಬಿಎಸ್‌ಪಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕನಕ ಜಯಂತಿಕಾರ್ಯಕ್ರಮದಲ್ಲಿಪಾಲ್ಗೊಂಡುಅವರು ಮಾತನಾಡಿದರು. ಕೆಳ ವರ್ಗದಜನದೌರ್ಜನ್ಯ ಮತ್ತುಶೋಷಣೆಯಿಂದಮುಕ್ತರಾಗಬೇಕು. ಸಮಾಜದಲ್ಲಿನಅಸಮಾನತೆಮತ್ತುಅಸ್ಪಶ್ಯತೆನಿವಾರಣೆಯಾಗಿಸಮತಾಸಮಾಜದನಿರ್ಮಾಣವಾಗಬೇಕು ಎಂಬುದು ಸಂವಿಧಾನ ಶಿಲ್ಪಿಯ ಆಶಯವಾಗಿತ್ತುಭಕ್ತಶ್ರೇಷ್ಠ ಕನಕದಾಸರೂಸಹ ಅದನ್ನೇ ಪ್ರತಿಪಾದಿಸಿದ್ದರು ಎಂದರು. ಆದರೆಸ್ವಾತಂತ್ರ್ಯ ಬಂದು ೭ ದಶಕಗಳಾದರೂ ಇನ್ನೂದೇಶದಲ್ಲಿಅಸಮಾನತೆ, ಅಸ್ಪೃಶ್ಯತೆ, ದೌರ್ಜನ್ಯ ಮತ್ತು ಶೋಷಣೆಗಳು ಮುಂದುವರೆಯುತ್ತಲೆ ಇವೇ.ಇದಕ್ಕೆ ಮೂಲ ಕಾರಣ ಕೆಳ ವರ್ಗದಜನಮೌಢ್ಯಮತ್ತುಮೂಢನಂಬಿಕೆಗಳಿಂದ ಹೊರಬರದಿರುವುದು ಹಾಗೂ ವಿವೇಕ ಮತ್ತು ವಿವೇಚನೆಯಿಂದ ಮತದಾನ ಮಾಡದಿರುವುದುಎಂದು ವಿಷಾಧಿಸಿದರು. ಕೆಳ ವರ್ಗದಜನಈಗಲಾದರೂಎಚ್ಚೆತ್ತು ಮೌಢ್ಯ ಮತ್ತು ಮೂಢನಂಬಿಕೆಯಿಂದಹೊರಬರಬೇಕು.ವಿವೇಕ ಮತ್ತು ವಿವೇಚನೆಯಿಂದ ಮತ ಚಲಾಯಿಸಬೇಕು.ಮೇಲ್ವರ್ಗದಜಾತಿಗಳಂತೆ ಉಪ ಪಂಗಡಗಳ ಭಿನ್ನಾಭಿಪ್ರಾಯವನ್ನು ಬದಿಗೊತ್ತಿಒಂದಾಗಬೇಕುಎಂದುಕಿವಿಮಾತು ಹೇಳಿದರು. ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದಬಿಎಸ್‌ಪಿ ತಾಲ್ಲೂಕು ಸಂಯೋಜಕಿಕೆ.ಎಸ್.ಮಂಜುಳಾ ಕನಕದಾಸರುತಮ್ಮ ಕೃತಿಗಳಿಂದ ಸಮಾಜವನ್ನುಪರಿವರ್ತನೆ ಮಾಡಿದಮಹಾತ್ಮರುಎಂದು ತಿಳಿಸಿದರು. ಅಧ್ಯಕ್ಷತೆವಹಿಸಿ ಮಾತನಾಡಿದಸಹೋದರತ್ವ ಸಮಿತಿಯಜಿಲ್ಲಾಧ್ಯಕ್ಷೆ ಕೆ.ಬಿ.ಸುಧಾಕನಕದಾಸರಂತಹಮಹಾತ್ಮರಚಿಂತನೆಮತ್ತು ಸಂದೇಶಗಳನ್ನು ನಾವು ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಸಲಹೆ ಮಾಡಿದರು. ಜಿಲ್ಲಾ ಸಹೋದರತ್ವ ಸಮಿತಿಸ್ಥಾಪನೆಗೊಂಡುಆರು ವರ್ಷಗಳಾಗಿದ್ದು, ಅಂದಿನಿಂದ…
ಚಿಕ್ಕಮಗಳೂರು: ಚಿತ್ರದುರ್ಗ ಎಂದರೆ ನೆನಪಾಗುವುದೇ ಅಲ್ಲಿನ ಕೋಟೆ ಹಾಗೂ ವೀರಮಹಿಳೆ ಒನಕೆ ಓಬವ್ವರ ಕಥೆ. ತನ್ನ ಗಂಡ ಮಾಡುವ ಕರ್ತವ್ಯದಲ್ಲಿ ತನಗೂ ಪಾಲಿದೆ ಎನ್ನುವ ಚಿಂತನೆಯಲ್ಲಿ ದೇಶಪ್ರೇಮ, ನಾಡಿನಪ್ರೇಮದಿಂದ ಹೋರಾಡಿ ಜೀವವನ್ನೇ ತ್ಯಾಗಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು. ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಒನಕೆ ಓಬವ್ವ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒನಕೆ ಓಬವ್ವರ ಕಥೆ ಕೇಳಿದ ಪ್ರತಿಯೊಬ್ಬರಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಯರಲ್ಲಿ ಆದರ್ಶ ಮಹಿಳೆ ಎನ್ನುವ ಮನೋಭಾವ ಮೂಡುತ್ತದೆ. ಅಂತಹ ವೀರಮಹಿಳೆಯರಿಂದಲೇ ನಮ್ಮ ದೇಶ ಸುಭದ್ರವಾಗಿದೆ ಎಂದು ಅವರು ಬಣ್ಣಿಸಿದರು. ಡಾ. ಶ್ರೀನಿವಾಸ್ ಮಾತನಾಡಿ, ವೀರವನಿತೆ ಒನಕೆ ಓಬವ್ವ ಹೈದರಾಲಿಯ ಸೈನಿಕರೊಂದಿಗೆ ಹೋರಾಡಿ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದವಳು. ಅಂತಹ ಎಷ್ಟೋ ವೀರವನಿತೆಯರ ಇತಿಹಾಸ ಜನರಿಗೆ ತಿಳಿದಿಲ್ಲ ಎಂದು ಹೇಳಿದರು. ಮನುಸ್ಮೃತಿಯಿಂದ ದೇಶದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿರಲಿಲ್ಲ. ಮಹಿಳೆಯರಿಗೆ ಸ್ವಾತಂತ್ರ್ಯ ಕಲ್ಪಿಸಿದ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ೧೮ನೇ ಶತಮಾನದ ಮೊದಲೇ ಇದ್ದಿದ್ದರೆ ಮಹಮ್ಮದ್ ಘಜ್ನಿ, ಘೋರಿ,…
ಚಿಕ್ಕಮಗಳೂರು: ದಾಸಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರು, ಸಾಹಿತ್ಯ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಮಹಾನ್ ದಾರ್ಶನಿಕ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಬಣ್ಣಿಸಿದರು. ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಲಾದ ಕನಕದಾಸ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವ್ಯಾಸರಾಯರ ಶಿಷ್ಯರಾದ ಕನಕದಾಸರು ವ್ಯಾಕರಣ, ತರ್ಕ , ಮೀಮಾಂಸೆ ಸಾಹಿತ್ಯವನ್ನು ಅಭ್ಯಸಿಸಿ ೫ ಮಹಾನ್ ಕಾವ್ಯಗಳನ್ನು ರಚಿಸಿದ್ದಾರೆ. ರಾಮಧಾನ್ಯಚರಿತವು ಬಹಳ ಪ್ತಸ್ತುತವಾಗಿದ್ದು, ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಈ ಕಾವ್ಯ ೧೫೬ ಪದ್ಯಗಳನ್ನು ಒಳಗೊಂಡಿದ್ದು, ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ ಕೃತಿ ಎಂದರು. ೧೫-೧೬ನೇ ಶತಮಾನದಲ್ಲಿಯೇ ಕನಕದಾಸರು ಕುಲಕುಲವೆಂದು ಹೊಡೆದಾಡದಿರಿ ಎನ್ನುವ ಐಕ್ಯತೆಯ ಸಂದೇಶ ಸಾರಿದ್ದು, ಪ್ರಸ್ತುತ ಅದನ್ನು ಅನುಸರಿಸಬೇಕಾದ ಅನಿವಾರ್ಯತೆಯಿದೆ ಎಂದರು.ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಯ ಮಾರ್ಗ ಒಂದೇ ಸಾಕು ಎನ್ನುವುದಕ್ಕೆ ಉಡುಪಿ ಮಠದಲ್ಲಿ ಕನಕನ ಕಿಂಡಿಯಲ್ಲಿ ಕೃಷ್ಙ ಅವರಿಗೆ ಒಲಿದ ಘಟನೆಯೇ ಸಾಕ್ಷಿ ಎಂದು ಅವರು ಹೇಳಿದರು. ಗಳಿಸಿದ್ದರಲ್ಲಿ ಪರರಿಗಾಗಿ ಮೀಸಲಿಡಬೇಕು, ಜಾತಿಯ ಮೂಲವನ್ನು ಪ್ರಶ್ನೆ ಮಾಡುವ ಮೂಲಕ ಸಮಾಜದಿಂದ ಜಾತಿವ್ಯವಸ್ಥೆಯನ್ಬು…
ಚಿಕ್ಕಮಗಳೂರುಎಕ್ಸ್‌ಪ್ರೆಸ್: ಬೇರೆ ಬೇರೆ ಕಾರಣಕ್ಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದ ದೇವನೂರು, ಚಿಕ್ಕದೇವನೂರು ಸಹಕಾರ ಸಂಘಗಳನ್ನು ನಾವು ರೈತರಿಗೆ ನೆರವಾಗಬೇಕು ಎನ್ನುವ ದೃಷ್ಠಿಯಿಂದ ಅದನ್ನು ಪುನರಾರಂಭಗೊಳಿಸಿ ಮೊದಲಬಾರಿಗೆ ೬೪ ಲಕ್ಷ ರೂ.ಗಳನ್ನು ೩೬ ಸದಸ್ಯರಿಗೆ ನೀಡಲಾಗುತ್ತಿದೆ ಎಂದು ಶಾಸಕರೂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೂ ಆದ ಸಿ.ಟಿ.ರವಿ ಹೇಳಿದರು. ಅವರು ಗುರುವಾರ ಚಿಕ್ಕದೇವನೂರು ಸಹಕಾರ ಸಂಘದಲ್ಲಿ ಸಾಲ ಸೌಲಭ್ಯ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಇದರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತೆ. ರಾಜಕಾರಣವನ್ನ ಚುನಾವಣೆ ಬಂದಾಗ ಮಾಡೋಣ, ಬಾಗಿಲಿನಿಂದ ಹೊರಗೆ ಮಾಡೋಣ, ಆದರೆ ಮುಖ ನೋಡಿ ಮಣೆ ಹಾಕದೆ ಯಾರ ದಾಖಲೆ ಸರಿ ಇರುತ್ತೆ ಅವರಿಗೆ ಸಾಲ ನೀಡಿ ಎಂದರು. ಸಹಕಾರ ಕ್ಷೇತ್ರ ಇರುವುದು ಜೋಡಿಸಲಿಕ್ಕೆ, ಅದರಿಂದ ಒಡೆಯುವಂತಾಗಬಾರದು. ಅದರಲ್ಲಿ ನಮಗೆ ನಂಬಿಕೆಯೂ ಇಲ್ಲ. ದುರ್ಬಳಕೆ ಮಾಡಬೇಕೆಂಬ ಆಸೆಯೂ ಇಲ್ಲ. ರೈತರಿಗೆ ಒಳ್ಳೆಯದಾಗಬೇಕು ಎನ್ನುವುದಷ್ಟೇ ನಮ್ಮ ಸದುದ್ದೇಶ, ನಿಡಘಟ್ಟ, ದೇವನೂರು, ಚಿಕ್ಕದೇವನೂರು, ನಾಗರಾಳು ಹಾಗೂ ಜೋಡಿ ಹೋಚಿಹಳ್ಳಿ ಪಂಚಾಯ್ತಿಗಳಲ್ಲಿ ಸಹ ಸಹಕಾರ ಸಂಘ ಪ್ರಾರಂಭವಾಗಲಿದೆ…
ಚಿಕ್ಕಮಗಳೂರುಎಕ್ಸ್‌ಪ್ರೆಸ್: ರಾಜಕಾರಣ ಎಂದರೆ ಒಡೆದು ಆಳುವವರು ಎನ್ನುವ ಒಂದು ಭಾವನೆ ಇದೆ. ನನಗೆ ಆ ತತ್ವದ ಮೇಲೆ ನಂಬಿಕೆ ಇಲ್ಲ. ಕೂಡಿಸಿ ಒಲಿಸಿಕೊಳ್ಳುವುದರಲ್ಲಿ ನಂಬಿಕೆ ಎಂದು ಶಾಸಕರೂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೂ ಆದ ಸಿ.ಟಿ.ರವಿ ಹೇಳಿದರು. ಬಿಜೆಪಿ ಯುವ ಮೋರ್ಚಾ ವತಿಯಿಂದ ತಾಲ್ಲೂಕಿನ ಲಕ್ಕುಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವ ಸಂಜೆ ಕಾರ್ಯಕ್ರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕ್ರೀಡೆ ಸಣ್ಣವರಿಂದ ದೊಡ್ಡವರ ವರೆಗೆ ಆನಂದ ತರುತ್ತದೆ. ನಾವು ರಾಜಕಾರಣ ಎಂದರೆ ಚುನಾವಣೆಯಿಂದ ಚುನಾವಣೆಗೆ ಮುಖ ತೋರಿಸುವವರಲ್ಲ. ರಾಜಕಾರಣ ಸಮಾಜವನ್ನು ಜೋಡಿಸುವ ಸಾಧನವಾಗಬೇಕು ಎಂದು ಭಾವಿಸಿದವರು ಎಂದರು. ಒಡೆದಾಳುವ ರಾಜಕಾರಣ ಮಾಡುವ ಜನವೇ ಬೇರೆ, ಅವರಿಗೆ ಜಾತಿ ಪ್ರಶ್ನೆ ದೊಡ್ಡದು ಮಾಡ್ತಾರೆ, ವೈಯಕ್ತಿ ಪ್ರತಿಷ್ಟೆ, ಕುಟುಂಬದ ಪ್ರಶ್ನೆಯನ್ನ ದೊಡ್ಡದು ಮಾಡ್ತಾರೆ. ಜಗಳವಾಡಿಸಲು ಏನು ದಾರಿ ಎಂದು ಹುಡುಕುತ್ತಾರೆ. ನಾವು ಕೂಡಿಸುವುದು ಹೇಗೆ ಎನ್ನುವುದನ್ನು ಯೋಚಿಸುತ್ತೇವೆ. ಹೀಗಾಗಿಯೇ ಯುವ ಮೋರ್ಚಾಕ್ಕೆ ಆಟ ಆಡೋಣ, ಪಕ್ಷ ಕಟ್ಟೋಣ ಎನ್ನುವ ಚಿಂತನೆ ಹೊಳಿಯಿತು ಎಂದು ತಿಳಿಸಿದರು. ಕಷ್ಟ…
ಚಿಕ್ಕಮಗಳೂರು: ಕಾನೂನು ತಿಳುವಳಿಕೆಯನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಾವುದೇ ಸಮಸ್ಯೆಗಳು ಎದುರಾದಲ್ಲಿ ಬಗೆಹರಿಸಲು ಧೈರ್ಯ ಹಾಗೂ ಸುಲಭವಾಗಲಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಬಿ.ವೆಂಕಟೇಶ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಹಾಗೂ ರೋಟರಿಕ್ಲಬ್ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ’ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು. ಜನಸಾಮಾನ್ಯರು ಕಾನೂನಿನ ಬಗ್ಗೆ ಅರಿತುಕೊಳ್ಳುವುದರೊಂದಿಗೆ ಕಾನೂನಿನಲ್ಲಿ ದೊರೆಯುವ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು. ಕೆಲವು ರಾಜೀ ಪ್ರಕರಣಗಳು ಇತ್ಯರ್ಥಗೊಳಿಸಲು ನ್ಯಾಯಾಲ ಯದಿಂದ ಸವಲತ್ತುಗಳನ್ನು ಒದಗಿಸಲಾಗಿದ್ದು ಅವುಗಳನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಅಂಗಾಂಗ ದಾನ ಮಹತ್ವದ ಕುರಿತು ಉಪನ್ಯಾಸ ನೀಡಿದ ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಎನ್. ಮಹೇಶ್ ಸಾವಿನ ನಂತರ ಮನುಷ್ಯನನ್ನು ನೆನಪಿಸಿಕೊಳ್ಳಬೇಕೆಂದಾದರೆ ಅಂಗಾಂಗ ದಾನದಿಂದ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ…
ಚಿಕ್ಕಮಗಳೂರು: ತಾಲ್ಲೂಕಿನಲ್ಲಿ ಸುಮಾರು ೩೨ ಸಾವಿರ ಜನಸಂಖ್ಯೆಯನ್ನು ಹೊಂದಿರುವ ಬಲಿಜ ಸಮುದಾಯಕ್ಕೆ ನಿವೇಶನ ಹಾಗೂ ೨ಎ ಮೀಸಲಾತಿಯನ್ನು ಒದಗಿಸಿ ಜನಾಂಗಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ತಾಲ್ಲೂಕು ಬಲಿಜ ಸಂಘ ಶಾಸಕ ಸಿ.ಟಿ.ರವಿಯವರನ್ನು ಮನವಿ ಸಲ್ಲಿಸಿ ಒತ್ತಾಯಿಸಿದರು. ನಗರದ ತಾಲ್ಲೂಕು ಕಚೇರಿಯಿಂದ ಎಂ.ಜಿ.ರಸ್ತೆ ಮುಖಾಂತರ ಮೆರವಣಿಗೆ ಸಾಗಿದ ಸಮುದಾಯದ ಹಿರಿಯರು, ಮಹಿಳೆಯರು ಹಾಗೂ ಮುಖಂಡರುಗಳು ಪಾಂಚಜನ್ಯ ಕಚೇರಿಯಲ್ಲಿ ಸಮಾವೇಶಗೊಂಡು ನಿವೇಶನ ಹಾಗೂ ೨ಎ ಮೀಸಲಾತಿ ಒದಗಿಸಬೇಕು ಎಂದು ಬುಧವಾರ ಸಂಜೆ ಶಾಸಕರಿಗೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ದೇವರಾಜ್ ಬಲಿಜ ಜನಾಂಗದಲ್ಲಿ ೨೧ ಉಪ ಪಂಗಡ ಗಳು ಒಳಗೊಂಡಿದೆ. ಬಳೆ, ಹೂವು, ಅರಿಶಿನ ಕುಂಕುಮ ವ್ಯಾಪಾರ ಮಾಡುವಂತಹ ಪಂಗಡವಾಗಿರುವ ಸಮಾಜಕ್ಕೆ ಸವಲತ್ತುಗಳನ್ನು ಒದಗಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಬಲಿಜ ಸಮಾಜಕ್ಕೆ ತನ್ನದೇಯಾದಂತಹ ಇದುವರೆಗೂ ಯಾವುದೇ ನಿವೇಶನ, ಸಮುದಾಯ ಭವನ, ಕಾಲೇಜು ಮತ್ತು ವಸತಿ ನಿಲಯಗಳು ಇರುವುದಿಲ್ಲ. ಆ ಹಿನ್ನೆಲೆಯಲ್ಲಿ ಸಮಾಜದ ಹಿರಿಯರು ಈ ಬಗ್ಗೆ ಹಲವು ಬಾರಿ ಮನವಿ…
ಚಿಕ್ಕಮಗಳೂರು: ಕಾಂಗ್ರೇಸ್ ಪಕ್ಷ ಅಂಬೇಡ್ಕರ್‌ರವರು ಜೀವಂತ ವಾಗಿದ್ದಾಗಲೂ ಅವಮಾನಿಸಿದೆ, ಸತ್ತ ಮೇಲೂ ಅವಮಾನಿಸಿದೆ ಎಂದು ಕೊಳ್ಳೆಗಾಲ ಶಾಸಕ ಮಹೇಶ್ ವಾಗ್ದಾಳಿ ನಡೆಸಿದರು. ಬಿಜೆಪಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಮೀಸಲಾತಿ ಹೆಚ್ಚಳ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಹಾಗೂ ಎಸ್ಸಿ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾಂಗ್ರೇಸ್‌ನವರು ಡಾ.ಬಿ.ಆರ್.ಅಂಬೇಡ್ಕರ್‌ರವರು ಸ್ಪರ್ಧಿಸಿದ ಪ್ರತಿ ಚುನಾವಣೆಯಲ್ಲಿಯೂ ಸೋಲಿಸಿ ಅವರನ್ನು ಅವಮಾನಿಸಿದರು. ಅವರ ಮರಣ ನಂತರ ಅವರ ದೇಹವನ್ನು ಗೌರವಯುತವಾಗಿ ಸಂಸ್ಕಾರ ಮಾಡಲು ದೆಹಲಿಯಲ್ಲಿ ಭೂಮಿ ನೀಡದೇ ಅವಮಾನಿಸಿದರು ಇವರನ್ನು ದಲಿತರು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂಬೇಡ್ಕರ್‌ರವರನ್ನು ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮಹಾ ಪರಿನಿರ್ವಾಹಣಾ ಸ್ಥಳ ಅಭಿವೃದ್ದಿ, ಪಂಚತೀರ್ಥಧಾಮಗಳ ಘೋಷಣೆ ಮತ್ತು ಅಭಿವೃದ್ದಿಗೊಳಿಸಿದೆ ಎಂದು ಹೇಳಿದರು. ೧೯೫೮ರಲ್ಲಿ ಜನಸಂಖ್ಯೆಗನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮೀಸಲಾತಿ ನೀಡಲಾಗಿತ್ತು. ತದ ನಂತರದ ದಿನಗಳಲ್ಲಿ ಆಡಳಿತ ನಡೆಸಿದ ಕಾಂಗ್ರೇಸ್ ಸರ್ಕಾರ ಮೀಸಲಾತಿ…
ಚಿಕ್ಕಮಗಳೂರು: ಯಾರೋ ಕೆಲವರು ಕೀಳಾಗಿ ಬಿಂಬಿಸುವ ಪ್ರಯತ್ನ ಮಾಡಿರಬಹುದು. ಆದರೆ ಕಾಂಗ್ರೆಸ್ ಕಾರ್ಯಾಧ್ಯಕ್ಷನಾಗಿ ತನ್ನ ತಪ್ಪಿಗೆ ಕ್ಷಮೆಯನ್ನು ಯಾಚಿಸದೆ ದುರಂಹಕಾರದ ವರ್ತನೆ ತೋರಿಸಿದ್ದಾರೆ ಹಾಗಾಗಿ ತಮ್ಮನ್ನು ತಾವು ಹಿಂದೂ ಎಂದು ಧರ್ಮದ ಪಟ್ಟಿಯಲ್ಲಿ ಯಾರ್ಯಾರು ಗುರುತಿಸಿಕೊಂಡಿದ್ದೀರೋ ಅವರ್ಯಾರು ಕಾಂಗ್ರೆಸ್‌ಗೆ ಓಟು ಹಾಕಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದೂ ಶಬ್ದದ ಅರ್ಥ ಅಶ್ಲೀಲವಾಗಿದೆ ಎಂಬ ಹೇಳಿಕೆಗೆ ಚಿಕ್ಕಮಗಳೂರು ನಗರದಲ್ಲಿ ಇಂದು(ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುವಿನ ಸಾಮರ್ಥ್ಯ ಏನೆಂಬುದನ್ನು ಸತೀಶ್ ಜಾರಕಿಹೊಳಿ ಮತ್ತು ಅವರ ಪಕ್ಷಕ್ಕೂ ತೋರಿಸಬೇಕು. ಈ ಮೂಲಕ ಒಡೆದಾಳುವ ನೀಚ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಬುದ್ದಿ ಕಲಿಸಬೇಕು ಎಂದು ತೀಕ್ಷವಾಗಿ ಪ್ರತಿಕ್ರಿಯಿಸಿದರು. ಸತೀಶ್ ಜಾರಕಿಹೊಳಿ ಹೀಗೆ ಹೇಳುವ ಮೂಲಕ ಹಿಂದು ಸಾಮ್ರಾಜ್ಯವನ್ನು ಸ್ಥಾಪಿಸಿದ ಶಿವಾಜಿ ಮಹಾರಾಜರಿಗೆ ಮತ್ತು ಮರಾಠ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಅಪಮಾನ ಮಾಡಿದ್ದಾರೆ. ಶಿವಾಜಿ ಮಹಾರಾಜರು ಮೊಗಲರ ವಿರುದ್ಧ ಸುಲ್ತಾನೆಟ್‌ಗಳ ವಿರುದ್ಧ ಹಿಂದುಗಳನ್ನು…