Subscribe to Updates
Get the latest creative news from FooBar about art, design and business.
- e-paper (18-07-2025) Chikkamagalur Express
- ನಿವೃತ್ತ ಪಿಂಚಣಿದಾರರಿಗೆ ಯಥಾವತ್ ಸೌಲಭ್ಯ ಪರಿಷ್ಕರಿಸಲು ಮನವಿ
- ಅಂಬಳೆಯಲ್ಲಿ ಅಂಬೇಡ್ಕರ್ ವಸತಿ ಶಾಲೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ
- e-paper (17-07-2025) Chikkamagalur Express
- ಶಾಲಾ ಕಟ್ಟಡಗಳ ದುರಸ್ಥಿಗೆ ಕ್ರಮ ವಹಿಸಲು ಸೂಚನೆ
- ಸಚಿವ ಪ್ರಿಯಾಂಕ್ ಖರ್ಗೆಗೆ ಆಪ್ತನ ಡ್ರಗ್ಸ್ ದಂಧೆ ಬಗ್ಗೆ ಗೊತ್ತಿಲ್ಲವೇ ….?
- e-paper (16-07-2025) Chikkamagalur Express
- ಗಿರಿ ಪ್ರದೇಶದ ಪ್ರವಾಸೋದ್ಯಮ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ
Author: chikkamagalur express
ಚಿಕ್ಕಮಗಳೂರು: : ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಅತ್ಯುತ್ತಮ ನರಶಸ್ತ್ರ ಚಿಕಿತ್ಸೆ, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಚಿಕ್ಕಮಗಳೂರು ನ್ಯೂರೋ ಸರ್ಜಿಕಲ್ ಸೆಂಟರ್‌ನ್ನು ಜ.೧೭ ರಂದು ಶುಕ್ರವಾರ ನಗರದ ಕೆಎಸ್‌ಆರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶುಭಾರಂಭವಾಗಲಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಕೆ.ಆರ್.ಎಸ್ ಆಸ್ಪತ್ರೆ ವೈದ್ಯ ಡಾ.ಯೋಗೀಶ್ ಅವರು ಇದರ ಉದ್ಘಾಟನೆಯನ್ನು ಹಿರಿಯ ನರರೋಗ ತಜ್ಞ ಮತ್ತು ಬೆನ್ನುಮೂಳೆ ತಜ್ಞ ವೈದ್ಯ ಡಾ.ನಾರಾಯಣ ಪಣಜಿ ನೆರವೇರಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್‌ಬಾಬು ನರರೋಗ ತಜ್ಞ ಡಾ.ಅವಿನಾಶ್.ಎಸ್.ಕೆ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಚಿಕ್ಕಮಗಳೂರು ನಗರದ ಕೆಆರ್‌ಎಸ್ ಮಲ್ಟಿ ಸ್ಪೆ?ಲಿಟಿ ಆಸ್ಪತ್ರೆಯು ಹೈಟೆಕ್ ನ್ಯೂರೋ ಐಸಿಯು ಮತ್ತು ಸಂಪೂರ್ಣ ಸುಸಜ್ಜಿತ ಅತ್ಯಾಧುನಿಕ ಆಪರೇಟಿಂಗ್ ಥಿಯೇಟರ್ ಅನ್ನು ಒಳಗೊಂಡಿದ್ದು, ವೈದ್ಯಕೀಯ ಶ್ರೇಷ್ಠತೆ ಮತ್ತು ಸಹಾನುಭೂತಿಯ ಆರೈಕೆಯನ್ನು ನೀಡಲು ಹೆಸರುವಾಸಿಯಾಗಿದೆ ಎಂದು ಮಾಹಿತಿ ನೀಡಿದರು. ನೂತನವಾಗಿ ಪ್ರಾರಂಭವಾಗುತ್ತಿರುವ ಚಿಕ್ಕಮಗಳೂರು ನ್ಯೂರೋ ಸರ್ಜಿಕಲ್ ಸೆಂಟರ್ ಬೆನ್ನುಮೂಳೆಯ ಶಸ್ತ್ರ ಚಿಕಿತ್ಸೆಗಳು,…
ಚಿಕ್ಕಮಗಳೂರು: ಬೀರೂರಿನಿಂದ ಗುಜರಾತ್‌ಗೆ ಸಾಗಿಸಲು ತುಂಬಿದ್ದ ೩೫೦ ಚೀಲ ಅಡಿಕೆಯನ್ನು ಹೊಳಲ್ಕೆರೆಯ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಲು ಯತ್ನಿಸಿದ ಲಾರಿ ಚಾಲಕ ,ಮತ್ತು ಕ್ಲೀನರ್‌ನನ್ನು ಪತ್ತೇಹಚ್ಚಿ ೧.೨೨.೮೨.೫೦೦/- ರೂ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಳ್ಳುವಲ್ಲಿ ಬೀರೂರು ಠಾಣಾ ಪೋಲಿಸರು ಯಶಸ್ವಿಯಾಗಿದ್ದಾರೆ. ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಾಜಿ ರೋಡ್ ವೇಸ್ ನ ಮಾಲೀಕರಾದ ದುಲಾರಾಮ್ ರವರ ಮೂಲಕ ಬೀರೂರಿನ ದೇವಗಿರಿ ಟ್ರೇಡರ್ಸ್‌ನಲ್ಲಿ ಡಿ.೧೨ರಂದು ತಲಾ ೭೦ ಕೆ.ಜಿ ತೂಕದ ೩೫೦ ಚೀಲ ಅಡಿಕೆ ಲಾರಿಯಲ್ಲಿ ತುಂಬಿಸಿ ಗುಜರಾತ್ ರಾಜ್ಯದ ವಲ್ಸಾದ್ ಸ್ಥಳಕ್ಕೆ ತಲುಪಿಸಲು ಕಳೂಹಿಸಲಾಗಿತ್ತು. ಲಾರಿಯ ಚಾಲಕನಾದ ಮೊಹಮ್ಮದ್ ಸುಬಾನ್ ಹಾಗೂ ಲಾರಿ ಕಂಡಕ್ಟರ್ ಮೊಹಮ್ಮದ್ ಫಯಾಜ್ ಇಬ್ಬರು ಸೇರಿಕೊಂಡು ಅಡಿಕೆಯನ್ನು ಗುಜರಾತ್‌ಗೆ ತೆಗೆದುಕೊಂಡು ಹೋಗದೆ ವಂಚಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿಯೋ ಹೋಗಿರುವ ಬಗ್ಗೆ ಬೀರೂರು ಠಾಣೆಗೆ ಬಂದ ದೂರನ್ನಾಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಲುಪೊಲೀಸ್ ಅಧೀಕ್ಷಕ ಡಾ|| ವಿಕ್ರಂ ಅಮಟೆ ತರೀಕೆರೆ ಉಪ ವಿಭಾಗದ…
ಚಿಕ್ಕಮಗಳೂರು: ಪ್ರೌಢಾವಸ್ಥೆಯ ಮಹಿಳೆಕುಟುಂಬದ ಆಧಾರಸ್ತಂಭ. ಆಕೆ ಆರೋಗ್ಯವಾಗಿದ್ದರೆ ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸಿರುತ್ತದೆ ಎಂದು ಆಯುರ್ವೇದ ಯೋಗತಜ್ಞೆ ಡಾ|| ಗೌರಿವರುಣ್ ಅಭಿಪ್ರಾಯಿಸಿದರು. ಅಕ್ಕಮಹಾದೇವಿ ಮಹಿಳಾ ಸಂಘದ ಎಂ.ಜಿ.ರಸ್ತೆ ಮತ್ತು ಮಧುವನ ಬಡಾವಣೆ ಸದಸ್ಯರನ್ನೊಳಗೊಂಡ ಶರಣೆ ಮೋಳಿಗೆಮಹಾದೇವಿ ತಂಡ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ‘ಬನದ ಹುಣ್ಣಿಮೆ’ ಕಾರ್‍ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯ, ಯೌವನ, ಪ್ರೌಡಾವಸ್ಥೆ, ಮುಪ್ಪು ನಾಲ್ಕು ಘಟ್ಟಗಳಲ್ಲಿ ಪ್ರೌಡಾವಸ್ಥೆ ಪ್ರಮುಖ. ಈ ಹಂತದ ಮಹಿಳೆಯರಿಗೆ ಇಲ್ಲಿ ನೆರೆದಿದ್ದು ಅವರ ಆರೋಗ್ಯ ಕಾಳಜಿಯ ವಿಶ್ಲೇಷಣೆ ಸೂಕ್ತ. ಮಕ್ಕಳು, ಪತಿ, ವೃದ್ಧಾಪ್ಯದ ಅತ್ತೆ-ಮಾವ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರ ಆಗುಹೋಗುಗಳ ಬಗ್ಗೆ ಗಮನಹರಿಸಬೇಕಾದ ಅನಿವಾರ್‍ಯತೆ ಯಜಮಾನಿಗೆ ಇರುತ್ತದೆ. ಒತ್ತಡ-ಆತಂಕ ಮಾಡಿಕೊಂಡರೆ ಆರೋಗ್ಯಕ್ಕೆ ಮಾರಕ ಎಂದವರು ಎಚ್ಚರಿಸಿದರು ರಾಸಾಯನಿಕ ವಸ್ತುಗಳು ಹೆಚ್ಚಾಗಿರುವ ಸೋಪು, ಪೌಡರ್, ಶ್ಯಾಂಪೂ, ಬಟ್ಟೆಗಳೂ ಸೇರಿದಂತೆ ಅತಿಯಾದ ಸೌಂದರ್‍ಯವರ್ಧಕಗಳ ಬಳಕೆಯಿಂದ ಮಹಿಳೆಯರ ಹಾರ್ಮೋನ್‌ಗಳ ಮೇಲೆ ವ್ಯತಿರಿತ್ಯ ಪರಿಣಾಮ ಬೀರುತ್ತದೆ. ಬ್ರಸ್ಟ್-ಗರ್ಭಕೋಶದ ಕ್ಯಾನ್ಸರ್ ಮಹಿಳೆಯರಿಗೆ ಬರುವ ಸಾಧ್ಯತೆಗಳಿವೆ. ಕಾಲ ಕಾಲಕ್ಕೆ ಆರೋಗ್ಯ…
ಚಿಕ್ಕಮಗಳೂರು: ತೃಪ್ತಿ ಮತ್ತು ಮಾನವೀಯತೆ ಎಂಬೆರಡು ಮೌಲ್ಯಗಳನ್ನು ಬದುಕಿನಲ್ಲಿ ಎಲ್ಲರೂ ಅನುಸರಿಸಿದರೆ ಸಮಾಜದಲ್ಲಿ ಶಾಂತಿ-ನೆಮ್ಮದಿ-ಸೌಹಾರ್ದತೆ ಮೂಡುತ್ತದೆ ಎಂದು ಕರ್ನಾಟಕ ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷಹೆಗ್ಡೆ ಅಭಿಪ್ರಾಯಿಸಿದರು. ಶಿರವಾಸೆಯ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣಮಹೋತ್ಸವ ಸಮಾರಂಭವನ್ನು ಶಖರ್‌ಶೆಟ್ಟಿ ಸಭಾಮಂಟಪದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಬಹುತೇಕ ಅವ್ಯಸ್ಥೆಗಳಿಗೆ ಲಂಚಾ ಮತ್ತು ಸ್ವಾರ್ಥತತೆ ಕಾರಣವೆಂದು ಬೊಟ್ಟುಮಾಡಿದರು. ಜೀವನಪಥದಲ್ಲಿ ಮಾನವೀಯತೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಲಂಚ ತೆಗೆದುಕೊಳ್ಳುವುದರ ಜೊತೆಗೆ ಲಂಚ ಕೊಡುವುದು ಅಪರಾಧ ಎಂಬುದನ್ನು ಅರಿಯಬೇಕು. ಸರಿದಾರಿಯಲ್ಲಿ ನಡೆಯುವ ಸಂಕಲ್ಪವನ್ನು ವಿದ್ಯಾರ್ಥಿ ಯುವಜನತೆ ಮಾಡಿದರೆ ಮಾತ್ರ ದೇಶಕ್ಕೆ ಭವಿಷ್ಯವಿದೆ ಎಂದರು. ಹಲವಾರು ಹುದ್ದೆಗಳಲ್ಲಿ ಕಾರ್‍ಯನಿರ್ವಹಿಸಿದರೂ ಸಮಾಜದ ಆಗು-ಹೋಗುಗಳ ಬಗ್ಗೆ ಗೊತ್ತಿರದ ಕೂಪಮಂಡೂಕದಂತೆ ಇದ್ದ ತಾವು ಲೋಕಾಯುಕ್ತಕ್ಕೆ ಬಂದಮೇಲೆ ಸಮಾಜದಲ್ಲಿ ನಡೆಯುವ ಅನ್ಯಾಯ ಗೊತ್ತಾಯಿತು. ಸಂವಿಧಾನದ ಸಂಸ್ಥೆಗಳಿಂದಲೂ ವಂಚನೆ ನೋಡುವಂತಾಯಿತು. ಇದಲ್ಲಾ ವ್ಯಕ್ತಿಗಳ ತಪ್ಪಲ್ಲ. ಸಮಾಜದ ತಪ್ಪು ಎಂದು ವಿಶ್ಲೇಷಿಸಿದ ಸಂತೋಷಹೆಗ್ಡೆ, ಅಧಿಕಾರ ಮತ್ತು ಶ್ರೀಮಂತಿಕೆ ಪೂಜಿಸುವ ಸಮಾಜ ನಮ್ಮದೆಂದರು. ಒಳ್ಳೆಯ ಕೆಲಸ ಮಾಡಿದವನ್ನು ಗೌರವಿಸಿ ಕೆಟ್ಟಕೆಲಸ ಮಾಡಿದವರನ್ನು ದೂರವಿಡುವ…
ಚಿಕ್ಕಮಗಳೂರು : ಬಡವರ ಮನಸ್ಸು ಖುಷಿಯಾದರೆ ನೂರು ಚಂಡಿಕಯಾಗ ಮಾಡಿದ ಫಲ ಸಿಗುತ್ತದೆ ಎಂದು ಗೌರಿಗದ್ದೆ ಶ್ರೀಕ್ಷೇತ್ರದ ಅವಧೂತ ಶ್ರೀವಿನಯ ಗುರೂಜೀ ಅಭಿಪ್ರಾಯಿಸಿದರು. ಶಿರವಾಸೆ ವಿವೇಕಾನಂದ ವಿದ್ಯಾಸಂಸ್ಥೆ ೫೦ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಆಯೋಜಿಸಿರುವ ಎರಡುದಿನಗಳ ಸುವರ್ಣಮಹೋತ್ಸವ ಸಮಾರಂಭದಲ್ಲಿ ಇಂದು ಗುರುಶಿಷ್ಯರ ಸಮಾಗಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ತಿರುಗಾಟ, ವೇಷಭೂಷಣ, ಇಂಟರ್‌ನೆಟ್, ಮೊಬೈಲ್ ಸೇರಿದಂತೆ ನಾವು ಅನಗತ್ಯವಾಗಿ ನಿತ್ಯ ಮಾಡುವ ವೆಚ್ಚವನ್ನು ನಿಯಂತ್ರಿಸಿ ಅದೇ ಹಣವನ್ನು ಶಾಲೆ, ದೇವಸ್ಥಾನ, ಬಡವರ ಮನೆ ನಿರ್ಮಾಣಕ್ಕೆ ನೀಡಿದರೆ ಹೆಚ್ಚು ಉಪಯೋಗವಾಗುತ್ತದೆ. ಇವೆಲ್ಲವೂ ಚೆಂದ ಮಾಡಬಹುದು. ಇದೇ ನಿಜವಾದ ದೇವರಸೇವೆ. ಸನಾತನ ಧರ್ಮತತ್ತ್ವವು ಪರೋಪಕಾರವನ್ನೆ ಪ್ರತಿಪಾದಿಸುತ್ತದೆ ಎಂದರು. ನಮ್ಮ ದೇಹ ಬೆಳೆದರೂ ಅದೇ ಪ್ರಮಾಣದಲ್ಲಿ ಬುದ್ಧಿ ಬೆಳೆದಿಲ್ಲ. ದೇಶದೆಲ್ಲೆಡೆ ಬಹುತೇಕ ಎಲ್ಲ ಮಹಾಪುರುಷರ ಹೆಸರಿನಲ್ಲಿ ಬಾರ್‌ಗಳಿವೆ. ಆದರೆ ಇಬ್ಬರ ಹೆಸರಿನಲ್ಲಿ ಮಾತ್ರ ಬಾರ್ ತೆರೆದಿಲ್ಲ. ಅವೆಂದರೆ ಒಂದು ಮಹಾತ್ಮಾಗಾಂಧಿ, ಇನ್ನೊಂದು ಸ್ವಾಮಿವಿವೇಕಾನಂದ. ಏಕೆಂದರೆ ಈ ಹೆಸರುಗಳಿಗೆ ಪಾವಿತ್ರ್ಯ ಇದೆ ಎಂದರು. ಅಹಂಕಾರ ಮತ್ತು ಅಜ್ಞಾನ ಮನುಷ್ಯರಲ್ಲಿ…
ಚಿಕ್ಕಮಗಳೂರು: ನಗರದ ಎಂ.ಜಿ.ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಬನಶಂಕರಿ ಅಮ್ಮನವರ ಬನದ ಹುಣ್ಣಿಮೆಯ ಜಾತ್ರಾಮಹೋತ್ಸವ ಸೋಮವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ದೇವಾಂಗ ಸಂಘ ಮತ್ತು ಬನಶಂಕರಿ ಮಹಿಳಾ ಸಂಘದ ವತಿಯಿಂದ ಆಯೋಜಿಸಿದ್ದ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಪಾಲ್ಗೊಳ್ಳುವ ಮೂಲಕ ಬನಶಂಕರಿ ದೇವಿಯ ಕೃಪೆಗೆ ಪಾತ್ರರಾದರು. ದೇವಾಂಗ ಸಂಘದ ಅಧ್ಯಕ್ಷ ಭಗವತಿಹರೀಶ್ ಮಾತನಾಡಿ ದೇವಾಂಗ ಸಮಾಜದ ಕುಲದೇವತೆ ಬನಶಂಕರಿ ಅಮ್ಮನವರ ೧೦ ನೇ ವರ್ಷದ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದ್ದು, ವಿಶೇಷ ಪೂಜೆ, ಹೋಮ, ಮದ್ಯಾಹ್ನ ಅನ್ನ ಸಂತರ್ಪಣೆ ನೆಡೆಸಲಾಗುತ್ತಿದ್ದು, ಸಂಜೆ ೫ ಗಂಟೆಗೆ ರಾಜ ಬೀದಿಗಳಲ್ಲಿ ಬನಶಂಕರಿ ಅಮ್ಮನವರ ಉತ್ಸವ ಮೆರವಣಿಗೆ ಮತ್ತು ೮ ಗಂಟೆಗೆ ಪ್ರಸಾದ ವಿತರಿಸಲಾಗುವುದು, ಅನಂತ ಶರ್ಮ ಅವರ ನೇತೃತ್ವದಲ್ಲಿ ಕುಲದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಗಣಪತಿ ಪೂಜೆ, ಬನಶಂಕರಿ ಹೋಮ ಮಂತ್ರಗಳ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ೧ ಗಂಟೆಯ ಪೂರ್ಣಾಹುತಿ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು ಎಂದು ತಿಳಿಸಿದರು. ದೇವಾಂಗ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ್ ಮಾತನಾಡಿ ದೇವಾಂಗ…
ಚಿಕ್ಕಮಗಳೂರು; ಸರಕಾರಿ ಶಾಲಾ, ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಹೆಚ್ಚು. ಅವರು ನಾಟಿ ಹಣ್ಣಿದ್ದಂತೆ ಸಿಹಿ ಜಾಸ್ತಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು. ನಗರದ ಜ್ಯೂನಿಯರ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಸಹಪಠ್ಯ ಚಟುವಟಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ ಸರಕಾರಿ ಜ್ಯೂನಿಯರ್ ಕಾಲೇಜು ಜಿಲ್ಲೆಯ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದು. ಇಲ್ಲಿನ ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಇಲ್ಲಿ ಓದಿದವರು ಸಮೃದ್ಧಬದುಕು ಕಟ್ಟಿಕೊಂಡಿದ್ದಾರೆ. ಸರಕಾರಿ ಶಾಲೆಯಲ್ಲಿ ಓದಿದ ಅಬ್ದುಲ್‌ಕಲಂ, ವಿಶ್ವೇಶ್ವರಯ್ಯ ಮತ್ತಿತರೆ ಗಣ್ಯರು ಜನಮಾನಸದಲ್ಲಿ ನೆಲಯೂರಲು ಸರಕಾರಿ ಶಾಲಾ, ಕಾಲೇಜುಗಳೇ ಮೂಲ ಕಾರಣ ಎಂದು ಹೇಳಿದರು. ವಿಧಾಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ವಿದ್ಯಾದದಾತಿ ವಿನಯಂ ಎನ್ನುವಂತೆ ವಿದ್ಯೆ ಕಲಿಯುತ್ತಿರುವ ವಿದ್ಯಾರ್ಥಿಗಳು ವಿನಯ ಬೆಳೆಸಿಕೊಳ್ಳಿ. ೩೮ ವರ್ಷದ ಹಿಂದೆ ಪಿಯುಸಿ ಓದುತ್ತಿದ್ದ ದಿನಗಳು ಇಂದು ನೆನಪಾಗುತ್ತಿದೆ. ಓದು ಒಕ್ಕಾಲು, ಬುದ್ದಿ ಮುಕ್ಕಾಲು ಹಿಂದಿನ ಗಾದೆ ಇಂದು ಒಕ್ಕಲು ಓದು ಮುಕ್ಕಾಲು ಬುದ್ದಿ ಎಂಬುದು ಈಗಿನ ಗಾದೆ ಎಂದರು.…
ಚಿಕ್ಕಮಗಳೂರು: ಕ್ರೀಡಾಕೂಟಗಳು ಸ್ನೇಹ ಸಂಬಂಧ ಗಟ್ಟಿಗೊಳಿಸಿ ಕ್ರೀಡಾ ಮನೋಭಾವ ಬೆಳೆಸುವಂತೆ ಮಾಡಲಿ ಎಂದು ಎಲ್‌ಐಸಿ ಉಡುಪಿ ವಿಭಾಗೀಯ ಹಿರಿಯ ವ್ಯವಸ್ಥಾಪಕ ರಾಜೇಶ್‌ಮುಧೋಳ್ ಹೇಳಿದರು. ನಗರದ ರಾಮನಹಳ್ಳಿ ಡಿಎಆರ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಎಲ್‌ಐಸಿ ವಿವಿಧ ಶಾಖೆಗಳ ಜಿಲ್ಲಾಮಟ್ಟದ ಮಲ್ನಾಡ್ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು ಡಿವಿಜನ್ ಹಂತದ ಕ್ರೀಡಾಕೂಟ ನಡೆಯುತ್ತಿದೆ. ಕಳೆದ ವರ್ಷದಂತೆಯೇ ಈಬಾರಿಯೂ ಉತ್ತಮ ಪ್ರದರ್ಶನ ನೀಡಿ. ಕ್ರೀಡಾ ಪರಿಶ್ರಮ, ಸಾಧನೆ ಅದು ಎಲ್‌ಐಸಿ ನ್ಯೂ ಬ್ಯುಸಿನೆಸ್ ಮತ್ತು ಆಡಳತದಲ್ಲೂ ಹೊರಹೊಮ್ಮಲಿ ಎಂದರು. ಎಲ್‌ಐಸಿ ಯ ಮೂರು ಹಂತದ ಅಕಾರಿ ಸಿಬ್ಬಂದಿ ಒಟ್ಟಾಗಿ ಸೇರಲು ಕ್ರೀಡಾ ಕೂಟಗಳು ಒಂದು ಉತ್ತಮ ವೇದಿಕೆ ಎಂದರು. ಎಂ.ಎನ್.ಚರಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಲ್ನಾಡ್ ಕಪ್ ೩ ನೇ ಬಾರಿ ನಡಯುತ್ತಿದೆ. ೨೦೨೨ ರಲ್ಲಿ ನಾನು ಮತ್ತು ಮೂಡಿಗೆರೆ ಶಾಖೆಯ ಮಂಜುನಾಥ್ ಸೇರಿ ಕ್ಲಬ್‌ನಲ್ಲಿ ಕ್ರೀಡಾಕೂಟದ ಬಗ್ಗೆ ಆಲೋಚಿಸಿದ್ದವು. ಅದು ಮುಂದುವರಿದು ಮಲೆನಾಡು ಕಪ್ ಕ್ರಿಕೆಟ್ ಆಟದಿಂದ ಕ್ರೀಡಾಕೂಟ ಶುರುವಾಯಿತು. ಈಗ ೨೦೨೪…