ALSO FEATURED IN

ಚಾರ್ಮಾಡಿ ಘಾಟಿಯಲ್ಲಿ ಜಲಪಾತಗಳ ಸೊಬಗು ಅನಾವರಣ

Spread the love

ಚಿಕ್ಕಮಗಳೂರು: ಮಲೆನಾಡು ಎಂದರೆ ಕಣ್ಮುಂದೆ ಬರುವುದು ಸೌಂದರ್ಯ, ಬೆಟ್ಟ-ಗುಡ್ಡಗಳ ಸಾಲು. ಬಾನಿಗೆ ಮುತ್ತಿಕ್ಕುವ ಮಂಜಿನ ರಾಶಿ. ನಿರಂತರ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ ಚಾರ್ಮಾಡಿ ಘಾಟಿಯ ಸೊಬಗನ್ನು ಇಮ್ಮಡಿಗೊಳಿಸಿದೆ.

ಇಳೆಗೆ ಹಸಿರ ಹೊದಿಕೆ, ಮುಗಿಲೆತ್ತರದ ಬೆಟ್ಟಗುಡ್ಡಗಳು, ರಸ್ತೆಯ ಉದ್ದಕ್ಕೂ ದಟ್ಟ ಮಂಜಿನ ಕಣ್ಣಾಮುಚ್ಚಾಲೆ ಆಟ. ಹಸಿರ ವನಸಿರಿಯ ನಡುವೆ ಸಾಗುವ ಬೆಳ್ಮುಗಿಲ ಸಾಲು. ಆಗೊಮ್ಮೆ, ಈಗೊಮ್ಮೆ ಇಣುಕುವ ಸೂರ್ಯ ರಶ್ಮಿಗೆ ನಾಚಿ ನೀರಾಗುವ ಮಂಜು. ಘಾಟಿಯಲ್ಲಿ ಜಲಧಾರೆಯ ಜಲಪಾತದ ಸೊಬಗು ಇವುಗಳು ಮಲೆನಾಡಿನಲ್ಲಿ ಈಗ ದೃಶ್ಯ ಕಾವ್ಯವೇ ಮೇಳೈಸಿರುವುದು ಕಂಡು ಬರುತ್ತದೆ.

ಪ್ರಕೃತಿಯ ತವರು ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಂತೂ ನಿಸರ್ಗದ ಸೊಬಗು ಅನಾವರಣ ಗೊಂಡಿದೆ. ಬೆಟ್ಟದ ಮೇಲಿಂದ ಝುಳುಝಳು ನೀನಾದದೊಂದಿಗೆ ಹರಿದು ಬರುತ್ತಿರುವ ಜಲಪಾತಗಳು ಹೊಸ ಲೋಕವನ್ನೇ ಸೃಷ್ಠಿಸಿವೆ. ಇಲ್ಲಿ ಉಗಮಗೊಂಡಿರುವ ಜಲಪಾತಗಳಿಗೆ ಜೀವಕಳೆ ಬಂದಿದ್ದು,ಝುಳು ಝುಳು ನೀನಾದದೊಂದಿಗೆ ಹಾಲ್ನೊರೆಯಂತೆ ಹರಿದು ಬರುತ್ತಿರುವ ಜಲಪಾತವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.

ಇಲ್ಲಿ ಸೃಷ್ಟಿಯಾಗಿರುವ ದೃಶ್ಯಕಾವ್ಯವನ್ನು ವರ್ಣಿಸಲಸದಳ ಹಾಗಾಗಿ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಪ್ರವಾಸಿಗರು ಸೆರೆಹಿಡಿದುಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.

ಮಳೆಗಾಲ ಆರಂಭವಾಯಿತ್ತೆಂದರೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿಯ ಸೌಂದರ್ಯವನ್ನ ವರ್ಣಿಸಲು ಪದಗಳೇ ಸಾಲದು. ನದಿಗಳು ಜೀವ ಕಳೆಯನ್ನು ಪಡೆದುಕೊಂಡರೆ, ಘಾತಿಯ ಬಂಡೆಗಳ ನಡುವೆ ನುಸಿಳಿಬರುವ ಜಲಪಾತ ಪ್ರಕೃತಿಗೆ ಮಾಡಿದ ಕ್ಷೀರಧಾರೆಯಂತೆ ಭಾಸವಾಗುತ್ತೆ. ನಿರಂತರ ಮಳೆಯ ಆಗಮನಕ್ಕೆ ಬೆಟ್ಟಗಳು ಸಾಲು ಹಸಿರೊದ್ದು ಮಲಗಿವೆ.

ಶಿಖರದಿಂದ ರಭಸವಾಗಿ ಚಿಮ್ಮುವ ಜಲಪಾತಗಳು ಕಣ್ಣಿಗೆ ತಂಪು ಮನಕ್ಕೆ ಮುದ ನೀಡುತ್ತಿವೆ ಮುಂಗಾರಿನ ಸಿಂಚನಕ್ಕೆ ಚಾರ್ಮಾಡಿ ತುಂಬೆಲ್ಲಾ ಜಲಪಾತಗಳ ಚಿತ್ತಾರವೇ ಅನಾವರಣಗೊಂಡಿದೆ.

Unveiling the beauty of waterfalls at Charmadi Ghati

Facebook
X
WhatsApp
Telegram
Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

Spread the love

ಚಿಕ್ಕಮಗಳೂರು: ಕವಿತೆಗಳು ಮಾನಸಿಕವಾಗಿ ಒಂದು ಅನುಭವ ಶೋಧಕ್ಕೆ ದಾರಿ ತೆರೆದು ಕೊಡುತ್ತವೆ; ಹಾಗೆಯೇ ಅವು ಹೃದಯದಲ್ಲಿ ವೈವಿಧ್ಯತೆಯ ಭಾವನೆಗಳನ್ನು ಮೀಟುತ್ತಾ…

Spread the love

ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ…

[t4b-ticker]
Exit mobile version