ALSO FEATURED IN

ಶೃಂಗೇರಿಯಲ್ಲಿ ವರುಣನ ಆರ್ಭಟ ತುಂಗಾನದಿಯಲ್ಲಿ ಪ್ರವಾಹ

Spread the love

ಶೃಂಗೇರಿ: ಶೃಂಗೇರಿ ತಾಲ್ಲೂಕಿನಲ್ಲಿ ಮಂಗಳವಾರ ಶೃಂಗೇರಿಯಲ್ಲಿ ಮಳೆ ಸುರಿದಿದ್ದರಿಂದ ತುಂಗಾನದಿಯಲ್ಲಿ ಪ್ರವಾಹ ಉಂಟಾಗಿದೆ. ಶೃಂಗೇರಿಯಲ್ಲಿ ಇಲ್ಲಿಯವರೆಗೆ ೧೩೮ ಸೆಂ.ಮೀ ಮಳೆಯಾಗಿದೆ. ಶೃಂಗೇರಿಯಲ್ಲಿ ೧೬.೫ ಸೆಂ.ಮೀ, ಕಿಗ್ಗಾದಲ್ಲಿ ೨೫.೭ ಸೆಂ.ಮೀ, ೨೮ ಸೆಂ.ಮೀ ಮಳೆಯಾಗಿದೆ.

ಭೀಕರ ಮಳೆಯಿಂದ ಶೃಂಗೇರಿಯಿಂದ ಮಂಗಳೂರು ಮಾರ್ಗವಾದ ನೆಮ್ಮಾರ್‌ನಲ್ಲಿ ರಸ್ತೆ ನೀರಿಂದ ಆವೃತಗೊಂಡು ರಸ್ತೆ ಸಂಚಾರ ಸ್ಥಗಿತ ಉಂಟಾಗಿದೆ. ಶೃಂಗೇರಿಯಲ್ಲಿ ಪ್ರವಾಸಿಗರಿಲ್ಲದೆ ಭೀಕೊ ಎನ್ನುತ್ತೀದೆ.

ತುಂಗಾನದಿ ಉಕ್ಕಿ ಹರಿದು ಶಾರದ ಪೀಠದ ಗುರುಗಳಾದ ಭಾರತೀತೀರ್ಥ ಸ್ವಾಮಿಜೀಯವರ ಸ್ನಾನ ಘಟ್ಟ ಹಾಗೂ ಸಂದ್ಯಾವಂದನೆ ಮಂಟಪ ಮುಳುಗಿದೆ. ಪಟ್ಟಣದಲ್ಲಿ ಭಾರಿ ಮಳೆಯಿಂದ ಗ್ರಾಮೀಣ ಪ್ರದೇಶದ ಜನರು ಹಾಗೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪರ ವಹಿವಾಟು ಕಡಿಮೆ ಆಗಿದೆ.

ತಾಲ್ಲೂಕಿನ ಭೀಕರ ಮಳೆಯಿಂದ ಹಲವು ಕಡೆ ನೀರಿನಿಂದ ಆವೃತ್ತಗೊಂಡು ನೆಮ್ಮಾರ್, ಕೆರೆಕಟ್ಟೆ, ಕುರಬಕೇರಿ, ಭಾರತೀತೀರ್ಥ ರಸ್ತೆ, ಗಾಂಧಿ ಮೈದಾನ, ವಿದ್ಯಾರಣ್ಯಪುರ ರಸ್ತೆ, ಕಿಕ್ರೆ ಹಳ್ಳ ಸೇತುವೆ ಮೇಲೆ, ಕೆರೆಕಟ್ಟೆಯ ಗುಲುಗುಂಜಿ ಮನೆ ರಸ್ತೆ ನೀರಿನಿಂದ ತುಂಬಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಅತಿಯಾದ ಮಳೆಯ ಕಾರಣ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜಾ ಘೋಷಿಸಲಾಗಿದೆ.

ಬಾರಿ ಮಳೆಯಿಂದ ಕುರಬಕೇರಿ ಮತ್ತು ಗಾಂಧಿ ಮೈದಾನದ ಅಂಗಡಿಗಳಿಗೆ ನೀರು ನುಗ್ಗಿ ಅಪಾರ ನಷ್ಟವನ್ನುಂಟು ಮಾಡಿದ್ದು ಅಲ್ಲಿರುವ ಜನರನ್ನು ಮತ್ತೊಂದು ಜಾಗಕ್ಕೆ ವರ್ಗಾಯಿಸಲಾಗಿದೆ.

ಪ್ರವಾಹದಿಂದ ಯಾರು ದಿಕ್ಕೆಡಬಾರದೆಂದು ತಹಶೀಲ್ದಾರ್ ಗೌರಮ್ಮ, ಇ.ಓ ಸುಧೀಪ್, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಜಕ್ಕಣ್ಣವರ್,ಅಗ್ನಿ ಶಾಮಕ ಸಿಬ್ಬಂದಿಯವರು, ತಾಲ್ಲೂಕಿನ ಬಗ್ಗೆ ತೀವ್ರ ಎಚ್ಚರ ವಹಿಸಿದ್ದಾರೆ.

ಮಳೆಯಿಂದ ತಾಲ್ಲೂಕಿನ ನಲ್ಲೂರುನಲ್ಲಿ ಭತ್ತದ ಗದ್ದೆ ನೀರಿನಿಂದ ಆವೃತ. ರಾಷ್ಟ್ರೀಯ ಹೆದ್ದಾರಿ-೧೬೯ರ ಕಾವಡಿಯ ಅಗ್ರಹಾರದಮತ್ತು ಕರುವಾನೆ ಸಮೀಪ ರಸ್ತೆಯಲ್ಲಿ ಧರೆ ಕುಸಿತ.

ವಿದ್ಯಾರಣ್ಯಪುರದ ಹೆಮ್ಮನೆಯ ವನಮಾಲರವರ ಮನೆಯ ಮಾಡಿ ಮೇಲೆ ಮತ್ತು ಬೇಗಾರು ಗ್ರಾಮ ಪಂಚಾಯಿತಿ ಅಸನಬಾಳು ಗ್ರಾಮದ ಮಂಜಪ್ಪದಾಸಯ್ಯ ಅವರ ಮನೆಯ ಮೇಲೆ ಮರ ಬಿದ್ದು ಮಾಡು ಕುಸಿತ. ಮೆಣಸೆಯಲ್ಲಿ ಸುಬ್ರಮಣ್ಯರವರ ಮನೆ ಹಿಂದೆ ಧರೆ ಕುಸಿತ. ಹನುಮಂತ ನಗರದ ಅಶೋಕ ಅವರ ಮನೆ ಕಾಂಪೌಂಡ್ ಹತ್ತಿರ ಧರೆ ಕುಸಿತ. ಕೊಪ್ಪ ಸಂಪರ್ಕ ಕಲ್ಪಿಸುವ ಕೊಡಿಗೆಮಕ್ಕಿಯಲ್ಲಿ ರಸ್ತೆಗೆ ಮರಗಳು ಬಿದ್ದು ಸಂಚಾರಕ್ಕೆ ಅಡ್ಡಿ ಮತ್ತು ಧರೆ ಕುಸಿತ.

ಕಿರುಕೋಡು ರಸ್ತೆಗೆ ಮರ ಬಿದ್ದು ಹೋಗಲು ಅಡ್ಡಿ. ಗಿಣಿಕಲು ಗ್ರಾಮದ ಶಾಂತ ಎಂಬುವವರ ಮನೆಯ ದನದ ಕೊಟ್ಟಿಗೆ ಮೇಲೆ ಮರ ಕೊಟ್ಟಿಗೆಗೆ ಹಾನಿಯಾಗಿದೆ. ಕೆರೆ ಗ್ರಾಮ ಪಂಚಾಯಿತಿಯ ಶಿರ್ಲು ಗ್ರಾಮದ ಗುರಿಗೆ ಹೋಗುವ ರಸ್ತೆಯಲ್ಲಿ ಮೋರಿ ಕುಸಿದು ರಸ್ತೆ ಜಕ್ಕುಮ್ ಆಗಿದೆ.

ನೆಮ್ಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಚೆಕಚೇರಿ ಕಟ್ಟಡದ ಮೇಲೆ ಮರ ಬಿದ್ದು ಕಟ್ಟಡ ಕುಸಿತ. ಕೆರೆಕಟ್ಟೆಯ ಅರಣ್ಯ ಅಧಿಕಾರಿಗಳ ವಸತಿ ಗೃಹದ ಮೇಲೆ ಮರ ಬಿದ್ದು ಮನೆ ಜಕುಂ ಆಗಿದೆ. ತೆಕ್ಕೂರು ಕುತುಕೋಡು ಗ್ರಾಮದ ಬೆಟ್ಟಗೆರೆ ಸಮೀಪ ಬೃಹದಾಕಾರದ ಮರ ರಸ್ತೆಗೆ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.

ತಾಲ್ಲೂಕಿನಲ್ಲಿ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಉಳುವೆಯಲ್ಲಿ ೨ ಕಂಬ, ಸಿರಿಮನೆಯಲ್ಲಿ ೩ ಕಂಬ, ಕೋಗೋಡುನಲ್ಲಿ ೧ ಕಂಬ, ನೆಮ್ಮಾರ್‌ನಲ್ಲಿ ೩ ಕಂಬ, ಬೆಟ್ಟಗೆರೆಯಲ್ಲಿ ೪ ಕಂಬ, ಮೇಗಳಬೈಲಿನಲ್ಲಿ ೨ ವಿದ್ಯುತ್ ಕಂಬಗಳು ಮುರಿದು ಹೋಗಿ ಹಾನಿಯಾಗಿದೆ.

ಮಳೆಯಿಂದ ಶೃಂಗೇರಿ ತಾಲ್ಲೂಕಿನಲ್ಲಿ ತುಂಗಾನದಿ ಉಕ್ಕಿ ಹರಿದು ತೋಟ ಮತ್ತು ಮನೆಗಳು ನೀರಿನಿಂದ ಆವೃತಗೊಂಡಿರುವುದು.

Varuna Arbhata floods in Tunganadi in Sringeri

 

 

Facebook
X
WhatsApp
Telegram
Spread the love

ಚಿಕ್ಕಮಗಳೂರು: ಭಕ್ತಿ, ಧಾರ್ಮಿಕತೆ, ವೈಚಾರಿಕತೆಯ ಮೌಲ್ಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಸಲುವಾಗಿ ಸೆ.೧ ರಂದು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ…

Spread the love

ಚಿಕ್ಕಮಗಳೂರು: ಹಿಂದುತ್ವವನ್ನು ಗಟ್ಟಿಗೊಳಿಸಲು ಧಾರ್ಮಿಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿ ಆಚರಿಸುವುದೇ ಸಾರ್ವಜನಿಕ ಗಣೇಶೋತ್ಸವದ ಪ್ರಮುಖ ಉದ್ದೇಶ ಎಂದು ಶಾಸಕ ಹೆಚ್.ಡಿ.…

Spread the love

ಚಿಕ್ಕಮಗಳೂರು: ಭಕ್ತಿ, ಧಾರ್ಮಿಕತೆ, ವೈಚಾರಿಕತೆಯ ಮೌಲ್ಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಸಲುವಾಗಿ ಸೆ.೧ ರಂದು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ…

Spread the love

ಚಿಕ್ಕಮಗಳೂರು: ಹಿಂದುತ್ವವನ್ನು ಗಟ್ಟಿಗೊಳಿಸಲು ಧಾರ್ಮಿಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿ ಆಚರಿಸುವುದೇ ಸಾರ್ವಜನಿಕ ಗಣೇಶೋತ್ಸವದ ಪ್ರಮುಖ ಉದ್ದೇಶ ಎಂದು ಶಾಸಕ ಹೆಚ್.ಡಿ.…

[t4b-ticker]
Exit mobile version