ALSO FEATURED IN

Exhibition of Handicrafts: ಅ.೧೮-೨೦ ತೇರಾಪಂಥ್ ಹಸ್ತ ಕಲೆಯ ಅಧ್ಬುತ ತ್ರಿದಿವಸೇಯ ಪ್ರದರ್ಶನ

Spread the love

ಚಿಕ್ಕಮಗಳೂರು: ತೇರಾಪಂಥ್ ಧರ್ಮ ಸಂಘದ ಸಾಧು ಹಾಗೂ ಸಾಧ್ವಿಯರಿಂದ ತಯಾರಿಸಲ್ಪಟ್ಟ ಹಸ್ತ ಶಿಲ್ಪಗಳ ವಿಶಾಲ ಕಲಾ ಪ್ರದರ್ಶನ ಅ.೧೮ ರಿಂದ ೨೦ ರವರೆಗೆ ಮೂರು ದಿನಗಳ ಕಾಲ ನಗರದ ತೇರಾಪಂಥ್ ಭವನದಲ್ಲಿ ಆಯೋಜಿಸಲಾಗಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ತೇರಾಪಂಥ್ ಸಂಘದ ಅಧ್ಯಕ್ಷ ಮಹೇಂದ್ರ ದೋಷಿ ಈ ಮೇಲಿನ ಮೂರು ದಿನಗಳಲ್ಲಿ ಬೆಳಗ್ಗೆ ೧೦.೩೦ ರಿಂದ ೧೨ ರವರೆಗೆ, ಮಧ್ಯಾಹ್ನ ೨.೩೦ ರಿಂದ ೪ ರವರೆಗೆ ಹಾಗೂ ಸಂಜೆ ೭ ಗಂಟೆಯಿಂದ ೯ ಗಂಟೆಯವರೆಗೆ ತೇರಾಪಂಥ್ ಹಸ್ತ ಕಲೆಯ ಅಧ್ಬುತ ತ್ರಿದಿವಸೇಯ ಪ್ರದರ್ಶನ ನಡೆಯಲಿದೆ ಎಂದರು.

ಈ ವಸ್ತು ಪ್ರದರ್ಶನದಲ್ಲಿ ಸೂಕ್ಷ್ಮಾಕಾರ ಲಿಪಿಯ ಅಧ್ಬುತ ಭಂಡಾರ, ಚಿತ್ರ ಶಿಲ್ಪದ ಅಭಿನವ ಸಂಸಾರ, ಹೆಣೆಯಲ್ಪಟ್ಟ ಕಲೆಯ ಚಮತ್ಕಾರ ವಿಶೇಷತೆಗಳಾಗಿದ್ದು, ಶ್ರೀ ಜೈನ ಶ್ವೇತಾಂಬರ ತೇರಾಪಂಥಿ ಸಭಾ, ತೇರಾಪಂಥ್ ಮಹಿಳಾ ಮಂಡಲ ಇವರು ಸಂಯೋಕರಾಗಿದ್ದಾರೆಂದು ಹೇಳಿದರು.

ಮುನಿಶ್ರೀ ಮೊಹಜಿತ್ ಕುಮಾರ್, ಮುನಿಶ್ರೀ ಭವ್ಯ ಕುಮಾರ್, ಮುನಿ ಜಯೇಶ್ ಕುಮಾರ್ ವೀಕ್ಷಣೆಯ ಸಂದರ್ಭದಲ್ಲಿ ಮಾತನಾಡಿ, ಚಿತ್ರ ಗ್ಯಾಲರಿ ಅಲಂಕರಿಸುವ ಕಾರ್ಯ ಬುಧವಾರದಿಂದ ಆರಂಭಗೊಂಡಿದ್ದು, ಜೈನ ಸನ್ಯಾಸಿಗಳ ಕಲಾ ಕೌಶಲ್ಯದಿಂದ ಅಲಂಕೃತವಾಗಿರುವ ಈ ಅಧ್ಬುತವಾದ ವರ್ಣಚಿತ್ರಗಳು ಜಗತ್ತಿನ ಶೀರ್ಷಿಕೆಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿವೆ ಎಂದು ಮಾಹಿತಿ ನೀಡಿದರು.

ಸ್ವಂತಿಕೆಯ ಜೊತೆಗೆ ಆಧ್ಯಾತ್ಮಿಕ ತತ್ವಶಾಸ್ತ್ರದ ಮತ್ತು ವಿಜ್ಞಾನದ ಸಂಯೋಜನೆಯು ಅವರ ಸಮಕಾಲೀನತೆಯನ್ನು ಸುಲಭವಾಗಿ ಸಾಭೀತುಪಡಿಸುತ್ತದೆ ಎಂದರು. ಜೈನ ಸಂಪ್ರದಾಯದಲ್ಲಿ ಋಷಿ ಮುನಿಗಳ ಮತ್ತು ಸಂತರ ಸೃಜನಶೀಲತೆಯ ಬಗ್ಗೆ ಚರ್ಚೆಗಳು ಕಡಿಮೆಯಾಗಿದ್ದು, ಸ್ವಯಂ ಜ್ಞಾನದ ಜೊತೆಗೆ ಅವರ ದೈನಂದಿನ ಸೃಜನಶೀಲ ಪ್ರಪಂಚವು ಇದೆ ಎಂದು ಕೆಲವೇ ಜನರಿಗೆ ತಿಳಿದಿದೆ ಎಂದರು.

ಇದರಲ್ಲಿ ಚಿತ್ರಕಲೆ, ಕೆತ್ತನೆ, ಕಸೂತಿಯಿಂದ ಹಿಡಿದು ನೇಯ್ಗೆವರೆಗಿನ ಅನೇಕ ರೀತಿಯ ಕೆಲಸಗಳಿವೆ. ಇವುಗಳ ಹಿಂದಿರುವ ಸಂದೇಶವು ನಿರಂತರವಾಗಿ ಜನಮಾನಸದಲ್ಲಿ ಉಳಿಯುವಂತೆ ಕಠಿಣ ಪರಿಶ್ರಮದ ಮೂಲಕ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಇಂದು ನಾವು ಚರ್ಚಿಸುವ ಸೃಜನಶೀಲ ರೂಪಗಳು ಹಲವಾರು ನೂರು ವರ್ಷಗಳ ಹಿಂದೆ ಜೈನ ತತ್ವಶಾಸ್ತ್ರದ ಮೂಲಕ ಜನಮನದ ಭಾಗವಾಗಿದ್ದವು ಎಂಬುದನ್ನು ಚಿತ್ರ ಗ್ಯಾಲರಿಯಲ್ಲಿ ಅಲಂಕರಿಸಿರುವ ಚಿತ್ರಗಳನ್ನು ವೀಕ್ಷಿಸಿದಾಗ ಆಶ್ಚರ್ಯಕರವಾಗುತ್ತದೆ ಎಂದು ವಿವರಿಸಿದರು.

ಒಂದು ಚಿತ್ರವು ಸಾವಿರ ಪದಗಳಿಗೆ ಯೋಗ್ಯವಾಗಿದೆ, ಇಲ್ಲಿ ಕೇವಲ ಒಂದು ಚಿತ್ರದಲ್ಲಿ ಸಾವಿರಾರು ಪದಗಳನ್ನು ಸಂಯೋಜಿಸಲಾಗಿದೆ. ಜೈನ ಆಗಮದಲ್ಲಿ ಪುರುಷರಿಗೆ ೭೨ ಕಲೆಗಳನ್ನು ಮತ್ತು ಮಹಿಳೆಯರಿಗೆ ೬೪ ಕಲೆಗಳನ್ನು ವಿವರಿಸಲಾಗಿರುವ ೧೮ ರೀತಿಯ ಲಿಪಿಗಳನ್ನು ಕಲಿಯಲು ಹೇಳಲಾಗಿದೆ. ಹೊಸ ಪೀಳಿಗೆಯು ಈ ಸೃಷ್ಟಿಸಿದ ಜಗತ್ತನ್ನು ಮುಂದಕ್ಕೆ ಕೊಂಡೊಯ್ಯಬೇಕೆಂಬುದು ಹಸ್ತಕಲೆಯ ಪ್ರದರ್ಶನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ತೇರಾಪಂಥ್ ಸಂಘದ ಕಾರ್ಯದರ್ಶಿ ಪದಮ್‌ಚಂದ್ ನಹರ್, ತೇರಾಪಂಥ್ ಮಹಿಳಾ ಮಂಡಲ ಅಧ್ಯಕ್ಷೆ ಗುಣವತಿ ನಹರ್, ಕಾರ್ಯದರ್ಶಿ ನರೀತಾ ಗಾಧೀಯಾ, ಯುವಕ ಪರಿಷತ್ ಅಧ್ಯಕ್ಷ ಜಯೇಶ್ ಕುಮಾರ್ ಹಾಗೂ ನಗರಸಭಾ ಸದಸ್ಯ ವಿಫುಲ್ ಕುಮಾರ್ ಜೈನ್ ಉಪಸ್ಥಿತರಿರು.

Vast Art Exhibition of Handicrafts

Facebook
X
WhatsApp
Telegram
Spread the love

ಚಿಕ್ಕಮಗಳೂರು: ಭಕ್ತಿ, ಧಾರ್ಮಿಕತೆ, ವೈಚಾರಿಕತೆಯ ಮೌಲ್ಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಸಲುವಾಗಿ ಸೆ.೧ ರಂದು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ…

Spread the love

ಚಿಕ್ಕಮಗಳೂರು: ಹಿಂದುತ್ವವನ್ನು ಗಟ್ಟಿಗೊಳಿಸಲು ಧಾರ್ಮಿಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿ ಆಚರಿಸುವುದೇ ಸಾರ್ವಜನಿಕ ಗಣೇಶೋತ್ಸವದ ಪ್ರಮುಖ ಉದ್ದೇಶ ಎಂದು ಶಾಸಕ ಹೆಚ್.ಡಿ.…

Spread the love

ಚಿಕ್ಕಮಗಳೂರು: ಭಕ್ತಿ, ಧಾರ್ಮಿಕತೆ, ವೈಚಾರಿಕತೆಯ ಮೌಲ್ಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಸಲುವಾಗಿ ಸೆ.೧ ರಂದು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ…

Spread the love

ಚಿಕ್ಕಮಗಳೂರು: ಹಿಂದುತ್ವವನ್ನು ಗಟ್ಟಿಗೊಳಿಸಲು ಧಾರ್ಮಿಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿ ಆಚರಿಸುವುದೇ ಸಾರ್ವಜನಿಕ ಗಣೇಶೋತ್ಸವದ ಪ್ರಮುಖ ಉದ್ದೇಶ ಎಂದು ಶಾಸಕ ಹೆಚ್.ಡಿ.…

[t4b-ticker]
Exit mobile version