ALSO FEATURED IN

District Government Employees Association:ಕಾರ್ಯಕಾರಿ ಮಂಡಳಿ ವಿರುದ್ಧ ಮಾಡಿರುವ ಆರೋಪ ನಿರಾಧಾರ

Spread the love

ಚಿಕ್ಕಮಗಳೂರು:  ಸರಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಆಕಾಂಕ್ಷಿಯಾಗಿರುವ ಹೇಮಂತ್ ಕುಮಾರ್ ಮತ್ತು ತಂಡ ಜಿಲ್ಲಾ ಸಂಘದ ಹಾಲಿ ಕಾರ್ಯಕಾರಿ ಮಂಡಳಿ ವಿರುದ್ಧ ಮಾಡಿರುವ ಆರೋಪ ನಿರಾಧಾರ ಎಂದು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿ ಆಯ್ಕೆಗೆ ಚುನಾವಣೆ ಸನ್ನಿಹಿತವಾಗಿರುವ ಈ ಸಂದರ್ಭದಲ್ಲಿ ಅವರು ಮಾಡಿರುವ ಆರೋಪಗಳು ಸಂಘಟನೆಗೆ ವಿನಾಶಕಾರಿಯಾಗಿ ಪರಿಣಮಿಸಲಿವೆ ಎಂದು ಸ್ಪಷ್ಟಪಡಿಸಿದರು.

ನಿಗದಿತ ಸಮಯಕ್ಕೆ ಮತದಾರರ ಪಟ್ಟಿಯನ್ನು ತಯಾರಿಸಿ ರಾಜ್ಯ ಸಂಘದಿಂದ ಅನುಮೋದನೆ ಪಡೆಯಲಾಗಿದೆ. ಆದರೆ, ಆಯಾ ಇಲಾಖೆಯಲ್ಲಿ ಮತದಾರರ ಪಟ್ಟಿ ಕೊಡಿ ಎಂದು ಕೇಳಿದಾಗ, ಕೆಲವರು ಪಟ್ಟಿಯನ್ನೇ ನೀಡಿರಲಿಲ್ಲ. ಇದೇ ಹೇಮಂತ್‌ಕುಮಾರ್ ಅವರು ಕಂದಾಯ ಇಲಾಖೆಯ ಪಟ್ಟಿಯನ್ನೇ ನೀಡಿರಲಿಲ್ಲ. ಈಗ ನಮ್ಮ ಇಲಾಖೆಯ ೫ ನೌಕರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ದೂರಿದರೆ ಎಷ್ಟು ಸರಿ ಎಂದು ಪ್ರಶ್ನಿಸಿದರು.

ಜುಲೈ ೧ ರಿಂದ ೧೦ ರವರೆಗೆ ಮತದಾರರ ಕರಡು ಪ್ರತಿ ನೋಡಲು ಅವಕಾಶ ಕಲ್ಪಿಸಿ ಆಕ್ಷೇಪಣೆಗೂ ಅವಕಾಶ ನೀಡಲಾಗಿತ್ತು. ಆದರೆ, ಆರೋಪ ಮಾಡಿರುವ ಮಹಾನುಭಾವರು ಸಂಘದ ಕಟ್ಟಡಕ್ಕೆ ಕಾಲಿಡಲಿಲ್ಲ. ಹೀಗಾಗಿ ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲವಿಲ್ಲ. ಕೆಲವು ನೌಕರರು ಸಂಘ ವಿರೋಧಿ ಚಟುವಟಿಕೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸಮಿತಿ ಅವರ ಹೆಸರನ್ನು ಕೈಬಿಟ್ಟಿದೆ ಎಂದು ಸ್ಪಷ್ಟನೆ ನೀಡಿದರು.

ನೌಕರರಿಗೆ ಅನುಕೂಲ ಆಗಲಿ ಎಂದು ರಾಜ್ಯ ಸಂಘವೇ ಕ್ಯಾಂಟೀನ್ ತೆರೆದು ಒಂದು ಸಂಸ್ಥೆ ಗುರುತಿಸಿ ನಿರ್ವಹಣೆ ಮಾಡುತ್ತಿತ್ತು ಎಂದು ಹೇಳಿದರು.
ಜಿಲ್ಲಾ ಸಂಘದಿಂದ ನಯಾ ಪೈಸೆಯಷ್ಟು ಹಣದ ಅವ್ಯವಹಾರ ನಡೆದಿಲ್ಲ. ಆದರೆ, ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕಿರಣ್‌ಕುಮಾರ್ ಅವರು ಸಾಮಾನ್ಯ ಅರಿವಿಲ್ಲದಂತೆ ತನ್ನ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಟೀಕಿಸಿದರು.

ಉಪನ್ಯಾಸಕ ಮಂಜುನಾಥ್ ಅವರು ಸಂಘ ವಿರೋಧಿ ಚಟುವಟಿಕೆ ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ಸಂಘದಿಂದ ಅಮಾನತು ಮಾಡಲಾಗಿದ್ದು, ಅವರು ತಮ್ಮ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು ಅಲ್ಲೂ ಕೂಡ ಅವರಿಗೆ ಮುಖಭಂಗ ಆಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರನ್ನು ತಾನು ಗೌರವಿಸುತ್ತೇನೆ. ಅಂತಹ ರಾಜಕಾರಣಿ ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಮನವಿ ಮಾಡುತ್ತೇನೆ ಎಂದರು.

ಸರಕಾರಿ ನೌಕರರ ಸಂಘದ ನಿರ್ದೇಶಕರನ್ನು ಕರ್ತವ್ಯದ ಅವಧಿಯಲ್ಲಿ ಮನೆಗೆ ಕರೆಸಿಕೊಂಡು ಬೆದರಿಕೆ ಹಾಕಿ, ಆಣೆ ಪ್ರಮಾಣ ಮಾಡಿಸಿರುವ ಬಗ್ಗೆ ನನಗೆ ಸಾಕ್ಷಿ ದೊರೆತಿವೆ. ಹೀಗಾಗಿ ಅಂತಹ ಕೆಲಸಕ್ಕೆ ಅವರು ಇನ್ನು ಮುಂದೆ ಕೈಹಾಕಬಾರದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪರಿಷತ್ ಸದಸ್ಯ ಅಭ್ಯರ್ಥಿ ಪೂರ್ಣೇಶ್, ಖಜಾಂಚಿ ಸ್ಥಾನದ ಅಭ್ಯರ್ಥಿ ಚೇತನ್, ಸಂಘದ ಹಾಲಿ ಉಪಾಧ್ಯಕ್ಷ ಪೂರ್ಣೇಶ್ ಇದ್ದರು.

The allegations against the current executive board of the District Government Employees Association are baseless.

Facebook
X
WhatsApp
Telegram
Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.…

Spread the love

ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ…

Spread the love

ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.…

[t4b-ticker]
Exit mobile version