ALSO FEATURED IN

Birur police:ಬೀರೂರು ಠಾಣಾ ಪೋಲಿಸರಿಂದ 1 ಕೋಟಿ ಮೌಲ್ಯದ ಅಡಿಕೆ ವಶ-ಅರೋಪಿಗಳ ಬಂಧನ

Spread the love

ಚಿಕ್ಕಮಗಳೂರು: ಬೀರೂರಿನಿಂದ ಗುಜರಾತ್‌ಗೆ ಸಾಗಿಸಲು ತುಂಬಿದ್ದ ೩೫೦ ಚೀಲ ಅಡಿಕೆಯನ್ನು ಹೊಳಲ್ಕೆರೆಯ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಲು ಯತ್ನಿಸಿದ ಲಾರಿ ಚಾಲಕ ,ಮತ್ತು ಕ್ಲೀನರ್‌ನನ್ನು ಪತ್ತೇಹಚ್ಚಿ ೧.೨೨.೮೨.೫೦೦/- ರೂ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಳ್ಳುವಲ್ಲಿ ಬೀರೂರು ಠಾಣಾ ಪೋಲಿಸರು ಯಶಸ್ವಿಯಾಗಿದ್ದಾರೆ.

ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಾಜಿ ರೋಡ್ ವೇಸ್ ನ ಮಾಲೀಕರಾದ ದುಲಾರಾಮ್ ರವರ ಮೂಲಕ ಬೀರೂರಿನ ದೇವಗಿರಿ ಟ್ರೇಡರ್ಸ್‌ನಲ್ಲಿ ಡಿ.೧೨ರಂದು ತಲಾ ೭೦ ಕೆ.ಜಿ ತೂಕದ ೩೫೦ ಚೀಲ ಅಡಿಕೆ ಲಾರಿಯಲ್ಲಿ ತುಂಬಿಸಿ ಗುಜರಾತ್ ರಾಜ್ಯದ ವಲ್ಸಾದ್ ಸ್ಥಳಕ್ಕೆ ತಲುಪಿಸಲು ಕಳೂಹಿಸಲಾಗಿತ್ತು.

ಲಾರಿಯ ಚಾಲಕನಾದ ಮೊಹಮ್ಮದ್ ಸುಬಾನ್ ಹಾಗೂ ಲಾರಿ ಕಂಡಕ್ಟರ್ ಮೊಹಮ್ಮದ್ ಫಯಾಜ್ ಇಬ್ಬರು ಸೇರಿಕೊಂಡು ಅಡಿಕೆಯನ್ನು ಗುಜರಾತ್‌ಗೆ ತೆಗೆದುಕೊಂಡು ಹೋಗದೆ ವಂಚಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿಯೋ ಹೋಗಿರುವ ಬಗ್ಗೆ ಬೀರೂರು ಠಾಣೆಗೆ ಬಂದ ದೂರನ್ನಾಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಲುಪೊಲೀಸ್ ಅಧೀಕ್ಷಕ ಡಾ|| ವಿಕ್ರಂ ಅಮಟೆ ತರೀಕೆರೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕವಿ.ಎಸ್.ಹಾಲಮೂರ್ತಿರಾವ್ ನೇತೃತ್ವದಲ್ಲಿ ತಂಡರಚಿಸಿ ಆರೋಪಿಗಳಪತ್ತೆ ಮಾಡಲು ವ್ಯೂಹ ರಚಿಸಲಾಯಿತು.

ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂಧಿಗಳಾದ ನಯಾಜ್ ಅಂಜುಮ್ ಮತ್ತು ರಬ್ಬಾನಿ ಹಾಗೂ ಬೀರೂರು ಪೊಲೀಸ್ ಠಾಣೆಯ ರಾಧ ಇವರುಗಳ ತಾಂತ್ರಿಕ ಸಹಯೋಗದೊಂದಿಗೆ ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿತರುಗಳ ಪತ್ತೆಯ ಬಗ್ಗೆ ನಿಖರ ಮಾಹಿತಿಯನ್ನು ಕಲೆಹಾಕಿ ನಂತರ ಆರೋಪಿತರ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಬೆಂಗಳೂರಿನ ತಿರುಪಾಳ್ಯದ ಸ್ಕೋಂಡೋ ೨ ಅಪಾರ್ಟ್‌ಮೆಂಟ್ ಬಳಿ ಆರೋಪಿತರಾದ ಚಾಲಕ ತೀರ್ಥಹಳ್ಳಿಯಅಮೀರ್ ಹಮ್ಮದ್, ಮೊಹಮ್ಮದ್ ಗೌಸ್ ಖಾನ್,ಸುಹೇಲ್, ಮೊಹಮ್ಮದ್ ಸುಭಾನ್ ಗಬ್ಬರ್,ಮೊಹಮ್ಮದ್ ಫಯಾಜ್,ಬೆಂಗಳೂರಿನ ಮೊಹಮ್ಮದ್ ಸಾದಿಕ್ ಇವರುಗಳನ್ನು ದಸ್ತಗಿರಿ ಪೋಲೀಸರು ವಿಚಾರಣೆ ಮಾಡಿದರು.

ಹೊಳಲ್ಕೆರೆ ತಾ|| ಹೊಸಳ್ಳಿ ಗ್ರಾಮದ ವಾಸಿ ಮಲ್ಲಿಕಾರ್ಜುನ್ ರವರ ಕೋಳಿ ಫಾರಂ ಬಳಿ ಹೋಗಿ ಮಾರಾಟ ಮಾಡುವ ಉದ್ದೇಶದಿಂದ ಅನ್ ಲೋಡ್ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ದಸ್ತಗಿರಿಯಾದ ಆರೋಪಿತರಿಂದ ೩೩೫ ಅಡಿಕೆ ಚೀಲಗಳನ್ನು ತನಿಖೆಯ ಸಮಯದಲ್ಲಿ ಅಮಾನತ್ತುಪಡಿಸಿಕೊಳ್ಳಲಾಗಿದೆ ಈ ಪ್ರಕರಣದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿರುತ್ತಾನೆ.

ಬಂಧಿತ ಆರೋಪಿತರಿಂದ ೩೩೫ ಅಡಿಕೆ ಚೀಲ ಅಂದಾಜು ಬೆಲೆ – ೧.೦೫.೫೨.೫೦೦/-ರೂ, ಕೆಎ೩೦ ಎ೧೭೦೫ ನಂಬರ್ ನ ೧೨ ಚಕ್ರಗಳ ಲಾರಿ, ಅಂದಾಜು ಬೆಲೆ ೧೫.೦೦.೦೦೦/- ರೂ,೨.೩೦.೦೦೦/-ರೂ ನಗದು ಹಣ ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಕಡೂರು ವೃತ್ತನಿರೀಕ್ಷಕ ರಫೀಕ್,ಬೀರೂರು ಪೊಲೀಸ್ ಠಾಣೆಯ ಸಜಿತ್ ಕುಮಾರ್ ಜಿ.ಆರ್, – ಪಿ.ಎಸ್.ಐ (ಕಾ &ಸು), ಡಿ.ವಿ.ತಿಪ್ಪೇಶ್,ಅಜ್ಜಂಪುರ ಪೊಲೀಸ್ ಠಾಣೆ ಪಿಎಸೈ ಶಶಿಕುಮಾರ್ ,ಲಿಂಗದಹಳ್ಳಿ ಪೊಲೀಸ್ ಠಾಣೆ, ಗಣಪತಿ ಎಸ್ ಶೇರುಗಾರ ಪಿ.ಎಸ್.ಐ (ತನಿಖೆ) ಬೀರೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂಧಿಗಳಾದ ಡಿ.ವಿ.ಹೇಮಂತ್ ಕುಮಾರ್, ಬಿ.ಪಿ.ಕೃಷ್ಣಮೂರ್ತಿ, ಬಿ.ಹೆಚ್.ರಾಜಪ್ಪ ಹಾಗೂ ಅಜ್ಜಂಪುರ ಪೊಲೀಸ್ ಠಾಣೆಯ ನಾಗರಾಜ ವೈ, ಜೀಪ್ ಚಾಲಕರಾದ ಚಂದ್ರ ನಾಯ್ಕ ಭಾಗವಹಿಸಿದ್ದರು.

ಕಡೂರು ಸಾದಿಕ್ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ, ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆ ಹಾಗೂ ಹೊರರಾಜ್ಯಗಳಲ್ಲಿಯೂ ಸಹಾ ಮನೆ ಕಳವು ಪ್ರಕರಣಗಳು ದಾಖಲಾಗಿರುತ್ತವೆ. ಆರೋಪಿ ಹಮ್ಮ @ ಅಮೀರ್ ಅಮ್ಮದ್ ಈತನ ವಿರುದ್ಧ ಬೆಂಗಳೂರಿನ ಮಾಗಡಿ ಪೊಲೀಸ್ ಠಾಣೆ ಯೂ ಸೇರಿದಂತೆ ತುಮಕೂರಿನ ಶಿರಾ ಪೊಲೀಸ್ ಠಾಣೆ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಮನೆ ಕಳವು, ಕೊಲೆ ಪ್ರಕರಣಗಳು ದಾಖಲಾಗಿರುತ್ತವೆ

ಆರೋಪಿ ಮೊಹಮ್ಮದ್ ಗೌಸ್ ನ ವಿರುದ್ಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೋಕಾ ಕಾಯ್ದೆಯಡಿ ಹಾಗೂ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣಗಳು ದಾಖಲಾಗಿರುತ್ತವೆ. ಈ ಪ್ರಕರಣದಲ್ಲಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಯಶಸ್ವಿಯಾಗಿ ಆರೋಪಿತರುಗಳನ್ನು ದಸ್ತಗಿರಿ ಮಾಡಿ ಅವರಿಂದ ಸ್ವತ್ತನ್ನು ವಶಪಡಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸುವಲ್ಲಿ ಶ್ರಮಿಸಿದ ತನಿಖಾ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ ರವರು ಶ್ಲಾಘಿಸಿ ಬಹುಮಾನ ನೀಡಿರುತ್ತಾರೆ.

Birur police seize areca nut worth Rs 1 crore; suspects arrested

Facebook
X
WhatsApp
Telegram
Spread the love

ಚಿಕ್ಕಮಗಳೂರು: ಭಕ್ತಿ, ಧಾರ್ಮಿಕತೆ, ವೈಚಾರಿಕತೆಯ ಮೌಲ್ಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಸಲುವಾಗಿ ಸೆ.೧ ರಂದು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ…

Spread the love

ಚಿಕ್ಕಮಗಳೂರು: ಹಿಂದುತ್ವವನ್ನು ಗಟ್ಟಿಗೊಳಿಸಲು ಧಾರ್ಮಿಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿ ಆಚರಿಸುವುದೇ ಸಾರ್ವಜನಿಕ ಗಣೇಶೋತ್ಸವದ ಪ್ರಮುಖ ಉದ್ದೇಶ ಎಂದು ಶಾಸಕ ಹೆಚ್.ಡಿ.…

Spread the love

ಚಿಕ್ಕಮಗಳೂರು: ಭಕ್ತಿ, ಧಾರ್ಮಿಕತೆ, ವೈಚಾರಿಕತೆಯ ಮೌಲ್ಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಸಲುವಾಗಿ ಸೆ.೧ ರಂದು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ…

Spread the love

ಚಿಕ್ಕಮಗಳೂರು: ಹಿಂದುತ್ವವನ್ನು ಗಟ್ಟಿಗೊಳಿಸಲು ಧಾರ್ಮಿಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿ ಆಚರಿಸುವುದೇ ಸಾರ್ವಜನಿಕ ಗಣೇಶೋತ್ಸವದ ಪ್ರಮುಖ ಉದ್ದೇಶ ಎಂದು ಶಾಸಕ ಹೆಚ್.ಡಿ.…

[t4b-ticker]
Exit mobile version