Author: chikkamagalur express

ಚಿಕ್ಕಮಗಳೂರು: ನಗರದ ಅಂಡೆಛತ್ರ ಮುಸಾಫಿರ್ ಖಾನ್, ಅಂಜುಮನ್ ಇ ಇಸ್ಲಾಮಿಯಾ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಅಂಜುಮನ್ ವೆಲ್ಫೇರ್ ಗ್ರೂಪ್ ಭರ್ಜರಿ ಜಯಸಾದಿಸಿದೆ. ನಗರದ ಐ.ಜಿ ರಸ್ತೆಯಲ್ಲಿರುವ ಉರ್ದು ಪ್ರಾಥಮಿಕ ಸರಕಾರಿ ಶಾಲೆಯಲ್ಲಿ ಮತದಾನ ನಡೆಯಿತು. ೫೭ ಮಂದಿ ಸ್ಪರ್ಧಾ ಕಣದಲ್ಲಿದ್ದರು. ಅಂಜುಮನ್ ವೆಲ್ಫೇರ್ ಗ್ರೂಪ್‌ನಿಂದ ೧೭ ಮಂದಿ ಕಣದಲ್ಲಿದ್ದು ಅದರಲ್ಲಿ ೧೪ ಮಂದಿ ವಿಜೇತರಾಗಿದ್ದಾರೆ. ಸಿಡಿಎ ಅಧ್ಯಕ್ಷ ನಯಾಜ್ ಅಹ್ಮದ್ ಅವರ ತಂಡದಿಂದ ೧೭ ಮಂದಿ ಚುನಾವಣೆಯಲ್ಲಿ ಸ್ಪರ್ದಿಸಿದ್ದು ಅದರಲ್ಲಿ ೫ ಮಂದಿ ಮಾತ್ರ ಗೆಲುವು ಸಾದಿಸಿದ್ದಾರೆ. ಯಾವುದೇ ಗ್ರೂಪ್‌ಗೆ ಸೇರದೆ ಪಕ್ಷೇತರರಾಗಿ ೨ ಮಂದಿ ವಿಜಯಶಾಲಿಗಳಾಗಿದ್ದು ಒಟ್ಟು ೨೧ ಮಂದಿ ಅಂಜುಮನ್ ಇ ಇಸ್ಲಾಮಿಯಾ ಸಂಸ್ಥೆಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ವಿಜಯ ಗಳಿಸಿದವರಲ್ಲಿ ಅಬ್ದುಲ್‌ರಜಾಕ್, ಹಫೀಜ್ ಮೊಹಮದ್‌ರಿಯಾಜ್‌ಖಾನ್, ಮಸೂದ್ ಅಹ್ಮದ್, ನಜೀರ್ ಅಹ್ಮದ್, ನಾಸೀರ್‌ಖಾನ್, ಸಿ.ಪಿ.ಬಾಬರ್, ಸಿ.ಎ.ಮೊಹಮದ್ ಇಸ್ಮಾಯಿಲ್, ಅಬ್ರಾರ್‌ಖಾನ್, ಮೊಸಿನ್‌ಖಾನ್, ಹಸನ್ ಸಲೀಂ, ಮೊಹಮ್ಮದ್‌ಇರ್ಷಾದ್, ಮೊಹಮದ್ ಉಮರ್, ಶಿರಾಜ್‌ಖಾನ್, ಮೊಹಮದ್ ಜಿಯಾ, ಮೊಹಮ್ಮದ್‌ರಾಹಿಲ್‌ಪಾಷಾ,…

Read More

ಚಿಕ್ಕಮಗಳೂರು- ಸರ್ಕಾರ ನೀಡುವ ಸಲಕರಣೆಗಳನ್ನು ಸದುಪಯೋಗಪಡಿಸಿಕೊಂಡು ಮೀನುಗಾರರು ಆರ್ಥಿಕ ಸದೃಢರಾಗಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಅವರು ಭಾನುವಾರ ಮೀನುಗಾರಿಕೆ ಇಲಾಖೆ ವತಿಯಿಂದ ನೀಡಲಾಗುವ ವಿವಿಧ ಸಲಕರಣೆಗಳನ್ನು ಮೀನುಗಾರ ಫಲಾನುಭವಿಗಳಿಗೆ ವಿತರಿಸಿ ನಂತರ ಮಾತನಾಡಿ ರೈತರಂತೆಯೇ ಮೀನುಗಾರರು ಜನತೆಗೆ ಆಹಾರವನ್ನು ಪೂರೈಕೆ ಮಾಡುವ ಕೆಲಸ ಮಾಡುತ್ತಾರೆ ಅವರ ಜೀವ ರಕ್ಷಣೆಗೂ ಸರ್ಕಾರ ಕ್ರಮ ವಹಿಸಬೇಕಾಗಿರುವುದು ಸರ್ಕಾರದ ಹೊಣೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ತಾವೇ ಮೊದಲು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದ ನಂತರ ರಾಜ್ಯದಾದ್ಯಂತ ಎಲ್ಲಾ ಮೀನುಗಾರರಿಗೆ ಜೀವರಕ್ಷಕ ಜಾಕೆಟ್‌ಗಳನ್ನು ವಿತರಿಸುವ ಕಾರ್ಯ ಆರಂಭವಾಯಿತು ಎಂದರು. ತೆಪ್ಪ, ದೋಣಿ, ಬಲೆ ಮತ್ತು ಲೈಫ್ ಜಾಕೆಟ್‌ಗಳನ್ನು ವಿತರಿಸಲಾಗುತ್ತಿದೆ. ಇದನ್ನು ಪಡೆದ ಮೀನುಗಾರರು ಅದರಲ್ಲಿ ಬರುವ ಆದಾಯದಲ್ಲಿ ಉತ್ತಮ ರೀತಿ ಕುಟುಂಬ ಸಾಗಿಸುವಂತಾಗಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ಎಂದು ತಿಳಿಸಿದರು. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸಿ.ಆರ್.ಕವನ ಮಾತನಾಡಿ, ರಾಜ್ಯ ವಲಯ ಯೋಜನೆಯಿಂದ ೧೦ ಮಂದಿ ಫಲಾನುಭವಿಗಳಿಗೆ ಸಲಕರಣೆ…

Read More

ಚಿಕ್ಕಮಗಳೂರು: ಕೆಲವೇ ವ್ಯಕ್ತಿಗಳು ಭೌತಿಕವಾಗಿ ನಮ್ಮನ್ನಗಲಿದರೂ ಅವರ ವ್ಯಕ್ತಿತ್ವದ ನೆನಪುಗಳು ನಮ್ಮ ಮನದಂಗಳದಲ್ಲಿ ಸದಾ ಇರುತ್ತವೆ. ಹೀಗೆ ಆಗಾಗ ನೆನಪಿಗೆ ಬರುವ ವ್ಯಕ್ತಿತ್ವ ಹಿ.ನಾ.ತಿಪ್ಪೇಸ್ವಾಮಿ ಅವರದು ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಹೇಳಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಬೆಳವಾಡಿಯ ಹಿ.ನಾ.ತಿಪ್ಪೇಸ್ವಾಮಿ ಕುಟುಂಬ ಹಾಗೂ ಉದ್ಭವ ಪ್ರಕಾಶನ ಟ್ರಸ್ಟ್ ಏರ್ಪಡಿಸಿದ್ದ ತಿಪ್ಪೇಸ್ವಾಮಿ ಅವರ ನೂರರ ಸಂಸ್ಮರಣೆ ಮತ್ತು ಡಾ.ಬೆಳವಾಡಿ ಮಂಜುನಾಥ್ ಅವರ ಪಿಎಚ್.,ಡಿ ಪದವಿಯ ಸಂಶೋಧನಾ ಪ್ರಬಂಧ `ಸತ್ಯವಿಠಲ ಅವರ ಕಾವ್ಯಗಳ ಸಮಗ್ರ ಅಧ್ಯಯನ’ದ ಕೃತಿ ಬಿಡುಗಡೆ ಸಮಾರಂಭದಲ್ಲಿ ತಿಪ್ಪೇಸ್ವಾಮಿ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು. ಸಮಾಜಮುಖಿ ವ್ಯಕ್ತಿತ್ವದ ಚಟುವಟಿಕೆಗಳು, ಅವರ ಸ್ವಭಾವ, ಮಾತು ಪ್ರತಿಯೊಂದು ಸಹ ನೆನಪನ್ನು ಮೊಗೆದು ನೀಡುತ್ತದೆ. ಇಂಥ ವ್ಯಕ್ತಿಗಳ ಸಾಲಿಗೆ ಸೇರಿದವರು ತಿಪ್ಪೇಸ್ವಾಮಿ ಎಂದು ಅವರು ನುಡಿದರು. ತಿಪ್ಪೇಸ್ವಾಮಿ ಅನ್ಯಾಯಕ್ಕೆ ಎಂದೂ ತಲೆಬಾಗಿದವರಲ್ಲ. ಮನೆಯವರಿಂದಾಗಲಿ ಅಥವಾ ಹೊರಗಿನವರಿಂದಾಗಲಿ ಅನ್ಯಾಯವಾಗುವುದನ್ನು ಸಹಿಸದೆ ತೀವ್ರವಾಗಿ ವಿರೋಧಿಸುತ್ತಿದ್ದರು. ಅವರಿದ್ದ ರಾಜಕೀಯ ಪಕ್ಷದಲ್ಲೂ ಎಂದೂ ಸಹ ಅನ್ಯಾಯ ಮತ್ತು ಭ್ರಷ್ಟಾಚಾರದ ಪ್ರಸಂಗಗಳು…

Read More

ಚಿಕ್ಕಮಗಳೂರು:  ಕರ್ನಾಟಕದ ಅದಿದೇವತೆ ತಾಯಿ ಭುವನೇಶ್ವರಿ ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನದ ಪ್ರತೀಕ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ತಿಳಿಸಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ತಾಯಿ ಭುವನೇಶ್ವರಿಯ ಪುತ್ತಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು ಭಾರತೀಯರಿಗೆ ಮೂರ್ತಿಪ್ರತಿಷ್ಟಾಪನೆ , ಆರಾಧನೆ ಎಂಬುದಕ್ಕೆ ಭಾವನಾತ್ಮಕ ಸಂಬಂಧವಿದೆ ಆ ಹಿನ್ನೆಲೆಯಲ್ಲಿ ನಗರದ ಕನ್ನಡ ಭವನದಲ್ಲಿ ತಾಯಿ ಭುವನೇಶ್ವರಿಯ ಪುತ್ತಳಿ ಅನಾವರಣ ಮಾಡಿರುವುದು ಹೆಮ್ಮೆ ತಂದೆ ಎಂದು ಹೇಳಿದರು. ಕನ್ನಡದ ಮೊದಲ ಕದಂಬ ದೊರೆ ಮಯೂರವರ್ಮನ ಕಾಲದಿಂದಲೂ ತಾಯಿ ಭುವನೇಶ್ವರಿಯನ್ನು ಆರಾಧನೆಯನ್ನು ಮಾಡಲಾಗುತ್ತಿದೆ. ಅದರೊಂದಿಗೆ ವಿಜಯನಗರ ಸ್ಥಾಪನೆ ಮಾಡಲು ಸಂಕಲ್ಪಿಸಿದ ವಿದ್ಯಾರಣ್ಯರು ತಾಯಿ ಭುವನೇಶ್ವರಿಯ ಪೂಜೆಯೊಂದಿಗೆ ತಮ್ಮ ಕಾರ್ಯವನ್ನು ಆರಂಭಿಸಿದ್ದರು ಎಂದು ನೆನಪಿಸಿದರು. ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಮೇಲುಕೋಟೆಯಲ್ಲಿ ಭುವನೇಶ್ವರಿ ಮಂಟಪ ನಿರ್ಮಿಸಿದರೇ ಕೊನೆಯ ದೊರೆ ಜಯಚಾಮರಾಜೇಂದ್ರ ಒಡೆಯರ್ ತಮ್ಮ ಅರಮನೆಯಲ್ಲಿ ತಾಯಿ ಭುವನೇಶ್ವರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ತಮ್ಮ ಜೀವನ ಪರ್ಯಂತ ಆರಾಧಿಸಿದ್ದರು ಎಂದು ಹೇಳಿದರು.…

Read More

ಚಿಕ್ಕಮಗಳೂರು: ಸಾಹಿತ್ಯವು ಭಾಷೆ ಸ್ವಾಧೀನವನ್ನು ಹೆಚ್ಚಿಸಿ, ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ವೈವಿಧ್ಯಮಯ ದೃಷ್ಟಿಕೋನಗಳನ್ನು ಅನ್ವೇಷಿಸುವುದು, ಸಹನುಭೂತಿಯನ್ನು ಉತ್ತೇಜಿಸುವುದು ಹಾಗೂ ಸಾಂಸ್ಕೃತಿಕ ತಿಳುವಳಿಕೆಯನ್ನು ಬೆಳೆಸುವುದರ ಜೊತೆಗೆ ವ್ಯಕ್ತಿತ್ವ ವಿಕಸನದಲ್ಲಿ ಸಾಹಿತ್ಯಗಳ ಪಾತ್ರ ಬಹುಮುಖ್ಯವಾದುದು ಎಂದು ಎ.ಐ.ಟಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತಾಧಿಕಾರಿ ಡಾ. ಸುಬ್ಬರಾಯ ಹೇಳಿದರು. ಅಮೃತೇಶ್ವರ ಪ್ರಕಾಶನ ಮೈಸೂರು, ನವೀನ್ ಪ್ರಕಾಶನ , ಪೂರ್ಣಿಮಾ ಪ್ರಕಾಶನ, ಬೊಂಗಾಳೆ ಪ್ರಕಾಶನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು ಇವರ ವತಿಯಿಂದ ಇಂದು ನಗರದ ಎ.ಐ.ಟಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಲಕ್ಷ್ಮೀಶಾಮರಾವ್ ಮಾಳತ್ನರ್ ಮತ್ತು ಎಸ್. ಪೂರ್ಣಿಮಾ ಬಾಬು ಶಿರಾ ಅವರ ಕೃತಿಗಳ ಬಿಡುಗಡೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಲ್ಪನೆಯನ್ನು ಉತ್ತೇಜಿಸುವುದು, ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುವುದು, ಮನರಂಜನೆಯನ್ನು ನೀಡುವುದು, ಮತ್ತು ಪ್ರೀತಿ, ನ್ಯಾಯ, ಬೋಧನೆ; ಇವೆಲ್ಲವನ್ನೂ ಸಾಹಿತ್ಯ ಕೃತಿಗಳನ್ನು ಓದುವ ಮೂಲಕ ಮತ್ತ? ಶೋಧಿಸಬಹುದು ಮತ್ತು ಆಳಗೊಳಿಸಬಹುದು ಎಂದರು ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ…

Read More

ಚಿಕ್ಕಮಗಳೂರು: ಸಾರ್ವಜನಿಕರ ಬೇಡಿಕೆಗಳನ್ನು ಅರಿತು ಪೂರೈಸುವುದರ ಜೊತೆಗೆ ಅವರ ಉತ್ತಮ ಜೀವನ ನಿರ್ವಹಣೆಗೆ ಸಹಕರಿಸುವುದು ನಮ್ಮ ಜವಾಬ್ದಾರಿ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು. ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಚಿಕ್ಕಮಗಳೂರಿನಿಂದ ಕಳಸಾಪುರ ಮಾರ್ಗವಾಗಿ ಬೆಂಗಳೂರಿಗೆ, ಹಾಗೂ ಸಗನೀಪುರದಿಂದ ಸಂಚರಿಸುವ ನೂತನ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ನಂತರ ಮಾತನಾಡಿದ ಅವರು ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿ ಮಹಿಳಾ ಸಬಲೀಕರಣಕ್ಕೆ ದಾಪುಗಾಲಿಟ್ಟಿದೆ ಎಂದರು. ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣವನ್ನು ನೀಡಿರುವುದು ಮಹಿಳೆಯರ ಆರ್ಥಿಕ ಉನ್ನತಿಗೂ ಕಾರಣವಾಗಿದೆ. ಸಗನೀಪುರ ಗ್ರಾಮದ ಅನೇಕರು ಕೃಷಿ ಅವಲಂಬಿತರಾಗಿದ್ದು ಇಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ನಗರದಲ್ಲಿನ ಶಾಲೆಗಳಿಗೆ ತೆರಳಿ ವಿದ್ಯಾಭ್ಯಾಸ ನಿರ್ವಹಿಸಲು ಆಗುತ್ತಿರುವ ಅಡಚಣೆಯನ್ನು ಗಮನಿಸಿ ಇಂದು ಈ ಗ್ರಾಮಕ್ಕೆ ವಿಶೇಷ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಪೋಷಕರು ಮಕ್ಕಳ ಶಿಕ್ಷಣಕ್ಕೆ ಒತ್ತುನೀಡಬೇಕು. ಈ ಭಾಗದಲ್ಲಿ ಬಸ್ ನಿಲ್ದಾಣದ ಬೇಡಿಕೆ ಇದ್ದು ಮುಂದಿನ ದಿನಗಳಲ್ಲಿ ಬಸ್ ನಿರ್ಮಾಣ ಕಾಮಗಾರಿಯ…

Read More

ಚಿಕ್ಕಮಗಳೂರು: ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ ಸಂಬಳ ೧೫ ಸಾವಿರ ರೂ. ನೀಡಬೇಕೆಂದು ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಮಹಿಳೆಯರು ಅಕ್ಷರದಾಸೋಹ ಕಾರ್ಯಕರ್ತೆಯರ ಫೆಡರೇಷನ್ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ ಬಿಸಿಯೂಟ ಕಾರ್ಯಕರ್ತೆಯರು ಹಲವು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಧರಣಿ ನಡೆಸಿ, ಫೆಡರೇಷನ್ ಮುಖಂಡರ ನೇತೃತ್ವ ದಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಮೀನಾನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು. ಶಾಲಾಮಕ್ಕಳ ಬಿಸಿಯೂಟ ತಯಾರಿಕಾರ್ಯದಲ್ಲಿ ದುಡಿಯುತ್ತಿರುವ ಕಾರ್ಯಕರ್ತೆಯರಿಗೆ ಸರ್ಕಾರ ತಿಂಗಳಿಗೆ ಕೇವಲ ೩೬೦೦ ರೂ.ಗಳಿಂದ ೩೭೦೦ರೂ.ಗಳವರೆಗೆ ನೀಡುತ್ತಿದೆ.ಇಂದಿನ ಬೆಲೆ ಏರಿಕೆ ದಿನದಲ್ಲಿ ಜೀವನ ಸಾಗಿಸುವುದು ಕಷ್ಟವಾಗಿದೆ. ಮಕ್ಕಳು ವಿದ್ಯಾಭ್ಯಾಸ ಮತ್ತು ಸಂಸಾರ ಸಾಗಿಸಲು ಕಷ್ಟಕರವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ರಾಜ್ಯಸರ್ಕಾರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ೬ನೇ ಗ್ಯಾರಂಟಿಯಾಗಿ ೬ಸಾವಿರ ರೂ. ಸಂಬಳ ನೀಡುವುದಾಗಿ ಘೋಷಣೆಮಾಡಲಾಗಿತ್ತು.ಇದುವರೆಗೆ ಸರ್ಕಾರ ಹೇಳಿದಂತೆ ನಡೆದುಕೊಳ್ಳದೆ ಮಹಿಳಾ ಶೋಷ ಣೆಗೆ ಕಾರಣವಾಗಿದೆ.ಕೇಂದ್ರ ಸರ್ಕಾರ ಕಳೆದ ೧೩ ವರ್ಷಗಳಿಂದ ತಾನು ನೀಡಬೇಕಾಗಿದ್ದ ಶೇ.೬೦ರಷ್ಟು ಸಂಬಳವನ್ನು ನೀಡದೆ ಕೇವಲ ೬೦೦ ರೂ.ಗಳನ್ನು…

Read More

ಚಿಕ್ಕಮಗಳೂರು: ಕರ್ನಾಟಕ ಸಂಗೀತದ ಪಿತಾಮಹ ಸಂತ ಶ್ರೀ ತ್ಯಾಗರಾಜರು ಮತ್ತು ದಾಸ ಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು. ಆರಾಧನೆ ಅಂಗವಾಗಿ ಶ್ರೀ ತ್ಯಾಗರಾಜರು ಮತ್ತು ಪುರಂದರ ದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಮಲೆನಾಡು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು. ಬೋಧಕ. ಬೋಧಕೇತರ ಸಿಬ್ಬಂದಿ. ಗಣ್ಯರು ಮತ್ತು ಅತಿಥಿಗಳು ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಿದರು. ಸ್ಥಳೀಯ ಸಂಗೀತಗಾರರಿಂದ ಶ್ರೀ ತ್ಯಾಗರಾಜ ಸ್ವಾಮಿಗಳ ಪಂಚರತ್ನ ಕೃತಿಗಳ ಗಾಯನ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಲೆನಾಡು ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್. ಕೇಶವಮೂರ್ತಿ ಸಂತರು ಮತ್ತು ಮಹಾತ್ಮರ ಬದುಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸುವ ನಿಟ್ಟಿನಲ್ಲಿ ಕಳೆದ ೪೩ ವರ್ಷಗಳಿಂದ ನಿರಂತರವಾಗಿ ಶ್ರೀ ತ್ಯಾಗರಾಜರು ಮತ್ತು ಪುರಂದರ ದಾಸರ ಆರಾಧನೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಖ್ಯಾತ ಯಕ್ಷಗಾನ ಕಲಾವಿದ. ವಿದ್ವಾಂಸ. ವಾಸುದೇವ ರಂಗಾಭಟ್ ಮಾತನಾಡಿ ಸಂತ ಶ್ರೀ ತ್ಯಾಗರಾಜರು…

Read More