Subscribe to Updates
Get the latest creative news from FooBar about art, design and business.
- e-paper (18-07-2025) Chikkamagalur Express
- ನಿವೃತ್ತ ಪಿಂಚಣಿದಾರರಿಗೆ ಯಥಾವತ್ ಸೌಲಭ್ಯ ಪರಿಷ್ಕರಿಸಲು ಮನವಿ
- ಅಂಬಳೆಯಲ್ಲಿ ಅಂಬೇಡ್ಕರ್ ವಸತಿ ಶಾಲೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ
- e-paper (17-07-2025) Chikkamagalur Express
- ಶಾಲಾ ಕಟ್ಟಡಗಳ ದುರಸ್ಥಿಗೆ ಕ್ರಮ ವಹಿಸಲು ಸೂಚನೆ
- ಸಚಿವ ಪ್ರಿಯಾಂಕ್ ಖರ್ಗೆಗೆ ಆಪ್ತನ ಡ್ರಗ್ಸ್ ದಂಧೆ ಬಗ್ಗೆ ಗೊತ್ತಿಲ್ಲವೇ ….?
- e-paper (16-07-2025) Chikkamagalur Express
- ಗಿರಿ ಪ್ರದೇಶದ ಪ್ರವಾಸೋದ್ಯಮ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ
Author: chikkamagalur express
ಚಿಕ್ಕಮಗಳೂರು: ಕಾನೂನು ಕ್ರಮ ಕೈಗೊಳ್ಳುತ್ತೇವೆ, ಹಕ್ಕುಚ್ಯುತಿ ವಂಡಿಸಲಾಗುವುದು ಮಾನವ ಹಕ್ಕಿಗೂ ದೂರು ನೀಡುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ನನ್ನ ಮೇಲೆ ಯಾರ್‍ಯಾರು ಕೊಲೆ ಪ್ರಯತ್ನ ಮಾಡಿದ್ದರು ಎನ್ನುವುದಕ್ಕೆ ಈಗಾಗಲೇ ದೂರು ನೀಡಲಾಗಿದೆ. ಎಫ್.ಐ.ಆರ್.ಇನ್ನೂ ದಾಖಲಾಗಿಲ್ಲವೆಂದು ತಿಳಿಸಿದರು. ಕೊಲೆ ಪ್ರಯತ್ನ ಹಾಗೂ ಅದಕ್ಕೆ ಕುಮ್ಮಕ್ಕು ಕೊಟ್ಟವರನ್ನು ಪೊಲೀಸರು ಬಂಧಿಸಿ ಕ್ರಮಕೈಗೊಳ್ಳದಿದ್ದರೆ ಬೆಳಗಾವಿ ಚಲೋ ಮಾಡೋಣವೆಂದು ನಮ್ಮ ಪಕ್ಷದ ರಾಜ್ಯಾಧ್ಯ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆಂದರು. ದೊಡ್ಡ ಮನುಷ್ಯರು ಹೇಳಿದ್ದಾರೆ. ಬೆಳಗಾವಿಯಿಂದ ಬದುಕಿ ಬಂದದ್ದೇ ಪುಣ್ಯ ಎಂದು. ಬೆಳಗಾವಿ ಜನ ಯಾರು ಏನು ಮಾಡುತ್ತಾರೆ. ನೋಡೋಣ ಬಾ ಎನ್ನುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದರು. ನ್ಯಾಯಾಂಗ ತನಿಖೆಗೆ ಒತ್ತಾಯಿಸಿರುವುದು ಸತ್ಯಾಂಶ ಹೊರ ಬರಲಿ ಎನ್ನುವ ಕಾರಣಕ್ಕೆ.ಮುಖ್ಯಮಂತ್ರಿಗಳಿಗೆ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಸಿಗುವುದಿಲ್ಲ ಅಂತ ಗೊತ್ತಾಗಿ ಕಬ್ಬಿನ ಗದ್ದೆಗೆ ಕಳುಹಿಸಿದ್ದರು. ೬೦ ಜನ ಪೊಲೀಸರ ಜೊತೆಗಲ್ಲ, ೬ ಜನ…
ಚಿಕ್ಕಮಗಳೂರು: ವಿಧಾನ ಪರಿಷತ್ ಶಾಸಕ ಡಾ.ಸಿ.ಟಿ.ರವಿಯನ್ನು ಕಾನೂನು ಬಾಹಿರವಾಗಿ ಬಂಧಿಸುವ ಮೂಲಕ ಸಂವಿಧಾನ ವಿರೋಧಿಯಾಗಿ, ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವರ್ತನೆ ಖಂಡಿಸಿ ಜಿಲ್ಲಾ ಬಿಜೆಪಿ ಜಿಲ್ಲೆಯಾದ್ಯಂತ ನಡೆಸಿದ್ದ ಪ್ರತಿಭಟನೆ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಜಿಲ್ಲಾಧ್ಯಕ್ಷ ದೇವರಾಜ್‌ಶೆಟ್ಟಿ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಮ್ಮ ನಾಯಕ ಡಾ.ಸಿ.ಟಿ.ರವಿ ಅವರನ್ನು ಬಂಧಿಸಿದ ನಂತರ ಪೊಲೀಸರು ನಡೆಸಿಕೊಂಡಿರುವ ಕ್ರಮವನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ. ನಾಯಕರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದ ನ್ಯಾಯಾಲಯದ ಆದೇಶವನ್ನು ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ ಎಂದು ತಿಳಿಸಿದರು. ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ನಮ್ಮ ಪಕ್ಷದ ನೂರಾರು ಕಾರ್ಯಕರ್ತರನ್ನು ಬಂಧಿಸಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ದು ಹೋರಾಟವನ್ನು ಹತ್ತಿಕ್ಕುವ ಯತ್ನವು ಪೊಲೀಸರಿಂದ ನಡೆಯಿತು ಆದರೆ ಯಾವುದಕ್ಕೂ ಬಗ್ಗದೆ ಪ್ರತಿಭಟನೆಯಲ್ಲಿ ಜಿಲ್ಲೆಯಾದ್ಯಂತ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಯಶಸ್ವಿಯಾಗಿದೆ ಎಂದು ಹೇಳಿದರು. ಹೋರಾಟದಲ್ಲಿ ಪಕ್ಷವನ್ನು ಬೆಂಬಲಿಸಿದ ವಿಧಾನಪರಿಷತ್ ಉಪಸಭಾಪತಿ, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ವಿವಿಧ ಮೋರ್ಚಾಗಳು ಅಧ್ಯಕ್ಷರು, ಪದಾಧಿಕಾರಿಗಳು,…
Municipal Council:ಸಾರ್ವಜನಿಕ ಕರುಪ್ಲಾಸ್ಟಿಕ್ ನಿಯಂತ್ರಣ, ಪಾರ್ಕ್ ಅಭಿವೃದ್ಧಿ ಇನ್ನಿತರೆ ಕೆಲಸಗಳಲ್ಲಿ ಕೈಜೋಡಿಸಬೇಕು
ಚಿಕ್ಕಮಗಳೂರು: ನಗರಸಭೆಯ ೨೦೨೫-೨೬ ನೇ ಸಾಲಿನ ಆಯ-ವ್ಯಯ ಮಂಡಿಸುವ ಸಲುವಾಗಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಗರದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ನಾಗರೀಕರು ಹಲವು ಸಲಹೆ ನೀಡಿದರು. ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂಜಿನೀಯರ್ ನಾಗೇಂದ್ರ ಮಾತನಾಡಿ, ನಗರಸಭೆ ಆರ್ಥಿಕ ಸಬಲತೆ ಕಂಡುಕೊಳ್ಳುವ ಸಲುವಾಗಿ ಕಂದಾಯ ವಸೂಲಾತಿಗೆ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು. ಕಂದಾಯ ಬಾಕಿ ಉಳಿಸಿಕೊಂಡವರಿಗೆ ಅಂಚೆ ಮೂಲಕ ವರ್ಷಕ್ಕೊಮ್ಮೆ ನೋಟೀಸು ಕಳಿಸುವ ಕೆಲಸ ಮಾಡಿದರೆ ಮನೆ ಮನೆಗೆ ಸಿಬ್ಬಂದಿ ತೆರಳಿ ಮನವರಿಕೆ ಮಾಡುವುದು ತಪ್ಪುತ್ತದೆ ಎಂದು ಸಲಹೆ ಮಾಡಿದರು. ಕೆಲವರ ನಿವೇಶನ ಹಾಗೂ ಕಟ್ಟಡದ ಮೂಲ ಅಳತೆಗೂ ಕಂದಾಯ ಕಟ್ಟುತ್ತಿರುವ ಆಸ್ತಿಯ ಅಳತೆಗೂ ತುಂಬಾ ವ್ಯತ್ಯಾಸಗಳಿವೆ. ಈ ಮೂಲಕ ನಗರಸಭೆಗೆ ವಂಚಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾಂತ್ರಿಕತೆಯನ್ನೂ ಬಳಸಿಕೊಂಡು ನಿಖರವಾದ ಅಳತೆಯ ಜಮೀನಿನ ಕಂದಾಯ ವಸೂಲಾತಿಗೆ ಕ್ರಮ ತೆಗೆದುಕೊಳ್ಳಬೇಕು. ಕಂದಾಯ ಕಟ್ಟುತ್ತಿರುವವ ಮಾಹಿತಿ ಬಗ್ಗೆ ಡೇಟಾ ಎಂಟ್ರಿ ತಯಾರಿಸಿಟ್ಟುಕೊಂಡು ತೆರಿಗೆ ಸೋರಿಕೆಯಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು.…
ಚಿಕ್ಕಮಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸಂಸತ್ತಿನಲ್ಲಿ ಹೇಳಿದ ಅವಹೇಳನಕಾರಿ ಹೇಳಿಕೆಯಿಂದ ದೇಶದ ಆತ್ಮಕ್ಕೆ ಚೂರಿ ಇರಿದಂತಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಹೇಳಿದ್ದಾರೆ. ಅವರು ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ, ಅಮಿತ್ ಷಾ ಅವರ ಹೇಳಿಕೆಯಿಂದ ಬಿಜೆಪಿ ಹಾಗೂ ಸಂಘ ಪರಿವಾರದ ನಿಜ ಬಣ್ಣ ಬಯಲಾಗಿದೆ. ಗೃಹ ಸಚಿವರಿಗೆ ಬುದ್ಧ, ಬಸವ, ಗಾಂಧಿ, ನೆಹರು, ಅಂಬೇಡ್ಕರ್ ಅವರುಗಳ ಚಿಂತನೆಗಳು ಅವರ ಜೀವನದ ಉದ್ದೇಶಗಳು ಏನೆಂದು ಅವರಿಗೆ ತಿಳಿದಿಲ್ಲ ಎಂದಿದ್ದಾರೆ. ಅಮಿತ್ ಷಾ ಅವರಿಗೆ ಅಂಬಾನಿ, ಅದಾನಿ, ಗೂಡ್ಸೆ, ಸಾವರ್ಕರ್ ಅವರ ಉದ್ದೇಶಗಳು ಮಾತ್ರ ಚೆನ್ನಾಗಿ ಗೊತ್ತಿರುವುದರಿಂದ ಈ ಹೇಳಿಕೆಯಿಂದ ಆಶ್ಚರ್ಯ ಆಗದಿದ್ದರೂ ಕೂಡ ಸಮಾಜದಲ್ಲಿ ದೊಡ್ಡ ಆತಂಕವನ್ನು ಸಂವಿಧಾನದ ವಿರುದ್ಧ ಹೇಳಿಕೆ ಹಾಗೂ ಸಂವಿಧಾನವನ್ನು ತಿರುಚುವ ಆತಂಕ ಮತ್ತೆ ಕಾಡುತ್ತಿದೆ ಎಂದು ಹೇಳಿದ್ದಾರೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ಬಿಜೆಪಿ ಸಂಸದನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಬಿಜೆಪಿಯವರ ಆರೋಪವನ್ನು ಬಿಜೆಪಿ…
ಚಿಕ್ಕಮಗಳೂರು: ಬೆಳೆಗಾರರ ಪಾಲಿಗೆ ಉರುಳಾಗಿದ್ದ ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಯನ್ನು ಹೊರಗಿಡಬೇಕು ಎನ್ನುವ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿರುವುದರ ಪರಿಣಾಮ ಸುಸ್ಥಿದಾರ ಕಾಫಿ ಬೆಳೆಗಾರರನ್ನು ಸರ್ಫೇಸಿ ಕಾಯ್ದೆ ತಪ್ಪಿಸಲು ಕೆನರಾ ಬ್ಯಾಂಕ್ ಒನ್ ಟೈಂ ಸೆಟಲ್ಮೆಂಟ್ ಅವಕಾಶವನ್ನು ಕಲ್ಪಿಸಲು ಒಪ್ಪಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮರುಪಾವತಿಸದೆ ಸುಸ್ಥಿದಾರ ಕಾಫಿ ಬೆಳೆಗಾರರಿಗೆ ಸರ್ಫೇಸಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಜಮೀನು ಹರಾಜು ಹಾಕುವ ಮೂಲಕ ಜೀವನವೇ ಅಸ್ಥಿರವಾಗುವ ಒತ್ತಡದಲ್ಲಿದ್ದವರಿಗೆ ಈಗ ಕೇಂದ್ರ ಸರ್ಕಾರ ದೊಡ್ಡದೊಂದು ರಿಲೀಫ್ ನೀಡಿದೆ ಎಂದು ತಿಳಿಸಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿಗೆ ಸಂಸದರುಗಳಾದ ಕೋಟ ಶ್ರೀನಿವಾಸ ಪೂಜಾರಿ, ಡಾ.ಮಂಜುನಾಥ್ ಇತರರ ನೇತೃತ್ವದಲ್ಲಿ ತಾವು ನಿಯೋಗ ತೆರಳಿ ಸರ್ಫೇಸಿ ಕಾಯ್ದೆಯಡಿ ತೋಟ ಹರಾಜು ಹಾಕದಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು ತಮ್ಮ ಸಚಿವಾಲಯದ ಕಾರ್ಯದರ್ಶಿಗಳ ಮೂಲಕ ಕೆನರಾ ಬ್ಯಾಂಕ್ ಎಂಡಿ ನಾಗರಾಜ್…
ಚಿಕ್ಕಮಗಳೂರು: ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆಡಿರುವ ಮಾತುಗಳು ಸಂವಿಧಾನಿಕ ನಡವಳಿಕೆಗೆ ಮಾಡಿರುವ ಅಪಚಾರವಾಗಿದೆ. ಇಂಥ ನಡವಳಿಕೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಕೆ.ಪಿ.ಸಿ.ಸಿ ವಕ್ತಾರ ರವೀಶ್ ಕ್ಯಾತನಬೀಡು ತಿಳಿಸಿದರು. ನಗರದ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಟಿ ರವಿ ಅವರು ಇಂತಹ ಅವಶ್ಯಕತೆಗಳನ್ನು ಅನೇಕ ಬಾರಿ ವಿಧಾನ ಪರಿಷತ್ ಅಧಿವೇಶನ ನಡೆಯುವಾಗ ಉಚ್ಚರಿಸಿರುವ ಉದಾಹರಣೆಗಳು ಇವೆ. ಕಳೆದ ಬಾರಿ ನಿತ್ಯ ಸುಮಂಗಲಿಯರು ಎನ್ನುವ ಅಸಂವಿಧಾನಿಕ ಪದವನ್ನು ಬಳಸಿದ್ದರು. ಇದೀಗ ಒಬ್ಬ ಮಹಿಳಾ ಸಚಿವರ ಬಗ್ಗೆ ಕೆಟ್ಟ ಪದ ಉಪಯೋಗಿಸಿರುವುದು ಕನ್ನಡ ನೆಲದ ಸ್ವಾಭಿಮಾನಿ ಹೆಣ್ಣು ಕುಲಕ್ಕೆ ಮಾಡಿರುವ ಬಹುದೊಡ್ಡ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ನಾಯಕರು ಮಾತನಾಡುವಾಗ ಸಂಸ್ಕಾರ, ಸಂಸ್ಕೃತಿ, ಮಾತೆ, ತಾಯಿ ಹೀಗೆ ಉದ್ದುದ್ದ ಭಾಷಣ ಮಾಡುತ್ತಾರೆ. ಆದರೆ ನಿರಂತರವಾಗಿ ಮಹಿಳೆಯರನ್ನು ಅಪಮಾನಿಸುವ ಸಿ.ಟಿ. ರವಿ ಅವರನ್ನು ನೋಡಿದರೆ ಸಂಘ ಪರಿವಾರ ಬಿಜೆಪಿ ನಾಯಕರಿಗೆ ಕಲಿಸಿರುವ ಪಾಠ ಏನು ಎಂಬುದು…
ಚಿಕ್ಕಮಗಳೂರು: ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಡಿ.೨೩ ರಂದು ಸಕಲೇಶಪುರದಲ್ಲಿ ಬೆಳೆಗಾರರ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಎಚ್.ಟಿ.ಮೋಹನ್ ಕುಮಾರ್ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಕಲೇಶಪುರದ ಎಪಿಎಂಸಿ ಆವರಣದಲ್ಲಿಬೆಳಗ್ಗೆ ೧೦.೩೦ ಕ್ಕೆ ಆರಂಭವಾಗುವ ಸಮಾವೇಶವನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಉದ್ಘಾಟಿಸಲಿದ್ದಾರೆ. ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ರಾಜ್ಯ ಅರಣ್ಯ ಸಚಿವ ಈಶ್ವರಖಂಡ್ರೆ, ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ಪ್ರತಿ ಪಕ್ಷ ನಾಯಕ ಆರ್.ಅಶೋಕ್, ಸಂಸದರಾದ ಶ್ರೇಯಸ್ ಪಟೇಲ್, ಕೋಟಾಶ್ರೀನಿವಾಸ ಪೂಜಾರಿ, ಯದುವೀರ್ ಕೃಷ್ಣದತ್ ಒಡೆಯರ್, ತೇಜಸ್ವಿ ಸೂರ್ಯ ಹಾಗೂ ಕಾಫಿ ಬೆಳೆಯುವ ಮೂರು ಜಿಲ್ಲೆಗಳ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತಿತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸಮಾವೇಶದಲ್ಲಿ ಕೃಷಿ ವಸ್ತು ಪ್ರದರ್ಶನ, ಯಂತ್ರೋಪಕರಣಗಳ ಪ್ರದರ್ಶನಕ್ಕಾಗಿ ೧೦೦ ಮಳಿಗೆಗಳನ್ನು ತೆರೆಯಲಾಗುವುದು. ಕಾಫಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು. ಬೆಳಗಾರರ…
ಚಿಕ್ಕಮಗಳೂರು: ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಹೊಸ ದೈನಿಕ ಧಾರಾವಾಹಿ ʼನೂರು ಜನ್ಮಕೂʼ ಕಾಫಿ ನಾಡು ಚಿಕ್ಕಮಗಳೂರಿನ ಚೆಂದದ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡಿದೆ. ಇದೇ ಡಿಸೆಂಬರ್ 23ರಿಂದ ಪ್ರತಿ ರಾತ್ರಿ 8:30ಕ್ಕೆ ಕಲರ್ಸ್ ಕನ್ನಡವಾಹಿನಿಯಲ್ಲಿ ʼನೂರು ಜನ್ಮಕೂʼ ಪ್ರಸಾರವಾಗಲಿದೆ. ಅದ್ದೂರಿ ಮತ್ತು ಪ್ರಕೃತಿ ಸೌಂದರ್ಯದ ದೃಶ್ಯ ವೈಭವವನ್ನು ಕಿರುತೆರೆಯಲ್ಲಿ ಆನಂದಿಸಬಹುದು. ‘ನೂರು ಜನ್ಮಕೂ’ ಮಾನವೀಯ ಅಂತಃಕರಣ ಹಾಗೂ ಅತಿಮಾನುಷ ಶಕ್ತಿಗಳ ಅಟ್ಟಹಾಸವನ್ನು ಮುಖಾಮುಖಿಯಾಗಿಸುತ್ತದೆ. ಹಾಗಾಗಿ ರೋಚಕ ತಿರುವುಗಳನ್ನು ಪಡೆಯುತ್ತಾ ವೀಕ್ಷಕರನ್ನು ರಂಜಿಸುತ್ತದೆ. ಸಂಬಂಧಗಳು, ಕುಟುಂಬ ನಾಟಕಗಳು ಅದನ್ನು ಮತ್ತಷ್ಟು ರಸವತ್ತಾಗಿಸುತ್ತವೆ. ಉನ್ನತ ಮಟ್ಟದ ಗ್ರಾಫಿಕ್ಸ್ ಹೊಂದಿರುವ ಈ ಧಾರವಾಹಿ ಕನ್ನಡ ಪ್ರೇಕ್ಷಕರ ಮನಸೂರೆಗೊಳಿಸುತ್ತದೆ. ಕಥೆಯಲ್ಲೇನಿದೆ?: ಮೊದಲ ನೋಟಕ್ಕೆ ‘ನೂರು ಜನ್ಮಕೂ’ ಒಂದು ಉತ್ಕಟ ಪ್ರೇಮಕಥೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕತೆಯಿದು. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರಸ್ವಾಮಿಯ ಪರಮಭಕ್ತೆಯಾದ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ…