Author: chikkamagalur express

ಚಿಕ್ಕಮಗಳೂರು: ನಗರದ ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಅಂತರ ಪ್ರೌಢಶಾಲಾ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಆಲ್ದೂರಿನ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿನಿ ಅನಘ ಪ್ರಥಮ ಸ್ಥಾನ ಪಡೆದಿದ್ದಾರೆ. ಕುವೆಂಪು ವಿದ್ಯಾನಿಕೇತನದ ನಮ್ರತಾ ದ್ವಿತೀಯ. ಹಾಸನ ಸಂತ ಜೋಸೆಫರ ಶಾಲೆಯ ಲಾವಣ್ಯ ತೃತೀಯ. ಚರ್ಚಾ ಸ್ಪರ್ಧೆಯಲ್ಲಿ ಸೈಂಟ್ ಮೇರಿಸ್ ಶಾಲೆಯ ಜೈಮಾ ದಾಹಿಯ ಮತ್ತು ಸುಮಿತ್ ಎಜುಕೇಶನ್ ಇನ್ಸ್ಟಿಟ್ಯೂಟ್ ನ ನಿಕ್ಷೇಪ್ ಪ್ರಥಮ. ಕುವೆಂಪು ಶಾಲೆಯ ಪ್ರಾರ್ಥನಾ ಹಾಗೂ ಯುನೈಟೆಡ್ ಶಾಲೆಯ ಅಪ್ರಾ ಆಜೀರ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಚಿತ್ರಕಲೆ ವಿಭಾಗದಲ್ಲಿ ಕುವೆಂಪು ವಿದ್ಯಾನಿಕೇತನದ ಸಾಯಿಪ್ರೇಕ್ಷ ಪ್ರಥಮ. ಸಂತ ಜೋಸೆಫರ ಶಾಲೆಯ ಆಶ್ರಯ್ ಎಮ್ ನಾಯಕ್ ದ್ವಿತೀಯ. ಜೆವಿಎಸ್ ಶಾಲೆಯ ದೀಪ್ತಿ ಮನ್ನಾ ತೃತೀಯ. ರಸಪ್ರಶ್ನೆಯಲ್ಲಿ ಕುವೆಂಪು ಶಾಲೆಯ ತಂಡ ಪ್ರಥಮ. ಅಂಬರ್ ವ್ಯಾಲಿ ಶಾಲೆಯ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಪ್ರಬಂಧ ಸ್ಪರ್ಧೆಯಲ್ಲಿ ಕುವೆಂಪು ವಿದ್ಯಾನಿಕೇತನದ ನುಡಿ ಆರ್ ಗೌಡ ಪ್ರಥಮ. ಪೂರ್ಣಪ್ರಜ್ಞ ಶಾಲೆಯ ಧನ್ಯಾರಾಗ ದ್ವಿತೀಯ. ಹಾಸನ ಸಂತ ಜೋಸೆಫರ…

Read More

ಚಿಕ್ಕಮಗಳೂರು: ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇ- ಸ್ವತ್ತು ದಾಖಲಾತಿ ನಿಯಮ ಸರಳೀಕರಣಗೊಳಿಸುವಂತೆ ತಾಲೂಕಿನ ಮುಗುಳವಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಎ. ರಘುನಂದನ್‌ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಹಳ್ಳಿಗಳಲ್ಲಿರುವ ಗ್ರಾಮ ಠಾಣಾ ಜಾಗವನ್ನು ಇ- ಖಾತೆ ಮಾಡಿಸಿಕೊಳ್ಳಲು ಅನಾನುಕೂಲವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಗ್ರಾಮ ಠಾಣಾ ಆಸ್ತಿಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಮೋಜಿನಿ ಗ್ರಾಮ ಠಾಣಾ ನಕ್ಷೆಗಳನ್ನು ಮುಖ್ಯ ದಾಖಲೆಯನ್ನಾಗಿ ಪರಿಗಣಿಸಿ ಇಂಢೀಕರಣ ಮಾಡಿದರೆ ನಮೂನೆ – 9 ಮತ್ತು ನಮೂನೆ- 11ಎ ದಾಖಲಿಸಿ ವಿತರಣೆ ಮಾಡಬಹುದಾಗಿತ್ತು. ಆದರೆ, ಇ-ಸ್ವತ್ತು ತಂತ್ರಾಂಶದಲ್ಲಿ ಹಲವಾರು ಬದಲಾವಣೆ ತಂದ ಕಾರಣ, ಗ್ರಾಮ ಠಾಣಾ ಜಾಗಗಳಿಗೆ ಇ-ಸ್ವತ್ತು ದಾಖಲಿಸಲು ಕಷ್ಟವಾಗುತ್ತಿದೆ ಎಂದರು. ಗ್ರಾಮ ಠಾಣಾ ಸ್ವತ್ತಿಗೆ ಗ್ರಾಮ ಠಾಣಾ ನಕ್ಷೆಯ ಜತೆಗೆ ಸೇಲ್‌ ಡೀಡ್‌ ಸೇರಿದಂತೆ ಇತರೆ ದಾಖಲೆಗಳನ್ನು ನೀಡಬೇಕೆಂದು ಕಡ್ಡಾಯಗೊಳಿಸಲಾಗಿದೆ. ಆದರೆ, ಗ್ರಾಮ ಠಾಣಾ ಆಸ್ತಿಗಳಲ್ಲಿ ಹಲವಾರು ವರ್ಷಗಳಿಂದ ಅನುಭವದಾರರಾದ ಗ್ರಾಮಸ್ಥರು ಯಾವುದೇ ದಾಖಲೆಯನ್ನು ಹೊಂದಿರುವುದಿಲ್ಲ ಎಂದು ಹೇಳಿದರು. ಗ್ರಾಮ ಪಂಚಾಯ್ತಿಗಳಲ್ಲಿ…

Read More

ಚಿಕ್ಕಮಗಳೂರು: ಚಿಕ್ಕಮಗಳೂರು – ಮಲ್ಲಂದೂರು ಮಾರ್ಗದಲ್ಲಿ ಹಾಲಿ ಎಕ್ಸ್‌ಪ್ರೆಸ್‌ ವಿದ್ಯುತ್‌ ಲೈನ್‌ ಇದೆ. ಹಾಗಾಗಿ ಆಲ್ದೂರು – ಮಲ್ಲಂದೂರು ಹೊಸ ವಿದ್ಯುತ್‌ ಲೈನ್‌ ಪ್ರಸ್ತಾವನೆಯನ್ನು ಕೈಬಿಡಬೇಕೆಂದು ಕಾಫಿ ಬೆಳೆಗಾರರು ಆಗ್ರಹಿಸಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳಿಗೆ ಸಭೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದೊಂದು ಅವೈಜ್ಞಾನಿಕ ನಿರ್ಧಾರ ಎಂದು ಕಾಫಿ ಬೆಳೆಗಾರರಾದ ರಾಜೇಂದ್ರ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಲ್ದೂರಿನಲ್ಲಿರುವ ವಿದ್ಯುತ್‌ ವಿತರಣಾ ಉಪ ಕೇಂದ್ರದಿಂದ ಮಲ್ಲಂದೂರಿನಲ್ಲಿರುವ ವಿದ್ಯುತ್‌ ಉಪ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಎರಡು ಸ್ಥಳಗಳ ನಡುವಿನ ಅಂತರ 21.68 ಕಿ.ಮೀ. ಇಷ್ಟು ದೂರದವರೆಗೆ 60 ಅಡಿ ಅಗಲ ವಿದ್ಯುತ್‌ ಲೈನ್ ಹಾದು ಹೋಗಲಿದೆ. ಒಂದೊಂದು ಪಿಲ್ಲರ್ ನಿರ್ಮಾಣಕ್ಕೆ 5 ಗುಂಟೆ ಜಾಗವನ್ನು ಬಳಸಿಕೊಳ್ಳಲಾಗುವುದು. ಇದರಿಂದ ಕಾಫಿ ತೋಟಗಳು ಮಾತ್ರವಲ್ಲ, ಅಪಾರ ಪ್ರಮಾಣದಲ್ಲಿ ಕಾಡು ನಾಶವಾಗಲಿದೆ ಎಂದು ಹೇಳಿದರು. ಸಾರ್ವಜನಿಕರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡದೆ ಜಾರಿಗೆ ತರಲಾಗುತ್ತಿದೆ. ಈ ವಿದ್ಯುತ್‌ ಲೈನ್‌ ಭದ್ರಾ ಅಭಯಾರಣ್ಯದೊಳಗೆ 4 ಕಿ.ಮೀ. ಹಾದು…

Read More

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು ಶನಿವಾರ ನರಸಿಂಹರಾಜಪುರ ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ನರಸಿಂಹರಾಜಪುರ ತಾಲೂಕಿನ ಸೀತೂರು ಗ್ರಾಮದ ಉಮೇಶ್(೫೬) ಆನೆದಾಳಿಯಿಂದ ಮೃತರಾಗಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆನೆ ಉಮೇಶ್ ಅವರ ಮೇಲೆ ದಾಳಿ ಮಾಡಿ ಸಾಯಿಸಿದೆ. ಆನೆದಾಳಿಯಿಂದ ವ್ಯಕ್ತಿ ಮೃತಪಟ್ಟಿದ್ದಾರೆ. ಆನೆಗಳ ಹಾವಳಿಗೆ ಕಡಿವಾಣ ಹಾಕುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆ ದಾಳಿಯಿಂದ ಉಮೇಶ್ ಮೃತಪಟ್ಟಿದ್ದು ಸ್ಥಳಕ್ಕೆ ನರಸಿಂಹರಾಜಪುರ ಪೊಲೀಸರು ಹಾಗೂ ಅರಣ್ಯ ಇಲಾ ಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ಮೆಣಸಿನ ಮಲ್ಲೇದೇವರಹಳ್ಳಿ, ಆಲದಗುಡ್ಡೆ, ವಸ್ತಾರೆ, ಕೆಸವಿನಮನೆ ಮೂಗ್ತಿಹಳ್ಳಿ, ಕದ್ರಿಮಿದ್ರಿ ಕಂಚಿ ನಹಳ್ಳಿ, ಕೆ.ಆರ್.ಪೇಟೆ ಕಂಬಿಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಬೀಟಮ್ಮ ಗ್ಯಾಂಗಿನ ಆನೆಗಳು ಎರಡು ಮರಿಗಳೊಂದಿಗೆ ಮಾರಿ ಕಟ್ಟೆ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟು ಜಮೀನು ತೋಟಗಳಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡುತ್ತಿರುವುದರೊಂದಿಗೆ ಜನರಲ್ಲಿ…

Read More

ಚಿಕ್ಕಮಗಳೂರು: ಕಾಫಿ ಬೆಳೆಗಾರರು, ರೈತರ ಬಗ್ಗೆ ಕಾಳಜಿ ಇಲ್ಲದ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಆಡಳಿತ ಪಕ್ಷದ ಜಿಲ್ಲೆಯ ಎಲ್ಲಾ ಶಾಸಕರ ವಿರುದ್ಧ ಗೋಬ್ಯಾಕ್ ಚಳುವಳಿಯನ್ನು ಸಧ್ಯದಲ್ಲೇ ಹಮ್ಮಿಕೊಳ್ಳುವುದಾಗಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಸಿ ಕಲ್ಮರುಡಪ್ಪ ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ೨೦ ದಿನಗಳಿಂದ ನಗರದ ಸುತ್ತಮುತ್ತ ಎರಡು ಮೂರು ಕಿ.ಮೀ ವ್ಯಾಪ್ತಿಯಲ್ಲಿ ಮೆಣಸಿನ ಮಲ್ಲೇದೇವರಹಳ್ಳಿ, ಆಲದಗುಡ್ಡೆ, ವಸ್ತಾರೆ, ಕೆಸವಿನ ಮನೆ, ಮೂಗ್ತಿಹಳ್ಳಿ, ಕದ್ರಿಮಿದ್ರಿ, ಕಂಚಿಹಳ್ಳಿ, ಕೆ.ಆರ್ ಪೇಟೆ, ಕಂಬೀಹಳ್ಳಿ ಸೇರಿದಂತೆ ಸುಮಾರು ೨೫ ಆನೆಗಳ ಗುಂಪು ದಾಂಧಲೆ ನಡೆಸಿ ರೈತರ ಬೆಳೆಹಾನಿ ಮಾಡಿದೆ ಎಂದು ಆರೋಪಿಸಿದರು. ಕಾಡಾನೆಗಳ ದಂಡು ರೈತರು ಬೆಳೆದ ಭತ್ತ, ಜೋಳ, ರಾಗಿ, ಶುಂಠಿ, ಕಾಫಿ, ಅಡಿಕೆ ಸೇರಿದಂತೆ ಅನೇಕ ಬೆಳೆಗಳು ಹಾನಿ ಮಾಡಿವೆ, ಅತೀವೃಷ್ಟಿ ಹಾನಿಯಿಂದ ಈಗಾಗಲೇ ನಲುಗಿರುವ ರೈತರು ಕಾಡಾನೆ ಹಾವಳಿಯಿಂದ ಮತ್ತಷ್ಟು ಜರ್ಝರಿತವಾಗಿದ್ದಾರೆ ಎಂದು ಹೇಳಿದರು. ಈ ಸಂಬಂಧ ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಗಂಭೀರವಾಗಿ…

Read More

ಚಿಕ್ಕಮಗಳೂರು: ಜಲಜೀವನ್ ಮಿಷನ್ ಕಾಮಗಾರಿಯನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಿ. ಶೀಘ್ರವಾಗಿ ಸಾರ್ವಜನಿಕರಿಗೆ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ವ್ಯಾಪ್ತಿಯ ಜಲಜೀವನ್ ಮಿಷನ್ ಯೋಜನೆ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿ ಕೇಂದ್ರ ಸರ್ಕಾರವು ಹರ್ ಘರ್ ಜಲ್ ಎಂಬ ಘೋಷಣೆಯೊಂದಿಗೆ ದೇಶದ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೆ ಟ್ಯಾಪ್ ಸಂಪರ್ಕಗಳ ಮೂಲಕ ಸುರಕ್ಷಿತ ಹಾಗೂ ಸಮರ್ಪಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ ನೀರಿನ ಸಮಸ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯ ಕಾಮಗಾರಿಯನ್ನು ಪ್ರದೇಶಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ಯೋಜನೆ ಸಿದ್ದಪಡಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರತಿಯೊಂದು ಮನೆಗೆ ನೀರು ಒದಗಿಸಲು ಕ್ರಮವಹಿಸಿ ಎಂದು ತಿಳಿಸಿದರು. ಕಾಮಗಾರಿಗೆ ಬಳಸುವ ಪೈಪ್, ಟ್ಯಾಪ್, ಮೀಟರ್‌ಗಳು ಹಾಗೂ ಇನ್ನಿತರ ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸಿ ನಂತರ…

Read More

ಚಿಕ್ಕಮಗಳೂರು:  ದತ್ತಮಾಲಾ ಅಭಿಯಾನಕ್ಕೆ ೨೫ ಸಂವತ್ಸರ ತುಂಬಿದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಸಂಭ್ರಮದಲ್ಲಿ ನ.೩೦ ರಂದು ಸಂಜೆ ೭ ಗಂಟೆಗೆ ನಗರ ಕೇಸರೀಕರಣ ಅಲಂಕಾರ ಉದ್ಘಾಟನೆ ಹನುಮಂತಪ್ಪ ವೃತ್ತದಲ್ಲಿ ನಡೆಯಲಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಬಜರಂಗದಳ ಜಿಲ್ಲಾ ಸಹ ಸಂಚಾಲಕ ಶ್ಯಾಮ್ ವಿ ಗೌಡ ಡಿ.೧೧ ರಂದು ಬೈಕ್‌ಜಾಥ ಶ್ರೀ ರಾಮಮಂದಿರದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ, ಡಿ.೧೩ ರಂದು ಶೋಭಾಯಾತ್ರೆಯ ಧಾರ್ಮಿಕ ಸಭೆ ನಡೆಯಲಿದ್ದು, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಧಾರ್ಮಿಕ ಪುರು?ರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಚಿಕ್ಕಮಗಳೂರಿನಲ್ಲಿ ನಡೆಯುವ ದತ್ತಜಯಂತಿ ಉತ್ಸವದ ಅಂಗವಾಗಿ ದತ್ತಮಾಲಾ ಅಭಿಯಾನ ಕಾರ್ಯಕ್ರಮ ಕಾರ್ಯಕರ್ತರಲ್ಲಿ ಧಾರ್ಮಿಕ ಭಾವನೆಗಳ ಜೊತೆಗೆ ಅಧ್ಯಾತ್ಮಿಕ ಭಾವನೆಗಳನ್ನು ಜೋಡಿಸುವ ಹಿನ್ನೆಲೆಯಲ್ಲಿ ದತ್ತಮಾಲೆ ೧೯೯೯ ನೇ ಇಸವಿಯಲ್ಲಿ ಪ್ರಾರಂಭವಾಯಿತು. ದತ್ತಮಾಲಾ ಅಭಿಯಾನದ ೨೫ನೇ ವ?ದ ರಜತ ಮಹೋತ್ಸವದ ಪ್ರಯುಕ್ತ ಇಡೀ ನಗರವನ್ನು ಕೇಸರಿ ಬಂಟಿಂಗ್ಸ್ ಧ್ವಜಗಳಿಂದ ಅಲಂಕಾರ ಮಾಡಲಾಗುವುದು ಎಂದು ತಿಳಿಸಿದರು. ಪ್ರತಿ ವ?ದಂತೆ ಈ ವ?ದ ದತ್ತಮಾಲಾ…

Read More

ಚಿಕ್ಕಮಗಳೂರು: : ಜಿಲ್ಲೆಯಲ್ಲಿ ಹಲವು ಕಂದಾಯ ಗ್ರಾಮಗಳನ್ನು ಘೋಷಿಸಬೇಕೆಂದು ಒತ್ತಾಯಿಸಿ ರೈತರ ಅರಣ್ಯಭೂಮಿ ಸಮಸ್ಯೆಗಳ ಬಗ್ಗೆ ಡಿ.೯ ರಂದು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಎರಡೂ ಸದನದಲ್ಲಿ ಚರ್ಚಿಸಿ ನಿರ್ದಿ? ಪರಿಹಾರದ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಡಿ.೫ ರಂದು ಒಂದು ಬೆಳಗ್ಗೆ ೧೦ ಗಂಟೆಗೆ ನಗರದ ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್. ವಿಜಯಕುಮಾರ್ ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ, ಈ ಧರಣಿ ಸತ್ಯಾಗ್ರಹಕ್ಕೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ರೈತರು ಭಾಗವಹಿಸಲಿದ್ದಾರೆ, ವಿವಿಧ ರಾಜಕೀಯ ಪಕ್ಷಗಳು ಸಂಘ-ಸಂಸ್ಥೆಗಳು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿ ಸದನದಲ್ಲಿ ಚರ್ಚಿಸುವಂತೆ ಆಗ್ರಹಿಸಲಾಗುವುದು, ಈ ಧರಣಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಚಿಕ್ಕಮಗಳೂರು ಜಿಲ್ಲೆ ಹಾಗೂ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿನ ಕಂದಾಯ ಮತ್ತು ಅರಣ್ಯ ಭೂಮಿಗಳ ಸಮಸ್ಯೆಗಳಾದ…

Read More