Author: chikkamagalur express

ಚಿಕ್ಕಮಗಳೂರು,: ಭಗವಂತನು ನೆಲೆಸಿರುವ ದೇವಾಲಯಗಳು ಮನುಷ್ಯನ ಮಾನ ಸಿಕ ಒತ್ತಡ ನಿವಾರಿಸುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಸಾತ್ವಿಕ ಜೀವನದತ್ತ ಕೊಂಡೊ ಯ್ಯುವ ಅತ್ಯಂತ ಪುಣ್ಯಕ್ಷೇತ್ರಗಳು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು. ತಾಲ್ಲೂಕಿನ ಉಂಡೇದಾಸರಹಳ್ಳಿಯಲ್ಲಿ ಶ್ರೀ ಲೋಕದಮ್ಮ, ಶ್ರೀ ಮುದಿಯಮ್ಮದೇವಿ ಹಾಗೂ ಶ್ರೀ ಒಂಟಿ ಕಲ್ ಭೂತಪ್ಪ ದೇವರುಗಳ ನೂತನ ವಿಗ್ರಹಗಳ ಅಷ್ಟಬಂಧ, ಪ್ರಾಣಪ್ರತಿಷ್ಟಾಪನೆ, ಕುಂಭಾಭಿಷೇಕ, ಶಿಖರ ಕಲಶೋಹಣ ಮಹೋತ್ಸವದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು. ಭಗವಂತನ ಗರ್ಭಗುಡಿಗೆ ಅರ್ಪಿಸುವ ಪೂಜಾಸಾಮಾಗ್ರಿಗಳು ಅಭಿಷೇಕದ ಬಳಿಕ ಪ್ರಸಾದವಾದಂತೆ, ಮಾನವ ಬದುಕಿನ ಜಂಜಾಟವನ್ನು ಬದಿಗಿರಿಸಿ ಮುಕ್ತ ಮನಸ್ಸಿನಿಂದ ದೇಗುಲಕ್ಕೆ ತೆರಳಿ ಹಿಂತಿರುಗಿದರೆ ಸಂಸ್ಕಾರವಂತ, ಮಾನವತಾವಧಿ ಹಾಗೂ ಮನುಷ್ಯತ್ವ ಹೊಂದುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ದೇವಾಲಯಗಳನ್ನು ಜೀರ್ಣೋದ್ದಾರ ಅಥವಾ ನೂತನ ವಾಗಿ ನಿರ್ಮಿಸಿದರೆ ಸಾಲದು, ನಿರಂತರ ಪೂಜಾಕೈಂಕಾರ್ಯಗಳನ್ನು ಕೈಗೊಳ್ಳುವುದು ಅತಿಮುಖ್ಯ. ಹೀಗಾ ಗಿ ಭಕ್ತಾಧಿಗಳು ದೇವಾಲಯಕ್ಕೆ ತೆರಳಿ ಕೆಲಕಾಲ ಪ್ರಾರ್ಥನೆ ಸಲ್ಲಿಸಿದರೆ ಹಿಂತಿರುಗಿದರೆ ಮನಸ್ಸಿನಲ್ಲಿ ಶಾಂತಿ ಲಭಿಸಲು…

Read More

ಚಿಕ್ಕಮಗಳೂರು: ಕ್ರಿಸ್‌ಮಸ್ ಪ್ರಯುಕ್ತ ಬ್ಲಾಸಮ್ ರೆಸಾರ್ಟ್‌ನಲ್ಲಿ ಕ್ರಿಸ್‌ಮಸ್ ಕೇಕ್ ಮಿಶ್ರಣ ಮಾಡಲಾಗಿದೆ, ಡಿಸಂಬರ್ ೨೫ ರ ಕ್ರಿಸ್ಮ್ಸ್‌ಗೆ ೧೫೦ ಕೆ.ಜಿ ರುಚಿ ಭರಿತ ಕೇಕ್ ತಯರಿಸಲು ಮುಂದಾಗಿದೆ. ಅದಕ್ಕೆ ಬೇಕಾಗುವ ಒಣ ದ್ರಾಕ್ಷಿ, ಗೋಡಂಬಿ,ಚೇರಿಗೆ ಶುದ್ಧ ವೈನ್, ರಮ ಮಿಶ್ರಣ ಮಡುವ (ಮೆರಿ ಮಿಕ್ಸಿಂಗ್) ಕಾರ್ಯ ಆಹ್ವಾನಿತ ಅತಿಥಿಗಳಿಂದ ನಡೆಯಿತು. ಬಂದ ಅತಿಥಿಗಳನ್ನು ಬ್ಲಾಸಮ್ ರೆಸಾರ್ಟ್‌ನ ಮಾಲೀಕರಾದ ಮಂಜುನಾಥ್ ಬಾಲಕೃಷ್ಣ ಮತ್ತು ನಿತಿನ್ ಮತ್ತು ವ್ಯವಸ್ಥಾಪಕರಾದ ನಂಜಪ್ಪ ರವರು ಆತ್ಮೀಯವಾಗಿ ಬರಮಡಿಕೊಂಡರೆ, ಸಾಲಂಕೃತ ಸಾಲು ಹಣತೆ ಎಲ್ಲರ ಗಮನ ಸೆಳೆದವು. ಬ್ಲಾಸಮ್ ರೆಸಾರ್ಟ್‌ನ ಮಾಲೀಕರಾದ ಮಂಜುನಾಥ್ ರವರು ಮಾಹಿತಿ ನೀಡಿ ಕೇಕ್ ತಯರಿಕೆಗೆ ೧.೫ ತಿಂಗಳಿನಿಂದಲೇ ತಯರಿ ಮಡಿಕೊಳ್ಳಬೇಕಾಗುತ್ತದೆ. ಒಣದ್ರಾಕ್ಷಿ, ಗೋಡಂಬಿ, ಚೆರಿಗಳನ್ನು ವೈನ್, ರಮ ಜೊತೆ ಮಿಶ್ರಣ ಮಡಿ ೧೫ ದಿನಗಳ ಕಾಲ ಇಟ್ಟು ಸಂಸ್ಕರಿಸಿ ಮತ್ತೊಮ್ಮೆ ಮಿಶ್ರಣ ಮಡಿ ರುಚಿಕರ ಕೇಕ್ ಸಿದ್ಧಪಡಿಸಲಾಗುತ್ತದೆ. ೧೫ ಕೆ.ಜಿ.ಒಣ ಹಣ್ಣುಗಳನ್ನು ಬಳಸಲಾಗಿದೆ ಎಂದು ತಿಳಿಸಿದರು. ಕರಾವಳಿ ಪ್ರದೇಶದಲ್ಲಿ ಕೇಕ್ ತಯರಿ ಸಾಂಪ್ರದಾಯಿಕ…

Read More

ಚಿಕ್ಕಮಗಳೂರು:  ಜಿಲ್ಲೆಯ ಮಲೆನಾಡಿನ ತಾಲ್ಲೂಕುಗಳಲ್ಲಿ ಕಾಫಿ ಕೃಷಿ ಮಾಡುತ್ತಿರುವ ಬೆಳೆಗಾರರು ಒಂಟಿ ಮನೆಗಳಲ್ಲಿ ವಾಸ ಮಾಡುತ್ತಿದ್ದು, ತಮ್ಮ ಪ್ರಾಣ ಹಾಗೂ ಆಸ್ತಿ ರಕ್ಷಣೆಗಲ್ಲದೆ ಧಾರ್ಮಿಕ ಸಂಪ್ರದಾಯದ ಆಚರಣೆಗಳಿಗೆ ಬಂದೂಕುಗಳನ್ನು ಹೊಂದಿದ್ದು, ಈ ಹಿನ್ನೆಯಲ್ಲಿ ನಾಗರೀಕ ಬಂದೂಕು ತರಬೇತಿ ಪಡೆದವರಿಗೆ ಬಂದೂಕು ಪರವಾನಗಿ ನೀಡುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮೂಡಿಗೆರೆ ತಾಲ್ಲೂಕು ಬೆಳೆಗಾರ ಸಂಘ ಮನವಿ ಸಲ್ಲಿಸಿದೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಬಿ.ಆರ್ ಬಾಲಕೃಷ್ಣ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯಿಂದ ಬಂದೂಕು ಪರವಾನಗಿ ಪಡೆಯಲು ನಾಗರೀಕ ಬಂದೂಕು ತರಬೇತಿ ಹೊಂದುವುದು ಖಡ್ಡಾಯವಾಗಿರುತ್ತದೆ ಎಂಬ ಆದೇಶ ಅನ್ವಯ ಬೆಳೆಗಾರರಿಗೆ ಬಂದೂಕು ಪರವಾನಗಿ ನೀಡುವಂತೆ ಒತ್ತಾಯಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಮಹಿಳಾ ಬೆಳೆಗಾರರು ಸೇರಿದಂತೆ ಬೆಳೆಗಾರರು ತರಬೇತಿ ಹೊಂದಿದ್ದು, ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದವರಿಗೆ ತಮ್ಮ ಇಲಾಖೆಯಿಂದ ಪ್ರಮಾಣ ಪತ್ರವನ್ನು ನೀಡಲಾಗಿದ್ದು, ಆದ್ದರಿಂದ ಬಂದೂಕು ಪರವಾನಗಿ ನೀಡಲು ತಮ್ಮ ಇಲಾಖೆಯಿಂದ ಬಹುತೇಕ ಬೆಳೆಗಾರರಿಗೆ ನಿರಾಕರಿಸಿದ್ದಾರೆ ಎಂದು…

Read More

ಚಿಕ್ಕಮಗಳೂರು: ವಿದ್ಯಾರ್ಥಿಗಳು ದೇಶದ ಆಸ್ತಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಅವರನ್ನು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯ ಎಂದು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದರು. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ, ಶಾ.ಶಿ.ಇ, ಜಿಲ್ಲಾ ಪಂಚಾಯಿತಿ, ಉಪನಿರ್ದೇಶಕರ ಕಛೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಇಂದು ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಸಂಸದೀಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು. ಪ್ರತಿಯೊಂದು ವ್ಯಕ್ತಿಗೂ ಶಿಕ್ಷಣವು ಜೀವನದ ಬಹುಮುಖ್ಯ ಭಾಗವಾಗಿದೆ. ಶಿಕ್ಷಣ ಇಲ್ಲದೆ ಸಮಾಜದ ನಡುವೆ ಜೀವಿಸುವುದು ಕಷ್ಟಕರವಾಗಿದೆ. ಸರ್ಕಾರವು ಕಡ್ಡಾಯ ಶಿಕ್ಷಣ ಜಾರಿಗೆ ತರುವುದರ ಮೂಲಕ ಎಲ್ಲಾ ಮಕ್ಕಳಿಗೂ ಉಚಿತ ಶಿಕ್ಷಣದ ಜೊತೆಗೆ ಶಿಕ್ಷಣದ ಪೂರಕಗಳನ್ನು ವ್ಯವಸ್ಥಿತವಾಗಿ ನೀಡುತ್ತಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ವಿಷಯಗಳನ್ನು ಬೋಧಿಸಿ…

Read More

ಚಿಕ್ಕಮಗಳೂರು: ಜಿಲ್ಲಾ ಶ್ವಾನ ದಳದಲ್ಲಿ ೧೦ ವರ್ಷ ೭ ತಿಂಗಳು ಸ್ಪೋಟಕ ಪತ್ತೆ ಶ್ವಾನವಾಗಿ ಕಾರ್ಯನಿರ್ವಹಿಸಿದ್ದ ಪೃಥ್ವಿ ಗುರುವಾರ ವಯೋ ನಿವೃತ್ತಿ ಹೊಂದಿದ್ದು, ಎಸ್‌ಪಿ ವಿಕ್ರಮ ಅಮಟೆ, ಎಎಸ್‌ಪಿ ಕೃಷ್ಣಮೂರ್ತಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಸ್‌ಪಿ ಕಚೇರಿಯಲ್ಲಿ ಗುರುವಾರ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು. ೨೦೧೪ರ ಜನವರಿ ೨ರಂದು ಜನಿಸಿದ್ದ ಪೃಥ್ವಿ ೨೦೧೪ರ ಮಾರ್ಚ್ ರಂದು ಪೊಲೀಸ್ ಶ್ವಾನ ದಳಕ್ಕೆ ಸ್ಫೋಟಕ ಪತ್ತೆ ಶ್ವಾನವಾಗಿ ಸೇರ್ಪಡೆಗೊಂಡಿತ್ತು. ಶ್ವಾನದ ಹ್ಯಾಂಡ್ಲರ್‌ಗಳಾಗಿ ವಿ.ದಿನೇಶ್, ವಿ.ಕೆ.ಲೋಕೇಶಪ್ಪ ನೇಮಕಗೊಂಡಿದ್ದರು. ಈ ಶ್ವಾನವು ಸಿಎಆರ್ ದಕ್ಷಿಣ, ಆಡುಗೋಡಿ, ಬೆಂಗಳೂರಿನಲ್ಲಿರುವ ಶ್ವಾನದಳ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿತ್ತು. ಪೃಥ್ವಿ ತನ್ನ ೧೦ ವರ್ಷ ೦೭ ತಿಂಗಳ ಸೇವಾವಧಿಯಲ್ಲಿ ರಾಜ್ಯದ ವಿವಿಧ ಬಂದೋಬಸ್ತ್ಗಳಲ್ಲಿ ಭಾಗವಹಿಸಿ ಕರ್ತವ್ಯ ನಿರ್ವಹಿಸಿ ಉನ್ನತ ಬಂದೋಬಸ್ತ್ ಗಳಲ್ಲಿ ವಿಐಪಿ ಮತ್ತು ವಿವಿಐಪಿ ಅವರ ಭದ್ರತೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಪೊಲೀಸ್ ಇಲಾಖೆಗೆ ಸಹಕರಿಸಿದೆ. ಚಿಕ್ಕಮಗಳೂರು ಜಿಲ್ಲೆಯು ನಕ್ಸಲ್ ಪೀಡಿತ ಪ್ರದೇಶವಾಗಿದ್ದು ಹಾಗೂ…

Read More

ಚಿಕ್ಕಮಗಳೂರು: ಕಾಫಿನಾಡಿಗೆ ಮತ್ತೆ ಬೀಟಮ್ಮ ಗ್ಯಾಂಗ್‌ನಲ್ಲಿದ್ದ ಕೆಲವು ಆನೆಗಳು ಬೇರ್ಪಟ್ಟಿರುವ ಕಾಡಾನೆಹಿಂಡು ಲಗ್ಗೆ ಇಟ್ಟಿದ್ದು, ಕಾಡಾನೆಗಳ ಹಿಂಡನ್ನ ಕಂಡು ಜನರು ಎದ್ದು,ಬಿದ್ದು ಓಟಕಿತ್ತಿದ್ದಾರೆ. ಅಕಾಲಿಕ ಮಳೆಯಿಂದ ಕಾಫಿತೋಟದಲ್ಲಿ ಹೂವುಬಿಟ್ಟು, ಕಾಫಿಕಟ್ಟಿ ಈಗ ಹಣ್ಣಾಗಿರುವ ಕಾಫಿಯನ್ನು ಕಾರ್ಮಿಕರು ಕೊಯ್ಲುಮಾಡುತ್ತಿರುವಾಗಲೇ ಕಾಡಾನೆ ಹಿಂಡು ತೋಟಕ್ಕೆ ಲಗ್ಗೆಇಟ್ಟಿದ್ದು, ಕಾರ್ಮಿಕರು ಜೀವಭಯದಿಂದ ಮನೆಸೇರಿಕೊಂಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ತುಡುಕೂರು ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದೆ.ಉದಯಗೌಡ ಮತ್ತು ಮಹೇಶಗೌಡ ಎಂಬುದವರ ತೋಟದಲ್ಲಿವೆ. ತೋಟದ ಗೇಟ್ ಮುರಿದು ೧೭ಕ್ಕೂ ಹೆಚ್ಚು ಆನೆಗಳು ತೋಟಕ್ಕೆ ನುಗ್ಗಿದ್ದರಿಂದ ಕಾಫಿಹಣ್ಣನ್ನು ರಸ್ತೆಯಲ್ಲಿ ಚೆಲ್ಲಿಕೊಂಡು ಕಾರ್ಮಿಕರು ಓಟ ಕಿತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿನೀಡಿ ಪರಿಶೀಲಿಸಿದ್ದಾರೆ. ಕೆಲವು ತಿಂಗಳ ಹಿಂದೆ ಇದೆಹಿಂಡು ಸಕಲೇಶಪುರದಿಂದ ಬೇಲೂರು, ಕೆ.ಆರ್.ಪೇಟೆಯ ಮೂಲಕ ಚಿಕ್ಕಮಗಳೂರು ತಾಲೂಕನ್ನು ಪ್ರವೇಶಿಸಿದ್ದವು. ವಸ್ತಾರೆ, ಆಣೂರು ಜೋಳದಾಳ್‌ಮೂಲಕ ತಳಿಹಳ್ಳ, ಜಗ್ಗನಹಳ್ಳಿಯ ತೋಟಗಳಲ್ಲಿ ಬೀಡುಬಿಟ್ಟಿದ್ದವು. ಇನ್ನೇನು ಭದ್ರಾಅಭಯಾ ರಣ್ಯಕ್ಕೆ ಮುಖಮಾಡುತ್ತವೆ ಎನ್ನುವಷ್ಟರಲ್ಲಿ ಯೂಟರ್ನ್ ಹೊಡೆದು ನಲ್ಲೂರು ಗುಡ್ಡಕ್ಕೆ ಆಗಮಿಸಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು,…

Read More

ಚಿಕ್ಕಮಗಳೂರು: ಜಿಲ್ಲೆಯಲ್ಲಿನ ಬಾಲಕಾರ್ಮಿಕರನ್ನು ಗುರುತಿಸಿ ಅವರನ್ನು ರಕ್ಷಿಸುವುದರ ಜೊತೆಗೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜಿಲ್ಲೆಯಲ್ಲಿ ೬ ರಿಂದ ೧೪ ವರ್ಷದೊಳಗಿನ ಶಾಲೆಯಿಂದ ಹೊರಗುಳಿದು ಹೋಟೆಲ್, ಕಾರ್ಖಾನೆ, ಎಸ್ಟೇಟ್ ಹಾಗೂ ಇತರೆ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಮಕ್ಕಳನ್ನು ಗುರುತಿಸಿ ಕೆಲಸಕ್ಕೆ ಕಳುಹಿಸುವ ಪೋಷಕರಿಗೆ ಅರಿವು ಮೂಡಿಸಿ ಮಕ್ಕಳನ್ನು ಶಾಲೆಗೆ ಕರೆತಂದು ಉತ್ತಮ ಶಿಕ್ಷಣ ನೀಡಬೇಕು ಹಾಗೂ ಅಪ್ರಾಪ್ತರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಿ ದೌರ್ಜನ್ಯವೆಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ, ಮಾನವ ಕಳ್ಳ ಸಾಗಾಣಿಕೆ ಚಟುವಟಿಕೆಗಳು ನಡೆಯದಂತೆ ಕ್ರಮವಹಿಸಬೇಕು ಎಂದರು. ಮಹಿಳೆಯರು ಹಾಗೂ ಮಕ್ಕಳಿಗೆ ಇಲಾಖೆ ವತಿಯಿಂದ ನೀಡುವ ಸೌಲಭ್ಯ ಮತ್ತು ಯೋಜನೆಗಳ ಕುರಿತು…

Read More

ಚಿಕ್ಕಮಗಳೂರು: ಮುನಿ ಶ್ರೀ ಮೋಹಜೀತ್ ಕುಮಾರ್‌ಜೀಯವರು ಗುರು ಪರಂಪರೆಯನ್ನು ಶ್ರೀಮಂತಗೊಳಿಸಿ ಜೀವನ ಮೌಲ್ಯಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸ ಮಾಡುವ ಮೂಲಕ ಸಾರ್ಥಕ ಜೀವನ ನಡೆಸಿದ್ದಾರೆ ಎಂದು ಬಸವ ಮಂದಿರದ ಪೀಠಾಧ್ಯಕ್ಷ ಡಾ. ಮರುಳ ಸಿದ್ದ ಸ್ವಾಮೀಜಿ ಹೇಳಿದರು. ಅವರು ಇಂದು ಕುವೆಂಪು ಕಲಾಮಂದಿರದಲ್ಲಿ ತೇರಾಪಂಥ್ ಜೈನ್ ಸಂಘ ಏರ್ಪಡಿಸಿದ್ದ ಮುನುಶ್ರೀ ಮೋಹಜೀತ್ ಕುಮಾರ್‌ಜೀರವರ ದೀಕ್ಷಾ ಜೀವನದ ಸ್ವರ್ಣ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಇಡೀ ಸಮಾಜದ ಒಳಗೆ ಇರುವ ದುಶ್ಚಟಗಳನ್ನು-ದುರ್ಬುದ್ದಿಗಳನ್ನು ಹೋಗಲಾಡಿಸಲು ಆಂದೋಲನ ಮಾಡಲು ಸಾವಿರಾರು ಕಿಲೋ ಮೀಟರ್ ಪಾದ ಯಾತ್ರೆ ನಡೆಸಿರುವ ಮುನುಶ್ರೀ ಮೋಹಜಿತ್ ಕುಮಾರ್‌ಜೀ ಅವರು ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ ಎಂದರು. ಮೋಹದ ಮೇಲೆ ದೈವ ಸನ್ಯಾಸಿ ಆಗಿದ್ದ ಮೋಹಜೀತ್ ಕುಮಾರ್‌ಜೀ ಅವರು ಅಧಿಕಾರದಿಂದ ನಮಸ್ಕಾರ ಪಡೆದುಕೊಳ್ಳಲಾಗದು ತ್ಯಾಗದಿಂದ ಮಾತ್ರ ಸಾಧ್ಯ ಎಂದು ಮನಗಂಡಿದ್ದು, ಇದು ಜಾರಿಯಾದಗ ಅಮೃತತ್ವ ಮತ್ತು ಗೌರವ ಸಿಗುತ್ತದೆ ಎಂದು ನಂಬಿದ್ದರು ಎಂದು ಹೇಳಿದರು. ಜಾಗ-ಮೋಹದ ತ್ಯಾಗದಿಂದ…

Read More