May 10, 2024

ಜಿಲ್ಲೆಯ ಶ್ವಾನದಳದ ಶ್ವಾನ ಟಿಪ್ಪುವಿಗೆ ಭಾವನಾತ್ಮಕ ಬೀಳ್ಕೊಡುಗೆ

0
ಜಿಲ್ಲೆಯ ಶ್ವಾನದಳದ ಶ್ವಾನ ಟಿಪ್ಪುವಿಗೆ ಭಾವನಾತ್ಮಕ ಬೀಳ್ಕೊಡುಗೆ

ಜಿಲ್ಲೆಯ ಶ್ವಾನದಳದ ಶ್ವಾನ ಟಿಪ್ಪುವಿಗೆ ಭಾವನಾತ್ಮಕ ಬೀಳ್ಕೊಡುಗೆ

ಚಿಕ್ಕಮಗಳೂರು: ಕಳೆದ ೧೦ ವರ್ಷಗಳಿಂದ ಪೋಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿದ ಜಿಲ್ಲೆಯ ಶ್ವಾನದಳದ ಶ್ವಾನ ಟಿಪ್ಪುವಿಗೆ ಇಂದು ಭಾವನಾತ್ಮಕ ಬೀಳ್ಕೊಡುಗೆ ನೀಡಲಾಯಿತು.

ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ರಾಮನಹಳ್ಳಿ, ಹುತಾತ್ಮರ ಸ್ಮಾರಕದ ಆವರಣದಲ್ಲಿ ಇಂದು ಏರ್ಪಡಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ ಮೀನಾನಾಗರಾಜ್ ಶ್ವಾನ ಟಿಪ್ಪು ಕರ್ತವ್ಯದಿಂದ ನಿವೃತ್ತಗೊಂಡ ಹಿನ್ನೆಲೆಯಲ್ಲಿ ಶಾಲು ಹೊದಿಸಿ ಮಣಿಹಾರ ಹಾಕಿ ಬೀಳ್ಕೊಡುಗೆ ನೀಡಲಾಯಿತು. ಕಳೆದ ೧೦ ವರ್ಷಗಳಿಂದ ದುಡಿದ ಶ್ವಾನ ಟಿಪ್ಪು ನಿವೃತ್ತ ಜೀವನ ಸುಖಕರವಾಗಿರಲೆಂದು ಪೋಲೀಸ್ ವರಿಷ್ಠಾಧಿಕಾರಿ ವಿಕ್ರಮಅಮಟೆ, ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಹಾರೈಸಿದರು.

ನಿವೃತ್ತಗೊಂಡು ಟಿಪ್ಪು ಶ್ವಾನವು ೨೦೧೩ರಲ್ಲಿ ಜಿಲ್ಲಾ ಪೋಲೀಸ್ ಇಲಾಖೆಯ ಶ್ವಾನದಳಕ್ಕೆ ಅಪರಾಧ ಪತ್ತೆ ಶ್ವಾನವಾಗಿ ಸೇರ್ಪಡೆಯಾಗಿತ್ತು.

ಆ ಶ್ವಾನವನ್ನು ಇಲಾಖೆಯ ತರಬೇತುದಾರರಾದ ಮಂಜುನಾಥ್‌ರವರು ಮಧ್ಯ ಪ್ರದೇಶದ ಟೇಕನ್‌ಪುರದಲ್ಲಿರುವ ಬಿಎಸ್‌ಎಸ್ ಶ್ವಾನದಳ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗಿತ್ತು.

ನಂತರದ ದಿನಗಳಲ್ಲಿ ಇಲಾಖೆಯ ಸಹಾಯಕ ನಿರ್ವಾಹಕರಾದ ಕುಮಾರ್‌ರವರೊಂದಿಗೆ ಸೇವೆ ಆರಂಭಿಸಿದ ಶ್ವಾನ ಟಿಪ್ಪು ತನ್ನ ಸೇವಾವಧಿಯಲ್ಲಿ ಜಿಲ್ಲೆಯ ವಿವಿಧ ಪೋಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಕಳ್ಳತನ, ದರೋಡೆ, ಕೊಲೆ ಇತ್ಯಾದಿ ೩೫ ಪ್ರಕರಣಗಳಲ್ಲಿ ಸುಳಿವು ನೀಡಿ ೯ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಸಹಕರಿಸಿತ್ತು.

೨೦೧೬,-೨೦೧೯ ಮತ್ತು ೨೦೨೦ನೇ ಸಾಲಿನಲ್ಲಿ ವಲಯ ಮಟ್ಟದ ಪೋಲೀಸ್ ಕರ್ತವ್ಯ ಕೂಟದಲ್ಲಿ ಬೆಳ್ಳಿ ಪದಕಕ್ಕೆ ಭಾಜನವಾಗಿತ್ತು.

೨೦೧೯ನೇ ಸಾಲಿನಲ್ಲಿ ರಾಜ್ಯ ಮಟ್ಟದ ಪೋಲೀಸ್ ಕರ್ತವ್ಯ ಕೂಟದಲ್ಲಿ ಭಾಗವಹಿಸಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇತ್ತೀಚೆಗೆ ಜಿಲ್ಲಾಡಳಿತದಿಂದ ನಡೆದ ಜಿಲ್ಲಾ ಉತ್ಸವದ ಡಾಗ್ ಶೋನಲ್ಲಿ ಭಾಗವಹಿಸಿತ್ತು.

ಇದೇ ಸಂದರ್ಭದಲ್ಲಿ ಟಿಪ್ಪು ಶ್ವಾನದ ನಿರ್ವಾಹಕರಾದ ಮಂಜುನಾಥ್‌ರವರಿಗೆ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಜಿ.ಪಂ. ಸಿಇಓ ಗೋಪಾಲಕೃಷ್ಣ ಇದ್ದರು.

An emotional farewell to the dog tippu of the district dog unit

About Author

Leave a Reply

Your email address will not be published. Required fields are marked *