Subscribe to Updates
Get the latest creative news from FooBar about art, design and business.
- e-paper (18-07-2025) Chikkamagalur Express
- ನಿವೃತ್ತ ಪಿಂಚಣಿದಾರರಿಗೆ ಯಥಾವತ್ ಸೌಲಭ್ಯ ಪರಿಷ್ಕರಿಸಲು ಮನವಿ
- ಅಂಬಳೆಯಲ್ಲಿ ಅಂಬೇಡ್ಕರ್ ವಸತಿ ಶಾಲೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ
- e-paper (17-07-2025) Chikkamagalur Express
- ಶಾಲಾ ಕಟ್ಟಡಗಳ ದುರಸ್ಥಿಗೆ ಕ್ರಮ ವಹಿಸಲು ಸೂಚನೆ
- ಸಚಿವ ಪ್ರಿಯಾಂಕ್ ಖರ್ಗೆಗೆ ಆಪ್ತನ ಡ್ರಗ್ಸ್ ದಂಧೆ ಬಗ್ಗೆ ಗೊತ್ತಿಲ್ಲವೇ ….?
- e-paper (16-07-2025) Chikkamagalur Express
- ಗಿರಿ ಪ್ರದೇಶದ ಪ್ರವಾಸೋದ್ಯಮ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ
Author: chikkamagalur express
ಚಿಕ್ಕಮಗಳೂರು: : ಜಿಲ್ಲೆಯಲ್ಲಿ ಸುಮಾರು ೩೮೦ ಜನ ಲಿಂಗತ್ವ ಅಲ್ಪಸಂಖ್ಯಾತರು ನೋಂದಾಯಿತರಾಗಿದ್ದು, ಇವರಲ್ಲಿ ೨೫ ಜನ ಮಾತ್ರ ಗುರುತಿನ ಚೀಟಿ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಲಿಂಗತ್ವ ಅಲ್ಪಸಂಖ್ಯಾತರು ತಪ್ಪದೆ ಗುರುತಿನ ಚೀಟಿ ಪಡೆಯಲು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಹೇಳಿದರು. ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಿನ್ನೆ ನಡೆದ ಚೇತನ, ಧನಶ್ರೀ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲಿಂಗತ್ವ ಅಲ್ಪಸಂಖ್ಯಾತರು ಸರ್ಕಾರದ ಯೋಜನೆಗಳನ್ನು ಪಡೆಯಲು ಕಡ್ಡಾಯವಾಗಿ ಗುರುತಿನ ಚೀಟಿ ಪಡೆದು ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದ ಅವರು ಲಿಂಗತ್ವ ಅಲ್ಪಸಂಖ್ಯಾತರಿಗೆ ವಿವಿಧ ಇಲಾಖೆಗಳಿಗೆ ನಡೆಯುವ ನೇಮಕಾತಿಗಳಲ್ಲಿ ಆದ್ಯತೆ, ವಸತಿ ಸೌಲಭ್ಯ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ ಸೇವೆಗಳನ್ನು ಪಡೆಯಲು ಆನ್‌ಲೈನ್ ಅರ್ಜಿ ಸಲ್ಲಿಸಿ ಗುರುತಿನ ಚೀಟಿ ಪಡೆದು ಸೌಲಭ್ಯ…
ಚಿಕ್ಕಮಗಳೂರು: : ಮೈಲಿಮನೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ರಮ್ಯ ಪೂರ್ಣೇಶ್ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹೆಚ್.ಡಿ ರೇವಣ್ಣ ಘೋಷಿಸಿದರು. ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಪ್ರಪಂಚದಲ್ಲೇ ಅತೀ ದೊಡ್ಡ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ ಭಾರತ, ಈ ಸಂವಿಧಾನದಡಿ ಎಲ್ಲರೂ ಹೇಗೆ ಕೂಡಿ ಬಾಳಬೇಕೆಂಬ ಬಗ್ಗೆ ಅಧಿಕಾರ ವಿಕೇಂದ್ರೀಕರ ವ್ಯವಸ್ಥೆಯನ್ನು ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಜಾರಿಮಾಡಿದ್ದಾರೆಂದು ಹೇಳಿದರು. ಇಂದು ಅದರ ಭಾಗವಾಗಿ ಎಲ್ಲರೂ ಅಧಿಕಾರ ಅನುಭವಿಸುತ್ತಿದ್ದೇವೆ. ಮೈಲಿಮನೆ ಗ್ರಾಮ ಪಂಚಾಯಿತಿಗೆ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯಾಗಿ ರಮ್ಯ ಪೂರ್ಣೇಶ್ ಆಯ್ಕೆಯಾಗಿದ್ದಾರೆ, ಅಧಿಕಾರ ಸಿಕ್ಕಿದ ಈ ಸಂದರ್ಭದಲ್ಲಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು. ಮುಂದಿನ ಪೀಳಿಗೆ ನಿಮ್ಮನ್ನು ಗುರ್ತಿಸುವ ನಿಟ್ಟಿನಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯಿತಿಯ ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಅಭಿವೃದ್ಧಿ ಸಾಧಿಸಿ ಮುಂದಿನ ಅಧ್ಯಕ್ಷರಿಗೆ ಮಾದರಿಯಾಗಿ, ಮಾರ್ಗದರ್ಶಕರಾಗಿ ಎಂದು…
ಚಿಕ್ಕಮಗಳೂರು: ಕಾಫಿನಾಡು ಜಿಲ್ಲೆಯಲ್ಲಿ ೨೦೨೩ನೇ ಸಾಲಿನಲ್ಲಿ ನಡೆದಿರುವ ಅಪರಾಧ ಪ್ರಕರಣಗಳಿಗೆ ಹೋಲಿಕೆ ಮಾಡಿದರೆ ಕಳೆದ ೨೦೨೪ ರಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಂದು ವ?ದಲ್ಲಿ ಒಟ್ಟು ೫೯೦೪ ಪ್ರಕರಣಗಳು ದಾಖಲಾಗಿವೆ. ೨೦೨೩ರಲ್ಲಿ ಜಿಲ್ಲೆಯಲ್ಲಿ ೬೨೪೧ ಪ್ರಕರಣಗಳು ದಾಖಲಾಗಿದ್ದರೆ, ಕಳೆದ ವ? ೫೯೦೪ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕಳೆದ ವ? ೭೭೫ ಅಸ್ವಾಭಾವಿಕ ಸಾವುಗಳು ಸಂಭವಿಸಿದ್ದು, ೫೫ ವಂಚನೆ ಪ್ರಕರಣಗಳು ದಾಖಲಾಗಿವೆ. ಕೆ.ಪಿ. ಆಕ್ಟ್ ಅಡಿಯಲ್ಲಿ ೨೦೨೩ರಲ್ಲಿ ೮೭೧೨ ಕೇಸುಗಳು ದಾಖಲಾಗಿದ್ದು, ಈ ವ?ದಲ್ಲಿ ೧೨೩೬೫ ಪ್ರಕರಣಗಳು ದಾಖಲಾಗಿವೆ. ಕೆ.ಪಿ.ಆಕ್ಟ್ ಅಡಿಯಲ್ಲಿ ಪ್ರಕರಣ ಹೆಚ್ಚು ಮಾಡುವುದು ಜನರಲ್ಲಿ ಕಾನೂನಿನ ಬಗ್ಗೆ ಅರಿವಾಗಲಿ ಎಂಬ ಕಾರಣಕ್ಕಾಗಿ ಎಂದ ಅವರು, ಅದೇ ರೀತಿ ಧೂಮಪಾನ ವಿರುದ್ಧದ ಕೇಸಗಳ ಸಂಖ್ಯೆಯೂ ಕೂಡ ಹೆಚ್ಚಳವಾಗಿದೆ. ಅಂದರೆ, ೧೮೫೨ ಪ್ರಕರಣ ದಾಖಲು ಮಾಡಲಾಗಿದೆ ಎಂದು ವಿವರಿಸಿದರು. ಕಳೆದ…
ಚಿಕ್ಕಮಗಳೂರು: ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿ ನೀಡಿರುವ ಕೊಡುಗೆ ಅಗಾಧ ವಾಗಿವೆ. ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳಲ್ಲಿನ ಶಿಲ್ಪಕಲೆ ವಿಶ್ವಕರ್ಮರ ಪ್ರಸ್ತುತತೆಯನ್ನು ಎತ್ತಿಹಿಡಿದಿದೆ ಎಂದು ಸಾಮಾಜಿಕ ಚಿಂತಕ ಬಿ.ಪಿ.ರತೀಶ್‌ಆಚಾರ್ಯ ಹೇಳಿದರು. ನಗರದ ಕುವೆಂಪು ಕಲಾಮಂದಿರದ ಹೇಮಾಂಗಣ ಸಭಾಂಗಣದಲ್ಲಿ ಬುಧವಾರ ಅಮರಶಿಲ್ಪಿ ಜಕಣ ಚಾರಿ ಸಂಸ್ಮರಣಾ ದಿಣಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿ ಅವರು ಮಾತನಾಡಿ ಸದಾಕಾಲಕ್ಕೂ ಜೀವಂತವಾಗಿರುವ ಭಾರತೀಯ ಶಿಲ್ಪಕಲಾ ಕೌಶಲ್ಯಕ್ಕೆ ಅಮರಶಿಲ್ಪಿ ಜಕಣಾಚಾರಿಯವ ರು ಅಪಾರ ಕೊಡುಗೆ ನೀಡಿರುವ ಕಾರಣ ಇಂದಿಗೂ ಶಿಲ್ಪಕಲೆಗಳು ಜೀವಂತವಾಗಿದೆ. ಇಂದು ವಿಶ್ವವಿಖ್ಯಾತ ಶಿಲ್ಪಿಯ ಸಂಸ್ಮರಣೆ ಎಲ್ಲೆಡೆ ನಡೆಯುತ್ತಿದೆ. ವಿಶ್ವಕರ್ಮರನ್ನು ವಿಶ್ವರೂಪ, ಜಕಣಾಚಾರ್ಯ ಎಂಬ ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತಿದೆ ಎಂದರು. ಸೃಷ್ಟಿಯ ಮೂಲಕತೃವಾಗಿರುವ ಜಕಣಾಚಾರಿಯರ ಶಿಲ್ಪಕಲಾ ಕುಶಲತೆ ಇಂದು ಜಗತ್ತಿನ ಎಲ್ಲೆಡೆ ಪಸ ರಿಸಿದೆ. ಪ್ರಪಂಚದ ಎಲ್ಲ ವಿದ್ಯೆಗಳ ಮೂಲವಾಗಿರುವ ಜಕಣಚಾರಿ ಅವರನ್ನು ಜಗತ್ತಿನ ಮೊದಲ ಮುಖ್ಯ ಇಂಜಿನಿಯರ್ ಎನ್ನಬಹುದು. ಜಕಣಚಾರಿಯವರು ಸಾಮಾನ್ಯ ಜನರಿಗೆ ದೇವರ ಪರಿಕಲ್ಪನೆ ನೀಡುವ ಮಧ್ಯ ಸ್ಥಿಕೆದಾರರಾಗಿದ್ದರು ಎಂದು ಹೇಳಿದರು. ಶಿಲ್ಪಕಲೆಯಲ್ಲಿ…
ಚಿಕ್ಕಮಗಳೂರು: ಶ್ರೀ ಗುರುದತ್ತಾತ್ರೇಯಸ್ವಾಮಿ ಬಾಬಾಬುಡನ್ ದರ್ಗಾದಲ್ಲಿ ಫಾತೇಹ ಮಾಡಲು ಶಾಖಾದ್ರಿ ವಂಶಸ್ಥರಿಗೆ ಅವಕಾಶ ನೀಡದ ಇಲ್ಲಿನ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಾಖಾದ್ರಿ ವಂಶಸ್ಥ ಸೈಯದ್‌ಫಖ್ರುದ್ದೀನ್ ಶಾಖಾದ್ರಿ ಒತ್ತಾಯಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೈಯದ್ ಬುಡನ್ ಶಾಖಾದ್ರಿ ವಂಶಸ್ಥರಾದ ನಾವು ಡಿ.೨೯ ರಂದು ಬಾಬಾಬುಡನ್‌ದರ್ಗಾದಲ್ಲಿ ಹಿಂದಿನಂತೆ ಫಾತೇಹ ಮಾಡಲು ಹೋಗಿದ್ದೆವು. ಆದರೆ ಹೊಸದಾಗಿ ನೇಮಕಗೊಂಡ ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಇಓ ಅವರು ನಮ್ಮ ಧಾರ್ಮಿಕ ಆಚರಣೆ ಫಾತೇಹ ಮಾಡದಂತೆ ಪೊಲೀಸರ ಮೂಲಕ ತಡೆದು ನಮ್ಮ ಧಾರ್ಮಿಕ ಹಕ್ಕನ್ನು ನಿರಾಕರಿಸಿದ್ದಾರೆ ಎಂದು ದೂರಿದರು. ಮೇಲಿನವರ ಸೂಚನೆಯಂತೆ ನಾನು ಕಾರ್ಯನಿರ್ವಹಿಸುತ್ತೇನೆ ಎಂದು ಪದೇ ಪದೇ ಹೇಳುವ ಈ ಅಧಿಕಾರಿ ಫಾತೇಹಕ್ಕೆ ತೆರಳಬೇಕು ಎಂದಾದಲ್ಲಿ ಹಿಂದೂ ಪದ್ದತಿಯಂತೆ ಹಣ್ಣುಕಾಯಿ ತನ್ನಿ ಎಂದು ಹೇಳುವ ಮೂಲಕ ನಮ್ಮ ಮೊಹಮದನ್ ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಶಾಖಾದ್ರಿ ವಂಶಸ್ಥರು, ಗುರುಗಳಾಗಿ ಗುರುತಿಸಲ್ಪಡುವ ನಮಗೆ ಅವಮಾನ ಮಾಡಿದ್ದಾರೆ. ೧೯೪೭ ರ ಹಿಂದೆ ಇರುವ ಮೈಸೂರು…
ಚಿಕ್ಕಮಗಳೂರು: :ದತ್ತಪೀಠದಲ್ಲಿ ಮುಸಲ್ಮಾನರು ಹೊಸ ಹೊಸ ಪೂಜಾ ವಿಧಿ-ವಿಧಾನಗಳನ್ನು ಮಾಡುತ್ತಿರುವುದರಿಂದ ಗೊಂದಲ ಹಾಗೂ ಅಶಾಂತಿ ಸೃಷ್ಟಿಯಾಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾ ಕಾರ್ಯದರ್ಶಿ ಟಿ.ರಂಗನಾಥ್ ಆಗ್ರಹಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಡಿ.೨೯ ರಂದು ಗುರುದತ್ತಾತ್ರೇಯ ಪೀಠಕ್ಕೆ ಆಗಮಿಸಿದ ಮುಸಲ್ಮಾನರು ರೋಟಿಬಾಜಿ ತಯಾರಿಸಿ ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗುತ್ತ ದತ್ತಪೀಠದ ಗುಹೆ ಒಳಗೆ ಹೋಗಲು ಪ್ರಯತ್ನಿಸಿ ಮಾಮಾಜುಗ್ನಿಯವರಿಗೆ ಪಾತೇಹ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಮುಜರಾಯಿ ಅಧಿಕಾರಿಗಳು ಮತ್ತು ಪೊಲೀಸರು ಇವರನ್ನು ತಡೆದು ಬೇಯಿಸಿದ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ ಗುಹೆಯ ಒಳಗೆ ಪಾತೇಹ ಮಾಡಲು ಅವಕಾಶವಿಲ್ಲ ಎಂದು ತಿಳಿಸಿದಾಗ ಸರ್ಕಾರ, ಜಿಲ್ಲಾಧಿಕಾರಿಗಳು, ಮುಜುರಾಯಿ ಅಧಿಕಾರಿಗಳು ಹಾಗೂ ವ್ಯವಸ್ಥಾಪನ ಸಮಿತಿ ವಿರುದ್ಧ ಧಿಕ್ಕಾರ ಕೂಗಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು. ಇಲ್ಲಿ ಪೂಜೆ ಸಲ್ಲಿಸುವ ಕುರಿತು ನ್ಯಾಯಾಲಯ, ಸರ್ಕಾರ ನಿರ್ಧಾರ ಮಾಡಿದ್ದು ಅದರಂತೆ ಪಾತೇಹ…
ಚಿಕ್ಕಮಗಳೂರು: ನಗರದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಸಮಿತಿ ವತಿಯಿಂದ ಆಯೋಜಿಸಿದ್ದ ೫೧ನೇ ವರ್ಷದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮದ ಮೆರವಣಿಗೆ ಅದ್ಧೂರಿಯಾಗಿ ನಗರದಲ್ಲಿ ನಡೆಯಿತು. ನಗರದ ಬೋಳರಾಮೇಶ್ವರ ದೇವಾಲದಿಂದ ಅಯ್ಯಪ್ಪ ಸ್ವಾಮಿಯವರನ್ನು ಅಲಂಕೃತವಾದ ರಥದ ಮೇಲೆ ಕುಳ್ಳಿರಿಸಿ ನಗರದ ಪ್ರಮುಖ ರಾಜಬೀದಿಗಳಲ್ಲಿ ತಾಲಿಪ್ಪೋಲಿ, ಚಂಡೆ, ನಾದಸ್ವರ ವಾದನ, ಪಾಂಡಿಮೇಳ, ತಾಯಂಬಕ, ಸಿಂಗಾರಿ ಮೇಳ, ಪಂಚವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಪೂಜಾ ಸಮಿತಿಯ ಅಧ್ಯಕ್ಷರಾದ ನಾರಾಯಣಗೌಡ ಗೌರವಾಧ್ಯಕ್ಷ ದಿನೇಶ್ ಪೊದುವಾಳ್, ರವಿಶಂಕರ್, ಪ್ರಧಾನ ಕಾರ್ಯದರ್ಶಿ ಅಶೋಕ್ ಸಚ್ಚಿದೇವ್, ಖಜಾಂಚಿ ಜೀವನ್.ಕೆ.ಶೆಟ್ಟಿ, ಉಪಾಧ್ಯಕ್ಷರಾದ ಸಾರಥಿ ಮಂಜುನಾಥ್, ವೆಂಕಟೇಶ್, ಅಣ್ಣಯ್ಯ, ಮಹಾದೇವ್, ಕಾರ್ಯದರ್ಶಿಗಳಾದ ಉಮೇಶ್, ಲಕ್ಷ್ಮೀಕಾಂತ್, ಕೋಟೆ ನಟರಾಜ್, ದಿಲೀಪ್‌ರಾಜ್, ಸತೀಶ್, ಸಹಕಾರ್ಯದರ್ಶಿಗಳಾದ ಚೆನ್ನಕೇಶವ, ಮನೋಹರ್, ಜವರಪ್ಪ, ಯಶ್ವಂತ್, ಎಸ್.ಡಿ.ಎಂ ಮಂಜು, ರಾಜುಶೆಟ್ಟಿ, ಚೇತನ್, ರಂಗನಾಥ್, ಪ್ರಶಾಂತ್, ಮಹಾದೇವ, ಕಿರಣ್, ಮುಖೇಶ್‌ಸಿಂಗ್, ಸದಾಶಿವ ಗುರುಸ್ವಾಮಿ, ಕಿರಣ್, ರಾಮಚಂದ್ರ ಉಪಸ್ಥಿತರಿದ್ದರು. Grand Sri Ayyappa Swamy procession in the city
ಚಿಕ್ಕಮಗಳೂರು: ಕೇಂದ್ರ ಸರ್ಕಾರದೊಂದಿಗೆ ನಡೆಸಿದ ಪ್ರಯತ್ನದಿಂದಧಾಗಿ ಕಾಫಿ ಬೆಳೆಗಾರರು ಸರ್ಫೇಸಿ ಕಾಯ್ದೆಯಿಂದ ಹೊರಗಿರುತ್ತಾರೆ. ಇದರಿಂದ ಬೆಳೆಗಾರರಿಗೆ ಒಂದು ಶಕ್ತಿ ನೀಡಿದಂತಾಗಿದೆ ಎನ್ನುವ ಸಮಾಧಾನ ತಂದಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಫಿ ಬೆಳೆಗಾರರು ಸುಸ್ತಿ ಸಾಲಗಾರರಾದಾಗ ತಕ್ಷಣ ಸರ್ಫೇಸಿ ಕಾಯ್ದೆಯಡಿ ಬ್ಯಾಂಕುಗಳು ಇ-ಹರಾಜು ಮಾಡುತ್ತಿವೆ. ಈ ಬಗ್ಗೆ ನಾವು ಅಧಿವೇಶನ ವೇಳೆ ಪ್ರಶ್ನೆ ಕೇಳಿದಾಗ ವಾಣಿಜ್ಯ ಸಚಿವರು ಸರ್ಫೇಸಿ ಕಾಯ್ದೆ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಇಡೀ ದೇಶದ ಕಾಫಿ ಬೆಳೆಗಾರರಿಗೆ ದೊಡ್ಡ ಶಕ್ತಿ ಬಂದಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಾ ಬ್ಯಾಂಕುಗಳು ಸೇರಿ ಕಾಫಿ ಬೆಳೆಗಾರರಿಗೆ ೩೫೦೦ ಕೋಟಿ ರೂ.ನಷ್ಟು ಸಾಲ ನೀಡಿವೆ. ಅದರಲ್ಲಿ ಕೆನರಾ ಬ್ಯಾಂಕ್ ಒಂದೇ ೧೫೦೦ ಕೋಟಿ ರೂ. ಸಾಲ ಕೊಟ್ಟಿದೆ. ಇದೀಗ ನಾವು ಸೇರಿಂದತೆ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರು ಕೇಂದ್ರ ಸಚಿವರ ಹೇಳಿಕೆ ಆಧರಿಸಿ ಬ್ಯಾಂಕ್…