Subscribe to Updates
Get the latest creative news from FooBar about art, design and business.
- e-paper (18-07-2025) Chikkamagalur Express
- ನಿವೃತ್ತ ಪಿಂಚಣಿದಾರರಿಗೆ ಯಥಾವತ್ ಸೌಲಭ್ಯ ಪರಿಷ್ಕರಿಸಲು ಮನವಿ
- ಅಂಬಳೆಯಲ್ಲಿ ಅಂಬೇಡ್ಕರ್ ವಸತಿ ಶಾಲೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ
- e-paper (17-07-2025) Chikkamagalur Express
- ಶಾಲಾ ಕಟ್ಟಡಗಳ ದುರಸ್ಥಿಗೆ ಕ್ರಮ ವಹಿಸಲು ಸೂಚನೆ
- ಸಚಿವ ಪ್ರಿಯಾಂಕ್ ಖರ್ಗೆಗೆ ಆಪ್ತನ ಡ್ರಗ್ಸ್ ದಂಧೆ ಬಗ್ಗೆ ಗೊತ್ತಿಲ್ಲವೇ ….?
- e-paper (16-07-2025) Chikkamagalur Express
- ಗಿರಿ ಪ್ರದೇಶದ ಪ್ರವಾಸೋದ್ಯಮ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ
Author: chikkamagalur express
ಚಿಕ್ಕಮಗಳೂರು: ವಿದುಷಿ ಸುಮನ ರಾಮಚಂದ್ರ ಅವರ ಬಳಿ ಭರತನಾಟ್ಯ ಶಿಕ್ಷಣ ಪಡೆಯುತ್ತಿರುವ ಎಲ್.ಆರ್. ಚಿನ್ಮಯಿ ಅರ್ಪಿಸುವ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ಡಿ.೨೮ ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಸಂಜೆ ೫ ಗಂಟೆಗೆ ಆಯೋಜಿಸಲಾಗಿದೆ ಎಂದು ಚಿನ್ಮಯಿ ಸಂಬಂ ಶೈಲಜಾ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಎಲ್.ಕೆ.ರಮೇಶ್ ಮತ್ತು ಶೃತಿ ಅವರ ಪುತ್ರಿಯಾಗಿರುವ ಚಿನ್ಮಯಿ ಅವರು ಬೆಂಗಳೂರು ಜೈನ್ ವಿವಿಯಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ನಗರದ ಪ್ರತಿಷ್ಠಿತ ನಾಟ್ಯಶಾಲೆಯಾದ ಶ್ರೀಕಂಠೇಶ್ವರ ಕಲಾಮಂದಿರದಲ್ಲಿ ಭರತನಾಟ್ಯ ಗುರು ಸುಮನರಾಮಚಂದ್ರ ಅವರ ಬಳಿ ಚಿನ್ಮಯಿ ಐದನೇ ವಯಸ್ಸಿನಿಂದ ಭರತನಾಟ್ಯ ಶಿಕ್ಷಣ ಪಡೆಯುತ್ತಿದ್ದಾಳೆ ಎಂದರು. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಚಿನ್ಮಯಿ ಸದ್ಯ ಸೀನಿಯರ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಳೆ. ಅನೇಕ ಸಭೆ ಸಮಾರಂಭಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿದ್ದಾಳೆ. ಇವಳಲ್ಲಿರುವ ಕಲಾಸಕ್ತಿಗೆ ಮೆಚ್ಚಿ ಇಡೀ ಕುಟುಂಬ ವರ್ಗ ಇವಳ ಬೆಳವಣಿಗೆ ಹಾಗೂ…
ಚಿಕ್ಕಮಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ ಹಾಗೂ ದಲಿತಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆಯನ್ನು ತೇಗೂರು ಗಿರಿಧಾಮ ಬುದ್ಧ ವಿಹಾರದಲ್ಲಿ ಡಿ.೨೯ ರಂದು ಭಾನುವಾರ ಮಧ್ಯಾಹ್ನ ೨.೩೦ಕ್ಕೆ ಆಯೋಜಿಸಲಾಗಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿಲ್ಲೆಯ ಪರಿಶಿ? ಜಾತಿ, ವರ್ಗಗಳ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಶ್ರೇಯೋಭಿವೃದ್ಧಿಯ ಧ್ಯೇಯೋದ್ದೇಶಗಳೊಂದಿಗೆ ಕಳೆದ ೧೦ ವ?ಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. ಸಾಹಿತ್ಯ ಲೋಕದಲ್ಲಿ ಸದಾ ಬೆಳಗುವ ದೃವತಾರೆಯಾಗಿರುವ ಕುವೆಂಪುರವರು ತಮ್ಮ ಸಾಹಿತ್ಯದ ಮೂಲಕ ಸಮಾಜದ ಅನಿಷ್ಠಗಳ ವಿರುದ್ಧ ಪ್ರತಿಭಟನೆಯ ರೂಪದಲ್ಲಿ ಪರಿಣಾಮಕಾರಿ ಸಂದೇಶಗಳನ್ನು ನೀಡುವ ಮೂಲಕ ಮನುಜಮತ-ವಿಶ್ವಪಥ ಎಂಬ ತತ್ವ ವಾಕ್ಯದ ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ ದಾರಿಯಲ್ಲಿ ಸಾಗುವುದು ಇಡೀ ಜಗತ್ತಿಗೆ ಪ್ರಸ್ತುತವಾಗಿದ್ದು, ಸರ್ವಜನಾಂಗ ಶಾಂತಿಯತೋಟದ ಘೋ?ವಾಕ್ಯದೊಂದಿಗೆ ಸಾಗಲು ಮನನ ಮಾಡಿಕೊಳ್ಳುವ…
ಚಿಕ್ಕಮಗಳೂರು: : ಆಧುನಿಕ ಕೃಷಿ ಉಪಕರಣಗಳಿಂದ ಪ್ರಸ್ತುತ ರೈತರ ಜೀವನ ಸುಗಮವಾಗಿರುವ ಜೊತೆಗೆ ಕೃಷಿ ಕಾರ್ಮಿಕರ ಕೊರತೆ ನೀಗಿಸಲು ಕೃಷಿ ಪರಿಕರಗಳು ಸಹಕಾರಿಯಾಗಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು. ಅವರು ಇಂದು ಎಐಟಿ ಕಾಲೇಜು ವೃತ್ತದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕೃಷಿಪರಿಕರಗಳ ಮಾರಾಟಗಾರರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ ಈ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಸಭೆ ಆರಂಭಿಕ ಶೂರತ್ವವಾಗದೆ ಶಾಶ್ವತವಾಗಿರಬೇಕು ಯಾವುದೇ ಸಂಘಟನೆಗಳು ಏಕ ವ್ಯಕ್ತಿಯಿಂದ ನ್ಯಾಯ ಒದಗಿಸಲಾಗದು ಈ ನಿಟ್ಟಿನಲ್ಲಿ ಸಂಘಟಿತ ಹೋರಾಟ ಅಗತ್ಯವಾದಾಗ ಮಾತ್ರ ತಮ್ಮ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಈಡೇರಿಸಲು ಸಾಧ್ಯ ಎಂದರು. ಶೇ.೭೦ರ? ಕೃಷಿ ಪ್ರಧಾನವಾಗಿರುವ ಭಾರತ ದೇಶದಲ್ಲಿ ಆರ್ಥಿಕಸ್ಥಿತಿ ಉತ್ತಮವಾಗಿರಬೇಕಾದರೆ ಕೃಷಿ, ವಾಣಿಜ್ಯ, ರೈತ ಸಮೂಹ ಸಂತೃಪ್ತಿಯಿಂದ ಇರಬೇಕು ಈ ಮೂರು ವರ್ಗಗಳು ದೇಶದ ಆರ್ಥಿಕ ಪ್ರಗತಿಗೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿ ಕೃಷಿ ಕ್ಷೇತ್ರ ಪ್ರಸ್ತುತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು…
ಚಿಕ್ಕಮಗಳೂರು: ಕರ್ನಾಟಕ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳ ಆಯ್ಕೆಯನ್ನು ನಿಯಮಬಾಹಿರ ಮತ್ತು ಅಕ್ರಮವಾಗಿ ಮಾಡಲಾಗಿದೆ ಎಂದು ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ. ವಿಜಯ್ ಆರೋಪಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಬೇಕು ಅಥವಾ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಬೇಕು ಹಾಗೂ ಉಪಾಧ್ಯಕ್ಷರಾದವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ನಿಯಮ ಒಕ್ಕೂಟದ ಬೈಲಾದಲ್ಲಿ ಇದ್ದರೂ ಅದನ್ನು ಕಡೆಗಣಿಸಿ ಒಕ್ಕೂಟಕ್ಕೆ ಹೊಸದಾಗಿ ಸದಸ್ಯರಾದವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ದೂರಿದ್ದಾರೆ. ಕರ್ನಾಟಕ ಬೆಳೆಗಾರರ ಒಕ್ಕೂಟದ ಬೈಲಾದ ಪ್ರಕಾರ ಒಕ್ಕೂಟದ ಸರ್ವ ಸದಸ್ಯರ ಸಭೆಯನ್ನು ಕರೆದು ಅದರಲ್ಲಿ ಪದಾಧಿಕಾರಿಗಳ ಆಯ್ಕೆಯನ್ನು ಮಾಡಿಲ್ಲ ಅಥವಾ ಚುನಾವಣೆಯನ್ನೂ ನಡೆಸಿಲ್ಲ ಚುನಾವಣೆಗಾಗಿ ನೇಮಿಸಲಾಗಿದ್ದ ಇಬ್ಬರು ಚುನಾವಣಾಧಿಕಾರಿಗಳು ಆಗಮಿಸದೇ ಗೈರಾಗಿದ್ದರೂ. ಪದಾಧಿಕಾರಿಗಳ ಆಯ್ಕೆಯ ವಿವಾದ ನ್ಯಾಯಾಲಯದಲ್ಲಿದ್ದರೂ. ಒಕ್ಕೂಟದ ಆಡಳಿತ ಮಂಡಳಿ ಗುಂಪುಗಾರಿಕೆ ನಡೆಸಿದ್ದಾರೆ ಕಾನೂನು ನೀತಿ ನಿಯಮಗಳನ್ನು ಗಾಳಿಗೆ ತೂರಿ ಚುನಾವಣೆ ನಡೆಸದೇ ಅಧ್ಯಕ್ಷರನ್ನು ಏಕಾಏಕಿ ಘೋಷಿಸಿದೆ. ಆ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಆರೋಪಿಸಿದ್ದಾರೆ.…
ಚಿಕ್ಕಮಗಳೂರು: ಮೂಲಭೂತ ಹಕ್ಕು ಧಮನಗೊಳಿಸಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿ ಶಾರೀರಿಕ ಮತ್ತು ಮಾನಸಿಕ ದೌರ್ಜನ್ಯ ನಡೆಸುವ ಮೂಲಕ ಕಾನೂನು ದುರುಪಯೋಗಪಡಿಸಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.೧೯ ರಂದು ಬೆಳಗಾವಿ ಆಧಿವೇಶನದಲ್ಲಿ ಭಾಗವಹಿಸಿದ್ದ ವೇಳೆ ನಡೆದ ವಿದ್ಯಮಾನಗಳ ಕುರಿತು ರಾಜ್ಯಪಾಲರು, ರಾಷ್ಟ್ರಪತಿ ಮತ್ತು ಬಿಜೆಪಿ ರಾಷ್ಟ್ರೀಯ, ರಾಜ್ಯ ಮುಖಂಡರನ್ನು ಡಿ.೨೬-೨೭ ರಂದು ಭೇಟಿಮಾಡಿ ಕಾನೂನು ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆಂದರು. ಒಳ್ಳೆಯ ಕೆಲಸಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿ ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿರುವ ಮತ್ತು ದೌರ್ಜನ್ಯ ಎಸಗಿರುವವರಿಗೆ ಶಿಕ್ಷೆ ಆಗುವ ತನಕ ಹೋರಾಟ ಮುಂದುವರೆಸುತ್ತೇನೆಂದು ಹೇಳಿದರು. ಖಾನಾಪುರ ಪೊಲೀಸರು ನನ್ನನ್ನು ಬಂಧಿಸಿ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಎದುರಿಗೆ ಕರೆದುಕೊಂಡು ಹೋದರು. ಈ ಸಂದರ್ಭದಲ್ಲಿ ಸಂಕಷ್ಟದಿಂದ ಕಾಪಾಡು ಎಂದು ಯಲ್ಲಮ್ಮನಿಗೆ ಹರಕೆ ಹೊತ್ತಿದ್ದೇನೆ.…
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಯೇಸುಕ್ರಿಸ್ತರ ಜನ್ಮದಿನವನ್ನು ಕ್ರೈಸ್ತ ಸಮುದಾಯದವರು ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿದರು. ನಗರದ ಸಂತಜೋಸೆಫರ ಪ್ರಧಾನಾಲಯದಲ್ಲಿ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆ ನಡೆಯಿತು. ವಿಶೇಷಪೂಜೆ, ಧಾರ್ಮಿಕ ಕಾರ್ಯವನ್ನು ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಧರ್ಮಾಧ್ಯಕ್ಷರಾದ ಡಾ.ಅಂತೋಣಿಸ್ವಾಮಿ ನೆರವೇರಿಸಿದರು.ಫಾದರ್ ಅಂತೋಣಿಪಿಂಟೋ ಇದ್ದರು. ಕ್ರೈಸ್ತ ಸಮುದಾಯದವರು ಹೊಸಬಟ್ಟೆಗಳನ್ನು ತೊಟ್ಟು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.ಯೇಸುಕ್ರಿಸ್ತರ ಜನ್ಮದ ವೃತ್ತಾಂತವನ್ನು ತಿಳಿಸುವ ಗೋದಲಿಯನ್ನು ಮನೆಯಂಗಳದಲ್ಲಿ ನಿರ್ಮಿಸಲಾಗಿದೆ. ಮನೆಯ ಮುಂದೆ ನಕ್ಷತ್ರ ಆಕಾರದ ವಿದ್ಯುತ್‌ದೀಪಗಳನ್ನು ಅಳವಡಿಸಲಾಗಿದೆ. ಕ್ರಿಸ್ಮಸ್ ಅಂಗವಾಗಿ ಮನೆಗಳಲ್ಲಿ ತಯಾರಿಸಿದ್ದ ಸಿಹಿತಿನಿಸುಗಳನ್ನು ಪಕ್ಕದ ಮನೆಯವರಿಗೆ, ಸ್ನೇಹಿತರಿಗೆ ವಿತರಿಸಲಾಯಿತು. ನಗರದ ಸಂತ ಜೋಸೆಫರ ಪ್ರಧಾನಾಲಯದ ಆವರಣದಲ್ಲಿ ನಿರ್ಮಿಸಿರುವ ಗೋದಲಿ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಶಾಸಕ ಹೆಚ್.ಡಿ.ತಮ್ಮಯ್ಯ ಅವರು ನಗರದ ಸಂತಜೋಸೆಫರಚರ್ಚ್,ಬಿಸಪ್‌ಹೌಸ್, ಬೇಲೂರು ರಸ್ತೆಯ ಸಂತ ಆಂದ್ರೆಯಾ ಚರ್ಚ್, ವಿಜಯಪುರದ ಹೋಲಿಫ್ಯಾಮಿಲಿ ಚರ್ಚ್‌ಗಳಿಗೆ ಭೇಟಿನೀಡಿ ಧರ್ಮಾಧ್ಯಕ್ಷರು ಮತ್ತು ಫಾದರ್‌ಗಳಿಗೆ ಕೇಕ್‌ನೀಡಿದರು. ಶುಭಾಶಯ: ನಗರದ ಎಐಟಿ ವೃತ್ತ ಸಮೀಪದ ಬ್ರಿಷಪ್ ಡಾ.ಟಿ.ಅಂತೋಣಿಸ್ವಾಮಿ ಹಾಗೂ…
ಚಿಕ್ಕಮಗಳೂರು: ಪ್ರೆಸ್‌ಕ್ಲಬ್‌ನ ವಾರ್ಷಿಕ ಕ್ರೀಡಾಕೂಟ ನಗರದ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ನಡೆಯಿತು. ಜಿಲ್ಲಾಧಿಕಾರಿ ಸಿ.ಎನ್. ಮೀನಾನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳ ಹುಲ್ಲಳ್ಳಿ ಅವರು ಸ್ವತಃ ಕೇರಂ ಆಟ ಆಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಜತೆಗೆ ಅರ್ದ ಗಂಟೆಗೂ ಹೆಚ್ಚು ಕಾಲ ಕೇರಂ ಆಡಿದ ಗಣ್ಯರು ಹೊರಾಂಗಣದಲ್ಲಿ ಕೆಲ ನಿಮಿಷ ಷೆಟಲ್ ಬ್ಯಾಟ್ ಮಿಂಟನ್ ಆಡಿ ಪತ್ರಕರ್ತರೊಂದಿಗೆ ಸಂತಸ ಹಂಚಿಕೊಂಡರು. ಶಾಸಕ ಹೆಚ್.ಡಿ ತಮ್ಮಯ್ಯ ಪ್ರೆಸ್ ಕ್ಲಬ್ ಗೆ ಭೇಟಿನೀಡಿ ತಾವೂ ಕೆಲಕ್ಷಣ ಕೆರಂ ಆಟವಾಡಿ ಸಂತಸದಲ್ಲಿ ಭಾಗವಹಿಸಿದ್ದರು. ಷೆಟಲ್ ಬ್ಯಾಟ್ ಮಿಂಟನ್, ಕೇರಂ, ಚೆಸ್, ಕ್ರಿಕೆಟ್ ಮತ್ತಿತರೆ ಅನೇಕ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪ್ರತಿನಿತ್ಯ ಒತ್ತಡದ ನಡುವೆಯೇ ಕಾರ್ಯನಿರ್ವಹಣೆ ಮಾಡುವ ಪತ್ರಕರ್ತರು ಮಂಗಳವಾರ ತಮ್ಮ ಒತ್ತಡ, ಜಂಜಾಟಗಳನ್ನೆಲ್ಲ ಬದಿಗಿಟ್ಟು ಸಂತಸದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದದು ವಿಶೇಷವಾಗಿತ್ತು. ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ…
ಚಿಕ್ಕಮಗಳೂರು: ಕುಟುಂಬದಲ್ಲಾಗುವ ತಂದೆ ತಾಯಿ ನಡುವಿನ ಜಗಳಗಳು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಬೆಳೆಸಿ ಅವರ ಸುಗಮ ಜೀವನಕ್ಕಾಗಿ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್ ಕೀರ್ತನಾ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ತಾಲ್ಲೂಕು ಪಂಚಾಯಿತಿ ಡಾ. ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಅನುಷ್ಠಾನದಲ್ಲಿ ಭಾಗಿದಾರ ಇಲಾಖೆಗಳ ಪಾತ್ರ ಕುರಿತು ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಂದು ಮಗುವು ದೇಶದ ಭವಿಷ್ಯವಾಗಿದೆ. ಅವರನ್ನು ಸ್ವಾಸ್ಥ್ಯ ಪರಿಸರದಲ್ಲಿ ಬೆಳೆಸಿ ಸಾಮಾಜದ ಉತ್ತಮ ಪ್ರಜೆಗಳಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳಿಗೆ ಪೌಷ್ಠಿಕ ಆಹಾರ ಹಾಗೂ ಅವರ ಅಗತ್ಯತೆಗಳಿಗೆ ಕೊರತೆಯಾಗದಂತೆ ನಿಗಾವಹಿಸಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರತಿಯೊಬ್ಬರು…