Subscribe to Updates
Get the latest creative news from FooBar about art, design and business.
- e-paper (22-07-2025) Chikkamagalur Express
- ಪಂಚ ಪೀಠಗಳು ಒಗ್ಗಟ್ಟಾಗಿ ಹೆಜ್ಜೆ ಹಾಕಲಿ : ಶ್ರೀ ರಂಭಾಪುರಿ ಜಗದ್ಗುರುಗಳು
- ನಾಗರೀಕರ ಅರೋಗ್ಯ ಸಮಸ್ಯೆಗೆ ಜ್ಯೋತಿ ಡಯಾಗ್ನಸ್ಟಿಕ್ ಲ್ಯಾಬೋರೇಟರಿ ಪೂರಕ
- e-paper (20-07-2025) Chikkamagalur Express
- ಹಿಂದುತ್ವದ ಬದುಕು ಪ್ರಾಚೀನ ಸಂಸ್ಕೃತಿ-ನಾಗರೀಕತೆಯ ಭಾಗ
- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ನಗರ ಮಂಡಲ ಪ್ರತಿಭಟನೆ
- ಸರ್ಕಾರ ಬದುಕಿಗೆ ಆದ್ಯತೆ ನೀಡಿ ಮೂಲ ಸೌಕರ್ಯ ಕಲ್ಪಿಸಿದೆ
- e-paper (19-07-2025) Chikkamagalur Express
Author: chikkamagalur express
ಚಿಕ್ಕಮಗಳೂರು: ಜಿಲ್ಲಾಡಳಿತ ಮತ್ತು ಕನಕ ಜಯಂತೋತ್ಸವ ಸಮಿತಿ ಸಹಯೋಗದಲ್ಲಿ ನ.೧೮ ರಂದು ಸೋಮವಾರ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿರುವ ೫೩೭ನೇ ಶ್ರೀ ಕನಕದಾಸ ಜಯಂತಿಯನ್ನು ಯಶಸ್ವಿಗೊಳಿಸುವಂತೆ ಕನಕ ಜಯಂತ್ಯೋತ್ಸವ ಆಚರಣಾ ಸಮಿತಿ ಮನವಿ ಮಾಡಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಿತಿ ಅಧ್ಯಕ್ಷ ಎಮ್.ಆರ್. ಬಸವರಾಜು ಅಂದು ಬೆಳಗ್ಗೆ ತಾಲ್ಲೂಕು ಕಚೇರಿ ಅವರಣದಿಂದ ಬೈಕ್ ಮತ್ತು ಆಟೋರ್‍ಯಾಲಿ ಮೂಲಕ ಶ್ರೀ ಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಹೊರಟು, ಎಂ.ಜಿ ರಸ್ತೆ ಮಾರ್ಗವಾಗಿ ಕಲಾಮಂದಿರ ತಲುಪಲಿದೆ ಎಂದರು. ಶ್ರೀ ಕನಕದಾಸರ ಕೀರ್ತನೆಗಳನ್ನು ಸರ್ವರೂ ಅಧ್ಯಯನ ಮಾಡಿ ಅರ್ಥಮಾಡಿಕೊಂಡಾಗ ದಾರ್ಶನಿಕರ ಜಯಂತಿಗೆ ನಿಜವಾದ ಅರ್ಥ ಬರುತ್ತದೆ ಎಂದು ತಿಳಿಸಿದರು. ಶ್ರೀ ಕನಕದಾಸರ ತತ್ವ ಆದರ್ಶಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದ್ದು, ಈ ಮಹಾ ದಾರ್ಶನಿಕರು ಕೇವಲ ಒಂದು ಜಾತಿ, ಸಮುದಾಯಕ್ಕೆ ಸೀಮಿತವಾಗಿರುವುದಿಲ್ಲ ಎಂದರು. ಅರಸೀಕೆರೆ ತಾಲ್ಲೂಕು ಬಾಣಾವರದ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ದೊರೇಶ್ ಬಿಳಿಕೆರೆ ರವರು ಪ್ರಧಾನ ಉಪನ್ಯಾಸ…
ಚಿಕ್ಕಮಗಳೂರು: -ಕೆಲ ಕಾಲ ಬದುಕಿ ಚಿರ ಕಾಲ ಉಳಿದ ಭಗವಾನ್ ಬಿರ್ಸಾ ಮುಂಡಾರವರ ಜೀವನ ಸ್ಫೂರ್ತಿದಾಯಕವಾದುದು, ಬುಡಕಟ್ಟು ಸಮುದಾಯದ ಜನರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಹೇಳಿದರು. ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಭಾರತ ಸರ್ಕಾರ, ನವದೆಹಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಚಿಕ್ಕಮಗಳೂರು ಇವರ ವತಿಯಿಂದ ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ೧೫೦ನೇ ಭಗವಾನ್ ಬಿರ್ಸಾ ಮುಂಡ ಜಯಂತಿ (ಜನಜಾತೀಯ ಗೌರವ್ ದಿವಸ್) ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿ ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಅನೇಕ ವೀರರನ್ನು, ಸ್ವಾತಂತ್ರ್ಯ ಹೋರಟಗಾರರ ಚರಿತ್ರೆಯನ್ನು ಇತಿಹಾಸದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಸ್ವಾತಂತ್ರ್ಯದ ಜೊತೆಗೆ ಸ್ವಾಭಿಮಾನ ಹಾಗೂ ಬುಡಕಟ್ಟು ಸಮುದಾಯದ ಜನರ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ…
ಚಿಕ್ಕಮಗಳೂರು: ಅಂಬೇಡ್ಕರ್ ತತ್ವ-ಸಿದ್ಧಾಂತವನ್ನು ಒಳಗೊಂಡಿರುವ ಬಿಎಸ್ಪಿ ಪಕ್ಷ ರಾಜ್ಯ ಹಾಗೂ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಮುನ್ನೆಡೆದರೆ ಮಾತ್ರ ಸಮಸಮಾಜ ನಿರ್ಮಿಸುವ ಮೂಲಕ ಬಡತನವನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸಲು ಸಾಧ್ಯ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ಹೇಳಿದರು. ನಗರದ ಜಿಲ್ಲಾ ಬಿ.ಎಸ್.ಪಿ. ಕಚೇರಿಯಲ್ಲಿ ಏರ್ಪಡಿಸಿದ್ಧ ಆರ್ಥಿಕ ಸಹಯೋಗ ದಿವಸ್, ಜನಕಲ್ಯಾಣ ದಿನ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿ ಪಕ್ಷವನ್ನು ಸಂಘಟಿಸುವ ಹಾಗೂ ಚಳುವಳಿಯನ್ನು ರೂಪಿಸುವ ಸಲುವಾಗಿ ಜನರಿಂದ ದೇಣಿಗೆ ರೂಪ ದಲ್ಲಿ ಹಣ ಪಡೆಯಲಾಗುತ್ತಿದೆ. ಅದರಂತೆ ಇಂದಿನಿಂದ ಮುಂದಿನ ಜನವರಿ ೧೫ರವರೆಗೆ ಹೆಚ್ಚಿನ ಮೊತ್ತದಲ್ಲಿ ದೇಣಿಗೆಯನ್ನು ಸಂಗ್ರಹಿಸಿ ರಾಜ್ಯ ಸಮಿತಿಗೆ ಹಸ್ತಾಂತರಿಸಿ ಚಳುವಳಿ ಹಾಗೂ ಇನ್ನಿತರೆ ಕಾರ್ಯಚಟುವಟಿಕೆಗೆ ಬಳಸಿಕೊಳ್ಳಲಾಗುತ್ತದೆ ಎಂದರು. ದೇಶದ ರಾಜಕೀಯ ಪಕ್ಷಗಳ ಇತಿಹಾಸದಲ್ಲಿ ಬಿಎಸ್ಪಿ ಹೊರತಾಗಿ ಬಹುತೇಕ ಎಲ್ಲಾ ಪಕ್ಷಗಳು ಕಾರ್ಪೋರೇಟ್ ಕಂಪನಿಗಳಿಂದ ದೇಣಿಗೆ ಪಡೆದು ಚುನಾವಣೆ ಎದುರಿಸಿವೆ ಹಾಗೂ ಚುನಾವಣಾ ಆಯೋ ಗವು ಛೀಮಾರಿಯು ಹಾಕಿದೆ. ಆದರೆ ಬಿಎಸ್ಪಿ ಎಲ್ಲದಕ್ಕಿಂತ…
ಚಿಕ್ಕಮಗಳೂರು: ವಿದ್ಯಾರ್ಥಿಗಳ ಮಸ್ತಕದಲ್ಲಿ ಜ್ಞಾನಭಂಡಾರ ವೃದ್ದಿಸಲು ಗ್ರಂಥಾಲ ಯಗಳು ಸಹಕಾರಿಯಾಗಿದ್ದು ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮಗ್ರವಾಗಿ ಎದುರಿಸಲು ಬಹಳಷ್ಟು ಅನುಕೂಲ ಎಂದು ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದರು. ನಗರ ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ಧ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ದಲ್ಲಿ ಗುರುವಾರ ಪಾಲ್ಗೊಂಡು ಅವರು ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ದೇಶ, ಧರ್ಮ ಹಾಗೂ ಭಾಷೆಯನ್ನು ಬೆಳೆಸಲು ಪ್ರಮುಖ ಜವಾಬ್ದಾರಿ ವಹಿಸಬೇಕು. ಅಲ್ಲದೇ ನಾಗರೀಕ ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಜ್ಞಾನವನ್ನು ಹೊಂದುವುದು ಅತಿಮುಖ್ಯ. ಹೀಗಾಗಿ ಗ್ರಂಥಗಳನ್ನು ಅಭ್ಯಾಸಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಸಂಪಾದಿಸುವುದು ಸುಲಭದ ಮಾತಲ್ಲ. ಆಳವಾಗಿ ಅಧ್ಯಯ ನ ನಡೆಸುವುದು ಮುಖ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯರ ಸಾತ್ವಿಕ ಜೀವನಕ್ಕೆ ಸಾಧಕರು ರಚಿಸಿದ ಗ್ರಂಥಗಳು ಜೀವತುಂಬುವ ಜೊತೆಗೆ ಮಕ್ಕಳಿಗೆ ಸಮಾಜದಲ್ಲಿ ತಲೆಎತ್ತುವಂತೆ ಮಾಡುತ್ತದೆ ಎಂ ದರು. ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಜ್ಞಾನಾರ್ಜನೆಯಿಂದ ವಂಚಿತರಾಗದಿರಲು ಸರ್ಕಾರ ಗ್ರಂ…
ಚಿಕ್ಕಮಗಳೂರು: ಆಧುನಿಕ ಶಿಲ್ಪಿ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಹಾರಲಾಲ್ ನೆಹರುರವರ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಕೊಳ್ಳುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಸಲಹೆ ನೀಡಿದರು. ಅವರು ಗುರುವಾರ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ, ಎನ್‌ಎಸ್‌ಯುಐ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಮಂತ್ರಿ ಪಂಡಿತ್ ಜವಹಾರಲಾಲ್ ನೆಹರು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೆಹರುರವರು ನವಭಾರತದ ಸಂಕಲ್ಪವನ್ನು ಹೊತ್ತು ಪ್ರಧಾನಮಂತ್ರಿಯಾಗಿ ಭಾರತವನ್ನು ಸದೃಢವಾಗಿ ಮುನ್ನಡೆಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ, ಭಾರತದ ವಿದೇಶಾಂಗ ನೀತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ ಎಂದು ಹೇಳಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಿದ್ಧಾಂತವೇ ಸಂವಿಧಾನವಾಗಿದೆ. ಜಾತ್ಯಾತೀತ ನೆಲೆಗಟ್ಟಿನಲ್ಲಿ ಸಂವಿಧಾನಕ್ಕೆ ಗೌರವವನ್ನು ಕೊಡಲಾಗುತ್ತಿದ್ದು, ದೇಶವು ಪ್ರಗತಿ ಕಾಣಲು ನೆಹರು ಕಾರಣವಾಗಿದ್ದಾರೆ. ದೇಶ ಮತ್ತು ಹೊರ ದೇಶಗಳ ಸಂಬಂಧಗಳನ್ನು ಸುಧಾರಿಸುವಲ್ಲಿ ಯಶಸ್ಸು ಕಂಡ ಧೀಮಂತ ನಾಯಕ ನೆಹರು ಎಂದು ಬಣ್ಣಿಸಿದರು. ನೆಹರುರವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಅಧಿಕಾರವಧಿಯಲ್ಲೂ ಮಕ್ಕಳ ಜೊತೆ ಬೆರೆತು ಅವರೊಂದಿಗೆ…
ಚಿಕ್ಕಮಗಳೂರು: ದತ್ತಪೀಠದಲ್ಲಿ ದತ್ತಮಾಲೆ ಮತ್ತು ದತ್ತ ಜಯಂತಿಯನ್ನು ಡಿ.೬ ರಿಂದ ೧೪ ರವರೆಗೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಜಗನ್ನಾಥಶಾಸ್ತ್ರೀ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ದತ್ತಮಾಲೆ ಮತ್ತು ದತ್ತಜಯಂತಿ ಡಿಸೆಂಬರ್ ೬ರಿಂದ ೧೪ರವರೆಗೆ ನಡೆಯಲಿದ್ದು, ದತ್ತಜಯಂತಿ ಹಿಂದೂ ಸಮಾಜದ ಉತ್ಸವ, ಶ್ರದ್ಧಾಕೇಂದ್ರವಾಗಬೇಕೆಂದು ಪ್ರತಿಪಾಧಿಸಿದ ಅವರು, ದತ್ತಪೀಠ ಕೇವಲ ಪ್ರವಾಸ ತಾಣವಲ್ಲ. ತೀರ್ಥಕ್ಷೇತ್ರವೆಂದು ತಿಳಿಸಿದರು. ದತ್ತಪೀಠದಲ್ಲಿ ಡಿ.೧೨ ರಂದು ಅನಸೂಯದೇವಿ ಪೂಜೆ ನಡೆಯಲಿದೆ. ಗಣಪತಿಪೂಜೆ, ಪುಣ್ಯಾಹವಾಚನ, ಪಂಚಗವ್ಯಶುದ್ಧಿ, ಋತ್ವಿಗ್ವರ್ಣ, ಗಣಹೋಮ, ನವಗ್ರಹಹೋಮ, ದುರ್ಗಾಹೋಮ, ಚಂಡಿಕಾ ಪಾರಾಯಣ ಕಲಾಶಾಭಿಷೇಕ, ಹಾಗೂ ಮಹಾಪೂಜೆ ನಡೆಯಲಿದ್ದು, ಸಂಜೆ ಪಾದುಕಾಶುದ್ಧಿ, ಪ್ರಾಕಾರಶುದ್ಧಿ, ವಾಸ್ತುರಕ್ಷೆಘ್ನಹೋಮ, ಸುದರ್ಶನಹೋಮ, ದುರ್ಗಾದೀಪ ನಮಸ್ಕಾರ ಕಲಶಾಭಿಷೇಕ, ಮಹಾಪೂಜೆನಡೆಯಲಿದೆಎಂದರು. ಅನಸೂಯದೇವಿ ಪೂಜೆ ಅಂಗವಾಗಿ ಡಿಸೆಂಬರ್ ೧೨ ರಂದು ಬೆಳಿಗ್ಗೆ ೯.೩೦ಕ್ಕೆ ಮಹಿಳೆಯರಿಂದ ನಗರದಲ್ಲಿ ಸಂಕೀರ್ತನಾಯಾತ್ರೆ ನಡೆಯಲಿದೆ. ಬೋಳರಾಮೇಶ್ವರ ದೇವಾಲಯ ಆವರಣದಿಂದ ಆರಂಭಗೊಳ್ಳುವ ಯಾತ್ರೆ ಐ.ಜಿ.ರಸ್ತೆಯಲ್ಲಿ ಸಾಗಿ ಡಿಎಸಿಜಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದಲ್ಲಿ…
ಚಿಕ್ಕಮಗಳೂರು: ಬಸವನಹಳ್ಳಿಯ ಶ್ರೀ ವೇಣುಗೋಪಾಲ ಸ್ವಾಮಿಯ ವಿಗ್ರಹ ಅತ್ಯಂತ ಸುಂದರವಾದುದು. ಈ ದೇವಾಲಯಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಋಷಿ-ಮುನಿಗಳು ವಾಸಿಸುತ್ತಿದ್ದ ಈ ವಾತಾವರಣದಲ್ಲಿ ವೇದೋಪಾಸನೆ, ನಾದೋಪಾಸನೆ ನಡೆದಿದೆ. ಈಗ ನಾಗರಾಜರಾವ್ ಕಲ್ಕಟ್ಟೆಯವರು ಹೊಸತೊಂದು ಗೀತೆಯನ್ನು ಸಮರ್ಪಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ನಗರದ ಮನೋರಂಜಿನಿ ಸಂಗೀತ ಸಭಾದ ಸ್ಥಾಪಕ ಬಿ.ಸಿ.ಜಯರಾಮ್ ತಿಳಿಸಿದರು. ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆಯವರು ಬರೆದು ರಾಗ ಸಂಯೋಜಿಸಿ ಗಾಯಕಿ ರೇಖಾ ಪ್ರೇಮ್‌ಕುಮಾರ್ ಅವರೊಂದಿಗೆ ಹಾಡಿದ `ಕೃಷ್ಣ ಗೋಪಾಲಕೃಷ್ಣ’ ಭಕ್ತಿಗೀತೆಯನ್ನು ಇತ್ತೀಚೆಗೆ ಬಸವನಹಳ್ಳಿಯ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕೃಷ್ಣ ತನ್ನ ಮುರಳಿಯ ನಾದದ ಮೂಲಕ ಜನರನ್ನು ಮಾತ್ರವಲ್ಲ, ಗೋಮಾತೆಯರನ್ನೂ ಮೂಕವಿಸ್ಮಿತವಾಗಿಸಿದವನು. ನಾದಪೂಜೆ ಅವನಿಗೆ ಅತಿಪ್ರಿಯ. ಪ್ರತೀ ಕ್ಷೇತ್ರಗಳಿಗೂ ಅಲ್ಲಿನ ಮಹಿಮೆ ಸಾರುವ ಗೀತೆ ಅವಶ್ಯಕ ಎಂದು ಅವರು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಕವಯತ್ರಿ ತನ್ಮಯಿ ಪ್ರೇಮ್‌ಕುಮಾರ್ ಮಾತನಾಡಿ. ಭಕ್ತಿ ಸಾಹಿತ್ಯ ಅಂತರಂಗದಲ್ಲಿ ಸ್ಫುರಣೆಯಾಗುವಂತಾದ್ದು. ಅದು ಬಹಿರ್ಮುಖವಾಗಿ ಬಂದು ಸಂಗೀತದ ರೂಪ ಪಡೆಯುವುದು ಎಂದರೆ…
ಚಿಕ್ಕಮಗಳೂರು: ಮಹಿಳಾ ಸಬಲೀಕರಣಕ್ಕೆ ಕಾನೂನು ಅರಿವು ಬಹುಮುಖ್ಯವಾಗಿದೆ. ಮಹಿಳೆಯರು ತಮ್ಮ ಹಕ್ಕು ಮತ್ತು ಕಾನೂನು ಸೇವೆಗಳ ಕುರಿತು ಮಾಹಿತಿ ಪಡೆದು ಪ್ರಬಲರಾಗಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಹನುಮಂತಪ್ಪ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವೈದ್ಯಕೀಯ ವಿಜ್ಞಾನ ಸಂಸ್ಥೆ ಚಿಕ್ಕಮಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಸಬಲೀಕರಣ ಘಟಕ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ನೆನ್ನೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಮಹಿಳೆಗೂ ಸ್ವತಂತ್ರವಾಗಿ ಬದುಕುವ ಮತ್ತು ಮುಕ್ತವಾಗಿ ತನ್ನನ್ನು ತಾನು ವ್ಯಕ್ತಪಡಿಸಿಕೊಳ್ಳುವ ಸ್ವತಂತ್ರವಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಮ್ಮ ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ತಾರತಮ್ಯ ಅಥವಾ ಇತರೆ ಅನ್ಯಾಯದ ಕೃತ್ಯಗಳು ಹಾಗೂ ಅಪರಾಧಗಳನ್ನು ಎದುರಿಸುತ್ತಿದ್ದಾರೆ.…