Author: chikkamagalur express

ಚಿಕ್ಕಮಗಳೂರು: ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಐಕ್ಯತಾ ಮನೋಭಾವ ವೃದ್ಧಿಯಾಗುವುದರೊಂದಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಇಲಾಖೆ (ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಹಾಗೂ ತಾಲ್ಲೂಕು ಗ್ರೇಡ್-೨ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಇಂದು ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಅಥ್ಲೆಟಿಕ್ಸ್ ಕ್ರೀಡಾ ಕೂಟ ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಶೇಷ ಚೇತನ (೧೪/೧೭ ವಯೋಮಾನ) ಮಕ್ಕಳ ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಂದು ಮಗುವಿಗೂ ಶಿಕ್ಷಣ ಕೊಡಿಸುವುದು ಬಹುಮುಖ್ಯವಾಗಿದೆ. ಶಿಕ್ಷಣ ಸಂಸ್ಥೆಯಲ್ಲಿ ಅಕ್ಷರ ಅಭ್ಯಾಸದ ಜೊತೆಗೆ ಶಿಕ್ಷಣದ ಪೂರಕ ಚಟುವಟಿಕೆಗಳಾದ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ…

Read More

ಚಿಕ್ಕಮಗಳೂರು: ಭಾರತೀಯ ಪರಂಪರೆಯಲ್ಲಿ ಉಪನಿಷತ್ ಕಾಲದಲ್ಲಿಯೇ ಪ್ರಕೃತಿ ಆರಾಧನೆಗೆ ಒತ್ತು ಕೊಡಲಾಗಿದೆ. ದ್ವಾಪರ ಯುಗದಲ್ಲಿ ಕೃಷ್ಣನೂ ಸಹ ಗೋವರ್ಧನ ಗಿರಿಯನ್ನು ಪೂಜಿಸಲು ಕರೆ ಕೊಟ್ಟಿರುವುದನ್ನು ಗಮನಿಸಬಹುದು. ಅದರಲ್ಲೂ ಜ್ಞಾನದ ಸ್ವರೂಪವಾದ ಅರಳಿಮರವನ್ನೇ ನಾವು ದೈವ ಸ್ವರೂಪ ಎನ್ನುತ್ತೇವೆ. ನಮ್ಮ ಬಸವನಹಳ್ಳಿಯ ಅರಳಿಮರ ನಮ್ಮ ಶತಮಾನಗಳ ಸಾಕ್ಷಿ ಪ್ರಜ್ಞೆ ಎಂದು ಖ್ಯಾತ ನಿರೂಪಕಿ, ಸಂಸ್ಕೃತಿ ಚಿಂತಕಿ ಸುಮಾ ಪ್ರಸಾದ್ ಹೇಳಿದರು. ಅವರು ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀ ಶಂಕರಮಠದಲ್ಲಿ ಕಲ್ಕಟ್ಟೆ ಪುಸ್ತಕದ ಮನೆ, ಸೂರಂಕಣ ವೇದಿಕೆ ಇತ್ತೀಚೆಗೆ ಆಯೋಜಿಸಿದ್ದ ನಾಗರಾಜರಾವ್ ಕಲ್ಕಟ್ಟೆಯವರು ಬರೆದು ರಾಗ ಸಂಯೋಜಿಸಿ ಪಂಚಮಿ ಚಂದ್ರಶೇಖರ್ ಜೊತೆ ಹಾಡಿದ `ಬಸವನಹಳ್ಳಿ ಅರಳಿಮರ’ ವೃಕ್ಷಗೀತೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ನಮ್ಮೂರಿನ ಧಾರ್ಮಿಕ ಕೇಂದ್ರವೂ ಆಗಿರುವ ಈ ಅರಳಿಮರ ನಾಗಾರಾಧನೆ ಕಾರ್ತಿಕ ದೀಪೋತ್ಸವಗಳಿಗೂ ಸ್ಥಳ ಒದಗಿಸಿದೆ. ನೂರಾರು ಖಗ, ಕ್ರಿಮಿ ಕೀಟಗಳಿಗೆ ಆಶ್ರಯ ನೀಡಿರುವ ಈ ಮರ ಈ ನೆಲದ ಗುರುತಾಗಿದೆ. ಇದರ ಕುರಿತು ವಿಭಿನ್ನವಾದ ರೀತಿಯಲ್ಲಿ ಗೀತೆಯನ್ನು ಹೊರ ತಂದಿರುವ ನಾಗರಾಜರಾವ್ ಕಲ್ಕಟ್ಟೆ ನಿಜಕ್ಕೂ…

Read More

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸಿಕೊಳ್ಳಲು ನ.೬ ರಂದು ಬುಧವಾರ ಎಐಟಿ ವೃತ್ತದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಕಾಫಿ ಬೆಳೆಗಾರರ ವಿಶೇಷ ಸಭೆಯನ್ನು ಕರೆಯಲಾಗಿದೆ ಎಂದು ಆಯೋಜಕ ರತೀಶ್ ಕುಮಾರ್ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ಅವರು ಈ ಸಭೆಯಲ್ಲಿ ಕಾಫಿ ಬೆಳೆಗಾರರು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಜೊತೆಗೆ ಅಸ್ಸಾಂ, ಬಿಹಾರ, ಮಧ್ಯಪ್ರದೇಶ, ಒರಿಸ್ಸಾ ಮೂಲದ ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮಿಸಿತ್ತಿದ್ದು ಇವರಲ್ಲಿ ಅಪರಾಧ ಹಿನ್ನೆಲೆ ಉಳ್ಳುವರು ಕಾಫಿ ತೋಟಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದ್ದಾರೆ. ಬೆಳೆಗಾರರ ರಕ್ಷಣೆಗೆ ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಅವರು ಭಾಗವಹಿಸಿ ಮಾಹಿತಿ ನೀಡುವರು, ಭಾರತದ ಕಾಫಿಯನ್ನು ವಿಶ್ವದ ವಿಶ್ವ ಮಟ್ಟದಲ್ಲಿ ನಂ ೧ ಆಗಿಸಲು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಕರ್ನಾಟಕ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಡಾ. ಮೋಹನ್‌ಕುಮಾರ್…

Read More

ಚಿಕ್ಕಮಗಳೂರು: ಜಿಲ್ಲೆಯಲ್ಲಿ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂಬುದನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಇಂದು ಬಿಜೆಪಿ ವತಿಯಿಂದ ಮಾನವ ಸರಪಳಿ ರಚಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇಂದು ಬೆಳಗ್ಗೆ ತಾಲ್ಲೂಕು ಕಚೇರಿ ಆವರಣದಿಂದ ನಗರ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಕಾರ್ಯಕರ್ತರು ರಾಜ್ಯಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ರೈತರಿಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸಿ ಹನುಮಂತಪ್ಪ ವೃತ್ತದ ಬಳಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ರಾಜ್ಯದ ವಿವಿಧ ಕಡೆಗಳಲ್ಲಿ ಕೃಷಿಭೂಮಿ, ದೇವಾಲಯ ಸೇರಿದಂತೆ ಶತಶತಮಾನಗಳಿಂದ ಸಾಗು ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಜಮೀನು ಈಗ ವಕ್ಫ್ ಆಸ್ತಿ ಎಂದು ದಾಖಲಾಗಿರುವುದನ್ನು ರದ್ದುಪಡಿಸುವಂತೆ ಮತ್ತು ದೇಶದಲ್ಲಿ ಏಕರೂಪ ನಾಗರೀಕ ಕಾಯಿದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ವಕ್ಫ್ ರಚನೆಯಾಗುವ ಪೂರ್ವದಿಂದಲೇ ರೈತರು ಅಗತ್ಯ ದಾಖಲೆಗಳೊಂದಿಗೆ ಸಾಗುವಳಿ ಮಾಡಿಕೊಂಡು ಬಂದಿದ್ದು ಈಗ ದಿಡೀರ್ ಎಂದು ಜಮೀನ್ ವಕ್ಫ್ ಆಸ್ತಿ ಎಂದು ದಾಖಲೆ ಸೃಷ್ಟಿಸಿರುವ ಮೂಲಕ ಬಡ ಕೃಷಿಕರು,…

Read More

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ದತ್ತಮಾಲಾ ಅಭಿಯಾನದ ಸಂಭ್ರಮ ಏರ್ಪಟ್ಟಿದೆ. ಶ್ರೀರಾಮ ಸೇನೆ ವತಿಯಿಂದ ನಡೆಯುವ ೨೧ ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಇಂದು ಅಧಿಕೃತ ಚಾಲನೆ ದೊರೆಯಿತು. ಶಂಕರಮಠದಲ್ಲಿ ದತ್ತಾತ್ರೇಯರ ಮೂರ್ತಿಗೆ ಹೂವಿನಹಾರ ಮತ್ತು ತುಳಸಿಹಾರವನ್ನು ಹಾಕುವ ಮೂಲಕ ಪೂಜೆ ಸಲ್ಲಿಸಲಾಗಿತ್ತು. ದತ್ತಮಾಲೆ ಹಾಕಲು ಸಿದ್ದಗೊಂಡಿದ್ದ ದತ್ತಭಕ್ತರು ದತ್ತಾತ್ರೇಯರ ನಾಮಸ್ಮರಣೆಯೊಂದಿಗೆ ಭಜನೆ ಮಾಡುತ್ತಿದ್ದದು ಕಂಡುಬಂತು. ಶಂಕರಮಠದಲ್ಲಿ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಹಾಸನ ವಿಭಾಗದ ಅಧ್ಯಕ್ಷ ರಂಜಿತ್‌ಶೆಟ್ಟಿ, ಉಪಾಧ್ಯಕ್ಷ ಅಭಿಜಿತ್‌ಗೌಡ, ವಿಭಾಗ ಪ್ರಧಾನ ಕಾರ್ಯದರ್ಶಿ ಜ್ಞಾನೇಂದ್ರಜೈನ್, ದುರ್ಗಾಸೇನೆ ಜಿಲ್ಲಾಧ್ಯಕ್ಷೆ ನವೀನರಂಜಿತ್ ಸೇರಿದಂತೆ ಹಲವು ಮಂದಿಗೆ ದತ್ತಮಾಲೆಧಾರಣೆ ಮಾಡಲಾಯಿತು. ಕರ್ನಾಟಕದ ಅಯೋಧ್ಯೆ ಎನಿಸಿರುವ ವಿವಾದಿತ ದತ್ತಪೀಠದಲ್ಲಿ ನಡೆಯಲಿರುವ ದತ್ತಮಾಲಾ ಅಭಿಯಾನದ ಪ್ರಯುಕ್ತ, ಮಾಲಾಧಾರಣೆ ಮಾಡುವ ಮೂಲಕ ದತ್ತಮಾಲಾ ಅಭಿಯಾನ ಆರಂಭಗೊಂಡಿತು. ಇಂದಿನಿಂದ ನವೆಂಬರ್ ೧೦ ರವರೆಗೆ ದತ್ತಮಾಲಾ ಅಭಿಯಾನ ನಡೆಯುವುದು. ಹಿಂದೂಗಳಿಗೆ ದತ್ತಪೀಠ ಒಪ್ಪಿಸಬೇಕು ಎಂಬ ಪ್ರಮುಖ ಆಗ್ರಹದೊಂದಿಗೆ ಈ ಬಾರಿಯ ದತ್ತಮಾಲಾ ಅಭಿಯಾನಕ್ಕೆ ಚಾಲನೆ ದೊರೆತಿದೆ. ನವೆಂಬರ್ ೧೦ ರಂದು ದತ್ತಪೀಠದಲ್ಲಿ ದತ್ತಪಾದುಕೆ…

Read More

ಚಿಕ್ಕಮಗಳೂರು: ರಾಜ್ಯದ ವಿವಿಧ ಕಡೆಗಳಲ್ಲಿ ಕೃಷಿ ಭೂಮಿ, ದೇವಾಲಯ ಸೇರಿದಂತೆ ಶತ ಶತಮಾನಗಳಿಂದ ಸಾಗು ಮಾಡಿಕೊಂಡು ಬದುಕು ಕಟ್ಟಿಕೊಮಡಿರುವ ಜಮೀನು ಈಗ ವಕ್ಫ್ ಆಸ್ತಿ ಎಂದು ದಾಖಲಾಗಿರುವುದನ್ನು ರದ್ದುಪಡಿಸುವಂತೆ ಮತ್ತು ದೇಶದಲ್ಲಿ ಏಕರೂಪ ನಾಗರಿಕ ಕಾಯ್ದೆ ಜಾರಿಗೊಳಿಸಬೇಕು ಎಂದು ಜಿಲ್ಲಾ ಬಿಜೆಪಿ ಆಗ್ರಹಿಸಿದೆ. ವಕ್ಫ್‌ಗೂ ಪೂರ್ವದಿಂದಲೇ ಜನರು ದಾಖಲೆಗಳೊಂದಿಗೆ ಸಾಗು ಮಾಡಿಕೊಂಡು ಬಂದಿದ್ದಾರೆ. ಈಗ ದಿಢೀರನೆ ಜಮೀನು ವಕ್ಫ್ ಆಸ್ತಿ ಎಂದು ದಾಖಲೆ ಸೃಷ್ಟಿಸುವ ಮೂಲಕ ಬಡ ಕೃಷಿಕರು, ಹಿಂದುಳಿದ ವರ್ಗದವರು, ದಲಿತರು ಸೇರಿದಂತೆ ಎಲ್ಲಾ ವರ್ಗದ ಜನರು ಭೀತಿಗೆ ಒಳಗಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರೈತರ ಭೂಮಿಗೆ ಸಂಬಂಧಿಸಿದಂತೆ ಪಹಣಿಯಲ್ಲಿ ವಕ್ಫ್ ಭೂಮಿ ಎಂದು ನಮೂದಾಗಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಆತಂಕಕ್ಕೆ ಒಳಗಾಗಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಕಾರಣಕರ್ತರಾಗಿದ್ಧಾರೆ. ಇದೊಂದು ಲ್ಯಾಂಡ್ ಜಿಹಾದ್ ರೂಪದಂತಿದೆ. ರೈತರು ತಮ್ಮ ಜಮೀನಿನ ಪಹಣಿಯನ್ನು ಪರಿಶೀಲಿಸಿಕೊಳ್ಳಬೇಕು ಎಂದು ಸಲಹೆ…

Read More

ಚಿಕ್ಕಮಗಳೂರು: ತೇರಾಪಂಥ್ ಧರ್ಮ ಸಂಘದ ೯ ನೇ ಆಚಾರ್ಯರಾದ ಶ್ರೀ ತುಳಸಿ ಜೀ ಅವರ ೧೧೧ ನೇ ಜನ್ಮ ದಿನಾಚರಣೆ ಆಂಗವಾಗಿ ಅಣುವೃತ ಸಮಿತಿ ವತಿಯಿಂದ ಭಾನುವಾರ ನಗರದ ತೇರಾಪಂಥ್ ಭವನದಲ್ಲಿ ರಾಜ್ಯಮಟ್ಟದ ಅಣುವೃತ್ ಕ್ರಿಯೇಟಿವಿಟಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಶಾಲಾ ಕಾಲೇಜುಗಳಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳು, ಸಂಗೀತ, ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದವರು ಸೂರತ್‌ನಲ್ಲಿ ನಡೆಯುವ ಆಚಾರ್ಯ ಶ್ರೀ ಮಹಾಶ್ರಮಣ್ ಜೀ ಅವರ ಚಾತುರ್ಮಾಸ ಕಾರ್ಯಕ್ರಮದ ಅಂಗವಾಗಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತೇರಾಪಂತ್ ಮಹಾ ಸಭಾದ ಅಧ್ಯಕ್ಷ ಮಹೇಂದ್ರ ಡೋಸಿ ತಿಳಿಸಿದರು. ಅಣುವೃತ್ ಸಮಿತಿ ಅಧ್ಯಕ್ಷರಾದ ಮಂಜುಳಾ ಬನ್ಸಾಲಿ ಮಾತನಾಡಿ, ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ೨೦ ಮಕ್ಕಳ ಪೈಕಿ ಚಿಕ್ಕಮಗಳೂರು ಜಿಲ್ಲೆಯ ೧೪ ಮಂದಿ ಇದ್ದಾರೆ ಅವರಿಗೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಚಿಕ್ಕಮಗಳೂರಿನಲ್ಲಿ ಎರಡು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸುತ್ತಿದ್ದಾರೆ. ಜಿಲ್ಲೆಯ ಮಕ್ಕಳಿಗೆ ರಾಷ್ಟ್ರಮಟ್ಟದ ಪ್ರಶಸ್ತಿ…

Read More

ಚಿಕ್ಕಮಗಳೂರು: ‘ಆಕಾಶಕ್ಕೆ ಉಗಿದರೆ ಅದು ಆಕಾಶಕ್ಕೆ ಮುಟ್ಟಲ್ಲ, ಸೂರ್ಯನಿಗೆ ತಟ್ಟಲ್ಲ, ಉಗಿದವರ ಮುಖಕ್ಕೆ ವಾಪಸ್ ಬೀಳುತ್ತದೆ.ನೀವು ಮೋದಿಯನ್ನ ಟೀಕೆ ಮಾಡೋದು ಸೂರ್ಯನಿಗೆ ಉಗಿದಂತಾಗುತ್ತದೆ.ಅದು ನಿಮ್ಮ ಮುಖಕ್ಕೆ ಮೆತ್ತಿಕೊಳ್ಳುತ್ತದೆ. ನೀವೇ ಮುಖ ತೊಳೆದುಕೊಳ್ಳಬೇಕು’ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು ಅವರು ಸುದ್ದಿಗಾರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರಮೋದಿಯವರ ಬಗ್ಗೆ ಟೀಕಿಸಿದ್ದರ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮೋದಿಯನ್ನು ಬೈದು ದೊಡ್ಡವರಾಗಬಹುದು ಎಂದು ಭಾವಿಸಿದ್ದಾರೆ.ಸಿದ್ದರಾಮಯ್ಯ ಮೋದಿಗೆ ಚಾಲೆಂಜ್ ಕೂಡ ಮಾಡಲಾಗಿತ್ತು. ೨೦೧೪, ೨೦೧೯, ೨೦೨೪ ರಲ್ಲಿ ಚಾಲೆಂಜ್ ಮಾಡಿದ್ದರು. ನಿಮ್ಮ ನಾಯಕತ್ವಕ್ಕೆ ಜನ ಮತ ನೀಡಲಿಲ್ಲ, ಪ್ರಧಾನಿಯವರನ್ನು ನಿಂದಿಸಿ ದೊಡ್ಡವರಾಗಬಹುದು ಎಂದು ಭಾವಿಸಿದಂತೆ ಕಾಣುತ್ತಿದೆ ಎಂದರು. ವಕ್ಫ್ ಸಚಿವ ಜಮೀರ್‌ಅಹಮದ್ ಅವರ ವೀಡಿಯೋ ತೋರಿಸಿ ಕಿಡಿಯಾದ ಸಿ.ಟಿ.ರವಿ ಹಳ್ಳಿಹಳ್ಳಿ, ತೆರಳಿ ವಕ್ಫ್ ಅದಾಲತ್ ನಡೆಸಿದ್ದು ಬಿಜೆಪಿಯವರೋ, ಸಚಿವ ಜಮೀರ್ ಅವರೋ ಎಂದು ಪ್ರಶ್ನಿಸಿ, ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳು ರಾಮಯ್ಯ ಆಗಿದ್ದಾರೆಂದು ಟೀಕಿಸಿದರು. ಮುಖ್ಯಮಂತ್ರಿ ಸೂಚನೆ ಮೇರೆಗೆ ನಾನು…

Read More