Subscribe to Updates
Get the latest creative news from FooBar about art, design and business.
- e-paper (26-07-2025) Chikkamagalur Express
- ಬೀಡಾಡಿ ನಾಯಿಗಳಿಗೆ ಆಹಾರ ಹಾಕಿದಲ್ಲಿ ಕಾನೂನು ಕ್ರಮ
- ಹದಿಹರೆಯದ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಶಿಕ್ಷಣ ಅಗತ್ಯ
- e-paper (25-07-2025) Chikkamagalur Express
- ಬುಕ್ಕಾಂಬುಧಿ ಬೆಟ್ಟದಲ್ಲಿ ಅಮವಾಸ್ಯೆ ಪೂಜೆ
- ಮುಂಬರುವ ತಾಪಂ-ಜಿಪಂ ಚುನಾವಣೆ ಎದುರಿಸಲು ಸದಸ್ಯತ್ವ ಅಭಿಯಾನ
- e-paper (24-07-2025) Chikkamagalur Express
- ಬಾಲ್ಯ ವಿವಾಹ ತಡೆಯಲು ಜನಜಾಗೃತಿ ಅಗತ್ಯ
Author: chikkamagalur express
ಚಿಕ್ಕಮಗಳೂರು: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ತಡೆಗಟ್ಟಲು ಹಾಗೂ ತ್ವರಿತ ನ್ಯಾಯಕ್ಕಾಗಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿ ದಸಂಸ ಮುಖಂಡರುಗಳು ಜಿಲ್ಲಾಡಳಿತ ಮುಖಾಂತರ ಸಮಾಜ ಕಲ್ಯಾಣ ಸಚಿವರಿಗೆ ಗುರುವಾರ ಮನವಿ ಸಲ್ಲಿ ಸಿದರು. ಈ ಸಂಬಂಧ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮೂಲಕ ಮನವಿ ಸಲ್ಲಿಸಿದ ಮುಖಂ ಡರುಗಳು ನಿರಂತರ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ವಿಶೇಷ ಪೊಲೀಸ್ ಠಾಣೆ ತೆರೆಯಬೇಕು ಎಂದು ಆಗ್ರಹಿಸಿದರು. ಬಳಿಕ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಜಿಲ್ಲೆ ಅತಿಹೆಚ್ಚು ಮಲೆ ನಾಡು ಪ್ರದೇಶವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಕಾರ್ಮಿಕರು ವಾಸಿಸುತ್ತಿರುವ ಜೊತೆಗೆ ಅತಿಹೆಚ್ಚು ದೌರ್ಜನ್ಯ ಪ್ರಕರಣಗಳು ದಲಿತರ ಮೇಲೆ ಹೆಚ್ಚಳಗೊಳ್ಳುತ್ತಿದೆ ಎಂದು ದೂರಿದರು. ಈಗಾಗಲೇ ಸುಮಾರು ವರ್ಷಗಳಿಂದ ದಲಿತ ದೌರ್ಜನ್ಯ ಪ್ರಕರಣಗಳು ಇತ್ಯರ್ಥಗೊಂಡಿಲ್ಲ. ಆ ನಿಟ್ಟಿ ನಲ್ಲಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಠಾಣೆ ತೆರೆಯಬೇಕು ಎಂದ ಅವರು ಮುಂದಿನ ಸಚಿವ ಸಂಪುಟ ಸಭೆ…
ಚಿಕ್ಕಮಗಳೂರು: ಅತಿಯಾದ ಮಳೆ ಹಾಗೂ ಇನ್ನಿತರ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರುವಾಗ ರೆಸಾರ್ಟ್ ಮಾಲೀಕರ ಅಭಿಪ್ರಾಯ ಕೇಳುವ ಮೂಲಕ ನಿಬಂಧನೆ ವಿಧಿಸಬೇಕು ಎಂದು ರೆಸಾರ್ಟ್ ಮಾಲಿಕರ ಸಂಘ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಚಿಕ್ಕಮಗಳೂರು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಎಸ್.ಎನ್ ಜಿಲ್ಲೆಗೆ ಬರುವ ಪ್ರವಾಸಿಗರನ್ನು ನಿರ್ಬಂಧಿಸುವಾಗ ಜಿಲ್ಲೆಗೆ ಬರಬಾರದೆಂಬ ಮಾಹಿತಿ ಹೆಚ್ಚು ಪ್ರಚಾರವಾಗುತ್ತಿದ್ದು, ಇದರಿಂದ ಪ್ರವಾಸಿಗರಿಗೂ ತೊಂದರೆಯಾಗುತ್ತದೆ ಹಾಗೂ ಪ್ರವಾಸೋದ್ಯಮವನ್ನೇ ಅವಲಂಬಿಸಿಕೊಂಡಿರುವ ರೆಸಾರ್ಟ್, ಹೋಂಸ್ಟೇ, ಹೋಟೆಲ್ ಉದ್ಯಮಕ್ಕೂ ತೊಂದರೆಯಾಗಲಿದೆ ಎಂದು ತಿಳಿಸಿದರು. ಚಿಕ್ಕಮಗಳೂರು ಜಿಲ್ಲೆ ಭೌಗೋಳಿಕವಾಗಿ ಒಂದು ವಿಶಿಷ್ಟ ಸ್ಥಾನ ಪಡೆದಿದ್ದು, ಪ್ರಕೃತಿ ವಿಕೋಪಕ್ಕೆ ಒಳಗಾಗುವ ಸೂಕ್ಷ್ಮ ಪ್ರದೇಶಗಳಿಗೆ ಮಾತ್ರ ಅನ್ವಯವಾಗುವಂತೆ ಆದೇಶ ಹೊರಡಿಸಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಪ್ರವಾಸೋದ್ಯಮ ಈ ಜಿಲ್ಲೆಯ ಪ್ರಮುಖ ಅಭಿವೃದ್ಧಿಯ ಮೂಲವಾಗಿದ್ದು, ಸರಾಸರಿ ತಿಂಗಳಿಗೆ ೩ ರಿಂದ ೩.೫೦ ಕೋಟಿ ರೂ. ಮೊತ್ತದ ಹಣ ಜಿಎಸ್‌ಟಿ ಮೂಲಕ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ರೆಸಾರ್ಟ್…
ಚಿಕ್ಕಮಗಳೂರು: ಪರಿಸರ ಮತ್ತು ಅರಣ್ಯ, ವನ್ಯಜೀವಿಗಳನ್ನು ರಕ್ಷಿಸಲು ಕರ್ನಾಟಕ ಸಂಭ್ರಮ-೫೦ ಈ ವಸ್ತು ಪ್ರದರ್ಶನ ಸಹಕಾರಿಯಾಗಿದೆ ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಅಭಿಪ್ರಾಯಿಸಿದರು. ಅವರು ನಗರದ ಬೈಪಾಸ್ ರಸ್ತೆಂiiಲ್ಲಿ ಸೈಮನ್ ಎಕ್ಸಿಬಿಟರ್‍ಸ್ ಸಂಸ್ಥೆ ಪ್ರಾರಂಭಿಸಿರುವ ಕರ್ನಾಟಕ ಸಂಭ್ರಮ-೫೦ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಕೃತಕ ಕಾಡುಪ್ರಾಣಿಗಳ ಲೋಕ ವಿಸ್ಮಯ ತರಿಸುತ್ತದೆ. ಈ ಮೂಲಕ ಪ್ರಕೃತಿ, ಅರಣ್ಯ ಪರಿಸರ ಉಳಿಸಲು ಪೂರಕ ವಾತಾವರಣವನ್ನು ವಸ್ತುಪ್ರದರ್ಶನ ನಿರ್ಮಾಣ ಮಾಡಿದೆ ಎಂದು ಶ್ಲಾಘಿಸಿದರು. ನಶಿಸುತ್ತಿರುವ ವನ್ಯ ಪ್ರಾಣಿ-ಪಕ್ಷಿಗಳ ಲೋಕ ವಿಶೇಷ ಆಕರ್ಷಣೆಯಾಗಿದ್ದು, ಆಹಾರ ಮಳಿಗೆ, ವಿವಿಧ ಕರಕುಶಲ ವಸ್ತುಗಳ ಮಾರಾಟ ಮಳಿಗೆ ಇನ್ನೂ ಮುಂತಾದ ಬಹುಪಯೋಗಿ ವಸ್ತು ಪ್ರದರ್ಶನದಲ್ಲಿ ಇಡಲಾಗಿದ್ದು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ವೀಕ್ಷಿಸಿದರೆ ತುಂಬಾ ಅನುಭವ ಸಿಗುತ್ತದೆ ಎಂದು ಹೇಳಿದರು. ವಸ್ತುಪ್ರದರ್ಶನವನ್ನು ವೀಕ್ಷಿಸಿದ ತಮಗೆ ಇಂಗ್ಲಿಷ್ ಸಿನಿಮಾದ ಸಾಹಸಮಯ ಚಿತ್ರಗಳನ್ನು ನೋಡಲು ಹಾಗೂ ಅಭೂತಪೂರ್ವ ಕಲಾಕೃತಿಗಳು ಜನರ ಮನಸ್ಸಿನಲ್ಲಿ ಒಂದು ಮನರಂಜನೆಯನ್ನು ತಂದುಕೊಡುತ್ತದೆ ಎಂದು ತಿಳಿಸಿದರು. ಉಪಾಧ್ಯಕ್ಷೆ ಅನು ಮಧುಕರ್ ಮಾತನಾಡಿ, ಬೆಂಗಳೂರು ಮತ್ತು…
ಚಿಕ್ಕಮಗಳೂರು: ನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಕನ್ನಡ ರಾಜ್ಯೋತ್ಸವವನ್ನು ರಕ್ಷಣಾ ವೇದಿಕೆ ಪದಾಧಿಕಾರಿಗಳು ಅತ್ಯಂತ ಸಂಭ್ರಮದಿಂದ ಭಾಗ ವಹಿಸಿ ಯಶಸ್ವಿಗೊಳಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಅಶೋಕ್ ಕೆಂಪನಹಳ್ಳಿ ಹೇಳಿದರು. ನಗರದ ಕುವೆಂಪು ಕಲಾಮಂದಿರದ ಹೇಮಾಂಗಣ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಬುಧವಾರ ಏರ್ಪಡಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾಡಳಿತ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರವೇಯ ಪುರುಷ ಹಾಗೂ ಮಹಿಳಾ ಪದಾಧಿಕಾರಿಗಳು ಕರ್ನಾಟಕ ಸಂಸ್ಕೃತಿ ಪ್ರತಿಬಿಂಬಿಸುವ ಉಡುಗೆ-ತೊಡುಗೆಯಲ್ಲಿ ಆಗಮಿಸಬೇಕು. ಪ್ರತಿಯೊಬ್ಬರು ಕೂಡಾ ತಮ್ಮ ಮನೆಗಳಲ್ಲಿ ಕನ್ನಡಧ್ವಜ ಕಟ್ಟುವ ಮೂಲಕ ರಾಜ್ಯೋತ್ಸವಕ್ಕೆ ಕಳೆ ತುಂಬಬೇಕು ಎಂದು ತಿಳಿಸಿದರು. ಅಂದು ಬೆಳಿಗ್ಗೆ ೮.೩೦ಕ್ಕೆ ಜಿಲ್ಲಾ ಕರವೇ ಪ್ರತ್ಯೇಕ ವಾಹನವನ್ನು ತಳಿರು ತೋರಣದಿಂದ ಶೃಂಗರಿಸಿ ಶ್ರೀ ಕನ್ನಡಾಂಬೆ ಭಾವಚಿತ್ರ ಇರಿಸಿ ಪುಷ್ಪಾರ್ಚನೆ ಮೂಲಕ ಎಂ.ಜಿ.ರಸ್ತೆ ಮುಖಾಂತರ ಜಿಲ್ಲಾ ಆಟದ ಮೈದಾನದ ವರೆಗೆ ಮೆರವಣಿಗೆ ಜಾಥಾ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಸಂಭ್ರಮದ…
ಚಿಕ್ಕಮಗಳೂರು: ಸಂತೆ ಮೈದಾನದಲ್ಲಿ ಮೀನು ವ್ಯಾಪಾರ ನಡೆಸುತ್ತಿರುವ ಮೀನು ಗಾರರಿಗೆ ಮಳಿಗೆ ಸೇರಿದಂತೆ ಶುಚಿತ್ವಕ್ಕೆ ಆದ್ಯತೆ ಕೊಡಲು ಹೆಚ್ಚಿನ ಸವಲತ್ತು ಒದಗಿಸಬೇಕು ಎಂದು ಆಗ್ರಹಿಸಿ ಮೀನು ಮಾರಾಟಗಾರರು ನಗರ ವ್ಯಾಪ್ತಿಯಲ್ಲಿನ ಮಳಿಗೆಗಳನ್ನು ಬುಧವಾರ ಬಂದ್‌ಗೊಳಿಸಿ ಸೌಲಭ್ಯಕ್ಕೆ ಒತ್ತಾಯಿಸಿದರು. ಅಂಬೇಡ್ಕರ್ ರಸ್ತೆ ಸಮೀಪವಿರುವ ಮಟನ್ ಹಾಗೂ ಚಿಕನ್ ಮಳಿಗೆಗಳ ಮಾದರಿಯಂತೆ ಮೀನುಗಾ ರರಿಗೆ ನಗರಸಭಾ ಆಡಳಿತ ಮಂಡಳಿ ಪ್ರತ್ಯೇಕವಾಗಿ ಮಳಿಗೆ ನಿರ್ಮಿಸಿಕೊಟ್ಟು ಸುಗಮ ವ್ಯಾಪಾರ ಹಾಗೂ ಶುಚಿತ್ವದಿಂದ ಕೂಡಿರಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಮೀನು ವ್ಯಾಪಾರಿ ಗೋಪಿ ಮಾತನಾಡಿ ಸಂತೆದಿನವಾದ ಬುಧವಾರ ಬಹುತೇಕ ಮೀನುಗಾ ರರು ಸಂತೆ ಮೈದಾನದಲ್ಲಿ ವ್ಯಾಪಾರ ನಡೆಸುತ್ತಾರೆ. ಆದರೆ ಮೀನಿನ ಶುಚಿತ್ವದ ನೀರು ಹರಿಯಲು ಯುಜಿಡಿ ವ್ಯವಸ್ಥೆಯಿಲ್ಲದ ಕಾರಣ ನೇರವಾಗಿ ಚರಂಡಿ ಮೂಲಕ ಹರಿದು ಸ್ಥಳೀಯ ನಿವಾಸಿಗಳ ಮನೆ ಮುಂಭಾಗದ ಚರಂಡಿಯಿಂದ ಕಾಲುವೆಗೆ ಸೇರುತ್ತಿದೆ ಎಂದರು. ಮೀನಿನ ಶುಚಿತ್ವಗೊಳಿಸಿದ ನೀರು ವಿಪರೀತ ವಾಸನೆ ಹಾಗೂ ರೋಗರುಜಿನಿಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆಕ್ಷೇಪಿಸಿದ ಹಿನ್ನೆಲೆ ಸಂತೆ…
ಚಿಕ್ಕಮಗಳೂರು: ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ರೀನಾ ಸುಜೇಂದ್ರ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್‌ರವರು ಅಧ್ಯಕ್ಷರಾದವರು ತಾಳ್ಮೆ, ಸಮಾಧಾನ, ನಗುಮುಖ ಇವುಗಳ ಜೊತೆಗೆ ಸದಸ್ಯರು ಸಮಸ್ಯೆಗಳನ್ನು ಹೇಳಿದಾಗ ಸ್ಥಳದಲ್ಲೇ ಪರಿಹರಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ನೂತನ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ಚಿಕ್ಕಮಗಳೂರಿಗೆ ಒಂದು ಹೆಮ್ಮೆ ಪಡುವಂತ ಸಂಘಟನೆಯಾಗಿದೆ. ಮಾತೃ ಸಂಘಕ್ಕೆ ಮಹಿಳಾ ಸಂಘ ಬೆನ್ನೆಲುಬಾದರೆ ಮಹಿಳಾ ಸಂಘ ಮಾತೃ ಸಂಘಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಹೀಗೆ ಒಟ್ಟಿಗೆ ಸೇರಿ ಸಮುದಾಯದ, ಸಮಾಜದ ಸೇವೆ ಜೊತೆಗೆ ಅಭಿವೃದ್ಧಿ ಮಾಡಬೇಕೆಂಬುದು ಎರಡು ಸಂಘಗಳ ಧ್ಯೇಯವಾಗಿದೆ ಎಂದರು. ಅಭಿವೃದ್ಧಿ ಮತ್ತು ಸಂಘಟನೆಗಾಗಿ ಈ ಎರಡು ಸಂಘಗಳನ್ನು ಇದೇ ಉದ್ದೇಶವಾಗಿಟ್ಟುಕೊಂಡು ನಮ್ಮ ಹಿರಿಯರು ಸ್ಥಾಪನೆ ಮಾಡಿದ್ದಾರೆ. ಸಂಘದಲ್ಲಿ ವ್ಯಕ್ತಿಗೋಸ್ಕರ ಭಿನ್ನಾಭಿಪ್ರಾಯ ಬರಬಾರದು, ಮಹಿಳಾ ಸಂಘವನ್ನು ಗೌರವಿಸುವ ಗುಣ ಎಲ್ಲಾ ಪದಾಧಿಕಾರಿಗಳಲ್ಲಿ ಮೂಡಬೇಕಾಗಿರುವುದು ಅಗತ್ಯ…
ಚಿಕ್ಕಮಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ತೆರಳಲು ಕೆ.ಎಸ್.ಆರ್.ಟಿ.ಸಿ. ಇಲಾಖೆ ಬಸ್‌ಸೌಲಭ್ಯ ಪೂರೈಸದಿರುವುದನ್ನು ಖಂಡಿಸಿ ನಗರದ ಎಐಟಿ ವೃತ್ತದಲ್ಲಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ರಸ್ತೆತಡೆಹಿಡಿದು ಪ್ರತಿಭಟನೆ ನಡೆಸಿದರು. ಎಬಿವಿಪಿ ಕಾರ್ಯಕರ್ತ ರಾಕೇಶ್ ಮಾತನಾಡಿ ಜಿಲ್ಲೆಯಲ್ಲೇ ಅತಿಹೆಚ್ಚು ಸಂಖ್ಯೆ ಹೊಂದಿರುವ ಐಡಿಎಸ್‌ಜಿ ಕಾಲೇಜು ವಿದ್ಯಾರ್ಥಿಗಳಿಗೆ ಬಸ್‌ಸೌಕರ್ಯ ಕಲ್ಪಿಸುವುದು ಸರ್ಕಾರಿ ಹಾಗೂ ಕೆ.ಎಸ್.ಆರ್.ಟಿ.ಸಿ ಕರ್ತವ್ಯವಾಗಿದೆ. ಆದರೆ ಸಮಯಕ್ಕೆ ಬಸ್‌ಗಳು ಬಾರದೇ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು. ಜನಸಾಮಾನ್ಯರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕೆ ಎಷ್ಟು ಬಸ್‌ಗಳು ಯಾವ ಭಾಗದಲ್ಲಿ ನಿಯೋ ಜಿಸಬೇಕು ಎಂಬುದು ವಿಭಾಗೀಯ ನಿಯಂತ್ರಾಣಾಧಿಕಾರಿಗೆ ಅರಿವಿಲ್ಲದಂತಿದೆ. ಸಾವಿರಾರು ಸಂಖ್ಯೆಯಲ್ಲಿ ಐಡಿಎಸ್‌ಜಿ ಕಾಲೇಜು ಸೇರ್ಪಡೆಗೊಳ್ಳುವ ಯುವಕ-ಯುವತಿಯರಿಗೆ ಕಾಡುವೊಂದೇ ಬಸ್ಸಿನ ಸಮಸ್ಯೆ ಎಂದರು. ಅನೇಕ ವಿದ್ಯಾರ್ಥಿಗಳ ಕುಟುಂಬವು ಬಡವರ್ಗದ ಕಾರಣ ಹಣಕಾಸು ಸರಿದೂಗಿಸುವ ನಿಟ್ಟಿನಲ್ಲಿ ಬಸ್ ಪಾಸ್ ಮಾಡಿಕೊಂಡಿರುತ್ತಾರೆ. ಕೆಲವೊಮ್ಮೆ ಬಸ್ಸಿಲ್ಲದ ಕಾರಣ ಆಟೋಗಳಲ್ಲಿ ಹೆಚ್ಚಿನ ದರದಲ್ಲಿ ತೆರಳ ಬೇಕಾ ಗುವ ಸ್ಥಿತಿ ತಂದೊಡ್ಡಿದೆ. ಹೀಗಾಗಿ ಎಬಿವಿಪಿ ಕಾರ್ಯಕರ್ತರು ರಸ್ತೆತಡೆಹಿಡಿದು…