Author: chikkamagalur express

ಚಿಕ್ಕಮಗಳೂರು: ತಾಲ್ಲೂಕಿನ ತೇಗೂರು ಸಮೀಪವಿರುವ ಪಿಎಂಶ್ರೀ ಕೇಂದ್ರಿಯ ವಿದ್ಯಾಲಯಕ್ಕೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಂಗಳವಾರ ದಿಡೀರ್ ಭೇಟಿ ನೀಡಿ ಶಾಲಾ ಆಡಳಿತ ವ್ಯವಸ್ಥೆ ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಬಗ್ಗೆ ಸಮಗ್ರ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು ಶಾಲಾ ಆಡಳಿತಕ್ಕೆ ಶಿಕ್ಷಕರು, ಸಿಬ್ಬಂದಿಗಳು ನೇಮಿಸುವುದು, ಮಕ್ಕಳನ್ನು ಶಾಲೆಗೆ ದಾಖಲಿಸುವ ಹಾಗೂ ಮೂಲಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಶಾಲಾ ಪೋಷಕರ ಸಂಘದೊಂ ದಿಗೆ ಸಮಗ್ರ ಚರ್ಚೆ ನಡೆಸಿದ್ದು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವ ಮೂಲಕ ಸೌಕರ್ಯ ಒದಗಿಸುವ ಭರವಸೆ ನೀಡಿದರು. ಮುಖ್ಯವಾಗಿ ವಿದ್ಯಾಲಯದಲ್ಲಿ ಹೆಚ್ಚುವರಿಯಾಗಿ ಪಿಯು ಶಿಕ್ಷಣ ಆರಂಭಿಸುವ ಕಲ್ಪನೆ ಮತ್ತು ಹೊಸ ವಿದ್ಯಾಭ್ಯಾಸದ ನೀತಿಯನ್ನು ಅನುರಿಸುವ ಅಗತ್ಯವಿದೆ. ಅಲ್ಲದೇ ೧ ರಿಂದ ೧೦ನೇ ತರಗತಿವರೆಗೆ ವಿದ್ಯಾರ್ಥಿ ಗಳಿಗೆ ರೂಪಿಸಿರುವ ಎಲ್ಲಾ ಯೋಜನೆಗಳನ್ನು ಅನುಷ್ಟಾನಗೊಳ್ಳಲಿದೆ ಎಂದು ಹೇಳಿದರು. ವಿದ್ಯಾಲಯದಲ್ಲಿ ಬಾಲ್ಯಮಕ್ಕಳಿಗೆ ಎಲ್‌ಕೆಜಿ ಮತ್ತು ಯುಕೆಜಿ ಮಾದರಿಯಲ್ಲಿ ಶಾಲೆಗಳನ್ನು ತೆರೆಯುವ ಅಲೋಚನೆಯಿದೆ. ಈ ಎಲ್ಲಾ ವ್ಯವಸ್ಥೆ ಕೈಗೊಳ್ಳಲು…

Read More

ಚಿಕ್ಕಮಗಳೂರು:  ಹಳ್ಳಿಗಾಡಿನ ಶೋಷಿತ ವರ್ಗದ ಜನತೆಯು ಜೀವಂತವಾಗಿ ಉಳಿ ಯಲು ಹಾಗೂ ಸ್ವಾತಂತ್ರ್ಯವಾಗಿ ಬದುಕು ಕಟ್ಟಿಕೊಳ್ಳಲು ಬಿ.ಕೆ.ಸುಂದರೇಶ್‌ರವರ ಹೋರಾಟದ ಹಾದಿಗಳೇ ಪ್ರಮುಖ ಕಾರಣಗಳು ಎಂದು ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಹೇಳಿದರು. ನಗರದ ಜಿಲ್ಲಾ ಸಿಪಿಐ ಕಚೇರಿಯಲ್ಲಿ ಹಮ್ಮಿಕೊಂಡಿದ್ಧ ದಿ|| ಬಿ.ಕೆ.ಸುಂದರೇಶ್‌ರವರ ಪುಣ್ಯಸ್ಮರಣೆ ಕಾರ್‍ಯ ಕ್ರಮದಲ್ಲಿ ಭಾವಚಿತ್ರಕ್ಕೆ ಮಂಗಳವಾರ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿ ಚಳುವಳಿ ಮುಖಾಂತರ ಬಡವರು, ಶೋಷಿತರಿಗೆ ದಾರಿದೀಪವಾದ ಬಿ.ಕೆ.ಸುಂದರೇಶ್ ಹಗಲು-ರಾತ್ರಿ ಎನ್ನದೇ ಇಡೀ ಜೀವನವನ್ನು ಬಡವರಿಗಾಗಿ ಮುಡಿಪಿಟ್ಟು ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯಬದ್ಧ ಹಕ್ಕುಗಳನ್ನು ಶೋಷಿತರಿಗೆ ಪೂರೈಸಿದ ಮಹಾತ್ಮರು ಎಂದು ಬಣ್ಣಿಸಿದರು. ಹಲವಾರು ವರ್ಷಗಳ ಕಾಲ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ನಿವಾಸಿಗಳನ್ನು ಏಕಾ ಏಕಿ ಒಕ್ಕಲೆಬ್ಬಿಸದ ವೇಳೆಯಲ್ಲಿ ಧೈರ್ಯವಾಗಿ ಎದೆಯೊಡ್ಡಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಅಪರೂ ಪದ ಜನನಾಯಕ ಎಂದ ಅವರು ಅಲ್ಪಾವಧಿಯಲ್ಲೇ ಜನತೆಯನ್ನು ಬಿಟ್ಟಗಲಿರುವುದು ತುಂಬಲಾರದ ನಷ್ಟ ಉಂಟಾಗಿದೆ ಎಂದರು. ಫಲಾಪೇಕ್ಷೆ ಇಲ್ಲದೇ ನ್ಯಾಯಕ್ಕಾಗಿ ಹೋರಾಡಿದ ಬಿ.ಕೆ.ಎಸ್. ಸಂಪತ್ತು ಸಾವಿರಾರು ಜನತೆಯ ಸ್ನೇಹ, ವಿಶ್ವಾಸವಾಗಿದೆ. ಇಂದಿನ…

Read More

ಚಿಕ್ಕಮಗಳೂರು: ಹಿರಿಯ ನಾಗರೀಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಜಿಲ್ಲಾ ಹಿರಿಯ ನಾಗರೀಕರ ಒಕ್ಕೂಟ ಇಂದು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು. ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಎಸ್ ನಂಜುಂಡರಾವ್ ಈಗಾಗಲೇ ಸಾರಿಗೆ ಬಸ್ಸುಗಳಲ್ಲಿ ಶೇ.೨೫ ರ? ರಿಯಾಯಿತಿ ನೀಡುತ್ತಿದ್ದು, ಈ ಹಿಂದೆ ಶೇ.೫೦ರ? ರಿಯಾಯಿತಿ ನೀಡಬೇಕೆಂದು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ವೃದ್ದಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷ ಈ ವೇತನಗಳಿಗೆ ನೀಡುತ್ತಿರುವ ವೇತನ ಬಹಳ ಕಡಿಮೆಯಾಗಿದ್ದು, ಕಾರಣ ಎಲ್ಲಾ ಔ?ಧಿಯ ಬೆಲೆಯು ಹೆಚ್ಚಾಗಿರುವುದರಿಂದ ದಯಮಾಡಿ ಈಗ ನೀಡುತ್ತಿರುವ ವೇತನಕ್ಕೆ ೨ರ? ಹಣ ಹೆಚ್ಚಿಸಬೇಕೆಂದು ಈ ಮೂಲಕ ಮನವಿ ಮಾಡಿದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯ ನಾಗರೀಕರಿಗೆ ವೈದ್ಯರ ಸಹಿತ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಮತ್ತು ಬ್ಯಾಂಕ್ ಹಾಗೂ ಸರ್ಕಾರಿ ಕಛೇರಿಗಳಲ್ಲಿ ಹಿರಿಯ ನಾಗರೀಕರ ಕೆಲಸ ತುರ್ತಾಗಿ ನಿರ್ವಹಿಸಿ ಕೊಡಬೇಕೆಂದು ಆಗ್ರಹಿಸಿದರು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಹಿರಿಯ…

Read More

ಚಿಕ್ಕಮಗಳೂರು: ಪರಿಷತ್‌ ಸದಸ್ಯ ಸಿ. ಟಿ. ರವಿ ಬಂಧನ ಪ್ರಕರಣದಲ್ಲಿ ಸತ್ಯಶೋಧನೆ ನಡೆಸುವಂತೆ, ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್‌ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ನಿರ್ದೇಶನದಂತೆ ಸಂವಿಧಾನ ಮತ್ತು ಕಾನೂನು ಉಲ್ಲಂಘನೆ ಮಾಡಿ ಪೊಲೀಸ್‌ ಇಲಾಖೆ ಮೂಲಕ ಅಧಿಕಾರದ ದುರ್ಬಳಕೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಕ್ರಮಕೈಗೊಳ್ಳುವಂತೆ ಇಂದು ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದ ಬಿಜೆಪಿ ನಿಯೋಗವು ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ದೂರು ಸಲ್ಲಿಸಿತು. ನಿಯೋಗದಲ್ಲಿ ಪರಿಷತ್‌ ಸದಸ್ಯರಾದ ಸಿ. ಟಿ. ರವಿ,ಎನ್.‌ ರವಿಕುಮಾರ್‌, ಕೇಶವ ಪ್ರಸಾದ್‌, ಕೆ. ಎಸ್.‌ ನವೀನ್‌, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ  ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಸಪ್ತಗಿರಿ ಗೌಡ ಮತ್ತು ಪ್ರಮುಖರು ಉಪಸ್ಥಿತರಿದ್ದರು. Governor files complaint seeking inquiry into C. T. Ravi’s arrest case

Read More

ಚಿಕ್ಕಮಗಳೂರು:  ನಗರದ ಬೈಪಾಸ್‌ರಸ್ತೆಯಲ್ಲಿರುವ ಕಲ್ಯಾಣ ನಗರ ಬಡಾವಣೆಯನ್ನು ಒಂದು ಮಾದರಿ ಬಡಾವಣೆಯನ್ನಾಗಿ ಮಾಡುವ ಸಂಕಲ್ಪದೊಂದಿಗೆ ಅಸ್ಥಿತ್ವಕ್ಕೆ ಬಂದಿರುವ ಕಲ್ಯಾಣನಗರ ವೆಲ್‌ಫೇರ್ ಟ್ರಸ್ಟ್‌ನ ಎಲ್ಲಾ ರೀತಿಯ ಸೇವಾ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದ್ದಾರೆ. ಕಲ್ಯಾಣ ನಗರ ಬಡಾವಣೆಲ್ಲಿ ಭಾನುವಾರ ಬೆಳಿಗ್ಗೆ ಕಲ್ಯಾಣ ನಗರ ವೆಲ್‌ಫೇರ್ ಸೊಸೈಟಿಯನ್ನು ಇಲ್ಲಿರುವ ಶ್ರೀ ವಿನಾಯಕ ದೇವಾಲಯದ ಮುಂಭಾಗ ಗಿಡನೆಟ್ಟು ಬಡಾವಣೆಯ ಸಂಪೂರ್ಣ ಸ್ವಚ್ಛತಾ ಆಂದೋಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ನಾನು ಕೂಡ ಈ ಬಡಾವಣೆಯ ನಿವಾಸಿಯಾಗಿದ್ದು, ಬಡಾವಣೆಯ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡುವ ಮೂಲಕ ಕಲ್ಯಾಣನಗರದ ಪರಿಪೂರ್ಣ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು. ಕಲ್ಯಾಣನಗರ ಬಡಾವಣೆಯಲ್ಲಿ ಎರಡು ಪಾರ್ಕ್‌ಗಳಿದ್ದು, ಇದರಲ್ಲಿ ಬಸವೇಶ್ವರ ಉದ್ಯಾನವನವನ್ನು ಚಿಕ್ಕಮಗಳೂರು ನಗರದಲ್ಲೇ ಒಂದು ಮಾದರಿ ಉದ್ಯಾನವನ್ನಾಗಿ ಮಾಡಲು ಈಗಾಗಲೇ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಮುಂದಿನ ೬ ತಿಂಗಳಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿ, ಪಾರ್ಕಿನ ಸಂಪೂರ್ಣ ನಿರ್ವಹಣೆ ಜವಾಬ್ದಾರಿಯನ್ನು ಕಲ್ಯಾಣನಗರ ವೆಲ್‌ಫೇರ್ ಸೊಸೈಟಿಯ…

Read More

ಚಿಕ್ಕಮಗಳೂರು: ಪ್ರವಾಸಿತಾಣಗಳಲ್ಲಿ ಹೊಸ ವ?ದ ಮೋಜು ಮಸ್ತಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಿಗೆ ಮಂಗಳವಾರ ಸಂಜೆ ೬ ಗಂಟೆಯಿಂದ ಬುಧವಾರ ಬೆಳಿಗ್ಗೆ ೬ ಗಂಟೆಯವರೆಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ ಎಂದು ಎಸ್ಪಿ ವಿಕ್ರಮ್ ಅಮಟೆ ತಿಳಿಸಿದರು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹೊಸ ವ?ದ ಸಂಭ್ರಮಾಚರಣೆಗೆ ಜಿಲ್ಲಾಡಳಿತ ಮಾರ್ಗಸೂಚಿ ಬಿಡುಗಡೆ ಮಾಡಿದೆ ಎಂದು ಜಿಲ್ಲೆಯಲ್ಲಿ ರೇವ್ ಪಾರ್ಟಿಗಳನ್ನು ನಿ?ಧಿಸಲಾಗಿದ್ದು ಒಂದು ವೇಳೆ ಇಂತಹ ಪಾರ್ಟಿಗಳನ್ನು ನಡೆಸಿದರೆ ಆಯೋಜಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುದಾಗಿ ಎಸ್ಪಿ ಎಚ್ಚರಿಕೆ ನೀಡಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ರಾತ್ರಿ ೧೦ ಗಂಟೆಯ ನಂತರ ಔಟ್ ಡೋರ್ ಡಿಜೆಗಳಿಗೆ ನಿ?ಧ ಹೇರಲಾಗಿದೆ. ಹೊಸ ವ?ದ ಆಚರಣೆಗಳಿಗೆಂದು ಈ ಬಾರಿ ನೂತನವಾಗಿ ಪರಿಚಯಿಸಿರುವ ತಾತ್ಕಾಲಿಕ ಸಿಎಲ್ ೫ ಲೈಸೆನ್ಸ್ ಪಡೆದವರು ಕೂಡ ಕಡ್ಡಾಯವಾಗಿ ಪೊಲೀಸ್ ಅನುಮತಿ ಪಡೆಯುವುದು ಕಡ್ಡಾಯ ಎಂದರು. ಮಂಗಳವಾರ ಸಂಜೆಯ ನಂತರ ಪೊಲೀಸರು ರಸ್ತೆಗಳಲ್ಲಿ ಜಿಗ್ ಜಾಗ್ ರೀತಿಯಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಮದ್ಯಪಾನ ಮಾಡಿ ವೀಲಿಂಗ್…

Read More

ಚಿಕ್ಕಮಗಳೂರು: ವಿಶ್ವಗುರು ಬಸವಣ್ಣ ಹಾಗೂ ಸ್ವಾಮಿ ವಿವೇಕಾನಂದರ ವಿಚಾಧಾರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿದಾಗ ಅವರ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು. ಅವರು ಕಲ್ಯಾಣ ನಗರದ ಬಸವಮಂದಿರ ಬಸವತತ್ವ ಪೀಠದಲ್ಲಿ ಶಿವಾನುಭವ ಗೋಷ್ಠಿ-೪೧ ಶಿವಶರಣ ಮಾಧಾರ ಚನ್ನಯ್ಯನವರ ಸ್ಮರಣೆ ಕಾರ್ಯಕ್ರಮದಲ್ಲಿ ಕಲ್ಯಾಣ ದಿನದರ್ಶಿನಿ ಬಿಡುಗಡೆ ಮಾಡಿ ಮಾತನಾಡಿದರು. ಯುವಪೀಳಿಗೆ ಈ ಇಬ್ಬರು ದಾರ್ಶನಿಕರ ವಿಚಾರಧಾರೆಗಳನ್ನು ಅಳವಡಿಸಿಕೊಂಡಾಗ ಸಂಸ್ಕಾರ ಮತ್ತು ಜೀವನದ ಬದುಕನ್ನು ಕಲಿಸುವ ಅಗತ್ಯ ಇಲ್ಲ, ಇವರ ವಿಚಾರಧಾರೆಗಳನ್ನು ದಿನಕ್ಕೊಂಡು ಪುಟ ಓದಿದರೆ ಸಾಕು ಉತ್ತಮ ಪ್ರಜೆಯಾಗಿ ರೂಪುಗೊಳ್ಳುತ್ತಾರೆ ಎಂದು ಹೇಳಿದರು. ೧೨ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ ವಚನ ‘ಕಾಯಕವೇ ಕೈಲಾಸ’ ಎಂಬ ನುಡಿ ಅಂದಿಗೂ ಇಂದಿಗೂ ಪ್ರಸ್ತುತ ಎಂದ ಅವರು, ಡಿ.೫ ರಂದು ಮರುಳಸಿದ್ದ ಸ್ವಾಮೀಜಿಗಳಿಗೆ ಶಿವಮೊಗ್ಗದಲ್ಲಿ ಚಿನ್ಮಯಾನುಗ್ರಹ ದೀಕ್ಷೆ ನೀಡಿರುವುದು ಮಠದ ಭಕ್ತರು ನಿತ್ಯ ಕಾಯಕ ಜೀವಿಗಳಾಗಲು ಪ್ರೇರೇಪಿವೆ ಎಂದರು. ಮಾರ್ಚ್ ೧ ರಂದು ಬಸವ ಮಂದಿರದ ನೂತನ ಕಟ್ಟಡ ೫ ಜಗದ್ಗುರುಗಳಿಂದ ಉದ್ಘಾಟನೆಯಾಗುತ್ತಿದ್ದು, ಈ…

Read More

ಚಿಕ್ಕಮಗಳೂರು: ಶಾಸ್ತ್ರೋಕ್ತವಾಗಿ ಆಗುವ ಮದುವೆಗಳಿಂದ ದೂರ ಸರಿದಿದ್ದ ಕುವೆಂಪು ಅವರೇ ಮಂತ್ರಮಾಂಗಲ್ಯವನ್ನು ರಚನೆ ಮಾಡಿದ್ದರು. ಅದರ ಮೊದಲ ಪ್ರಯೋಗ ಮಾಡಿದ್ದು ತಮ್ಮ ಮಗ ತೇಜಸ್ವಿ ಅವರ ಮೇಲೆ ಎಂದು ಅಂಕಣಕಾರ ಬಿ.ಚಂದ್ರೇಗೌಡ ತಿಳಿಸಿದರು. ನಗರದ ಬುದ್ಧವಿಹಾರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆಯಿಂದ ಭಾನುವಾರ ಏರ್ಪಡಿಸಿದ್ದ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಧಾನ ಉಪನ್ಯಾಸ ನೀಡಿ ಸಮಾಜದಲ್ಲಿರುವ ಮೂಢನಂಬಿಕೆ, ಕಂದಾಚಾರಗಳನ್ನು ಕಿತ್ತೊಗೆಯಬೇಕು ಎಂದು ರಾಷ್ಟ್ರಕವಿ ಕುವೆಂಪು ಅವರು ಅಂದೇ ಕರೆ ನೀಡಿದ್ದರು ಎಂದರು ತನ್ನ ೨೨ ನೇ ವಯಸ್ಸಿನಲ್ಲಿ ಇಂಗ್ಲೀಷ್‌ನಲ್ಲಿ ಬರೆದಿದ್ದ ಕವನವನ್ನು ಐರಿಸ್ ಕವಿಗೆ ತೋರಿಸುತ್ತಾರೆ ಕುವೆಂಪು. ಆಗ ತಮ್ಮ ಮಾತೃಭಾಷೆಯಲ್ಲಿಯೇ ಕವನ ಬರೆಯಲು ಹೇಳಿದಾಗ ೬೭ ಕವನವನ್ನು ಕನ್ನಡದಲ್ಲಿ ಬರೆಯುತ್ತಾರೆ. ಪುರೋಹಿತಶಾಹಿಯ ವಿರುದ್ಧ ಒಂದು ಪ್ರತಿಭಟನಾ ಸಾಹಿತ್ಯ ಆರಂಭಿಸಿದವರು ಕುವೆಂಪು. ಪುರೋಹಿತಶಾಹಿ ಮನಸ್ಸಿನ ಬುರುಡೆಗೆ ಗುರಿಯಿಟ್ಟು ಗುಂಡು ಹೊಡೆಯದಿದ್ದರೆ ಅದು ನಿಮ್ಮನ್ನು ಬಲಿ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಅದರ ಸೂಚನೆಯನ್ನು ಈಗ ಕಾಣಬಹುದಾಗಿದೆ ಎಂದರು. ನಿವೃತ್ತಪ್ರಾಂಶುಪಾಲ ಎಚ್.ಎಂ.ರುದ್ರಸ್ವಾಮಿ ಮಾತನಾಡಿ, ಕನ್ನಡ ಸಾಂಸ್ಕೃತಿಕ ಲೋಕದಲ್ಲಿ…

Read More

ಚಿಕ್ಕಮಗಳೂರು:  ಗಂಗಾಮತಸ್ಥ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಆ ವರ್ಗದ ಜನ ತಮ್ಮ ಪಂಗಡಗಳಲ್ಲಿರುವ ಆಂತರಿಕ ವೈರುಧ್ಯಗಳನ್ನು ಬದಿಗೊತ್ತಿ ಒಂದಾಗಬೇಕು ಎಂದು ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು. ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಜಿಲ್ಲಾ ಗಂಗಾಮತಸ್ಥರ ಸಂಘ ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್ ಎಸ್ ಎಲ್ ಸಿ. ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ಎಂಬಿಬಿಎಸ್ ಪದವಿ ಪಡೆದವರಿಗೆ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಂಗಾಮತಸ್ಥ ಸಮುದಾಯ ಸಮಾಜದ ಅತ್ಯಂತ ಕೆಳಸ್ತರದಲ್ಲಿದೆ. ಆ ಸಮಾಜದ ಜನ ಕಡು ಬಡತನದಲ್ಲಿ ಬದುಕುತ್ತಿದ್ದಾರೆ. ಆವರ್ಗ ಎಷ್ಟೇ ಪ್ರಯತ್ನ ಪಟ್ಟರೂ ಅಭಿವೃದ್ಧಿಯಾಗುತ್ತಿಲ್ಲ. ಇದಕ್ಕೆ ಮೂಲ ಕಾರಣ ಆ ಸಮುದಾಯದ ಪಂಗಡಗಳಲ್ಲಿರುವ ಭಿನ್ನಾಭಿಪ್ರಾಯ ಮತ್ತು ಆಂತರಿಕ ವೈರುಧ್ಯಗಳು ಎಂದು ವಿಷಾದಿಸಿದರು. ಯಾವುದೇ ಕೆಳವರ್ಗಗಳು ಅಭಿವೃದ್ಧಿ ಹೊಂದಬೇಕಾದರೆ ಆ ಸಮಾಜದ ಜನ ಸಂಘಟಿತರಾಗಬೇಕು. ಎಷ್ಟೇ ಕಷ್ಟವಾದರೂ…

Read More