Author: chikkamagalur express

ಚಿಕ್ಕಮಗಳೂರು:  ಮಾನಸಿಕ ಹಾಗೂ ದೈಹಿಕ ಆರೋಗ್ಯದ ದೃಷ್ಟಿಯಿಂದ ಪೊಲೀಸ್ ಇಲಾಖೆ ಸಿಬ್ಬಂದಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಂತರಾಷ್ಟ್ರೀಯ ಮಹಿಳಾ ಕ್ರಿಕೇಟ್ ಆಟಗಾರರಾದ ವೇದಾಕೃಷ್ಣಮೂರ್ತಿ ಹೇಳಿದರು. ನಗರದ ರಾಮನಹಳ್ಳಿಯಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಜಿಲ್ಲಾ ಪೊಲೀಸ್ ಇಲಾಖೆಯ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಅವರು ರೈಫಲ್ ತರಬೇತಿ ಸಂದರ್ಭದಲ್ಲಿ ಗುಂಡು ಹಾರಿಸುವಾಗ ಉಸಿರು ಮನಸ್ಸು ಮತ್ತು ತೂರು ಬೆರಳಿನ ಚಲನೆ ಒಂದಕ್ಕೊಂದು ಸಂಬಂಧ ಇರುತ್ತದೆ. ಮನಸುಮತ್ತು ಆರೋಗ್ಯ ಸುಸ್ಥಿತಿಯಲ್ಲಿದ್ದರೆ ಗುರಿಯೂ ಸರಿಯಾಗಿರುತ್ತದೆ. ಹಾಗಾಗಿ ಪೋಲಿಸರು ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ದೇಶಕ್ಕಾಗಿ ಜೀವನವನ್ನು ಮುಡುಪಾಗಿಟ್ಟು ದೇಶವನ್ನು ಕಾಪಾಡುತ್ತಿರುವ ಸೈನಿಕರು, ಆಂತರಿಕ ರಕ್ಷಣೆ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ ಹಾಗೂ ದೇಶದ ಹೆಸರನ್ನು ಉತ್ತುಂಗಕ್ಕೆ ತರುವ ಕ್ರೀಡಾಪಟುಗಳು ಸಹ ನಮ್ಮ ಮುಂದಿರುವ ಹೀರೊಗಳು ಎಂದು ಹೇಳಿದರು. ಕ್ರಿಕೇಟ್ ಆಟದ ಸಂದರ್ಭದಲ್ಲಿ ಹಲವು ದೇಶಗಳಿಗೆ ಹೋಗಿ ಬಂದಿದ್ದೇನೆ. ಅಭಿವೃದ್ಧಿ ಹೊಂದಿರುವ ಹಾಗೂ ಶ್ರೀಮಂತ ದೇಶಗಳನ್ನು ನೋಡಿದ್ದೇನೆ. ಆದರೆ, ಚಿಕ್ಕಮಗಳೂರಿನಂತಹ ಜಿಲ್ಲೆ ಯಾವ…

Read More

ಚಿಕ್ಕಮಗಳೂರು:  ವಿದ್ಯಾರ್ಥಿಗಳಲ್ಲಿ ಜ್ಞಾನದ ಶಕ್ತಿ ಹೆಚ್ಚಿಸಲು ಐತಿಹಾಸಿಕ ವೈಭವದಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಅಭಿಪ್ರಾಯಿಸಿದರು. ಅವರು ಇಂದು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಐತಿಹಾಸಿಕ ವೈಭವ ೨೦೨೪-೨೫ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತದ ಸಂಸ್ಕೃತಿ, ಇತಿಹಾಸ, ಪರಂಪರೆ ಕುರಿತು ಪೂರ್ವಜರು ನಮ್ಮ ನಾಡನ್ನು ಆಳಿದ ರಾಜರ ಬಗ್ಗೆ ಮಕ್ಕಳಿಗೆ ತಿಳಿಸುವ ಉದ್ದೇಶದಿಂದಲೇ ಈ ಐತಿಹಾಸಿಕ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಇತಿಹಾಸದ ಬಗ್ಗೆ ಕಲಿಕೆ ಅವಧಿಯಲ್ಲಿಯೇ ಸವಿಸ್ತಾರವಾಗಿ ಮನವರಿಕೆ ಮಾಡುವ ಅಗತ್ಯ ಇದೆ. ಕಳೆದ ಬಾರಿ ನಡೆಸಿದ ದಸರಾ ವೈಭವ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿ ಅಚ್ಚಳಿಯದೇ ಉಳಿದಿದೆ ಎಂದರು. ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿ ಶ್ರೀಮಂತವಾಗಿರುವ ಭಾರತ ದೇಶ ಒಗ್ಗಟ್ಟಿನಿಂದ ಪ್ರಪಂಚದಲ್ಲೇ ಸೂಪರ್ ಪವರ್ ಆಗಬೇಕೆಂದು ಕನಸು ಕಾಣುತ್ತಿದ್ದು, ಇದನ್ನು ನನಸು ಮಾಡಲು ವಿದ್ಯಾರ್ಥಿಗಳಲ್ಲಿ ಇತಿಹಾಸದ ಪರಿಚಯ ಅಗತ್ಯ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ…

Read More

ಚಿಕ್ಕಮಗಳೂರು: ನಗರದ ಕಲ್ಕಟ್ಟೆ ಪುಸ್ತಕದ ಮನೆಯ ೨೧ ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಡಿ.೧ ರಂದು ಶ್ರೀ ದೇವೀರಮ್ಮ ನೃತ್ಯ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹರಿಓಂ ಬಿಲ್ಡರ್‍ಸ್ ಮುಖ್ಯಸ್ಥ ಜಿ.ರಮೇಶ್ ಹೇಳಿದರು. ಕಲ್ಕಟ್ಟೆಪುಸ್ತಕದ ಮನೆ, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಹರಿಓಂ ಬಿಲ್ಡರ್‍ಸ್ ಸಹಯೋಗದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಸಂಜೆ ೬ ಗಂಟೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವಿದುಷಿ ಜ್ಯೋತಿಪ್ರಕಾಶ್ ನೇತೃತ್ವದ ನೂಪುರ ಅಕಾಡೆಮಿ ಫಾರ್ ಫರ್‌ಫಾರ್ಮಿಂಗ್ ಆರ್ಟ್ಸ್ ತಂಡದ ೪೦ ಕಲಾವಿದೆಯರು, ಶ್ರೀ ದೇವೀರಮ್ಮ ಕುರಿತಾಗಿ ಎಚ್.ಎಂ. ನಾಗರಾಜ್‌ರಾವ್ ಕಲ್ಕಟ್ಟೆ ರಚಿಸಿ ಸಂಗೀತ ನೀಡಿದ ಭಕ್ತಿಗೀತೆಗಳಿಗೆ ನೃತ್ಯ ಮಾಡಲಿದ್ದಾರೆ. ಮೈಸೂರಿನ ನೃತ್ಯ ವಿದುಷಿ ಕಾತ್ಯಾಯಿನಿ ಭರತನಾಟ್ಯ ನೆರವೇರಿಸಿಕೊಡಲಿದ್ದಾರೆ ಎಂದರು. ಕಲ್ಕಟ್ಟೆ ಪುಸ್ತಕದ ಮನೆಯ ವಾರ್ಷಿಕ ಪುರಸ್ಕಾರ ಕಲ್ಕಟ್ಟೆ ಕನ್ನಡಿಗ ಪ್ರಶಸ್ತಿಯನ್ನು ಅಮೆರಿಕಾದಲ್ಲಿ ಕನ್ನಡದ ಸೇವೆ ಮಾಡುತ್ತಿರುವ ಚಿಕ್ಕಮಗಳೂರಿನ ರಘು ಹಾಲೂರು ಅವರಿಗೆ ಹಾಗೂ ಕಲ್ಕಟ್ಟೆ ಕನ್ನಡತಿ ಪ್ರಶಸ್ತಿಯನ್ನು ಜ್ಯೋತಿ ಪ್ರಕಾಶ್ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.…

Read More

ಚಿಕ್ಕಮಗಳೂರು: ಪರಿಶಿ? ಜಾತಿ ಪಂಗಡದಂತೆ ಅತಿ ಹಿಂದುಳಿದ ವರ್ಗಗಳಿಗೆ ರಾಜ್ಯದಲ್ಲಿ ಮೀಸಲಾತಿ ಪ್ರಮಾಣದಲ್ಲಿ ಅನ್ಯಾಯವಾಗಿದ್ದು, ಮೇಲ್ಜಾತಿಗಳ ಒತ್ತಡಕ್ಕೆ ಮಣಿಯದೆ ಕಾಂತರಾಜ ಆಯೋಗದ ವರದಿಯನ್ನು ಸರ್ಕಾರ ತಕ್ಷಣ ಜಾರಿ ಮಾಡಬೇಕೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಅವರು ರಾಜ್ಯದಲ್ಲಿ ೨೫ ಲಕ್ಷ ಎಕರೆ ಭೂಮಿ ಇದ್ದರೂ ಭೂರಹಿತರಿಗೆ ಹಕ್ಕುಪತ್ರ ನೀಡಿಲ್ಲ ಎಂದು ದೂರಿ ಸುಪ್ರೀಂ ಕೋರ್ಟಿನ ತೀರ್ಪಿನಂತೆ ಒಳ ಮೀಸಲಾತಿ ಜಾರಿಮಾಡುವ ನಿಟ್ಟಿನಿಲ್ಲಿ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯವನ್ನು ಸ್ವಾಗತಿಸಿದ ಅವರು ಆದರೆ ದತ್ತಾಂಶ ಸಂಗ್ರಹಣೆ ನೆಪಒಡ್ಡಿ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಮತ್ತೊಂದು ಆಯೋಗ ರಚಿಸಿರುವುದು ಅನಾವಶ್ಯಕ ಮತ್ತು ಕಾಲಹರಣದ ತಂತ್ರಾಂಶವಾಗಿದೆ, ಆದ್ದರಿಂದ ಒಳಮೀಸಲಾತಿಯನ್ನು ವಿಳಂಬ ಮಾಡದೆ ಕೂಡಲೇ ಜಾರಿ ತರಬೇಕೆಂದು ಆಗ್ರಹಿಸಿದರು. ಕರ್ನಾಟಕದಲ್ಲಿ ಪರಿಶಿ? ಜಾತಿಯ ವಿವಿಧ ಜಾತಿಗಳ ಜನಸಂಖ್ಯೆಗೆ ಸಂಬಂಧಪಟ್ಟ ಮಾಹಿತಿಯು ಹಾವನೂರು ಆಯೋಗದಿಂದ ಮೊದಲ್ಗೊಂಡು ನ್ಯಾಯಮೂರ್ತಿ ಸದಾಶಿವ ಆಯೋಗ ಕಾಂತರಾಜ ಆಯೋಗ ನಾಗಮೋಹನ್ ದಾಸ್…

Read More

ಚಿಕ್ಕಮಗಳೂರು:  ನಗರದ ವಾರ್ಡ್ ಸಂಖ್ಯೆ ೨೩ ದಂಟರಮಕ್ಕಿ ಗ್ರಾಮದಲ್ಲಿ ಅಕ್ರಮವಾಗಿ ನಗರಸಭೆ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಹಾಗೂ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಾರಾಯಣ ಕನಕರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ. ದಂಟರಮಕ್ಕಿ ಗ್ರಾಮದ ವಾಸಿಗಳಾದ ಶ್ರೀಮತಿ ರೇವಮ್ಮ ಕೋಂ. ನಾಗರಾಜ್ ಮತ್ತು ಶ್ರೀಮತಿ ಗಂಗಮ್ಮ ಕೋಂ. ದೇವರಾಜ್ ಆದ ನಾವು ದಂಟರಮಕ್ಕಿ, ಕೆರೆಕೋಡಮ್ಮ ಬೀದಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಮತ್ತು ಚರಂಡಿಗೆ ನಗರಸಭೆಯಿಂದ ಜಾಗ ಬಿಟ್ಟು ಕೊಟ್ಟಿದ್ದು, ಅದನ್ನು ಅಕ್ರಮವಾಗಿ ಇದೇ ಗ್ರಾಮದ ವಾಸಿಗಳಾದ ಶಿವಕುಮಾರ್ ಬಿನ್ ದಾಸಯ್ಯ, ಸೋಮಮ್ಮ ಕೋಂ. ಜನಾರ್ಧನ, ಪರಮೇಶ ಬಿನ್ ಚಿಕ್ಕಯ್ಯ, ಪ್ರೇಮ ಕೋಂ. ಧರ್ಮೇಂದ್ರ, ಚೆನ್ನಮ್ಮ ಕೋಂ. ರಾಜಣ್ಣ, ದಾಸಪ್ಪ ರಂಗಪ್ಪ ರತ್ನಮ್ಮ ಕೋಂ. ಗಂಗಾಧರ ಇವರುಗಳು ಈ ಜಾಗ ನಮಗೆ ಸೇರಿದೆ ಎಂದು ಚರಂಡಿ ಮತ್ತು ರಸ್ತೆಗಾಗಿ ಮನೆ ನಿರ್ಮಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಚರಂಡಿಯ ಕೊಳಚೆ ಹರಿದು ಹೋಗಲು ಅಡ್ಡಿಯಾದ ಕಾರಣ ನಿಂತ ಕೊಳಚೆ ನೀರಿನಿಂದ ದುರ್ವಾಸನೆ ಬರುತ್ತದೆ.…

Read More

ಚಿಕ್ಕಮಗಳೂರು: : ವಿರೋಧ ಪಕ್ಷ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕೆಮಾಡುವುದನ್ನು ಬಿಟ್ಟರೆ, ರಚನಾತ್ಮಕ ಕಾರ್ಯಗಳ ಬಗ್ಗೆ, ಜ್ವಲಂತ ಸಮಸ್ಯೆಗಳನ್ನು ಕುರಿತು ಮಾತನಾಡುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಆರೋಪಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ವಿಪಕ್ಷ ರಚನಾತ್ಮಕವಾಗಿ ಕೆಲಸ ಮಾಡಬೇಕು. ಭೌದ್ಧಿಕ ಮತ್ತು ಸೈದ್ದಾಂತಿಕವಾಗಿ ಬಿಜೆಪಿ ಪಕ್ಷ ದಿವಾಳಿಯಾಗಿದ್ದು, ಇಂತಹ ವಿಪಕ್ಷವನ್ನು ಇದುವರೆಗೂ ನೋಡಿರಲಿಲ್ಲ. ವಿಜಯೇಂದ್ರ, ಬಸವನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ ತಂಡವಾಗಿ ಬಿ.ವೈ.ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಶಿಸ್ತುಕ್ರಮ ಕೈಗೊಳ್ಳುವಲ್ಲಿ ರಾಷ್ಟ್ರೀಯ ಮುಖಂಡರು ಮತ್ತು ರಾಜ್ಯ ಮುಖಂಡರು ವಿಫಲರಾಗಿದ್ದಾರೆಂದು ದೂರಿದರು. ಶಿಸ್ತಿನ ಪಕ್ಷವೆನ್ನುತ್ತಿದ್ದ ಬಿಜೆಪಿ ಪಕ್ಷ ಒಡೆದ ಮನೆಯಾಗಿದೆ. ನಾಲ್ಕು ಗುಂಪುಗಳಾಗಿದ್ದು, ರಾಷ್ಟ್ರೀಯ ಅಧ್ಯಕ್ಷರಾಗಲಿ, ರಾಜ್ಯಾಧ್ಯಕ್ಷರಾಗಲಿ ಗುಂಪುಗಾರಿಕೆಗೆ ಕಡಿವಾಣ ಹಾಕುವಲ್ಲಿ, ಕ್ರಮಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆಂದು ಗೇಲಿ ಮಾಡಿದರು. ವಿಪಕ್ಷ ಸಿದ್ದರಾಯಯ್ಯ ಅವರ ವೈಯಕ್ತಿಕ ವಿಚಾರ ಹಾಗೂ ಮೂಡಾ ಮತ್ತು ವಕ್ಛ್‌ಬೋರ್ಡ್ ವಿಚಾರವನ್ನು ಮಾತ್ರ ಪ್ರಸ್ತಾಪಿಸುತ್ತಿದ್ದಾರೆ. ರಾಜ್ಯದಲ್ಲಿ ರೈತರು, ಕಾರ್ಮಿಕರು, ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮಸ್ಯೆಗಳ ಬಗ್ಗೆ…

Read More

ಚಿಕ್ಕಮಗಳೂರು: ಯುವ ಜನತೆಯು ಸದಾ ಕ್ರಿಯಾಶೀಲರಾಗಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕು. ಯುವ ಮನಸ್ಸುಗಳನ್ನು ಸೃಜನಶೀಲರನ್ನಾಗಿಸಲು ಯುವ ಜನೋತ್ಸವ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ. ರವಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್ ನೆಹರು ಯುವ ಕೇಂದ್ರ, ಜಿಲ್ಲಾ ಎನ್.ಎಸ್.ಎಸ್ ಘಟಕ, ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಮತ್ತು ಮಹಿಳಾ ಘಟಕ ಹಾಗೂ ವಿವಿಧ ಸಂಘಗಳ ವತಿಯಿಂದ ನೆನ್ನೆ ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಯುವ ಜನೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಭಾರತವು ಪ್ರಪಂಚದಲ್ಲೆ ಅತಿ ಹೆಚ್ಚು ಯುವ ಜನತೆಯನ್ನು ಹೊಂದಿರುವ ದೇಶ. ಯುವಕರೆ ದೇಶದ ಆಸ್ತಿ. ಶಕ್ತಿಯೆಲ್ಲ ನಿಮ್ಮೊಳಗೇ ಇದೆ ನೀವು ಏನೂ ಬೇಕಾದರೂ ಸಾದಿಸಬಲ್ಲಿರಿ, ಎಲ್ಲವನ್ನು ಮಾಡಬಲ್ಲಿರಿ ಎಂಬ ಸ್ವಾಮಿ ವಿವೇಕನಂದರ ವಾಣಿಯಂತೆ ಯುವ ಜನರ ಪ್ರತಿಭೆಗಳನ್ನು, ಆಸಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಸರ್ಕಾರ ಅನೇಕ ಯೋಜನೆಗಳು,…

Read More

ಚಿಕ್ಕಮಗಳೂರು: ಕಾಡಾನೆಗಳನ್ನು ಸ್ಥಳಾಂತರಿಸಿ ರೈತರ ಬೆಳೆ ರಕ್ಷಿಸಿ, ಜೀವ ಹಾನಿ ತಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ.೨೭ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ತಾಲ್ಲೂಕು ಕಛೇರಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮತ್ತು ಅರಣ್ಯ ಇಲಾಖೆ ಕಛೇರಿ ಮುತ್ತಿಗೆ ಕಾರ್ಯಕ್ರಮ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತಪ್ಪ ತಿಳಿಸಿದರು. ನಗರದಲ್ಲಿಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಪ್ರತಿಭಟನಾ ಮೆರವಣಿಗೆಯಲ್ಲಿ ಆನೆಗಳ ಹಾವಳಿಯಿಂದ ಬೆಳೆ ಕಳೆದುಕೊಂಡಿರುವ ರೈತ ಕುಟುಂಬಗಳು ಭಾಗವಹಿಸಿದ್ದು ಅವರೊಂದಿಗೆ ರೈತರು, ರೈತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಸುಮಾರು ೧೦ ಗ್ರಾಮಗಳಲ್ಲಿ ಕಳೆದ ೨೦ ದಿನಗಳಿಂದ ಬೀಟಮ್ಮ ತಂಡದ ೨೭ ಕಾಡಾನೆಗಳ ಹಿಂಡು ಭಾರಿ ಅವಾಂತರ ಸೃಷ್ಟಿಸುತ್ತಿವೆ.ರೈತರು ಕಷ್ಟಪಟ್ಟು ಬೆಳೆದ ಭತ್ತ, ಶುಂಠಿ, ಮೆಕ್ಕೆಜೋಳ, ಕಾಫಿ ಬೆಳೆಗಳ ಜಮೀನಿಗೆ ನುಗ್ಗಿ ಲೂಟಿ ಮಾಡುತ್ತಿವೆ. ಕಾಫಿ ತೋಟಕ್ಕೆ ದಿಬ್ಬಂಧನ ಹಾಕಿ ಸೈರನ್ ವಾಹನಗಳ…

Read More