Author: chikkamagalur express

ಚಿಕ್ಕಮಗಳೂರು: ಭಾರತ ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಮಹಿಳೆಯರು ಮತ್ತು ಯುವಕರು ಅತೀ ಹೆಚ್ಚು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಾಧ್ಯ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ತಿಳಿಸಿದರು. ಅವರು ಇಂದು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ೨೦೨೪ ನ್ನು ಉದ್ಘಾಟಿಸಿ ಮಾತನಾಡಿದರು. ವಿಕಸಿತ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಗುರಿ ಹೊಂದಿದ್ದು, ಈ ಪರಿಕಲ್ಪನೆಯೊಂದಿಗೆ ಸಹಕಾರಿ ಸಂಸ್ಥೆಗಳು ಕೆಲಸ ಕಾರ್ಯ ನಿರ್ವಹಿಸುತ್ತ ಅಳಿಲು ಸೇವೆ ಸಲ್ಲಿಸುತ್ತಿವೆ ಎಂದು ಹೇಳಿದರು. ಇದಕ್ಕೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಜನಸಾಮಾನ್ಯರ ಕೊಡುಗೆ ಅಪಾರವಾಗಿರಬೇಕು. ಇದರಲ್ಲಿ ಹೆಚ್ಚಿನ ಭಾಗ ಮಹಿಳೆಯರು ಮತ್ತು ಯುವಕರು ಪಾಲ್ಗೊಳ್ಳಬೇಕಾಗಿರುವುದು ಅಗತ್ಯವಾಗಿದೆ ಎಂದರು. ಸಹಕಾರಿ ಸಂಸ್ಥೆಗಳಲ್ಲಿ…

Read More

ಚಿಕ್ಕಮಗಳೂರು: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಕಳೆದ ರಾತ್ರಿ ಎಎನ್ಎಫ್ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು ನಕ್ಸಲ್ ಮುಖಂಡ ವಿಕ್ರಂ ಗೌಡ ಸಾವಪ್ಪಿದ್ದಾನೆ. ಕಬ್ಬಿನಾಲೆ ಗ್ರಾಮದ ಸೀತಂಬೈಲು ಎಂಬಲ್ಲಿ ಕಳೆದ ರಾತ್ರಿ ನಕ್ಸಲ್ ಕೂಂಬಿಂಗ್ ಕಾರ್ಯಾಚರಣೆ ನಡೆದಿತ್ತು. ಈ ವೇಳೆ, ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಎನ್ಕೌಂಟರ್ ಆಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಜಿಲ್ಲೆಯ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಒಂಟಿ ಮನೆಗೆ ನಕ್ಸಲರು ಭೇಟಿ ನೀಡಿದ ಬಗ್ಗೆ ವರದಿಯಾಗಿತ್ರು. ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೂ ನಕ್ಸಲರು ಭೇಟಿ ನೀಡಿ, ಅರಣ್ಯ ಒತ್ತುವರಿ ಮತ್ತು ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಕ್ಸಲ್ ವಿರೋಧಿ ಕೂಂಬಿಂಗ್ ಕಾರ್ಯ ಚುರುಕುಗೊಳಿಸಿದ್ದರು. ನಿನ್ನೆ ರಾತ್ರಿ ಕಬ್ಬಿನಾಲೆ ಗ್ರಾಮಕ್ಕೆ ದಿನಸಿ ಸಾಮಗ್ರಿ ಪಡೆಯಲು ಐವರಿದ್ದ ನಕ್ಸಲರು ಎಂಟ್ರಿ ಕೊಟ್ಟಿದ್ದರು ಎನ್ನಲಾಗಿದೆ. ಇದೇ ವೇಳೆ, ಗುಂಡಿನ ಚಕಮಕಿ ನಡೆದಿದ್ದು ವಿಕ್ರಂ ಗೌಡ ಬಲಿಯಾಗಿದ್ದರೆ…

Read More

ಚಿಕ್ಕಮಗಳೂರು: ಬಿಜೆಪಿಯಿಂದ ನನ್ನನ್ನು ಯಾರು ಸಂಪರ್ಕಿಸಿಲ್ಲ ಎಂದು ಕಾಂಗ್ರೆಸ್ ಶಾಸಕ ಎಚ್.ಡಿ.ತಮ್ಮಯ್ಯ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ೧೦೦ ಕೋಟಿ ಆಫರ್ ಬಂದಿದೆ ಎಂಬುದು ಸುಳ್ಳು ಈ ಬಗ್ಗೆ ನನ್ನನ್ನು ಯಾರೂ ಕೂಡ ಸಂಪರ್ಕ ಮಾಡಿಲ್ಲ, ಆಫರ್ ಬಂದಿದೆ ಎಂದು ಯಾರ್ ಹೇಳಿದ್ದಾರೆ ಅವರನ್ನೇ ನೀವು ಕೇಳಬೇಕು ಎಂದರು. ನನಗೆ ಅದರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ನನ್ನನ್ನು ಈ ಭಾಗದ ಪ್ರಜೆಗಳು ಆಯ್ಕೆ ಮಾಡಿದ್ದಾರೆ. ಆ ಕಾರಣವಾಗಿ ನಾನು ಕಾಂಗ್ರೆಸ್ ನೇತೃತ್ವದಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿಕೊಂಡು ಹೋಗುತ್ತೇನೆ ಎಂದರು. ರಾಜ್ಯದ ಜನತೆ ಆದೇಶದ ಮೇರೆಗೆ ಕಾಂಗ್ರೆಸ್‌ನ ೧೩೬ ಶಾಸಕರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನಾದೇಶದ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಶಾಸಕರನ್ನು ಕೊಂಡುಕೊಳ್ಳುವ ಬಗ್ಗೆ ಯಾರು ಹೇಳಿದ್ದಾರೋ ಅವರನ್ನೇ ಕೇಳಬೇಕು. ಈ ವಿಚಾರವನ್ನು ಚರ್ಚಿಸುವಷ್ಟು ನಾನು ದೊಡ್ಡ ವ್ಯಕ್ತಿಯಲ್ಲ ಎಂದು ಹೇಳಿದರು. No one…

Read More

ಚಿಕ್ಕಮಗಳೂರು: ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಿ ನಮ್ಮಲ್ಲಿ ರೂಢಿಯಾಗಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ ಆಶಯ ವ್ಯಕ್ತಪಡಿಸಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ `ನಮ್ಮ ನಾಡು-ನಮ್ಮ ಹಾಡು’ ಕಾರ್ಯಕ್ರಮದಡಿ ಆಯೋಜಿಸಿದ್ದ ನಾಡಿನ ಖ್ಯಾತ ಕವಿಗಳ ಕಾವ್ಯ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡದ ಬಗ್ಗೆ ನಮ್ಮಲ್ಲಿ ಅಭಿಮಾನವಿರಬೇಕು. ಹಾಗೆಯೇ ನಮ್ಮ ಸಂಸ್ಕೃತಿ, ನಾಡು-ನುಡಿಯ ಬಗ್ಗೆ ಹೆಮ್ಮೆಪಡಬೇಕು ಎಂದರು. ಕಳೆದ ಸುಮಾರು ೨೦ ವರ್ಷಗಳ ಹಿಂದೆ ಅನೇಕ ತಂದೆ-ತಾಯಿಯರಲ್ಲಿ ತಮ್ಮ ಮಕ್ಕಳಿಗೆ ಸಂಗೀತ ಕಲಿಸಬೇಕೆಂಬ ಆಕಾಂಕ್ಷೆ ಇದ್ದರೂ ಇಲ್ಲಿ ಅವಕಾಶವೇ ಇರಲಿಲ್ಲ. ಆದರೆ ಇಂದು ಎಂ.ಎಸ್.ಸುಧೀರ್ ಸೇರಿದಂತೆ ಹಲವರು ಆ ಕೊರತೆಯನ್ನು ನೀಗಿಸಿದ್ದಾರೆ. ಸಂಗೀತ ಯುವ ಪೀಳಿಗೆಗೆ ಅತೀ ಮುಖ್ಯ ಎಂದು ಹೇಳಿದರು. ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಇದೇ ಪ್ರಪ್ರಥಮ ಬಾರಿಗೆ ಕೊಡ…

Read More

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ರಸ್ತೆಗಳಲ್ಲಿ ಅಪರೂಪದ ದೇಶಿ -ವಿದೇಶಿ ವಿಂಟೇಜ್ ಕಾರುಗಳು ಆಕರ್ಷಿಸುವ ಮೂಲಕ ನೋಡುಗರರ ಹಳೆಯ ನೆನಪುಗಳನ್ನು ಮೆಲುಕು ಹಾಕಿದರೆ, ಯುವಸಮೂಹಕ್ಕೆ ವಿಂಟೇಜ್ ಕಾರುಗಳು ವಿಭಿನ್ನ ರೀತಿಯ ಅನುಭವಗಳನ್ನು ನೀಡಿದವು. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಬೆಲ್ಜಿಯಂ, ಇಟಲಿ, ಜರ್ಮನಿ ದೇಶಗಳಿಂದ ಪೋರ್ಚೆ, ಬೆಂಜ್, ಫೆರಾರಿ, ಲ್ಯಾಂಬೋರ್ಗಿನಿ, ರೋಲ್ಸ್ ರಾಯ್ಸ್ ಸೇರಿದಂತೆ ೫೦ ರಿಂದ ೯೦ ವರ್ಷ ಹಳೆಯ ೨೦ಕ್ಕೂ ಹೆಚ್ಚು ವೆಂಟೇಜ್ ಕಾರುಗಳು ದಕ್ಷಿಣ ಭಾರತದ ಪ್ರವಾಸಕ್ಕೆ ಆಗಮಿಸಿದ್ದವು. ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಸವನ್ನು ಕೈಗೊಂಡ ವಿಂಟೇಜ್ ಕಾರುಗಳು ಹುಬ್ಬಳ್ಳಿ, ಹಂಪಿಯ ಪ್ರವಾಸವನ್ನು ಮುಗಿಸಿ ಕಾಫಿನಾಡಿನ ಸ್ವಿಲ್ವರ್ ಸೈ ರೆಸಾರ್ಟ್‌ನಲ್ಲಿ ತಂಗಿದ ಬಳಿಕ ಸೋಮವಾರ ಮಡಿಕೇರಿ ಜಿಲ್ಲೆಗೆ ಪ್ರವಾಸ ಮುಂದುವರೆಸಿದವು. ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯಕ್ಕೆ ವಿದೇಶಿಗರು ಮಾರುಹೋಗಿದ್ದು ತುಂಬಾ ಅದ್ಭುತವಾದ ಂತಹ ಸ್ಥಳ ಎಂದು ಬಣ್ಣಿಸಿದ್ದಾರೆ. ಚಿಕ್ಕಮಗಳೂರು ಪ್ರವಾಸ ಮುಗಿಸಿ ಮಡಿಕೇರಿ, ಮೈಸೂರಿನ ಮೂಲಕ ವಾಪಸ್ ಬೆಂಗಳೂರಿಗೆ ತೆರಳಲಿದ್ದಾರೆ. ರೆಸಾರ್ಟ್ ಮಾಲೀಕ ಚೇತನ್ ಮಾತನಾಡಿ ವಿಂಟೇಜ್ ಕಾರುಗಳ ತಂಡಗಳು ಪ್ರತಿ ವರ್ಷವು ಭಾರತಾ…

Read More

ಚಿಕ್ಕಮಗಳೂರು: ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಾಮಾಜಿಕ ಬದಲಾವಣೆಗೆ ಕಾರಣರಾದ ಕನಕ ಈ ನಾಡಿನ ವಿವೇಕ. ಎಂದು ಹಾಸನ ಜಿಲ್ಲೆ, ಬಾಣವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ದೊರೇಶ್ ಬಿಳಿಕೆರೆ ಹೇಳಿದರು. ಜಿಲ್ಲಾಡಳಿತ ವತಿಯಿಂದ ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ಭಕ್ತಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿ  ಕನಕದಾಸರು ನಾಡಿನ ಶ್ರೇಷ್ಠ ಕವಿ, ಸಂತ, ಮಹಾನ್ ದಾರ್ಶನೀಕ. ತಮ್ಮ ಕೀರ್ತನೆಗಳು, ಕಾವ್ಯ ಕೃತಿಗಳ ಮೂಲಕ ದಾಸ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ಜಾತಿ ಪದ್ಧತಿ, ಮೌಡ್ಯಗಳು ಹಾಗೂ ಸಮಾಜದ ಇನ್ನಿತರ ಅನಿಷ್ಠ ಪದ್ಧತಿಗಳನ್ನು ತಮ್ಮ ಸರಳ ಕೀರ್ತನೆಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ ಇವರ ಜೀವನ ಸಾಧನೆಗಳು ಮಾನವ ಕುಲಕ್ಕೆ ದಾರಿದೀಪವಾಗಿದೆ ಎಂದರು. ಕನಕ ಈ ನೆಲದ ಆಸ್ತಿ. ತಾನು ಬದುಕಬೇಕು ಇತರರನ್ನು ಬದುಕಲು ಬಿಡಬೇಕು ಎಂದು ತಂಬೂರಿ ಹಿಡಿದು ಸಾಹಿತ್ಯದ…

Read More

ಚಿಕ್ಕಮಗಳೂರು: ಜಾತ್ಯಾತೀತ ಹಾಗೂ ಧರ್ಮಾತೀತವಾದ ಜಾನಪದ ಸೊಗಡಿಗೆ ಎಂದಿಗೂ ಸಾವಿಲ್ಲ. ನಿರಂತರ ಬದಲಾವಣೆಯತ್ತ ಹೆಜ್ಜೆ ಹಾಕುವ ಜಾನಪದ ಶಕ್ತಿ ಪ್ರಪಂಚದ ಎಲ್ಲಾ ಧರ್ಮ ದಲ್ಲಿ ವಿಭಿನ್ನವಾಗಿ ಪಸರಿಸಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್.ಬಾ ಲಾಜಿ ಹೇಳಿದರು. ನಗರದ ಕೆಂಪನಹಳ್ಳಿಯ ಆಶಾಕಿರಣ ಅಂಧಮಕ್ಕಳ ಪಾಠಶಾಲೆ ಸಮೀಪದ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಜಾನಪದ ಪರಿಷತ್ ಘಟಕ ಪದಗ್ರಹಣ ಹಾಗ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿ ಪೂರ್ವಿಕರ ಆಡುಭಾಷೆಯಲ್ಲಿ ಜನಿಸಿದ ಜಾನಪದ ಗೀತೆಗಳು, ತತ್ವಪದಗಳು ಇಂದಿನ ಕಾಲಮಾನಕ್ಕೆ ಪ್ರಸ್ತುತವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಚಲಿತದಲ್ಲಿರುವ ಮೊಬೈಲ್, ಕಂಪ್ಯೂಟರ್‌ನಿಂದಲೂ ಜಾನಪದ ಮೂಲಬೇರನ್ನು ಅಳಿಸಲು ಸಾಧ್ಯವಿಲ್ಲ ಎಂದ ಅವರು ಬಾಲ್ಯದಲ್ಲೇ ಜಾನಪದ ಸಂಸ್ಕೃತಿಯ ಪರಿಚಯಿಸಬೇ ಕಷ್ಟೇ ಎಂದು ಹೇಳಿದರು ಹೃದಯ ಶ್ರೀಮಂತಿಕೆ, ಕೌಟುಂಬಿಕ ಸಾಮರಸ್ಯ ಸೇರಿದಂತೆ ಬದುಕಿನ ಶ್ರೀಮಂತಿಕೆಯನ್ನು ಕಟ್ಟಿಕೊ ಡುವ ದೇಶದ ಮೊದಲ ಮೂಲ ಪರಂಪರೆ ಜಾನಪದ ಸಾಹಿತ್ಯ ಹಾಗೂ ಸಂಸ್ಕೃತಿ. ಹೀಗಾಗಿ ಪರಂಪರೆ ಉಳಿಸಿ, ಬೆಳೆಸಿ…

Read More

ಚಿಕ್ಕಮಗಳೂರು:  ದೀಪ ಪ್ರಗತಿಯ ಸಂಕೇತ. ಹಣತೆ ಯಾವುದೇ ಇರಲಿ ಬೆಳಕನ್ನೆ ನೀಡುತ್ತದೆ. ಕುಟುಂಬದ ಕತ್ತಲನ್ನು ಹೋಗಲಾಡಿಸುವಲ್ಲಿ ತಾಯಿಯ ಪಾತ್ರ ಮಹತ್ವದ್ದು ಎಂದು ಇತಿಹಾಸ ಉಪನ್ಯಾಸಕಿ ಲಾವಣ್ಯಕಿರಣ್ ಅಭಿಪ್ರಾಯಿಸಿದರು. ಅಕ್ಕಮಹಾದೇವಿ ಮಹಿಳಾ ಸಂಘದ ಬಸವನಹಳ್ಳಿ ಬಡಾವಣೆಯ ಶರಣೆ ಗಂಗಾಂಬಿಕ ತಂಡ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ  ‘ಗೌರಿ ಹುಣ್ಣಿಮೆ’ ಕಾರ್‍ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗೌರಿಹುಣ್ಣಿಮೆ ಕಿರುಕಾರ್ತಿಕ ದೀಪಾವಳಿ. ಎಣ್ಣೆ, ಬತ್ತಿ ಯಾವುದೇ ಇರಲಿ ದೀಪ ಬೆಳಗಿಸಿದರೆ ಮಾತ್ರ ಬೆಳಗುತ್ತದೆ. ಬೆಳಕು ಕಲ್ಯಾಣದ ಸಂಕೇತ. ಭೂಮಿಯ ಉಗಮ ಸಿದ್ಧಾಂತದಲ್ಲಿ ಮಹಾಸ್ಫೋಟ ಒಂದು. ಪುರಾಣ ಕಥೆಗಳಲ್ಲೂ ಸುರಾಸುರರ ಯುದ್ಧವಾದಾಗ ಬ್ರಹ್ಮ, ವಿಷ್ಣು, ಮಹೇಶ್ವರ ಉಗಮಕ್ಕೆ ರಾಜರಾಜೇಶ್ವರಿ ಕಾರಣರಾಗಿರುತ್ತಾಳೆ. ಜಗದ್ ಕಂಠಕರಾದ ಶಂಭು-ನಿಶಂಭು-ಮಹಿಷಾಸುರ ಮತ್ತಿತರರ ಸಂಹಾರಕ್ಕೂ ದೇವತೆ ಬರಬೇಕಾಯಿತು. ಜಗತ್ತಿನ ರಕ್ಷಣೆಗೆ ಸ್ತ್ರೀಶಕ್ತಿ ಅತ್ಯಗತ್ಯ. ಶಿವನಷ್ಟೇ ಪ್ರಾಮುಖ್ಯತೆ ಶಕ್ತಿಗೂ ಇದೆ. ವೇದಕಾಲದಲ್ಲೂ ಮಹಿಳೆಗೆ ಮಾನ್ಯತೆ ಇತ್ತು. ಗಾರ್ಗಿ, ಮೈತ್ರೇಯಿ, ಲೋಕಮುದ್ರಾ ಮತ್ತಿತರ ಮಹಿಳಾ ವಿದ್ವಾಂಸರು ಪುರುಷಪ್ರಧಾನ ಸಮಾಜದಲ್ಲೂ ಇದ್ದರು ಎಂದರು. ಮಹಿಳೆರಿಗೆ ಸ್ವಾತಂತ್ರ್ಯ ಇದೆ ಆದರೆ…

Read More

ಚಿಕ್ಕಮಗಳೂರು:  ಮಾನವನ ಸೇವೆಯೆ ಮಾಧವನ ಸೇವೆ ಎಂಬ ಶ್ರೀಸತ್ಯಸಾಯಿ ಬಾಬಾ ಆಶಯದಂತೆ ಇಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ ಎಂದು ಶ್ರೀಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ ನುಡಿದರು. ಗಾಳಿಪೂಜೆ ಗ್ರಾಮದಲ್ಲಿ ಶ್ರೀಸತ್ಯಸಾಯಿ ಸೇವಾ ಸಮಿತಿ ಮತ್ತು ಸೇವಾಕ್ಷೇತ್ರದ ಆಶ್ರಯದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರ ೯೯ನೆಯ ಜನ್ಮದಿನೋತ್ಸವದ ಪ್ರಯುಕ್ತ ಇಂದು ಆಯೋಜಿಸಿರುವ ‘ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಆಧ್ಯಾತ್ಮ, ಸೇವೆ ಮತ್ತು ಶಿಕ್ಷಣ ಮೂರು ವಿಭಾಗಗಳಲ್ಲಿ ಬಾಬಾ ಅವರ ಆಶಯದಂತೆ ಚಟುವಟಿಕೆ ನಡೆಸಲಾಗುತ್ತಿದೆ. ವಾರದ ಭಜನೆ ಜಪ, ತಪ, ಆಧ್ಯಾತ್ಮಿಕ ವಲಯದ ಸೇವೆ. ನಿತ್ಯ ನಾರಾಯಣನ ಸೇವೆ, ಆರೋಗ್ಯ ಶಿಬಿರಗಳು, ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೆ ನೆರವು ಪ್ರಮುಖ ಸೇವಾ ಚಟುವಟಿಕೆಯಾದರೆ, ಶಾಲಾಕಾಲೇಜುಗಳು, ಬಾಲಸಂಸ್ಕಾರ ಕೇಂದ್ರಗಳು, ಶೈಕ್ಷಣಿಕ ವಲಯದ ಕಾರ್‍ಯಗಳೆಂದು ಅವರು ವಿವರಿಸಿದರು. ಆರೋಗ್ಯ ಸೇವಾ ಕ್ಷೇತ್ರಗಳಲ್ಲಿ ಶ್ರೀಬಾಬಾ ಅವರದು ಜಗತ್ತು ಕಂಡರಿಯದ ಸೇವೆ ಎಂದು ಬಣ್ಣಿಸಿದ ಶಿವಮೂರ್ತಿ, ವೇದ-ಮಂತ್ರಗಳ ಪಠಣ, ಕುಡಿಯುವ…

Read More