Subscribe to Updates
Get the latest creative news from FooBar about art, design and business.
- e-paper (23-07-2025) Chikkamagalur Express
- ಮಳೆಗಾಲ ಮುಗಿದ ಬಳಿಕ ನಗರದ ಎಲ್ಲಾ ರಸ್ತೆಗಳ ಡಾಂಬರೀಕರಣ
- e-paper (22-07-2025) Chikkamagalur Express
- ಪಂಚ ಪೀಠಗಳು ಒಗ್ಗಟ್ಟಾಗಿ ಹೆಜ್ಜೆ ಹಾಕಲಿ : ಶ್ರೀ ರಂಭಾಪುರಿ ಜಗದ್ಗುರುಗಳು
- ನಾಗರೀಕರ ಅರೋಗ್ಯ ಸಮಸ್ಯೆಗೆ ಜ್ಯೋತಿ ಡಯಾಗ್ನಸ್ಟಿಕ್ ಲ್ಯಾಬೋರೇಟರಿ ಪೂರಕ
- e-paper (20-07-2025) Chikkamagalur Express
- ಹಿಂದುತ್ವದ ಬದುಕು ಪ್ರಾಚೀನ ಸಂಸ್ಕೃತಿ-ನಾಗರೀಕತೆಯ ಭಾಗ
- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ನಗರ ಮಂಡಲ ಪ್ರತಿಭಟನೆ
Author: chikkamagalur express
ಚಿಕ್ಕಮಗಳೂರು: ವೀರತನದ ಪ್ರತೀಕ ಒನಕೆ ಓಬವ್ವ, ಆಕೆಯ ಸಾಹಸಮಯ ಜೀವನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು. ಜಿಲ್ಲಾಡಳಿತ ವತಿಯಿಂದ ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಕನ್ನಡ ನಾಡು ಅನೇಕ ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟು ಹಲವಾರು ವೀರ ಸೈನಿಕರು, ವೀರ ವನಿತೆಯರನ್ನು ತನ್ನ ಮಡಿಲಿನಲ್ಲಿ ಇರಿಸಿಕೊಂಡಿದೆ. ಇವರ ಹೆಸರುಗಳು ಇಂದಿಗೂ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿವೆ. ನಮ್ಮ ನಾಡಿನ ಐತಿಹಾಸಿಕ ಸ್ಥಳ ಚಿತ್ರದುರ್ಗ ಎಂದ ಕ್ಷಣ ನೆನಪಾಗುವುದೇ ಹೈದರಾಲಿಯ ಸೈನಿಕರೊಡನೆ ಏಕಾಂಗಿಯಾಗಿ ಹೋರಾಡಿದ ವೀರ ವನಿತೆ ಒನಕೆ ಒಬವ್ವನ ಹೆಸರು. ಅವರ ಶೂರತನದ ಜೀವನ ಕತೆಗಳು ಸದಾ ಚಿರಸ್ಮರಣೀಯವಾದುದು ಎಂದರು. ಯಾವುದೇ ಯುದ್ಧ ಕಲೆಗಳು, ಶಸ್ತ್ರಾಭ್ಯಾಸಗಳನ್ನು ತಿಳಿಯದ ಸಾಮಾನ್ಯ ಮಹಿಳೆ ತನ್ನ ನಾಡಿನ ರಕ್ಷಣೆಗಾಗಿ ಏಕಾಂಗಿಯಾಗಿ ಕೋಟೆಗೆ ಆಕ್ರಮಣ ಮಾಡಿದ ನೂರಾರು ಎದುರಾಳಿ…
ಚಿಕ್ಕಮಗಳೂರು: ಸರ್ಕಾರದ ಯೋಜನೆಗಳಾದ ಸುಕನ್ಯಾ ಸಮೃದ್ಧಿ, ಮಾತೃ ವಂದನಾ ಯೋಜನೆಗಳ ಸೌಲಭ್ಯವನ್ನು ಅಲ್ಪಸಂಖ್ಯಾತರಿಗೆ ದೊರೆಯುವಂತೆ ಅಧಿಕಾರಿಗಳು ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮದ ಜುಲೈ-೨೦೨೪ ರಿಂದ ಸೆಪ್ಟೆಂಬರ್-೨೦೨೪ ರವರೆಗಿನ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಹೆಣ್ಣು ಮಕ್ಕಳ ಯೋಗಕ್ಷೇಮವನ್ನು ಖಚಿತ ಪಡಿಸಲು ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ನೆರವಾಗಲು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಸೌಲಭ್ಯವನ್ನು ಅಲ್ಪಸಂಖ್ಯಾತರ ಮಕ್ಕಳು ಸಹ ಪಡೆಯಬೇಕು. ಅವರ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆ ತುಂಬಾ ಉಪಯುಕ್ತವಾದದ್ದು, ಅಧಿಕಾರಿಗಳು ಈ ಯೋಜನೆಗಳಿಗೆ ಸಂಬಂಧಪಟ್ಟ ಫಲಾನುಭವಿ ಮಕ್ಕಳ ಪೋಷಕರಿಗೆ ಅರ್ಜಿ ಸಲ್ಲಿಸುವಂತೆ ಅರಿವು ಮೂಡಿಸಿ ಕ್ರಮವಹಿಸಬೇಕು ಎಂದರು. ಮಾತೃವಂದನಾ ಯೋಜನೆಯು ಅಲ್ಪಸಂಖ್ಯಾತರ ಮಹಿಳೆಯರಿಗೆ ಮತ್ತು ಮಕ್ಕಳ ಅಭಿವೃದ್ಧಿಗೆ ನೆರವಾಗುವುದೇ ಯೋಜನೆಯ ಉದ್ದೇಶವಾಗಿದೆ. ಪ್ರತಿ ಗರ್ಭಿಣಿ…
ಚಿಕ್ಕಮಗಳೂರು: ಬರಡು ಅಥವಾ ನಿರುಪಯುಕ್ತ ಪ್ರದೇಶದಲ್ಲಿ ಸೋಲಾರ್ ಸಿಸ್ಟಂ ಅಳವಡಿಸಿ ಇಂಧನ ಶಕ್ತಿ ಉತ್ಪಾದಿಸಲು ರಾಜ್ಯಸರ್ಕಾರ ಶೇ.೮೦ ಸಬ್ಸಿಡಿ ಒದಗಿಸಿ ಸ್ವ ಉದ್ಯೋಗ ಕೈಗೊಳ್ಳಲು ಯುವಸಮೂಹಕ್ಕೆ ಸಹಾಯಧನ ಕಲ್ಪಿಸುತ್ತಿದೆ ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗ ಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು. ನಗರದ ಆದಿಚುಂಚನಗಿರಿ ತಾಂತ್ರಿಕ ವಿದ್ಯಾಲಯದಲ್ಲಿ ಏರ್ಪಡಿಸಿದ್ಧ ಭವಿಷ್ಯದಲ್ಲಿ ನವೀಕರಿಸಬಹುದಾ ದ ಇಂಧನ ಸಂಪನ್ಮೂಲಗಳ ಕುರಿತ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ದೇಶ-ವಿದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಇಂಧನ ಉತ್ಪಾದಿಸುವುದು ಸಮಾರೋಪದಿಯಲ್ಲಿ ನಡೆಯುತ್ತಿದೆ. ಪ್ರಕೃತಿಯಲ್ಲಿ ದೊರೆಯುವ ಗಾಳಿ, ನೀರು, ಸೂರ್ಯನ ಕಿರಣ ಬಳಸಿ ಕೊಂಡು ಪರಿಸರಕ್ಕೆ ಹಾನಿಯಾಗದೇ ಜೈವಿಕ ವಿಧಾನದಡಿ ವಿದ್ಯುತ್‌ಶಕ್ತಿ ಉತ್ಪಾದನೆಯಲ್ಲಿ ಸರ್ಕಾರಗಳು ತೊ ಡಗಿಸಿಕೊಂಡಿದೆ ಎಂದು ಹೇಳಿದರು. ಗುಣಮಟ್ಟದ ಇಂಧನ ಉತ್ಪ್ಪತ್ತಿ ಸಂಬಂಧ ವಿದೇಶಿ ಕಂಪನಿಯೊಂದಕ್ಕೆ ಸಂಸ್ಥೆ ಒಪ್ಪಂದ ಮಾಡಿಕೊಂ ಡು ಹೆಚ್ಚಿನ ಮಟ್ಟದಲ್ಲಿ ಶುದ್ಧ ಇಂಧನಕ್ಕೆ ಮುಂದಾಗಿದೆ ಎಂದ ಅವರು ಸೋಲಾರ್‌ಗೆ ಹೆಚ್ಚು ಪ್ರಾಮುಖ್ಯತೆ ಯನ್ನು ಸರ್ಕಾರ ನೀಡಿರುವ ಪರಿಣಾಮ…
ಚಿಕ್ಕಮಗಳೂರು: ಮಲೆನಾಡಿನ ಜನರಿಗೆ ತೂಗುಕತ್ತಿಯಾಗಿರುವ ಕಸ್ತೂರಿ ರಂಗನ್ ವರದಿಯ ಬಗ್ಗೆ ರಾಜ್ಯ ಸರ್ಕಾರ ತಿರಸ್ಕರಿಸಿದ್ದು, ಮಲೆನಾಡಿನ ಸಮಸ್ಯೆಯನ್ನು ವಿಷಯವಾಗಿ ಇಟ್ಟುಕೊಂಡು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಶಾಸಕರು, ಸಚಿವರು, ಚರ್ಚಿಸುವಂತೆ ಆಗ್ರಹಿಸಿ ಡಿ.೫ ರಿಂದ ವಿವಿಧ ಹಂತದ ಚಳುವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ ಕುಮಾರ್ ಒತ್ತಾಯಿಸಿದರು. ಅವರು ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಸ್ತೂರಿ ರಂಗನ್ ವರದಿಯಂತೆ ೨೦,೬೦೦ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಉಪಗ್ರಹ ಆಧಾರಿತ ಸರ್ವೇ ನಡೆಸಿದ್ದು, ಭೌತಿಕ ಸರ್ವೇ ನಡೆಸಿದರೇ ೪೦ ಸಾವಿರಕ್ಕೂ ಹೆಚ್ಚು ಚದರ ಕಿ.ಮೀ. ಅರಣ್ಯ ಪ್ರದೇಶ ಲಭ್ಯವಾಗಲಿದೆ. ಆದರೆ, ಭೌತಿಕ ಸರ್ವೇ ನಡೆಸಲು ಸರ್ಕಾರಗಳು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿರುವುದಾಗಿ ಹೇಳಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಯಾವುದೇ ದೃಢೀಕರಣವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಇದರಿಂದ ಜನರಲ್ಲಿ…
ಚಿಕ್ಕಮಗಳೂರು: ಜಿಲ್ಲೆಗೆ ವಲಸೆ ಬಂದು ಕಾಫಿ ತೋಟಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಿರುವ ಬೀಟಮ್ಮ ಆನೆ ಗ್ಯಾಂಗ್‌ನ ಒಂದು ಸಲಗ ಸಾವನ್ನಪಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಮೃತಪಟ್ಟಿದ್ದು ಆಲ್ದೂರು ಸಮೀಪದ ತುಡುಕೂರು ಗ್ರಾಮದ ಕಾಫಿ ತೋಟಗಳ ನಡುವೆ ಮೃತ ಆನೆಯ ದೇಹ ಪತ್ತೆಯಾಗಿದೆ. ಕಾಫಿನಾಡಲ್ಲಿ ೧೭ ಕಾಡಾನೆಗಳ ಹಿಂಡಿನ ಬೀಟಮ್ಮ ಗ್ಯಾಂಗಿನ ಹಾವಳಿ ವಿಪರೀತಗೊಂಡಿತ್ತು. ಈ ನಡುವೆ ಇಂದು ಬೀಟಮ್ಮ ಗ್ಯಾಂಗ್ ನ ಒಂದು ಸಲಗ ಸಾವನ್ನಪಿದೆ ವಿದ್ಯುತ್ ಸ್ಪರ್ಶಿಸಿ ಒಂದು ಸಲಗ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ತಾಲೂಕಿನ ತುಡುಕೂರು ಗ್ರಾಮದ ಕಾಫಿ ತೋಟಗಳ ಬಳಿ ಘಟನೆ ನಡೆದಿದ್ದು ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಒಂಟಿ ಸಲಗ ಸ್ಥಳದಲ್ಲೇ ಅಸುನೀಗಿದೆ. ಕಳೆದ ೩ ದಿನಗಳಿಂದ ೧೭ ಕಾಡಾನೆ ಗಳ ಹಿಂಡು ಬೀಟಮ್ಮ ಗ್ಯಾಂಗ್ ತುಡುಕೂರು ಸುತ್ತಮುತ್ತ ಸಾಕಷ್ಟು ಬೆಳೆ ನಾಶ ಹಾಗೂ ಜನರಿಗೆ ಭೀತಿ ಹುಟ್ಟಿಸಿತ್ತು. ೩ದಿನಗಳಿಂದ ಬೀಟಮ್ಮ ಗ್ಯಾಂಗ್ ಆಲ್ದೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಟ್ ಮಾಡುತ್ತಿದ್ದವು . ಒಟ್ಟು…
ಚಿಕ್ಕಮಗಳೂರು: ವೀರವನಿತೆ ಒನಕೆ ಓಬವ್ವ ೨೮೫ ನೇ ಜಯಂತಿಯನ್ನು ನ.೧೧ ರಂದು ಸೋಮವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲಾ ಛಲವಾದಿ ಮಹಾಸಭಾ ಬೆಂಬಲಿಸುತ್ತದೆ ಎಂದು ಸಂಘದ ಅಧ್ಯಕ್ಷ ಬಿ.ಎಂ ರಘು ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಚಿತ್ರದುರ್ಗದ ಇತಿಹಾಸದಲ್ಲಿ ಓಬವ್ವನ ವೀರವನಿತೆಯಾಗಿದ್ದು, ಕೋಟೆಯ ಒಳಭಾಗದಲ್ಲಿ ಹೈದರಾಲಿಯ ಸೈನಿಕರನ್ನು ಸದೆ ಬಡಿದ ಒನಕೆ ಓಬವ್ವನ ಕಿಂಡಿ ಎಂದು ಕರೆಯಲಾಗುತ್ತಿದ್ದು, ಛಲವಾದಿ ವೀರವನಿತೆ ಒಬವ್ವ ಜಯಂತಿಯನ್ನು ಸರ್ಕಾರ ಆಚರಿಸುತ್ತಿರುವುದರಿಂದ ಇದಕ್ಕೆ ಛಲವಾದಿ ಜಿಲ್ಲಾ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದರು. ತರೀಕೆರೆ ತಾಲ್ಲೂಕಿನ ಉಡೇವಾ ಪಟೇಲ್‌ಮೂಡ್ಲೇಗೌಡ ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕ ಎಂ.ಇ ರಮೇಶ್ ಪ್ರಧಾನ ಉಪನ್ಯಾಸ ನೀಡಲಿದ್ದಾರೆ. ಎಂದ ಅವರು ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಛಲವಾದಿ ಬಂಧುಗಳು, ಸಾರ್ವಜನಿಕರು, ಒನಕೆ ಓಬವ್ವನ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಜಯಂತಿಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷ…
ಚಿಕ್ಕಮಗಳೂರು: ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ನಗರದ ವಿವಿಧ ಬಡಾವಣೆಗಳಲ್ಲಿ ಮನೆ-ಮನೆಗೆ ತೆರಳಿ ಪಡಿಸಂಗ್ರಹ ಮಾಡಿದರು. ಶ್ರೀರಾಮ ಸೇನೆ ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ ನೇತೃತ್ವದಲ್ಲಿ ಮನೆ-ಮನೆಗೆ ತೆರಳಿ ದವಸ, ಧಾನ್ಯ, ತೆಂಗಿನಕಾಯಿ, ಅಕ್ಕಿ ಬೆಲ್ಲ ಮುಂತಾದ ಪದಾರ್ಥಗಳನ್ನು ಪಡಿಸಂಗ್ರಹ ರೂಪದಲ್ಲಿ ದತ್ತಮಾಲೆ ಧರಿಸಿದ್ದ ೩೦ಕ್ಕೂ ಹೆಚ್ಚು ಶ್ರೀರಾಮ ಸೇನೆ ಕಾರ್ಯಕರ್ತರು ವಿಜಯಪುರ ರಸ್ತೆ, ಕೋಟೆಬಡಾವಣೆ, ಬಸವನಹಳ್ಳಿ, ಸೇರಿದಂತೆ ವಿವಿಧೆಡೆ ಹತ್ತಾರು ಮನೆಗಳಲ್ಲಿ ಪಡಿ ಸಂಗ್ರಹಿಸಿದರು. ದತ್ತಮಾಲಾ ಅಭಿಯಾನದ ಅಂಗವಾಗಿ ಕನಿಷ್ಠ ೫ ಮನೆಗಳಲ್ಲಾದರೂ ಪಡಿ ಸಂಗ್ರಹಗಳನ್ನು ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದ್ದು, ದತ್ತ ಗುರುಗಳಿಗೆ ಪ್ರಿಯವಾದ ಪಡಿಸಂಗ್ರಹಣೆಯನ್ನು ಎಂದು ಮಾಡುತ್ತಿದ್ದೇವೆ. ನಂತರ ಮಾತನಾಡಿದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ದತ್ತಮಾಲೆ ಧಾರಣೆ ಮಾಡಿದ ಬಳಿಕ ಭಿಕ್ಷಾಟನೆ ಮಾಡಿದ ಮೂಲಕ ಪಡಿಸಂಗ್ರಹಿಸಿದಾಗ ನಮ್ಮ ಮನಸ್ಸಿನಲ್ಲಿರುವ ಲೋಭ, ಅಹಂಕಾರವೆಲ್ಲವೂ ನಿವಾರಣೆಯಾಗುತ್ತದೆ ಎಂಬುದು ಗುರುಗಳ ಅಭಿಪ್ರಾಯವಾಗಿದೆ ಎಂದರು. ದತ್ತಮಾಲಾ ಹಿನ್ನಲೆಯಲ್ಲಿ ನಾಳೆ ಬೆಳಿಗ್ಗೆ ೮ ಗಂಟೆಗೆ ಶಂಕರಮಠದಲ್ಲಿ ಧರ್ಮಸಭೆ ನಡೆಯಲಿದ್ದು,…
ಚಿಕ್ಕಮಗಳೂರು: : ದೇಶವನ್ನು ಉಳಿಸಲು ನಾವು ಬಿಜೆಪಿಯನ್ನು ಕಟ್ಟುತ್ತಿದ್ದೇವೆ ಎಂದು ಯೋಚನೆ ಮಾಡಿದರೆ ನಮ್ಮ ಸಿದ್ಧಾಂತಿಕ ವಿಚಾರಗಳಿಗೆ ಶಕ್ತಿ ಬರುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಶನಿವಾರ ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಸ್ತಾರೆ ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಬಹಳ ಜನರು ಬೇರೆ ಬೇರೆ ದೇಶಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಚೀನಾ ನಮಗಿಂತ ಮುಂದಿದೆ ಎನ್ನುವವರಿದ್ದಾರೆ. ಆದರೆ ಅಲ್ಲಿ ದೇಶದ ಪ್ರಶ್ನೆ ಬಂದಾಗ ಎರಡು ಮಾತನಾಡಲು ಅವಕಾಶವೇ ಇಲ್ಲ. ಆ ಹಿನ್ನೆಲೆಯಲ್ಲಿ ನಮ್ಮ ಭಾರತದ ಬದುಕನ್ನ ನೋಡಬೇಕಾದ ಅಗತ್ಯವಿದೆ ಎಂದರು. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಡೀ ಕೇಂದ್ರ ಸರ್ಕಾರ ದೇಶಕ್ಕಾಗಿ ಬಡಿದಾಡುತ್ತಿದ್ದರೆ. ಕರ್ನಾಟದಲ್ಲಿ ಕೆಂಗಲ್ ಹನುಮಂತಯ್ಯನವರು ಕಟ್ಟಿದ ಪ್ರಜಾಪ್ರಭುತ್ವದ ದೇಗುಲ ವಿಧಾನ ಸೌಧದಲ್ಲಿ ನಿಂತು ಪಾಕಿಸ್ಥಾನಕ್ಕೆ ಜೈ ಎಂದು ಕೂಗುತ್ತಾರೆ ಎಂದು ಯೋಚನೆ ಮಾಡಿದರೆ ನಮ್ಮ ಮುಂದಿನ…