Subscribe to Updates
Get the latest creative news from FooBar about art, design and business.
- e-paper (20-07-2025) Chikkamagalur Express
- ಹಿಂದುತ್ವದ ಬದುಕು ಪ್ರಾಚೀನ ಸಂಸ್ಕೃತಿ-ನಾಗರೀಕತೆಯ ಭಾಗ
- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ನಗರ ಮಂಡಲ ಪ್ರತಿಭಟನೆ
- ಸರ್ಕಾರ ಬದುಕಿಗೆ ಆದ್ಯತೆ ನೀಡಿ ಮೂಲ ಸೌಕರ್ಯ ಕಲ್ಪಿಸಿದೆ
- e-paper (19-07-2025) Chikkamagalur Express
- ಸಾರಿಗೆ ಬಸ್ ನಿಲ್ದಾಣಗಳಲ್ಲಿ ಸ್ವಚ್ಚತೆ ಕಾಪಾಡುವಂತೆ ಸೂಚನೆ
- 2047ಕ್ಕೆ `ಏಳು ಬೀಜಗಳಿಂದ ಏಳು ಲಕ್ಷ ಟನ್ಗೆ ಭಾರತದ ಕಾಫಿ ಜಿಗಿತ’
- e-paper (18-07-2025) Chikkamagalur Express
Author: chikkamagalur express
ಚಿಕ್ಕಮಗಳೂರು: ಸಮಾಜದಲ್ಲಿ ಪ್ರತಿಯೊಬ್ಬರಿಗೂ ಮುಕ್ತ ಹಾಗೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಹೆಚ್‌ಐವಿ ಬಾದಿತ ವ್ಯಕ್ತಿಯನ್ನು ಒಡನಾಟದಿಂದ ದೂರವಿಡದೆ ಅವರನ್ನು ಎಲ್ಲರಂತೆ ಭಾವಿಸುವುದು ಉತ್ತಮ ನಾಗರೀಕನ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಇಂದು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಸಂವಿಧಾನವೂ ದೇಶದ ಪ್ರತಿ ಪ್ರಜೆಗಳಿಗೆ ವ್ಯಕ್ತಿ ಗೌರವ ಹಾಗೂ ಏಕತೆ ಮನೋಭಾವದಿಂದ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ನೀಡಿದೆ. ಯಾವುದೇ ಖಾಯಿಲೆಗಳಿಗೆ ಒಳಗಾಗಿ ಸಮುದಾಯದೊಂದಿಗೆ ಜೀವಿಸುತ್ತಿರುವ ವ್ಯಕ್ತಿಯನ್ನು ಅಥವಾ ಅಂಗವೈಕಲ್ಯದಿಂದ ಬಳಲುತ್ತಿರುವ ವಿಶೇಷ ಚೇತನರನ್ನು…
ಚಿಕ್ಕಮಗಳೂರು: ಇತ್ತೀಚೆಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕ ಶ್ರೀನಾಥ್ ಅಪಘಾತದಲ್ಲಿ ನಿಧನರಾದ ವಿಚಾರಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪವೆಸಗಿರುವ ಡಿ.ಪೋ ವ್ಯವಸ್ಥಾಪಕರು ಮತ್ತು ಮ್ಯಕ್ಯಾನಿಕ್‌ರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಡಿ .೪ರಂದುವಿಭಾಗೀಯ ನಿಯಂತ್ರಣ ಅಧಿಕಾರಿ ಕಛೇರಿ ಮುಂದೆ ಆಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಲು ತೀರ್ಮಾನಿಸಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮರ್‍ಲೆ ಅಣ್ಣಯ್ಯ ಹೇಳಿದರು. ನಗರದಲ್ಲಿಂದು ಕರೆದಿದ್ದಸುದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚಿಕ್ಕಮಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಕೆಎಸ್ ಆರ್ ಟಿ ಸಿಬಸ್ಸು ಮಾರ್ಗ ಮಧ್ಯೆ ಹೊಳೆನರಸೀಪುರ ಹತ್ತಿರ ಸುಮಾರು ಬೆಳಿಗ್ಗೆ ೮.೩೦ ರಲ್ಲಿ ಕೆಟ್ಟು ನಿಂತು ಚಿಕ್ಕಮಗಳೂರು ಡಿಪೋಕ್ಕೆ ದೂರು ನೀಡಿದರೂ ಸಂಜೆ ೫ ಗಂಟೆ ಯಾದರೂ ಮ್ಯಾಕನಿಕ್‌ರವರನ್ನು ಮ್ಯಾನೇಜರ್ ರವರು ಕಳಿಸದೆ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಆರೋಪಿಸಿದರು. ೫ ಗಂಟೆಯ ನಂತರ ಬಂದ ಮ್ಯಾಕನಿಕ್ ರಿಪೇರಿ ಮಾಡುತ್ತಿರುವಾಗ ಸಂಜೆ ೮ ಗಂಟೆ ಸಮಯದಲ್ಲಿ ಮ್ಯಾಕನಿಕ್ ಶ್ರೀನಾಥ್‌ರವರಿಗೆ ಟೂಲ್ಸ್ ತರಲು ಹೇಳಿದ್ದು ಬಸ್ಸಿನಿಂದ ಇಳಿಯುವಾಗ ಯಾವುದೋ ವಾಹನ ಅವರ ಮೇಲೆ ಹತ್ತಿಸಿಕೊಂಡು ಹೋಗಿದ್ದು ಶ್ರೀಕಾಂತ್ ಸ್ಥಳದಲ್ಲೆ ಮೃತ…
ಚಿಕ್ಕಮಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರು ಅಪಪ್ರಚಾರ, ಅಕ್ರಮ, ವಾಮಮಾರ್ಗಗಳ ಮೂಲಕ ನಾಲ್ಕನೇ ಬಾರಿ ಚುನಾವಣೆಯಲ್ಲಿ ಗೆಲ್ಲಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಅಧ್ಯಕ್ಷಿಯ ಅಭ್ಯರ್ಥಿ ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೆದಾರ್ ಹೇಮಂತ್ ಕುಮಾರ್ ಆರೋಪಿಸಿದರು. ನಗರದಲ್ಲಿಂದು ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದಅವರು ಡಿ.೪ರಂದು ಅಧ್ಯಕ್ಷ ಸ್ಥಾನಕ್ಕೆ ಹೇಮಂತ್ ಕುಮಾರ್ ಆದ ನಾನು ಖಜಾಂಚಿ ಸ್ಥಾನಕ್ಕೆ ಕೃಷ್ಣಮೂರ್ತಿ ಅರಸ್,ಮತ್ತು ರಾಜ್ಯಸಮಿತಿ ಸದಸ್ಯತ್ವದ ಸ್ಥಾನಕ್ಕೆ ಮಂಜುನಾಥ್ ಸ್ಪರ್ಧಿಸಿದ್ದೇವೆ ಎಂದರು. ನಿರ್ದೇಶಕರ ಚುನಾವನೆ ಸಂದರ್ಭದಲ್ಲಿ ಬೈಲಾನಿಯಮಗಳನ್ನು ಗಾಳಿಗೆ ತೂರಿದ್ದಾರೆ, ಮತದಾರಪಟ್ಟಿ ತಯಾರಿಸುವಾಗಲೂ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ ಆರೋಗ್ಯ ಇಲಾಖೆ , ಗ್ರಂಥಾಲಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ೭೦ಕ್ಕೂ ಹೆಚ್ಚು ನೌಕರರ ಹೆಸರುಗಳನ್ನು ಕೈಬಿಟ್ಟು ಮತದಾರರ ಪಟ್ಟಿತಯಾರಿಸಿ ಅಕ್ರಮವೆಸಗಿದ್ದಾರೆ ಈಬಗ್ಗೆ ರಾಜ್ಯಾಧ್ಯಕ್ಷರ ಗಮನಕ್ಕೂ ತರಲಾಗಿದೆ ಎಂದರು. ದೇವೇಂದ್ರರವರ ಅವಧಿಯಲ್ಲಿ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಸದಸ್ಯರಿಂದ ಸಂಗ್ರಹಗೊಂಡ ಶುಲ್ಕದ ಬಗ್ಗೆ ,ಬಿಡುಗಡೆಯಾದವ ಸರ್ಕಾರ ಅನುದಾನಗಳ ಖರ್ಚುವೆಚ್ಚದ ಬಗ್ಗೆ ಈವರೆಗೂ ಮಾಹಿತಿ ನೀಡಿಲ್ಲಾ.ಅವರ ಅಕ್ರಮಗಳನ್ನು ಪ್ರಶ್ನಿಸಿದರೆಂಬ…
ಚಿಕ್ಕಮಗಳೂರು: ಇನ್ನರಡು ದಿನಗಳ ಗಡುವಿನೊಳಗೆ ಕಾಡಾನೆ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸದಿದ್ದರೆ ಅರಣ್ಯಾಧಿಕಾರಿಗಳ ಕಚೇರಿ ಎದುರು ಸರಣಿ ಅಹೋರಾತ್ರಿ ಧರಣ ನಡೆಸಲಾಗುವುದೆಂದು ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಕಾರ್ಯದರ್ಶಿ ಡಿ .ಮಹೇಶ್ ಎಚ್ಚರಿಸಿದರು. ನಗರದಲ್ಲಿಂದು ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಡಾನೆಗಳು ನಾಡಿಗೆ ಬರದಂತೆ ಶಾಶ್ವತ ಪರಿಹಾರ ರೂಪಿಸಿ. ಕಾಡಾನೆಗಳಿಂದಾದ ಬೆಳೆಹಾನಿ ವೈಜ್ಞಾನಿಕ ಪರಿಹಾರ ಕೊಡಿಸಿ ಜೀವಹಾನಿ ಸಂಭವಿಸಿದಾಗ ಕೊಡುವ ಪರಿಹಾರ ಮೊತ್ತ ಹೆಚ್ಚಿಸಬೇಕೆಂದು ಆಗ್ರಹಿಸಿದರು. ಕಳೆ ೨೫ ದಿನಗಳಿಂದ ಮಾರಿಕಟ್ಟೆ ಆಲದಗುಡ್ಡೆ, ಕೆಸವಿನಮನೆ, ಕದ್ರಿಮಿದ್ರಿ, ಕೆ.ಆರ್‌ಪೇಟೆ ಸುತ್ತ ಬೆಳೆ ಹಾಳುಮಾಡಿ ಭಯದ ವಾತಾವರಣ ಸೃಷ್ಟಿಸಿದ್ದ ಕಾಡಾನೆಗಳ ಹಾವಳಿಗೆ ತಾತ್ಕಾಲಿಕ ತೆರೆ ಬಿದ್ದಂತೆ ಕಾಣುತ್ತಿದೆ. ಆದರೆ ಉಳಿದ ನಾಲ್ಕು ಆನೆಗಳನ್ನು ತುರ್ತಾಗಿ ಅವರ ಸ್ವಸ್ಥಾನಕ್ಕೆ ಸೇರಿಸುವ ಪ್ರಯತ್ನವನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕು ಎಂದರು. ೩ ಜನ ರೈತರು ಕಾಡಾನೆದಾಳಿಯಲ್ಲಿ ಅಸುನೀಗಿರುವುದನ್ನು ಮರೆಯುವ ಮುನ್ನವೆ ನರಸಿಂಹರಾಜಪುರ ತಾಲ್ಲೂಕಿನ ಸೀತೂರು ಗ್ರಾಮದ ರೈತ ಉಮೇಶ್ ಎಂಬುವವರನ್ನು ಕಾಡಾನೆ ಬಲಿಪಡೆದಿರುವುದು ಅತ್ಯಂತ ನೋವಿನ ಸಂಗತಿ. ಕೊಪ್ಪ ಸುತ್ತಮುತ್ತ…
ಚಿಕ್ಕಮಗಳೂರು: ರೈತರ ಬೆಳೆ ಹಾಗೂ ಜೀವ ಹಾನಿ ಉಂಟುಮಾಡುತ್ತಿರುವ ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದ ಎಐಟಿ ಕಾಲೇಜು ಬಳಿ ಇರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯಧರ್ಶಿ ಎಚ್.ಸಿ.ಕಲ್ಮರುಡಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಕಚೇರಿ ಬಳಿ ಬರುತ್ತಿದ್ದಂತೆ ಅಲ್ಲಿನ ಸಿಬ್ಬಂಧಿಗಳು ಕಾಂಪೌಂಡ್‌ನ ಗೇಟ್ ಹಾಕಿದರು. ಇದರಿಂದ ಸಿಟ್ಟಿಗೆದ್ದ ಕಾರ್ಯಕರ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾರಣ ಬೀಗ ತೆರೆಯಲಾಯಿತು. ಈ ವೇಳೆ ಜಿಲ್ಲಾ ರೈತ ಮೋರ್ಚಾ ಉಸ್ತುವಾರಿ ಶೆಟ್ಟಿಗದ್ದೆ ರಾಮಸ್ವಾಮಿ ಮಾತನಾಡಿ, ಒಂದೂವರೆ ವರ್ಷದಿಂದ ಜಿಲ್ಲೆಯ ವಿವಿಧೆಡೆ ಕಾಡಾನೆಗಳು ದಾಳಿ ಮಾಡುತ್ತಿವೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಪಡಿಸಿವೆ ರೈತರು, ಮತ್ತು ಬೆಳೆಗಾರರು, ಕಾರ್ಮಿಕರ ಸಾವು ನೋವು ಸಂಭವಿಸಿದೆ. ಮೊನ್ನೆಯಷ್ಟೇ ಎನ್‌ಆರ್‌ಪುರದಲ್ಲಿ ಓರ್ವ ರೈತನನ್ನು ಆನೆ ತುಳಿದು ಸಾಯಿಸಿದೆ. ರೈತರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ…
ಚಿಕ್ಕಮಗಳೂರು: ದತ್ತಮಾಲಾ ಅಭಿಯಾನದ ರಜತ ಮಹೋತ್ಸವ ಅಂಗವಾಗಿ ನಗರದ ಹನುಮಂತಪ್ಪ ವೃತ್ತದ ಬಳಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಪದಾಧಿಕಾರಿಗಳು ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿ ಅಲಂಕಾರ ಕಾರ್ಯಕ್ರಮ ಅಧಿಕೃತವಾಗಿ ಶನಿವಾರ ಸಂಜೆ ಚಾಲನೆ ನೀಡಿದರು. ವಿಹೆಚ್‌ಪಿ ಸಹ ಸಂಯೋಜಕ ಶ್ಯಾಮ ವಿ.ಗೌಡ ಮಾತನಾಡಿ ಇಂದಿನಿಂದ ಡಿ.೧೬ರವರೆಗೆ ದತ್ತಮಾಲಾ ದಂದು ನಗರವು ಸಂಪೂರ್ಣ ಕೇಸರಿಕರಣದಿಂದ ಕೂಡಿರುತ್ತದೆ. ಡಿ.೬ ರಂದು ಕಾಮಧೇನು ಗಣಪತಿ ದೇವಾಲಯಲ್ಲಿ ದತ್ತಮಾಲಾ ಧಾರಣೆ ನಡೆಯಲಿದೆ. ೧೨ ರಂದು ಅನಸೂಯಪೂಜೆ, ೧೩ ರಂದು ಬೃಹತ್ ಶೋಭಾಯಾತ್ರೆ ಹಾಗೂ ೧೪ ರಂದು ದತ್ತಪಾದುಕೆ ದರ್ಶನಕ್ಕೆ ತೆರಳಲಾಗುವುದು ಎಂದರು. ಈ ಸಂದರ್ಭದಲ್ಲಿ ವಿಹೆಚ್‌ಪಿ ಪ್ರಾಂತಕಾರ್ಯಕಾರಿ ಸದಸ್ಯ ರಘು ಸಕಲೇಶಪುರ, ಜಿಲ್ಲಾಧ್ಯಕ್ಷ ಶ್ರೀಕಾಂ ತ್ ಪೈ, ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಕಾರ್ಯದರ್ಶಿ ರಂಗನಾಥ್, ಸಹ ಕಾರ್ಯದರ್ಶಿ ಅಮಿ ತ್, ನಗರ ಕಾರ್ಯದರ್ಶಿ ಕೃಷ್ಣ, ಸಹ ಕಾರ್ಯದರ್ಶಿ ಸುನೀಲ್, ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾ ರ್, ಸದಸ್ಯ ರೂಪಕುಮಾರ್, ಬಿಜೆಪಿ ಮಹಿಳಾ ಘಟಕದ…
ಚಿಕ್ಕಮಗಳೂರು: ದೇಶ-ವಿದೇಶಗಳ ಆಗುಹೋಗುಗಳ ಬಗ್ಗೆ ಅರಿತಿರುವ ಹಾಗೂ ರಾಷ್ಟ್ರದ ಸಮಗ್ರ ಹಿತಚಿಂತನೆ ಬಯಸುವ ಯುವ ಕಲಾವಿದರು, ಲೇಖಕರು, ಬರಹಗಾರರು ಹಾಗೂ ಕವಿಗಳಿಗೆ ಮಲೆನಾಡು ಗೋಷ್ಠಿ ಬಹಳಷ್ಟು ಶಕ್ತಿ ತುಂಬಲಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಡೆದ ‘ನಮ್ಮ ದೇಶ, ನಮ್ಮ ಸಂಸ್ಕೃತಿ ಎಂಬ ವಿಚಾರಧಾರೆ’ ಕುರಿತ ಮಲೆನಾಡಿನ ಸಮ್ಮೇಳನ ಆಚರಣೆಯ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ ಸಾಹಿತ್ಯಾತ್ಮಕ ಚಟುವಟಿಕೆಗಳ ಮುಖಾಂತರ ಕೆಲವರು ರಾಷ್ಟ್ರದ ಇತಿಹಾಸ ತಿರುಚಿ ಹಿಂದುತ್ವ ವಿರೋ ಧಿ ನೀತಿ ಅನುಸರಿಸುತ್ತಿವೆ. ದೇಶದ ಜನತೆಯಲ್ಲಿ ರಾಷ್ಟ್ರೇಪ್ರಮ ನಶಿಸಿ, ಉಳಿದೆಲ್ಲವನ್ನು ಬಿತ್ತುವ ಕಾರ್ಯದಲ್ಲಿ ತೊಡಗಿವೆ. ಹೀಗಾಗಿ ಸಮ್ಮೇಳನದಲ್ಲಿ ರಾಷ್ಟ್ರದ ಸಮಗ್ರ ಪರಿಚಯ, ಹಿಂದುತ್ವಕ್ಕಾಗಿ ಮಡಿದವರ ವಿಚಾರಧಾ ರೆಗಳನ್ನು ಲೇಖಕರು ಮಂಡಿಸಬಹುದು ಎಂದರು. ಹೊಸ ವಿಚಾರದಡಿ ರೂಪಿಸಿರುವ ಗೋಷ್ಠಿಯನ್ನು ಕಾರ್ಯಕರ್ತರಲ್ಲದೇ, ವಿರೋಧಿಸುವ ಬಣವು ಚರ್ಚಿಸಬೇಕು. ಈ ಸಂಘರ್ಷಗಳು ಸಮಾಜಕ್ಕೆ ಒಂದು ಸೇತುವೆಯಾಗಬೇಕು. ಪಕ್ಷದಿಂದ ಹಮ್ಮಿಕೊಂಡಿ ರುವ ಗೋಷ್ಟಿಗೆ ಶಕ್ತಿ…
ಚಿಕ್ಕಮಗಳೂರು: ಕಾಡಾನೆಗಳ ಹಿಂಡಿನ ಹಾವಳಿಯಿಂದ ಬೆಳೆ ಹಾನಿ, ಸಾವು, ನೋವು ಸಂಭವಿಸಿದರೂ ಜಿಲ್ಲಾ ಮಂತ್ರಿಗಳು ಸ್ಪಂದಿಸುತ್ತಿಲ್ಲ. ಅವರು ಕೇವಲ ಅವರ ತೋಟದ ಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಡಿ.ಕಲ್ಮರುಡಪ್ಪ ಆಕ್ರೋಶ ವ್ಯಕ್ತಪಡಿಸಿದರು. ಅವರು ಕಾಡಾನೆಗಳ ಹಾವಳಿಯಿಂದ ಬೆಳೆ ಹಾನಿ ಸಂಭವಿಸಿರುವ ನಗರ ಹೊರ ವಲಯದ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ಥರ ಅಳಲು ಆಲಿಸಿ ನಂತರ ಮಾತನಾಡಿ ಜಿಲ್ಲಾ ಮಂತ್ರಿಗಳಾಗಲಿ, ಜಿಲ್ಲಾಧಿಕಾರಿಗಳಾಗಲಿ, ಡಿಎಫ್‌ಓಗಳಾಗಲಿ ಸಮಸ್ಯೆ ಕುರಿತು ಬಾಯನ್ನೇ ಬಿಡುತ್ತಿಲ್ಲ. ಸರ್ಕಾರ, ಜಿಲ್ಲಾಡಳಿತ ಇದೆಯೋ, ಇಲ್ಲವೋ ಎನ್ನುವ ಸಂಶಯ ಮೂಡಿಸುತ್ತಿದೆ. ಇಷ್ಟೆಲ್ಲಾ ತೊಂದರೆ ಆದರೂ ರೈತರಿಗೆ ಧೈರ್ಯ ತುಂಬುವ ಕೆಲಸ ಆಗುತ್ತಿಲ್ಲ ಎಂದು ದೂರಿದರು. ಮೊನ್ನೆ ಜಿಲ್ಲಾ ಉಸ್ತುವಾರಿ ಸಚಿವರು ನಗರಕ್ಕೆ ಬಂದರೂ ಕೇವಲ ಎರಡು ಕಿ.ಮೀ.ದೂರದ ಗ್ರಾಮಗಳಿಗೆ ಭೇಟಿ ನೀಡಿ ರೈತರನ್ನು ಭೇಟಿ ಮಾಡಲಿಲ್ಲ. ಹೀಗಿದ್ದಮೇಲೆ ಜಿಲ್ಲಾ ಮಂತ್ರಿಯಾಗಿ ಯಾಕಿರಬೇಕು. ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದಿಲ್ಲ ಏಕೆ ಎಂದು ಪ್ರಶ್ನಿಸಿದರು. ಆನೆಗಳ ಚಲನ ವಲನಗಳ ಬಗ್ಗೆ…
ಚಿಕ್ಕಮಗಳೂರು: ಐತಿಹಾಸಿಕ ರಾಜಮನೆತನಗಳ ವೈಭವವನ್ನು ತೆರೆಯ ಮೇಲೆ ಕಟ್ಟಿಕೊಟ್ಟ ಐತಿಹಾಸಿಕ ವೈಭವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಇತಿಹಾಸ ತಜ್ಞೆ ಪ್ರೊ. ಅನುರಾಧ ಹೇಳದರು. ಅವರು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಐತಿಹಾಸಿಕ ವೈಭವ ೨೦೨೪-೨೫ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾವಿಜೇತರಿಗೆ ಬಹುಮಾನವಿತರಿಸಿ ಕಾರ್ಯಕ್ರಮಮಾತನಾಡಿದರು.ಐತಿಹಾಸಿಕ ವೈಭವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಲಾ ವಿದ್ಯಾರ್ಥಿಗಳು, ನಾಡಿನ ಪ್ರಮುಖ ರಾಜಮನೆತನಗಳ ಇತಿಹಾಸವನ್ನು ತೆಗೆದುಕೊಂಡು ಕೃತಕ ಶಬ್ದ, ಧ್ವನಿ ಬಳಸದೆ ಸ್ಥಜನಾತ್ಮಕವಾಗಿ ಅವರೇ ತಯಾರಿಸಿ ಅತ್ಯದ್ಬುತ ರೀತಿಯಲ್ಲಿ ಸಂಕಲನಗೊಳಿಸಿ ವೇದಿಕೆಯ ಮೇಲೆ ಪ್ರಸ್ತುತಪಡಿಸಿದ್ದಾರೆ. ನಾಡಿನ ಸಂಸ್ಕೃತಿ ಮತ್ತು ನಾಡಿನ ಬಗ್ಗೆ ಇರುವ ಅಸ್ಮಿತೆ ಅನಾರಣಗೊಳಿಸಿದ್ದಾರೆ. ರಿಕ್ರಿಯೇಟಿಂಗ್ ಹಂಪಿ, ಕದಂಬ ಆರ್ಟ್, ಚಾಲುಕ್ಯ ಆರ್ಟ್, ಎಲಿಫೆಂಟಾ ಕೇವ್ ಮತ್ತಿತರೆ ಸೃಜನಾತ್ಮಕ ಕಲೆಗಳು ಜನಮನ ಸೂರೆಗೊಂಡಿವೆ.ಮಕ್ಕಳು ಬಹಳ ಮನೋಜ್ಞವಾಗಿ ಐತಿಹಾಸಿಕ ಮಾಹಿತಿಗೆ ಧಕ್ಕೆ ಬಾರದ ರೀತಿ ಐತಿಹಾಸಿಕ ಘಟನೆಗಳ ಕುರಿತಂತೆ ಪ್ರದರ್ಶಿಸಿ, ಇತಿಹಾಸದ ಪ್ರಾಮುಖ್ಯತೆ, ಶ್ರೇಷ್ಠತೆ ಏನು ಎಂಬುದನ್ನು ಮನೋಜ್ಞವಾಗಿ ಚಿತ್ರಿಸಿ ಕೊಟ್ಟಿದೆಈ ಐತಿಹಾಸಿಕ…