Author: chikkamagalur express

ಚಿಕ್ಕಮಗಳೂರು:  ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರನ್ನು ವರ್ಣದ ವಿಚಾರದಲ್ಲಿ ಅವಹೇಳನ ಮಾಡಿರುವುದಲ್ಲದೆ, ಒಕ್ಕಲಿಗ ಜನಾಂಗವನ್ನೇ ಕೊಂಡುಕೊಳ್ಳುತ್ತೇನೆ ಎನ್ನುವ ಅರ್ಥದಲ್ಲಿ ಮಾತನಾಡಿರುವ ರಾಜ್ಯದ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಆಗ್ರಹಿಸಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿರುವ ಅವರು, ಜಮೀರ್ ಅಹಮದ್ ವಕ್ಫ್ ಸಚಿವರಾದ ನಂತರ ಇಡೀ ರಾಜ್ಯದಲ್ಲಿ ದ್ವೇಷಭಾವನೆಯನ್ನು ಬಿತ್ತಿದ್ದಾರೆ. ರೈತರು ಸೇರಿದಂತೆ ಎಲ್ಲಾ ಜಮೀನುಗಳನ್ನು ವಕ್ಫ್‌ಗೆ ಸೇರ್ಪಡಿಸುವುದಲ್ಲದೆ, ಕುಮಾರ ಸ್ವಾಮಿ ಅವರ ಕುಟುಂಬ ಹಾಗೂ ಅವರ ಬಣ್ಣದ ಬಗ್ಗೆ ಪುಡಿ ರೌಡಿ ರೀತಿಯಲ್ಲಿ ಭಾಷಣ ಮಾಡಿದ್ದಾರೆ. ಹಲ್ಲು ಕಚ್ಚುತ್ತಾ ನಮ್ಮ ವಕ್ಫ್ ಆಸ್ತಿಗಳು ಹಸಿರಾಗಿ ಕಾಣಬೇಕು, ಹಿಂದೂಗಳು ಹೊಟ್ಟೆ ಉರಿದುಕೊಳ್ಳಬೇಕು ಎನ್ನವ ರೀತಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದರು. ಕುಮಾರಸ್ವಾಮಿ ಅವರ ಚಾಲಕರಾಗಿ ಕೆಲಸ ಮಾಡಿದವರು, ಕುಮಾರಸ್ವಾಮಿ ಅವರ ಕೈ ಕಾಲುಗಳನ್ನು ಒತ್ತಿ ಶಾಸಕರಾದವರು ಇಂದು ಒಕ್ಕಲಿಗ ಜನಾಂಗದ ನಾಯಕರು, ಮಾಜಿ ಪ್ರಧಾನಿಗಳ ಕುಟುಂಬವನ್ನೇ…

Read More

ಚಿಕ್ಕಮಗಳೂರು:  ಜನಸಂಪರ್ಕ ಸಭೆ ನಡೆಸುವ ಮೂಲಕ ಆಡಳಿತ ವ್ಯವಸ್ಥೆಯನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಲು ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು. ಅವರು ಇಂದು ನಗರಸಭೆಯಿಂದ ವಾರ್ಡ್ ನಂ-೨೬, ೨೭ ರಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಗೆ ಚಾಲನೆ ನೀಡಿ ಮಾತನಾಡಿ ನಗರಸಭೆ ಆಯೋಜಿಸಿರುವ ಈ ಜನಸಂಪರ್ಕ ಸಭೆಯನ್ನು ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸುವ ಮೂಲಕ ನಾಗರೀಕರ ಸಮಸ್ಯೆಗಳಿಗೆ ಸ್ಪಂದಿಸಿ ಇತ್ಯರ್ಥಪಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಜನಸಂಪರ್ಕ ಸಭೆಯಲ್ಲಿ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಇಲಾಖೆ, ಮೆಸ್ಕಾಂ, ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ವ್ಯಾಪ್ತಿಗೆ ಬರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಆಗಮಿಸಿದ್ದು, ನಾಗರೀಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮ ವಹಿಸಲಾಗಿದೆ ಎಂದರು. ಸರ್ಕಾರ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ವಾರ್ಷಿಕ ೫೯ ಸಾವಿರ ಕೋಟಿ ರೂ ವ್ಯಯ ಮಾಡುತ್ತಿದೆ. ಈ ಮಧ್ಯೆ ಸಮಾಜದ ಕೆಲವು ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಯಿಂದ ದೇವಸ್ಥಾನ, ಸಮುದಾಯ ಭವನ,…

Read More

ಚಿಕ್ಕಮಗಳೂರು : ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಸಂಬಂಧ ಹತ್ತು ಹಲವು ಮಾಹಿತಿಗಳು ಹರಿದಾಡುತ್ತಿವೆ. ಧರ್ಮಸ್ಥಳದಲ್ಲಿ ಬಂಧಿತ ಇಬ್ಬರು ನಕ್ಸಲ್ ಸಿಂಪಥೈಸರ್ ಓಡಾಟ ಇದೀಗ ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ. ಬೆಂಗಳೂರಿಗೆ ಕೇರಳ ನಕ್ಸಲರು ಬರೆದ ಪತ್ರ ತರಲು ಹೊರಟಿದ್ದ ಬಗ್ಗೆ ಪೊಲೀಸರಿಗೆ ಗುಮಾನಿ ಇದ್ದು ಅದರ ಜಾಡು ಹಿಡಿದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಪಶ್ಚಿಮ ವಲಯ ಐಜಿಪಿ ಖುದ್ದು ಶೃಂಗೇರಿ ಯಲ್ಲಿ ಮೊಕ್ಕಾಂ ಹೂಡಿದ್ದು ವಿಚಾರಣೆ ನೇತೃತ್ವ ವಹಿಸಿದ್ದಾರೆ. ಪಶ್ಚಿಮ ಘಟ್ಟಗಳ ಕಾನನದಲ್ಲಿ ಕೆಂಪು ಉಗ್ರರ ಓಡಾಟದ ವದಂತಿಗೆ ಹಲವು ಮಾಹಿತಿಗಳು ಇದೀಗ ಹೊರ ಬೀಳುತ್ತಿವೆ. ನಕ್ಸಲರಿಗೆ ಬೆನ್ನೆಲುಬಾಗಿ ಇದ್ದ ಕೆಲ ಮಲೆನಾಡಿನ ನಕ್ಸಲ್ ಅನುಕಂಪಿತರು ಮಾಡಿದ ಯಡವಟ್ಟು ಪೊಲೀಸರ ಕೈಗೆ ಸಿಕ್ಕಿ ಬೀಳುವಂತಾಗಿದೆ. ಕೇರಳದ ನಕ್ಸಲರು ಬರೆದ ಪತ್ರ ತರಲು ಬೆಂಗಳೂರಿಗೆ ಹೋಗಿ ಗುಟ್ಟು ಬಿಟ್ಟುಕೊಟ್ರಾ ನಕ್ಸಲ್ ಬೆಂಬಲಿಗರು ಎಂಬ ಅನುಮಾನ ಇದೀಗ ಗಟ್ಟಿಯಾಗುತ್ತಿದೆ. ಕೇರಳದಿಂದ ಬೆಂಗಳೂರಿಗೆ ಬಂದಿದ್ದ ಆ ಪತ್ರವನ್ನು ತರಲು ಹೋಗಿದ್ದರು ಇಬ್ಬರು ಯುವಕರು ಎಂದು ಗೊತ್ತಾಗಿದೆ.…

Read More

ಚಿಕ್ಕಮಗಳೂರು: ೨೦೨೪-೨೫ ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್‌ಎಕ್ಯೂ ಗುಣಮಟ್ಟದ ರಾಗಿ, ಭತ್ತ ಖರೀದಿಸಲು ಬೆಂಬಲ ಬೆಲೆ ನಿಗಧಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು. ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ೨೦೨೪-೨೫ ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ, ಭತ್ತ ಖರೀದಿಸುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ  ಸಾಮಾನ್ಯ ಭತ್ತ ಕ್ವಿಂಟಾಲ್‌ಗೆ ರೂ. ೨,೩೦೦, ಭತ್ತ ಗ್ರೇಡ್-ಎ ರೂ. ೨,೩೨೦ ರಂತೆ ಹಾಗೂ ರಾಗಿ ಕ್ವಿಂಟಾಲ್‌ಗೆ ರೂ. ೪,೨೯೦ ರಂತೆ ಖರೀದಿಸಲಾಗುವುದು. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ವಹಿಸಬೇಕು. ಭತ್ತ ಮತ್ತು ರಾಗಿ ಖರೀದಿಸಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಖರೀದಿ ಏಜೆನ್ಸಿಯನ್ನಾಗಿ ಸರ್ಕಾರ ನೇಮಕ ಮಾಡಿದ್ದು, ಖರೀದಿ ಪ್ರಕ್ರಿಯೆಯು ಇವರ ಮುಖಾಂತರ ನಡೆಯುತ್ತದೆ ಎಂದರು. ಸೂಕ್ತ ದಾಸ್ತಾನಿಗಾಗಿ ಭತ್ತ, ರಾಗಿ ಖರೀದಿ ಕೇಂದ್ರಗಳಲ್ಲಿ ಭತ್ತದ ಗುಣಮಟ್ಟವನ್ನು ಪರೀಕ್ಷಿಸಲು ಗ್ರೇಡರ್‌ಗಳನ್ನು ನಿಯೋಜಿಸುವಂತೆ…

Read More

ಚಿಕ್ಕಮಗಳೂರು:  ಈ ಬಾರಿಯ ೭೧ನೇ ಸಹಕಾರ ಸಪ್ತಾಹ ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ಧ್ಯೇಯದೊಂದಿಗೆ ನ.೧೪ ರಿಂದ ೨೦ ರವರೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಡಾ. ಜಿ.ಎಸ್. ಮಹಾಬಲ ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕರ್ನಾಟಕ ರಾಜ್ಯ ಮಹಾ ಮಂಡಳ ಸಹಕಾರ ಇಲಾಖೆ, ಡಿಸಿಸಿ ಬ್ಯಾಂಕ್ ಹಾಗೂ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಸಹಕಾರ ಸಪ್ತಾಹವನ್ನು ಏರ್ಪಡಿಸಲಾಗಿದೆ ಎಂದರು. ಜಿಲ್ಲೆಯಾದ್ಯಂತ ಒಂದೊಂದು ದಿನ ಒಂದೊಂದು ವಿ?ಯದ ಬಗ್ಗೆ ಯಶಸ್ವಿಯಾಗಿಯೂ, ಅರ್ಥಪೂರ್ಣವಾಗಿಯೂ ಸಹಕಾರ ಚಳುವಳಿ ಅಭಿವೃದ್ಧಿಗೆ ಪೂರಕವಾಗಿ ಚಿಂತನ-ಮಂಥನ ನಡೆಸಿ ಸಂಭ್ರಮದಿಂದ ಸಹಕಾರ ಸಪ್ತಾಹವನ್ನು ಆಚರಿಸಬೇಕೆಂದು ಹೇಳಿದರು. ನ.೧೪ ರಂದು ಕೊಪ್ಪದ ಯಸ್ಕಾನ್ ವಾಣಿಜ್ಯ ಸಂಕೀರ್ಣ ಸಭಾಂಗಣದಲ್ಲಿ ಸಹಕಾರ ಸಪ್ತಾಹ ಉದ್ಘಾಟನೆ ಹಾಗೂ ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳುವಳಿಯನ್ನು ಬಲಪಡಿಸುವುದು ದಿನ ಆಚರಣೆ, ನ.೧೫ ರಂದು ಮೂಡಿಗೆರೆ ಟಿಎಪಿಸಿಎಂಎಸ್ ರೈತಭವನದಲ್ಲಿ ಸಹಕಾರ ಸಂಸ್ಥೆಗಳಲ್ಲಿ…

Read More

ಚಿಕ್ಕಮಗಳೂರು:  ಸರ್ಕಾರದ ಸೌಲಭ್ಯಗಳು ಸಾಮಾನ್ಯ ಬಡ ಜನರನ್ನು ತಲುಪಬೇಕೆಂಬ ಉದ್ದೇಶದಿಂದ ಜನಸಂಪರ್ಕ ಸಭೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ಲಕ್ಯಾ ಹೋಬಳಿ ಹಿರೇಗೌಜದಲ್ಲಿ ಜಿ.ಪಂ, ತಾ.ಪಂ ಸಹಯೋಗದಲ್ಲಿ ಹಿರೇಗೌಜ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳ ಜನರ ಸಮಸ್ಯೆ ಬಗೆಹರಿಸಲು ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರದ ಆದೇಶದನ್ವಯ ಗ್ರಾ.ಪಂ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಬಡ ಜನರ ಅಹವಾಲುಗಳನ್ನು ಸ್ವೀಕರಿಸಿ ಇತ್ಯರ್ಥಪಡಿಸಲು ಸಹಕಾರಿಯಾಗಿದೆ ಎಂದ ಅವರು, ಈ ರೀತಿಯ ವಿನೂತನ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ, ತಾಲ್ಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಹೋಬಳಿ ಮಟ್ಟದ ಸಭೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಅಧಿಕಾರಿಗಳನ್ನು ಜನರ ಮನೆಬಾಗಿಲಿಗೆ ಕರೆದುಕೊಂಡು ಹೋಗಿ ಸಮಸ್ಯೆ ಆಲಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನಗೊಂಡು ನೆಮ್ಮದಿ ಜೀವನ ನಡೆಸುತ್ತಿದ್ದಾರೆಂದು ಹೇಳಿದರು. ಗ್ರಾಮಗಳಲ್ಲಿ ನಾಗರೀಕರಿಗೆ ವಿವಿಧ ಬಗೆಯ…

Read More

ಚಿಕ್ಕಮಗಳೂರು: ಭಗವಾನ್ ಶ್ರೀ ಬಿರ್ಸಾ ಮುಂಡಾರವರ ೧೫೦ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಇದೇ ನವೆಂಬರ್ ೧೫ ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ ಅವರು ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಮಹನೀಯರ ಜಯಂತಿ ಕಾರ್ಯಕ್ರಮಗಳು ಜಾತಿಗೆ ಸೀಮಿತಗೊಳಿಸದೆ ಸಮಾಜದ ಎಲ್ಲಾ ಜನರಿಗೆ ಅವರ ಇತಿಹಾಸ ತಿಳಿಸುವ ಕೆಲಸವಾಗಬೇಕು ಎಂದ ಅವರು ಬಿರ್ಸಾ ಮುಂಡಾ ಜಯಂತಿ ಸಮಾರಂಭದಲ್ಲಿ ಸರ್ಕಾರ ನಿಯಾಮನುಸಾರ ಆಹ್ವಾನ ಪತ್ರಿಕೆ, ಗಣ್ಯರು ಮತ್ತು ಉಪನ್ಯಾಸ ಮಾಡಲು ಸಿದ್ದತೆ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಭಗವಾನ್ ಬಿರ್ಸಾ ಮುಂಡಾ ಜಯಂತಿ ದಿನದಂದು ಪರಿಶಿಷ್ಟ ವರ್ಗದವರು ಹಾಗೂ ಆ ಸಮುದಾಯ ಹೆಚ್ಚು ವಾಸಿಸುವ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಈ ಯೋಜನೆಯಡಿ ಜಿಲ್ಲೆಯ ಮೂರು ಗ್ರಾಮಗಳು ಆಯ್ಕೆಯಾಗಿವೆ ಎಂದ ಅವರು ಈ ಗ್ರಾಮಗಳಿಗೆ ಕೇಂದ್ರ…

Read More

ಚಿಕ್ಕಮಗಳೂರು: ವೀರತನದ ಪ್ರತೀಕ ಒನಕೆ ಓಬವ್ವ, ಆಕೆಯ ಸಾಹಸಮಯ ಜೀವನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು. ಜಿಲ್ಲಾಡಳಿತ ವತಿಯಿಂದ ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಕನ್ನಡ ನಾಡು ಅನೇಕ ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟು ಹಲವಾರು ವೀರ ಸೈನಿಕರು, ವೀರ ವನಿತೆಯರನ್ನು ತನ್ನ ಮಡಿಲಿನಲ್ಲಿ ಇರಿಸಿಕೊಂಡಿದೆ. ಇವರ ಹೆಸರುಗಳು ಇಂದಿಗೂ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿವೆ. ನಮ್ಮ ನಾಡಿನ ಐತಿಹಾಸಿಕ ಸ್ಥಳ ಚಿತ್ರದುರ್ಗ ಎಂದ ಕ್ಷಣ ನೆನಪಾಗುವುದೇ ಹೈದರಾಲಿಯ ಸೈನಿಕರೊಡನೆ ಏಕಾಂಗಿಯಾಗಿ ಹೋರಾಡಿದ ವೀರ ವನಿತೆ ಒನಕೆ ಒಬವ್ವನ ಹೆಸರು. ಅವರ ಶೂರತನದ ಜೀವನ ಕತೆಗಳು ಸದಾ ಚಿರಸ್ಮರಣೀಯವಾದುದು ಎಂದರು. ಯಾವುದೇ ಯುದ್ಧ ಕಲೆಗಳು, ಶಸ್ತ್ರಾಭ್ಯಾಸಗಳನ್ನು ತಿಳಿಯದ ಸಾಮಾನ್ಯ ಮಹಿಳೆ ತನ್ನ ನಾಡಿನ ರಕ್ಷಣೆಗಾಗಿ ಏಕಾಂಗಿಯಾಗಿ ಕೋಟೆಗೆ  ಆಕ್ರಮಣ ಮಾಡಿದ ನೂರಾರು ಎದುರಾಳಿ…

Read More