Subscribe to Updates
Get the latest creative news from FooBar about art, design and business.
- e-paper (25-07-2025) Chikkamagalur Express
- ಬುಕ್ಕಾಂಬುಧಿ ಬೆಟ್ಟದಲ್ಲಿ ಅಮವಾಸ್ಯೆ ಪೂಜೆ
- ಮುಂಬರುವ ತಾಪಂ-ಜಿಪಂ ಚುನಾವಣೆ ಎದುರಿಸಲು ಸದಸ್ಯತ್ವ ಅಭಿಯಾನ
- e-paper (24-07-2025) Chikkamagalur Express
- ಬಾಲ್ಯ ವಿವಾಹ ತಡೆಯಲು ಜನಜಾಗೃತಿ ಅಗತ್ಯ
- ಸಂತೆ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಲು ಸೂಚನೆ
- e-paper (23-07-2025) Chikkamagalur Express
- ಮಳೆಗಾಲ ಮುಗಿದ ಬಳಿಕ ನಗರದ ಎಲ್ಲಾ ರಸ್ತೆಗಳ ಡಾಂಬರೀಕರಣ
Author: chikkamagalur express
ಚಿಕ್ಕಮಗಳೂರು: ಮುಂದಿನ ೧೦ ವರ್ಷದಲ್ಲಿ ಕಾಫಿ ಉದ್ಯಮವನ್ನು ಉಳಿಸಲು ಹಲವಾರು ಬದಲಾವಣೆಗಳನ್ನು ತರುವ ಮೂಲಕ ೧೭ ವಿವಿಧ ಸಮಿತಿಗಳನ್ನು ರಚಿಸಿದ್ದು, ೩೧೬ ಸದಸ್ಯರು ಕಾಫಿ ಗುಣಮಟ್ಟ ಹಾಗೂ ಸ್ಥಳೀಯವಾಗಿ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲಿದ್ದಾರೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ ತಿಳಿಸಿದರು. ಅವರು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಮಹಿಳಾ ಜಿಲ್ಲಾ ಒಕ್ಕಲಿಗರ ಸಂಘ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯಿಂದ ಗುಣಮಟ್ಟದ ಕಾಫಿ ತಯಾರಿಸುವ ಬಗ್ಗೆ ಮಾಹಿತಿ ನೀಡಿದರು. ಪ್ರಸ್ತುತ ಪ್ರಪಂಚ ಬದಲಾವಣೆ ಕಾಣುತ್ತಿದ್ದು, ಯುವಕರು ಕಾಫಿ ಉದ್ಯಮಕ್ಕೆ ಆಗಮಿಸುತ್ತಿದ್ದಾರೆ. ಆದರೆ ಬೆಳಗಾರರು ಬರುತ್ತಿಲ್ಲ ಎಂದು ವಿ?ಧಿಸಿದ ಅವರು, ಭಾರತದಲ್ಲಿ ಕಾಫಿ ಉದ್ಯಮಕ್ಕೆ ಭವ್ಯ ಭವಿ?ದ ದೃಷ್ಟಿಯಿಂದ ಬೇರೆ ಬೇರೆ ರಾಜ್ಯಗಳ ಯುವಕರು ಕಲಿಕೆ ಆರಂಭಿಸಿದ್ದಾರೆ ಎಂದರು. ರತನ್ ಟಾಟಾ ಕಾಫಿ ಉದ್ಯಮ ಸ್ಥಾಪಿಸಿ ಅನೇಕರಿಗೆ ಉದ್ಯೋಗ ನೀಡಿ ಕಾಫಿ ಬೆಳಗಾರರಿಗೆ ಉತ್ತೇಜನ ನೀಡಿದ್ದಾರೆ ನಟ ಪುನೀತ್ ರಾಜಕುಮಾರ್ ಸಹ ಸಮಾಜ…
ಚಿಕ್ಕಮಗಳೂರು: ಆಯುರ್ವೇದ ಔಷಧ ಪದ್ಧತಿಯು ಮನುಕುಲದ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್ ಎಸ್ ಕೀರ್ತನಾ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಧನ್ವಂತರಿ ಜಯಂತಿ ದಿನದ ಅಂಗವಾಗಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ೯ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಯುರ್ವೇದ ಔಷಧ ಪದ್ಧತಿಯು ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾಗಿದೆ. ಇದು ನೈಸರ್ಗಿಕ ಪರಿಹಾರಗಳು, ಜೀವನಶೈಲಿಯ ಬದಲಾವಣೆಗಳು ಮತ್ತು ಆರೋಗ್ಯಕರ ಆಹಾರದ ಮೂಲಕ ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನಗೊಳಿಸುವ ಕಲ್ಪನೆಯನ್ನು ಆಧರಿಸಿದೆ ಎಂದರು. ಪ್ರತಿಯೊಬ್ಬ ಮನುಷ್ಯನಿಗೂ ಉತ್ತಮ ಆರೋಗ್ಯ ಬಹುಮುಖ್ಯವಾಗಿದೆ. ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಅನಾರೋಗ್ಯದ ಸಂದರ್ಭದಲ್ಲಿ ಪಾಶ್ಚಿಮಾತ್ಯ ಔಷಧಿ…
ಚಿಕ್ಕಮಗಳೂರು: ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಹೇಳಿದರು. ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಕೆಸ್ವಾನ್‌ನಲ್ಲಿ ಇಂದು ಜಿಲ್ಲೆಯಲ್ಲಿ ಪಟಾಕಿ ತಯಾರಿಕೆ, ದಸ್ತಾನು ಹಾಗೂ ಹಸಿರು ಪಟಾಕಿ ಮಾರಾಟ ಮಾಡುವ ಕುರಿತು ಅಧಿಕಾರಿಗಳೊಂದಿಗೆ ನಡೆದ ವೀಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆ ಪಟಾಕಿಗಳನ್ನು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ರಾತ್ರಿ ೮.೦೦ ರಿಂದ ೧೦.೦೦ ಗಂಟೆ ವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿದೆ. ಆದ ಕಾರಣ ವ್ಯಾಪಾರಸ್ಥರು ಸಾರ್ವಜನಿಕರಿಗೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ತಿಳಿಸಿದರು ಪರಿಸರ ಸ್ನೇಹಿ ಪಟಾಕಿಗಳನ್ನು ಸಿಡಿಸುವ ಕುರಿತು ತಮ್ಮ ವ್ಯಾಪ್ತಿಯ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮ್ಟೆ ಮಾತನಾಡಿ ಜಿಲ್ಲೆಯಲ್ಲಿ ಪಟಾಕಿ ಮಾರಾಟ ಮಾಡಲು ಪರವಾನಗಿ ಪಡೆದಿರುವ ಮಾರಾಟಗಾರರು ಮಾತ್ರ…
ಚಿಕ್ಕಮಗಳೂರು: ಗ್ರಾಮೀಣ ಮಟ್ಟದಿಂದ ಒಂದು ಸಂಸ್ಥೆಯನ್ನು ಬೆಳೆಸಿ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುವ ಮಟ್ಟಿಗೆ ಬೆಳೆದಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಅಂತರಾಷ್ಟ್ರೀಯ ಹೇರ್‌ಕೇರ್ ಪ್ರಾಡಕ್ಟ್‌ನ ರೂಟ್ಸ್ ಕಂಪನಿ ಮಾಲಿಕ ಜಬ್ಬರ್‌ಸಿಂಗ್ ತಿಳಿಸಿದರು. ಅವರು ದುಬೈನಲ್ಲಿ ನಡೆದ ವರ್ಲ್ಡ್ ಬ್ಯೂಟಿ ಎಕ್ಸ್‌ಪೋದಲ್ಲಿ ಗ್ಲಾಮರ್ ಕೇರ್‌ನ ಲೋಗೋವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸ್ಥಳೀಯ ಸಂಸ್ಥೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುವ ನಿಟ್ಟಿನಲ್ಲಿ ಈ ಲೋಗೋವನ್ನು ಬಿಡುಗಡೆಗೊಳಿಸಿ ಪ್ರಶಂಸೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿರುವುದಾಗಿ ತಿಳಿಸಿದರು. ಗ್ಲಾಮರ್ ಕೇರ್‌ನ ಮುಖ್ಯಸ್ಥ ರವಿಕುಮಾರ್ ಮಾತನಾಡಿ, ನಿಜಕ್ಕೂ ಇದೊಂದು ಸಂತೋಷದ ಕ್ಷಣ, ಈ ಲೋಗೋ ಬಿಡುಗಡೆಯಿಂದಾಗಿ ನಮಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಬಂದಿದೆ, ಅಂತರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಸಲಕರಣೆಗಳೊಂದಿಗೆ ಗ್ರಾಹಕರಿಗೆ ಇನ್ನೂ ಉನ್ನತ ಮಟ್ಟದ ಸೌಂದರ್ಯ ಸೇವೆಯನ್ನು ನೀಡಲು ಪ್ರಯತ್ನಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕಡೂರು ಸವಿತ ಸಮಾಜದ ಮುಖಂಡ ರವಿ, ಮಕಾಕುಸ ಹಾಗೂ ವರ್ಲ್ಡ್ ಬ್ಯೂಟಿ ಎಕ್ಸ್‌ಪೋದ ವ್ಯವಸ್ಥಾಪಕ ಮಜೀದ್ ಮತ್ತಿತರರು ಉಪಸ್ಥಿತರಿದ್ದರು. Logo launch of World Beauty…
ಚಿಕ್ಕಮಗಳೂರು: ಯುವಕರಿಗೆ ದೇಶದ ಕುರಿತು ಸ್ವಚ್ಚತೆ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ ಎಂದು ಸ್ವಚ್ಚ ಭಾರತ್ ರಾಯಭಾರಿ ವರುಣ್ ಆರ್ಯ ತಿಳಿಸಿದರು. ಅವರು ಇಂದು ಎಪಿಎಂಸಿಯಲ್ಲಿ ಮೈ ಭಾರತ್, ನೆಹರು ಯುವ ಕೇಂದ್ರ, ಎನ್‌ಎಸ್‌ಎಸ್, ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜು, ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ನಮ್ಮ ಭಾರತ ಸ್ವಚ್ಚ ಭಾರತ ಆಂದೋಲನದ ಅಂಗವಾಗಿ ಸ್ವಚ್ಚತೆಯನ್ನು ಮಾಡಿ ಮಾತನಾಡಿದರು. ಈಗಾಗಲೇ ಸ್ವಚ್ಚ ಭಾರತ್ ಪೇಜ್ ಒಂದನ್ನು ಮುಕ್ತಾಯಗೊಳಿಸಿದ್ದು, ಎರಡನೇ ಹಂತವನ್ನು ಪ್ರಾರಂಭಿಸಿದ್ದೇವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡಲು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಪ್ರತಿಯೊಬ್ಬ ವ್ಯಕ್ತಿಗೂ ಸ್ವಚ್ಚತೆ ಬಗ್ಗೆ ಅರಿವು ಇರಬೇಕು. ಸ್ವಚ್ಚ ಭಾರತವನ್ನು ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಮ್ಮ ಭಾರತ ಸ್ವಚ್ಚ ಭಾರತ ಎಂದು ಆಚರಿಸೋಣ ಎಂದು ಹೇಳಿದರು. ಸಂತ ಜೋಸೆಫರ ಪದವಿ ಕಾಲೇಜಿನಿಂದ ೫೦ ವಿದ್ಯಾರ್ಥಿಗಳು ನಗರಸಭೆ…
ಚಿಕ್ಕಮಗಳೂರು: ತಾಲ್ಲೂಕು ಮಲ್ಲೇನಹಳ್ಳಿಯಲ್ಲಿ ಬಿಂಡಿಗ ಆದಿಶಕ್ತ್ಯಾತ್ಮಕ ಶ್ರೀ ದೇವಿರಮ್ಮನವರ ದೀಪೋತ್ಸವ ಅ.೩೦ ರಿಂದ ನ.೩ ರವರೆಗೆ ನಡೆಯಲಿದ್ದು, ಲಕ್ಷಕ್ಕೂ ಅಧಿಕ ಭಕ್ತರು ಮತ್ತು ಸಾರ್ವಜನಿಕರು ಕಾಲ್ನಡಿಗೆಯಲ್ಲಿ ದೇವಿರಮ್ಮ ಬೆಟ್ಟವನ್ನು ಹತ್ತುವ ಮೂಲಕ ದರ್ಶನಕ್ಕೆ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮಅಮಟೆ ತಿಳಿಸಿದರು. ಅವರು ಇಂದು ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಅ.೩೦ ರಂದು ಸಂಜೆ ೪ ಗಂಟೆಯಿಂದ ಭಕ್ತರು, ಸಾರ್ವಜನಿಕರು, ಮಹಿಳೆಯರು ಬೆಟ್ಟವನ್ನು ಹತ್ತಲು ಪ್ರಾರಂಭಿಸಿ, ಅ.೩೧ ರ ಸಂಜೆಯವರೆಗೆ ದೇವಿರಮ್ಮನವರ ದರ್ಶನ ಪಡೆಯುವ ಅಂಗವಾಗಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಬಂದೋಬಸ್ತುಗಾಗಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದರು. ಈ ಸಂಬಂಧ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆಯಿಂದ ೫ ರಕ್ಷಣಾ ತಂಡಗಳನ್ನು ರಚಿಸಲಾಗಿದ್ದು, ೫೦೦ ಕ್ಕೂ ಹೆಚ್ಚು ಪೊಲೀಸರು, ೫೫೦ ಹೋಂಗಾರ್ಡ್ಸ್, ೫೦ ಜನ ಸಬ್ ಇನ್ಸ್‌ಪೆಕ್ಟರ್,…
ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿಯ ಬಗೆಗಿನ ಆಸಕ್ತಿ ಅಳಿಯುತ್ತಿದ್ದು, ಅದೊಂದು ಅನುತ್ಪಾದಕ ಕ್ಷೇತ್ರ ಎನ್ನುವ ಅಸಡ್ಡೆಯ ಧೋರಣೆ ಮೂಡುತ್ತಿದೆ ಎಂದು ಚಲನಚಿತ್ರ ನಟ, ನಿರ್ದೇಶಕ, ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತ ಅಧ್ಯಕ್ಷ ಕೆ.ಸುಚೇಂದ್ರ ಪ್ರಸಾದ್ ವಿಷಾದ ವ್ಯಕ್ತಪಡಿಸಿದರು. ಮೈಸೂರಿನ ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರ, ಚಿಕ್ಕಮಗಳೂರಿನ ಆರಾಧನಾ ಕಲ್ಚರಲ್ ಟ್ರಸ್ಟ್ ಆಶ್ರಯದಲ್ಲಿ ನಗರದ ಕುವೆಂಪು ಕಲಾ ಮಂದಿರದಲ್ಲಿ ಭಾನುವಾರ ಸಂಜೆ ನಡೆದ ಸ್ಪರ್ಶ ಆಸ್ಪತ್ರೆಯಲ್ಲಿ ವೈದ್ಯೆಯೂ ಆಗಿರುವ ಡಾ.ವರ್ಷಿಣಿ ಎಸ್. ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮೀಕ್ಷೆಯೊಂದರ ಪ್ರಕಾರ ಶೇ.೭೮ ರಷ್ಟು ಮಂದಿ ತಮಗೆ ಸಂಸ್ಕೃತಿಯ ಅಗತ್ಯವಿಲ್ಲ, ಅದೊಂದು ಅನುತ್ಪಾದಕ ಕ್ಷೇತ್ರ ಎನ್ನುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಂಸ್ಕೃತಿ ಹಾಗೂ ಕಲೆಯ ಬಗೆಗಿನ ಪೋಷಣೆ ಮುಂದುವರಿಯದೇ ಇದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಆ ಪೋಷಣೆಯೂ ಆಪೋಶನವಾದೀತು; ಈ ಬಗ್ಗೆ ಅಗತ್ಯ ಎಚ್ಚರಿಕೆ ವಹಿಸಬೇಕಿದೆ ಎಂದು ಸಲಹೆ ನೀಡಿದರು. ಪ್ರಬುದ್ಧತೆ, ಪ್ರಾಮಾಣಿಕತೆ ಜೊತೆಗೆ ಪ್ರೌಢ ಚಿಂತನೆ ಇರದೆ…
ಚಿಕ್ಕಮಗಳೂರು: ನಿವೇಶನ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸ್ಥಳ ಗುರುತಿಸಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಲು ಕ್ರಮವಹಿಸಲಾಗುತ್ತಿದೆ ಎಂದು ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್ ಹೇಳಿದರು. ನಗರದ ತಾಲ್ಲೂಕು ಪಂಚಾಯಿತಿಯ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಇಂದು ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ನಿಯಂತ್ರಣ) ಕಾಯ್ದೆ ೧೯೮೯ ತಿದ್ದುಪಡಿ ನಿಯಮಗಳು ೨೦೧೩ರಂತೆ ನಿಯಮ ೧೭ (ಎ) ಚಿಕ್ಕಮಗಳೂರು ಕಂದಾಯ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಹೊಣೆ ಆಯಾ ಇಲಾಖೆಗಳ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಯೋಜನೆಗಳನ್ನು ತಲುಪಿಸುವಂತೆ ತಿಳಿಸಿದ ಅವರು. ಈ ಯೋಜನೆಗಳ ಕುರಿತ ಮಾಹಿತಿಯನ್ನು ಸಮುದಾಯದ ಜನರಿಗೆ ತಲುಪಿಸಿ ಅವರ ಶ್ರೇಯೋಭಿವೃದ್ಧಿಗೆ…